Nasal Congestion: ಚಳಿಗಾಲ ಆರಂಭವಾಗಿದೆ, ಪದೇ ಪದೇ ಮೂಗು ಕಟ್ಟುವ ಸಮಸ್ಯೆ ಕಾಡ್ತಾ ಇದ್ರೆ, ಈ ಸಿಂಪಲ್ ಆಯುರ್ವೇದ ಪರಿಹಾರ ಪಾಲಿಸಿ
Blocked Nose: ಕಟ್ಟಿದ ಮೂಗಿನ ಸಮಸ್ಯೆ ಚಳಿಗಾಲದಲ್ಲೇ ಹೆಚ್ಚು. ಮೂಗು ಕಟ್ಟಿ , ಉಸಿರಾಡಲು ಕಷ್ಟ ಅನುಭವಿಸಬೇಕಾಗುತ್ತದೆ. ಅದಕ್ಕೆ ಆಯುರ್ವೇದದ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಇಲ್ಲಿ ಹೇಳಿರುವ ಸಲಹೆ ಪಾಲಿಸಿ ನೋಡಿ, ನಿಮ್ಮ ಕಟ್ಟಿದ ಮೂಗಿನ ಸಮಸ್ಯೆ ಪರಿಹರಿಸಿಕೊಳ್ಳಿ. (ಬರಹ: ಅರ್ಚನಾ ವಿ. ಭಟ್)
ಹೆಚ್ಚಾಗಿ ಚಳಿಗಾಲದಲ್ಲೇ ಕಾಣಿಸಿಕೊಳ್ಳುವ ಕಟ್ಟಿದ ಮೂಗು ಸಮಸ್ಯೆಯನ್ನು ಸಾಮಾನ್ಯವಾಗಿ ಬ್ಲಾಕ್ಡ್ ನೋಸ್ ಎಂದು ಕರೆಯಲಾಗುತ್ತದೆ. ಮೂಗಿನ ನಾಳಗಳ ಊದುಕೊಳ್ಳುವಿಕೆ ಮತ್ತು ಉರಿಯೂತ ಇದಾಗಿದೆ. ಇದು ಅನೇಕ ಕಾರಣಗಳಿಂದ ಸಂಭವಿಸುತ್ತದೆ. ವೈರಲ್ ಸೋಂಕಿನಿಂದ ನಮ್ಮ ಪ್ರತಿರಕ್ಷಣಾ ವ್ಯವಸ್ಥೆ ಹದಗೆಟ್ಟಿ ಕಟ್ಟಿದ ಮೂಗಿನ ಸಮಸ್ಯೆ ಉಂಟುಮಾಡಬಹುದು. ಹೂವಿನ ಪರಾಗ, ಧೂಳಿನ ಕಣ, ಸಾಕು ಪ್ರಾಣಿ ಅಥವಾ ಕೆಲವು ಆಹಾರ ಪದಾರ್ಥಗಳು ಅಲರ್ಜಿ ಹೆಚ್ಚಿಸಿ ಕಟ್ಟಿದ ಮೂಗಿನ ಸಮಸ್ಯೆ ಪ್ರಚೋದಿಸುತ್ತದೆ. ಸೋಂಕು ಅಥವಾ ಅಲರ್ಜಿಯಿಂದ ಸೈನಸ್‌ಗಳ ಉರಿಯೂತವುಂಟಾಗಿ ಕಟ್ಟಿದ ಮೂಗಿಗೆ ಕಾರಣವಾಗುತ್ತದೆ. ಇದಲ್ಲದೆ ಹೊಗೆ, ರಾಸಾಯನಿಕ, ತೀಕ್ಷ್ಣ ವಾಸನೆ ಮೂಗಿನ ಒಳಪದರಕ್ಕೆ ಕಿರಿಕಿರಿಯುಂಟುಮಾಡಿ ಕಟ್ಟಿದ ಮೂಗಿನ ಸಮಸ್ಯೆ ಉಲ್ಭಣವಾಗುವಂತೆ ಮಾಡುತ್ತದೆ. ಬಾಗಿದ ಮೂಗಿನ ನಳಿಕೆ ಗಾಳಿ ಸರಾಗವಾಗಿ ಹೋಗುವುದನ್ನು ತಡೆಯುತ್ತದೆ. ಅದು ಕಟ್ಟಿದ ಮೂಗಿಗೆ ಕಾರಣವಾಗಿತ್ತದೆ. ಈ ರೀತಿಯ ಕಟ್ಟಿದ ಮೂಗಿನಿಂದಾಗುವ ತೊಂದರೆಗೆ ಪರಿಹಾರ ಆಯುರ್ವೇದದಲ್ಲಿದೆ.
ಕಟ್ಟಿದ ಮೂಗು ಸಮಸ್ಯೆಗೆ ಆಯುರ್ವೇದದಲ್ಲಿದೆ ಪರಿಹಾರ
ನಶ್ಯ ಚಿಕಿತ್ಸೆ
ಇದು ಕಟ್ಟಿದ ಮೂಗು ಸಮಸ್ಯೆ ನಿವಾರಿಸಲ ಮೂಗಿನ ಹೊಳ್ಳೆಗಳಲ್ಲಿ ಗಿಡಮೂಲಿಕೆ ತೈಲ ಅಥವಾ ಔಷಧಿಯ ಹನಿಯನ್ನು ಮೂಗಿಗೆ ಹಾಕಿಕೊಳ್ಳುವುದಾಗಿದೆ. ಇದು ಕಟ್ಟಿದ ಮೂಗಿನ ನಾಳಗಳನ್ನು ತೆರೆದು ಉಸಿರಾಟ ಸರಾಗವಾಗುವಂತೆ ಮಾಡುತ್ತದೆ. ’
ಹಬೆ ತೆಗೆದುಕೊಳ್ಳುವುದು
ಪುದೀನಾದಂತಹ ತೀಕ್ಷ್ಣ ಪರಿಮಳವಿರುವ ಗಿಡಮೂಲಿಕೆಗಳಿಂದ ತಯಾರಿಸಿದ ತೈಲಗಳನ್ನು ನೀರಿಗೆ ಹಾಕಿ ಅದರ ಬಿಸಿ ಹಬೆಯನ್ನು ಉಸಿರಾಡುವುದು ಕಟ್ಟಿದ ಮೂಗು ತೆರೆದುಕೊಳ್ಳಲು ಸಹಾಯ ಮಾಡುತ್ತದೆ. ಸಮಸ್ಯೆಗೆ ಪರಿಹಾರ ಒದಗಿಸುತ್ತದೆ. ಹೀಗೆ ಬಿಸಿ ಹಬೆ ತೆಗೆದುಕೊಳ್ಳುವುದು ಬೆವರುವಿಕೆಯನ್ನು ಉತ್ತಿಜಿಸುವುದರಿಂದ ಇದು ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ.
ಅರಿಶಿನದ ಹಾಲು
ಒಂದು ಚಿಟಿಕೆ ಅರಿಶಿನ ಬೆರೆಸಿ ತಯಾರಿಸಿದ ಬೆಚ್ಚಗಿನ ಹಾಲು ಕಟ್ಟಿದ ಮೂಗು ನಿವಾರಿಸಲು ಸಹಾಯ ಮಾಡುತ್ತದೆ. ಅರಿಶಿನದಲ್ಲಿರುವ ಕರ್ಕ್ಯುಮಿನ್ ಉರಿಯೂತ ಶಮನ ಸಂಯುಕ್ತಗಳನ್ನು ಹೊಂದಿದ್ದು ಅದು ಕಟ್ಟಿದ ಮೂಗಿನ ನಾಳಗಳನ್ನು ತೆರೆಯುವಂತೆ ಮಾಡುತ್ತದೆ.
ಶುಂಠಿ ಚಹಾ
ಶುಂಠಿ ಚಹಾ ಸೇವನೆಯು ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದು ಕಟ್ಟಿದ ಮೂಗು ನಿವಾರಿಸಲು ನಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಶುಂಠಿಯು ಉರಿಯೂತ ಶಮನಕಾರಿಯಾಗಿದ್ದು, ಆಂಟಿವೈರಲ್ ಗುಣಲಕ್ಷಣ ಹೊಂದಿದೆ. ಇದು ಸೈನಸ್ ತೊಂದರೆ ನಿವಾರಣೆಗೆ ಸಹಾಯ ಮಾಡುತ್ತದೆ.
ನೇತಿ ಚಿಕಿತ್ಸೆ
ಲವಣಯುಕ್ತ ದ್ರಾವಣದಿಂದ ತುಂಬಿದ ನೇತಿ ಮಡಿಕೆ (ನೆಟಿ ಪಾಟ್) ಅನ್ನು ಬಳಸುವುದರಿಂದ ಮೂಗಿನಲ್ಲಿ ಉತ್ಪತ್ತಿಯಾಗುವ ಹೆಚ್ಚುವರಿ ಲೋಳೆ ಹೋಗಲಾಡಿಸಲು ಸಹಾಯ ಮಾಡುತ್ತದೆ. ಇದು ಅಲರ್ಜಿಯನ್ನು ಕಡಿಮೆ ಮಾಡಿ, ಮೂಗಿನ ನಳಿಕೆಗಳ ಆರೋಗ್ಯ ಉತ್ತೇಜಿಸುತ್ತದೆ.
ತುಳಸಿ ಚಹಾ
ತುಳಸಿ ಚಹಾವು ರೋಗನಿರೋಧಕ ಶಕ್ತಿ ಹೆಚ್ಚಿಸುವುದಲ್ಲದೆ, ಶ್ವಾಸಕೋಶದ ಆರೋಗ್ಯ ಹೆಚ್ಚಿಸಲು ಹೆಸರುವಾಸಿಯಾಗಿದೆ. ಇದು ಕಟ್ಟಿದ ಮೂಗಿ ನಿವಾರಿಸಿ ಉರಿಯೂತ ಕಡಿಮೆ ಮಾಡಿ, ಒಟ್ಟಾರೆ ಉಸಿರಾಟದ ತೊಂದರೆ ಸುಧಾರಿಸಲು ಸಹಾಯ ಮಾಡುತ್ತದೆ.
ನೀಲಗಿರಿ ತೈಲದ ಬಳಕೆ
ಬಿಸಿ ನೀರಿಗೆ ಕೆಲವು ಹನಿ ನೀಲಗಿರಿ ಎಣ್ಣೆಯನ್ನು ಸೇರಿಸಿ ಮತ್ತು ಅದರ ಹಬೆಯನ್ನು ಉಸಿರಾಡುವುದರಿಂದ ಕಟ್ಟಿದ ಮೂಗಿನ ಸಮಸ್ಯೆಗೆ ತ್ವರಿತ ಪರಿಹಾರವನ್ನು ಪಡೆಯಬಹುದು. ನೀಲಗಿರಿ ಎಣ್ಣೆಯು ಮೂಗಿನ ನಾಳಗಳನ್ನು ತೆರೆಯಲು ಅನುಕೂಲವಾಗಿರುವ ಡಿಕಂಜೆಸ್ಟಂಟ್ ಗುಣಲಕ್ಷಣ ಹೊಂದಿದೆ.
ಆಯುರ್ವೇದ ಗಿಡಮೂಲಿಕೆಗಳ ಚೂರ್ಣ
ತ್ರಿಕಟು (ಶುಂಠಿ, ಮೆಣಸು ಮತ್ತು ಕರಿಮೆಣಸಿನ ಸಂಯೋಜನೆ) ಅಥವಾ ಸಿಟೋಪಾಲಾಡಿ ಚೂರ್ಣ (ವಿವಿಧ ಗಿಡಮೂಲಿಕೆಗಳ ಮಿಶ್ರಣ) ನಂತಹ ಆಯುರ್ವೇದ ಚೂರ್ಣಗಳು ಕಟ್ಟಿದ ಮೂಗಿನ್ನು ತೆರೆದು, ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಸಂಪೂರ್ಣ ಆರೋಗ್ಯ ಸುಧಾರಿಸುತ್ತದೆ.
ಯೋಗ ಮತ್ತು ಪ್ರಾಣಾಯಾಮ
ಯೋಗ ಆಸನಗಳು ಮತ್ತು ಪ್ರಾಣಾಯಾಮ ವ್ಯಾಯಾಮಗಳನ್ನು ಅಭ್ಯಾಸ ಮಾಡುವುದು ಉಸಿರಾಟವನ್ನು ಸುಧಾರಿಸಲು, ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸಲು ಮತ್ತು ಕಟ್ಟಿದ ಮೂಗು ನಿವಾರಿಸಲು ಸಹಾಯ ಮಾಡುತ್ತದೆ. ಅನುಲೋಮ್, ವಿಲೋಮ್ ಮತ್ತು ಕಪಾಲಭಾತಿಯಂತಹ ಉಸಿರಾಟದ ವ್ಯಾಯಾಮಗಳು ಬಹಳ ಪ್ರಯೋಜನ ನೀಡಬಲ್ಲದು.
ಆಯುರ್ವೇದ ಆಹಾರ
ದೇಹದಲ್ಲಿ ಶಾಖ ಉತ್ಪತ್ತಿ ಮಾಡುವ ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರಗಳನ್ನು ಒಳಗೊಂಡಿರುವ ಆಯುರ್ವೇದ ಆಹಾರಗಳನ್ನು ಅನುಸರಿಸುವುದು ಅವಶ್ಯಕವಾಗಿದೆ. ಜೀರಿಗೆ, ಕೊತ್ತಂಬರಿ ಮತ್ತು ಮೆಂತ್ಯಗಳಂತಹ ಮಸಾಲೆಗಳನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಹೆಚ್ಚುತ್ತದೆ. ಇದು ಆರೋಗ್ಯವಂತರನ್ನಾಗಿ ಮಾಡುತ್ತದೆ. ದೇಹದಲ್ಲಿರುವ ವಿಷವನ್ನು ತೆಗೆದುಹಾಕಲು ಮತ್ತು ಕಟ್ಟಿದ ಮೂಗು ಸಮಸ್ಯೆ ತಡೆಗಟ್ಟಲು ಜೀರ್ಣಕ್ರಿಯೆಯ ವ್ಯವಸ್ಥೆಯು ಸರಿಯಾಗಿರುವುದು ಅವಶ್ಯಕವಾಗಿದೆ.
ಇಲ್ಲಿ ಹೇಳಿರುವ ಆಯುರ್ವೇದ ಪರಿಹಾರಗಳು ಕಟ್ಟಿದ ಮೂಗು ಸಮಸ್ಯೆಗೆ ಪರಿಹಾರವನ್ನು ನೀಡಬಹುದಾದರೂ, ಆಯುರ್ವೇದ ವೈದ್ಯರಿಂದ ಸರಿಯಾದ ರೋಗ ಪತ್ತೆಹಚ್ಚಿ ಅವರ ಮಾರ್ಗದರ್ಶನ ಪಡೆಯುವುದು ಅತ್ಯಗತ್ಯವಾಗಿದೆ. ಅದರಲ್ಲೂ ವಿಶೇಷವಾಗಿ ಕಟ್ಟಿದ ಮೂಗಿನ ಸಮಸ್ಯೆ ಹದಗೆಡುವ ಮೊದಲು ತಜ್ಞರನ್ನು ಸಂಪರ್ಕಿಸುವುದು ಅವಶ್ಯಕವಾಗಿದೆ.