Ashwagandha Tea: ರಾತ್ರಿ ವೇಳೆ ಅಶ್ವಗಂಧ ಚಹಾ ಕುಡಿಯುವುದರಿಂದ ಆರೋಗ್ಯಕ್ಕಿದೆ ನೂರಾರು ಪ್ರಯೋಜನ; ನಿದ್ರಾಹೀನತೆಗೂ ಇದೇ ಪರಿಹಾರ
ಒತ್ತಡ ನಿರ್ವಹಣೆಯಿಂದ ಕಾಮೋತ್ತೇಜಕ ಗುಣದವರೆಗೆ ರಾತ್ರಿ ವೇಳೆ ಅಶ್ವಗಂಧ ಟೀ ಕುಡಿಯುವುದರಿಂದ ಆರೋಗ್ಯಕ್ಕಿದೆ ನೂರಾರು ಪ್ರಯೋಜನ. ಇದನ್ನು ಪ್ರತಿದಿನ ರಾತ್ರಿ ಕುಡಿಯುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ.
ಭಾರತದ ಆಯುರ್ವೇದ ಪದ್ಧತಿಯಲ್ಲಿ ಅಶ್ವಗಂಧಕ್ಕೆ ವಿಶೇಷ ಮಹತ್ವವಿದೆ. ಪುರಾತನ ಕಾಲದಿಂದಲೂ ಅಶ್ವಗಂಧವನ್ನು ಹಲವು ರೀತಿಯಲ್ಲಿ ಬಳಸುತ್ತಿದ್ದರು. ಅಶ್ವಗಂಧದ ಸೇವನೆಯಿಂದ ದೇಹಕ್ಕೆ ನೂರಾರು ಪ್ರಯೋಜನಗಳಿವೆ. ಇದನ್ನು ರಾತ್ರಿ ವೇಳೆ ಚಹಾದ ರೂಪದಲ್ಲಿ ಸೇವಿಸುವುದರಿಂದ ವಿಶೇಷ ಪ್ರಯೋಜನಗಳನ್ನು ಪಡೆಯಬಹುದು. ಇದು ದೈಹಿಕ ಆರೋಗ್ಯ ಮಾತ್ರವಲ್ಲ, ಮಾನಸಿಕ ಆರೋಗ್ಯ ವೃದ್ಧಿಗೂ ಸಹಕಾರಿ.
ಇದನ್ನು ಸೇವಿಸುವುದರಿಂದ ಒತ್ತಡ ಕಡಿಮೆಯಾಗುತ್ತದೆ, ಮಾತ್ರವಲ್ಲ ನಿದ್ದೆಯ ಗುಣಮಟ್ಟವೂ ಸುಧಾರಿಸುತ್ತದೆ. ರಾತ್ರಿ ವೇಳೆ ಅಶ್ವಗಂಧ ಚಹಾ ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿಯಿರಿ.
ನಿದ್ರೆಯ ಗುಣಮಟ್ಟ ಸುಧಾರಿಸುತ್ತದೆ
ಇತ್ತೀಚಿನ ದಿನಗಳಲ್ಲಿ ಹಲವರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ನಿದ್ದೆಯ ಸಮಸ್ಯೆಯೂ ಒಂದು. ಅಶ್ವಗಂಧ ಚಹಾವು ವಿಶ್ರಾಂತಿಯನ್ನು ಉತ್ತೇಜಿಸುವ ಮತ್ತು ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುವ ಸಂಯುಕ್ತಗಳನ್ನು ಒಳಗೊಂಡಿದೆ. ರಾತ್ರಿ ಮಲಗುವ ಮುನ್ನ ಇದರ ಸೇವನೆಯಿಂದ ಆಳವಾದ ಹಾಗೂ ಶಾಂತವಾದ ನಿದ್ರೆಗೆ ಸಹಕರಿಸುತ್ತದೆ.
ಒತ್ತಡ ನಿಯಂತ್ರಿಸುವ ಅಶ್ವಗಂಧ ಟೀ
ಇದು ಒತ್ತಡವನ್ನು ನಿವಾರಿಸುವ ಗುಣಗಳನ್ನು ಹೊಂದಿದೆ. ಅಶ್ವಗಂಧ ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಅನ್ನು ನಿಯಂತ್ರಿಸುತ್ತದೆ. ರಾತ್ರಿಯಲ್ಲಿ ಅಶ್ವಗಂಧ ಚಹಾವನ್ನು ಕುಡಿಯುವುದರಿಂದ ಕಾರ್ಟಿಸೋಲ್ ಮಟ್ಟವು ನಿಯಂತ್ರಣದಲ್ಲಿರುತ್ತದೆ. ಇದರಿಂದ ಒತ್ತಡ ಕಡಿಮೆಯಾಗುತ್ತದೆ.
ಹಾರ್ಮೋನ್ ಸಮತೋಲನ
ಅಶ್ವಗಂಧ ಟೀ ಸೇವನೆಯು ಪುರುಷರು ಮತ್ತು ಮಹಿಳೆಯರಲ್ಲಿ ಹಾರ್ಮೋನುಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಅಶ್ವಗಂಧ ಚಹಾವನ್ನು ರಾತ್ರಿ ವೇಳೆ ಸೇವಿಸುವುದರಿಂದ ಹಾರ್ಮೋನ್ ಸಮತೋಲನದಲ್ಲಿರಲು ಸಹಾಯ ಮಾಡುತ್ತದೆ. ಇದು ಒಟ್ಟಾರೆ ಆರೋಗ್ಯದ ಮೇಲೆ ವಿವಿಧ ರೀತಿಯ ಧನಾತ್ಮಕ ಪರಿಣಾಮಗಳನ್ನು ಹೊಂದಿದೆ. ಅಶ್ವಗಂಧದಲ್ಲಿ ಉರಿಯೂತ ನಿವಾರಕ ಗುಣವಿದೆ. ಇವು ದೇಹದಾದ್ಯಂತ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ರಾತ್ರಿ ಅಶ್ವಗಂಧ ಚಹಾವನ್ನು ಕುಡಿಯುವುದರಿಂದ ಉರಿಯೂತ ಕಡಿಮೆಯಾಗುತ್ತದೆ.
ರಕ್ತದಲ್ಲಿನ ಸಕ್ಕರೆ ಮಟ್ಟದ ನಿಯಂತ್ರಣ
ಕೆಲವು ಸಂಶೋಧನೆಗಳು ಅಶ್ವಗಂಧವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂಬುದನ್ನು ಸಾಬೀತುಪಡಿಸುತ್ತವೆ. ರಾತ್ರಿಯಲ್ಲಿ ಅಶ್ವಗಂಧ ಚಹಾವನ್ನು ಕುಡಿಯುವುದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನೀವು ಆರೋಗ್ಯಕರ ಜೀವನ ನಡೆಸಬಹುದು. ನಿರ್ದಿಷ್ಟವಾಗಿ ಹೇಳುವುದಾದರೆ, ಅಶ್ವಗಂಧವು ಸಮತೋಲಿತ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯ ಭಾಗವಾಗಿರಬೇಕು.
ಸ್ನಾಯುಗಳ ಬಲವರ್ಧನೆ
ಅಶ್ವಗಂಧವು ಸ್ನಾಯುಗಳ ಬಲವರ್ಧನೆಗೆ ಸಹಾಯ ಮಾಡುತ್ತದೆ. ಅಶ್ವಗಂಧ ಚಹಾವನ್ನು ಕುಡಿಯುವುದರಿಂದ ನಿಮ್ಮ ಸ್ನಾಯುಗಳ ಬೆಳವಣಿಗೆಯನ್ನು ಪುನಃಸ್ಥಾಪಿಸಬಹುದು. ಜಿಮ್‌ನಲ್ಲಿ ದೇಹ ದಂಡಿಸುವವರಿಗೆ ಇದು ಉತ್ತಮ.
ಆಶ್ವಗಂಧದಲ್ಲಿದೆ ಜೀರ್ಣಕ್ರಿಯೆ ವೃದ್ಧಿಸುವ ಗುಣ
ಅಶ್ವಗಂಧವು ಸೌಮ್ಯವಾದ ಜೀರ್ಣಕಾರಿ ಗುಣಗಳನ್ನು ಹೊಂದಿದೆ. ಹೊಟ್ಟೆಯ ಊರಿಯೂತ ನಿವಾರಣೆಗೆ ಇದು ಉತ್ತಮ. ರಾತ್ರಿ ಅಶ್ವಗಂಧ ಚಹಾವನ್ನು ಕುಡಿಯುವುದು ಜೀರ್ಣಕ್ರಿಯೆಗೆ ಒಳ್ಳೆಯದು. ಇದು ಹೊಟ್ಟೆಯ ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ. ಒಟ್ಟಾರೆ ಜೀರ್ಣಕಾರಿ ಆರೋಗ್ಯವನ್ನು ಸುಧಾರಿಸುತ್ತದೆ.
ಕಾಮೋತ್ತೇಜಕವೂ ಹೌದು
ಅಶ್ವಗಂಧವನ್ನು ಸಾಂಪ್ರದಾಯಿಕವಾಗಿ ಕಾಮೋತ್ತೇಜಕವಾಗಿ ಬಳಸಲಾಗುತ್ತದೆ, ಇದು ಕಾಮಾಸಕ್ತಿಯನ್ನು ಹೆಚ್ಚಿಸುತ್ತದೆ. ರಾತ್ರಿಯಲ್ಲಿ ಅಶ್ವಗಂಧ ಚಹಾವನ್ನು ಸೇವಿಸುವುದರಿಂದ ಲೈಂಗಿಕ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ರಾತ್ರಿಯಲ್ಲಿ ಅಶ್ವಗಂಧ ಚಹಾವನ್ನು ಕುಡಿಯುವುದರಿಂದ ನಿಮ್ಮ ದೇಹದ ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯವನ್ನು ಸುಧಾರಿಸುತ್ತದೆ. ಒಟ್ಟಾರೆ ಯೋಗಕ್ಷೇಮಕ್ಕೆ ಒಳ್ಳೆಯದು.
ಅರಿವಿನ ಕಾರ್ಯವನ್ನು ಸುಧಾರಿಸುತ್ತದೆ
ಅಶ್ವಗಂಧವು ನ್ಯೂರೋಪ್ರೊಟೆಕ್ಟಿವ್ ಪರಿಣಾಮಗಳನ್ನು ಹೊಂದಿದೆ ಮತ್ತು ಅರಿವಿನ ಕಾರ್ಯವನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಅಶ್ವಗಂಧ ಚಹಾವನ್ನು ರಾತ್ರಿ ಸೇವಿಸುವುದರಿಂದ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು. ಒತ್ತಡವನ್ನು ಕಡಿಮೆ ಮಾಡುವ ಮೂಲಕ ಮೆದುಳಿನ ಆರೋಗ್ಯವನ್ನು ಬೆಂಬಲಿಸುತ್ತದೆ. ಅಶ್ವಗಂಧವನ್ನು ಅಡಾಪ್ಟೋಜೆನ್ ಎಂದು ಹೇಳಲಾಗುತ್ತದೆ. ಅಂದರೆ ದೇಹವು ಒತ್ತಡಕ್ಕೆ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ. ರಾತ್ರಿಯಲ್ಲಿ ಅಶ್ವಗಂಧ ಚಹಾವನ್ನು ಕುಡಿಯುವುದರಿಂದ ಒತ್ತಡವನ್ನು ನಿಭಾಯಿಸುವ ದೇಹದ ಸಾಮರ್ಥ್ಯವನ್ನು ಸುಧಾರಿಸುತ್ತದೆ.
(This copy first appeared in Hindustan Times Kannada website. To read more like this please logon to kannada.hindustantimes.com)
ವಿಭಾಗ