ಕನ್ನಡ ಸುದ್ದಿ  /  ಜೀವನಶೈಲಿ  /  ಮಾವಿನಹಣ್ಣಿನ ಸಿಪ್ಪೆ ಎಸೆಯುವ ಅಭ್ಯಾಸವಿದ್ರೆ ಇಂದೇ ಸ್ಟಾಪ್‌ ಮಾಡಿ; ಅಂದ, ಆರೋಗ್ಯಕ್ಕೆ ಇದರ ಪ್ರಯೋಜನ ಕೇಳಿದ್ರೆ ಅಚ್ಚರಿಪಡ್ತೀರಿ

ಮಾವಿನಹಣ್ಣಿನ ಸಿಪ್ಪೆ ಎಸೆಯುವ ಅಭ್ಯಾಸವಿದ್ರೆ ಇಂದೇ ಸ್ಟಾಪ್‌ ಮಾಡಿ; ಅಂದ, ಆರೋಗ್ಯಕ್ಕೆ ಇದರ ಪ್ರಯೋಜನ ಕೇಳಿದ್ರೆ ಅಚ್ಚರಿಪಡ್ತೀರಿ

ಮಾವಿನಹಣ್ಣು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಹಣ್ಣು ತಿಂದ ಮೇಲೆ ಸಿಪ್ಪೆ ಎಸಿತೀವಿ, ಆದರೆ ಇದು ಖಂಡಿತ ಒಳ್ಳೆಯ ಅಭ್ಯಾಸವಲ್ಲ. ಯಾಕಂದ್ರೆ ಮಾವಿನ ಸಿಪ್ಪೆಯಿಂದ ಸಾಕಷ್ಟು ಪ್ರಯೋಜನಗಳಿವೆ. ಇದು ಆರೋಗ್ಯಕ್ಕಷ್ಟೇ ಅಲ್ಲ ಅಂದಕ್ಕೂ ಅವಶ್ಯ. ಇದನ್ನ ಹೇಗೆಲ್ಲಾ ಬಳಸಬಹುದು, ಇದ್ರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಮಾವಿನಹಣ್ಣಿನ ಸಿಪ್ಪೆ ಎಸೆಯುವ ಅಭ್ಯಾಸವಿದ್ರೆ ಇಂದೇ ಸ್ಟಾಪ್‌ ಮಾಡಿ, ಇದರ ಪ್ರಯೋಜನಗಳನ್ನು ಕೇಳಿದ್ರೆ ನೀವೂ  ಅಚ್ಚರಿಪಡ್ತೀರಿ
ಮಾವಿನಹಣ್ಣಿನ ಸಿಪ್ಪೆ ಎಸೆಯುವ ಅಭ್ಯಾಸವಿದ್ರೆ ಇಂದೇ ಸ್ಟಾಪ್‌ ಮಾಡಿ, ಇದರ ಪ್ರಯೋಜನಗಳನ್ನು ಕೇಳಿದ್ರೆ ನೀವೂ ಅಚ್ಚರಿಪಡ್ತೀರಿ

ಸದ್ಯ ಹಣ್ಣುಗಳ ರಾಜ ಮಾವಿನಹಣ್ಣದ್ದೇ ಮಾರುಕಟ್ಟೆ ತುಂಬಾ ಹವಾ. ಬೇಸಿಗೆ- ಮಳೆಗಾಲದ ಆರಂಭದಲ್ಲಿ ಹೆಚ್ಚು ಬೇಡಿಕೆ ಇರುವ ಹಣ್ಣು ಮಾವು. ಅದ್ಭುತ ರುಚಿಯ ಜೊತೆಗೆ ಇದು ಹಲವು ಪೋಷಕಾಂಶಗಳ ಆಗರವಾಗಿದೆ. ಮಾವಿನಹಣ್ಣಿನ ಪ್ರಯೋಜನಗಳ ಬಗ್ಗೆ ಹಲವರಿಗೆ ತಿಳಿದಿರಬಹುದು. ಆದರೆ ಮಾವಿನ ಸಿಪ್ಪೆಯೂ ಕೂಡ ಸಾಕಷ್ಟು ಪ್ರಯೋಜನಕಾರಿ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಆಂಟಿ ಕ್ಯಾನ್ಸರ್‌ ಅಂಶದಿಂದ ಹಿಡಿದು ಸಾಕಷ್ಟು ಪ್ರಯೋಜನಗಳನ್ನು ಇದು ಹೊಂದಿದೆ. ಮಾವಿನಹಣ್ಣು ತಿಂದ ಮೇಲೆ ಮರು ಯೋಚಿಸದೇ ಸಿಪ್ಪೆ ಎಸೆಯುವುದು ಎಸಿತೀವಿ. ಆದರೆ ಹಲವು ಪೋಷಕಾಂಶಗಳನ್ನು ಹೊಂದಿರುವ ಮಾವಿನಹಣ್ಣಿನ ಸಿಪ್ಪೆಯು ಕಾಯಿಲೆಗಳ ವಿರುದ್ಧ ಹೋರಾಡುತ್ತದೆ. ಇದು ವಯಸ್ಸಾದಂತೆ ಕಾಣುವ ಲಕ್ಷಣಗಳನ್ನು ನಿವಾರಿಸುತ್ತದೆ ಎಂಬುದನ್ನು ಹಲವು ಅಧ್ಯಯನಗಳು ಸಾಬೀತು ಪಡಿಸಿವೆ.

ಟ್ರೆಂಡಿಂಗ್​ ಸುದ್ದಿ

ವಿಟಮಿನ್‌ ಎ, ಸಿ,ಕೆ, ಫೋಲೆಟ್‌, ಮೆಗ್ನಿಶಿಯಂ, ಕೋಲಿನ್‌, ಪೊಟ್ಯಾಶಿಯಂ ಅಂಶಗಳನ್ನು ಹೊರತುಪಡಿಸಿ ನಾರಿನಾಂಶ, ಆಂಟಿಆಕ್ಸಿಡೆಂಟ್‌ ಅಂಶ, ಕ್ಯಾರೊಟಿನಾಯ್ಡ್ಸ್‌, ಪಾಲಿಫೆನಾಲ್‌ ಅಂಶಗಳು ಹೃದ್ರೋಗ ಹಾಗೂ ಕ್ಯಾನ್ಸರ್‌ ಅಪಾಯವನ್ನು ತಡೆಯುತ್ತದೆ.

2008 ರಲ್ಲಿ ಪ್ರಕಟವಾದ ಒಕ್ಲಹೋಮ ಸ್ಟೇಟ್ ಯೂನಿವರ್ಸಿಟಿ ಅಧ್ಯಯನದಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಮಾವಿನ ಸಿಪ್ಪೆಯನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಏಕೆಂದರೆ ಇದು ಶಕ್ತಿಯ ಬಳಕೆ ಮತ್ತು ಹಸಿವನ್ನು ನಿಯಂತ್ರಿಸುವ ಹಾರ್ಮೋನ್ ಆಗಿದೆ. ಯುನಿವರ್ಸಿಟಿ ಆಫ್ ಕ್ವೀನ್ಸ್‌ಲ್ಯಾಂಡ್ ಸ್ಕೂಲ್ ಆಫ್ ಫಾರ್ಮಸಿಯ ಸಂಶೋಧನೆಯ ಪ್ರಕಾರ, ನಾಮ್ ಡಾಕ್ ಮೈ ಮತ್ತು ಇರ್ವ್ವಿನ್ ಎಂಬ ಎರಡು ಮಾವಿನ ಹಣ್ಣಿನ ಸಿಪ್ಪೆಗಳು ದೇಹದಲ್ಲಿ ಕೊಬ್ಬಿನ ಕೋಶಗಳ ರಚನೆಯನ್ನು ಕಡಿಮೆ ಮಾಡುತ್ತದೆ.

ಮಾವಿನಸಿಪ್ಪೆಯನ್ನು ಹೇಗೆಲ್ಲಾ ಬಳಸಬಹುದು ಎಂಬುದು ನಿಮಗೆ ತಿಳಿದಿಲ್ಲದಿದ್ದರೆ ಇದನ್ನು ಯಾವೆಲ್ಲಾ ರೂಪದಲ್ಲಿ ಬಳಸಬಹುದು ಎಂಬ ಬಗ್ಗೆ ನಾವು ನಿಮಗೆ ಮಾಹಿತಿ ನೀಡುತ್ತೇವೆ.

ಮಾವಿನ ಸಿಪ್ಪೆಯು ವಿಶಿಷ್ಟವಾದ ಸುವಾಸನೆ ಮತ್ತು ಸಂಭಾವ್ಯ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ, ಇದು ಆಹಾರ ತ್ಯಾಜ್ಯವನ್ನು ಕಡಿಮೆ ಮಾಡಲು ಒಂದು ಸೊಗಸಾದ ವಿಧಾನವಾಗಿದೆ, ಎಂದು ಗುರುಗ್ರಾಮ್‌ನ ಮರೆಂಗೋ ಏಷ್ಯಾ ಆಸ್ಪತ್ರೆಯ ನ್ಯೂಟ್ರಿಷನ್ ಮತ್ತು ಡಯೆಟಿಕ್ಸ್ ಮುಖ್ಯಸ್ಥ ಡಾ.ನೀತಿ ಶರ್ಮಾ ಹೇಳುತ್ತಾರೆ, ಅವರು ಮಾವಿನ ಸಿಪ್ಪೆಯಿಂದ ತಯಾರಿಸಬಹುದಾದ ರೆಸಿಪಿಗಳ ಬಗ್ಗೆ ಇಲ್ಲಿ ತಿಳಿಸಿದ್ದಾರೆ.

ಮಾವಿನಸಿಪ್ಪೆಯಿಂದ ಈ ರೆಸಿಪಿಗಳನ್ನು ತಯಾರಿಸಬಹುದು 

 ಮಾವಿನಸಿಪ್ಪೆಯ ಟೀ: ಪರಿಮಳಭರಿತ, ದೇಹಕ್ಕೆ ಚೈತನ್ಯ ನೀಡುವ ಚಹಾವನ್ನು ಮಾವಿನಸಿಪ್ಪೆಯಿಂದ ತಯಾರಿಸಬಹುದು. ಅದಕ್ಕಾಗಿ ಮಾವಿನಸಿಪ್ಪೆಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ. ಅದಕ್ಕೆ ಸ್ವಲ್ಪ ಜೇನುತುಪ್ಪ ಹಾಗೂ ನಿಂಬೆರಸ ಸೇರಿಸಬಹುದು. ಮಾವಿನ ಸಿಪ್ಪೆಯ ಚಹಾವು ವಿಟಮಿನ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಅಧಿಕವಾಗಿದೆ, ಇದು ಆರೋಗ್ಯ ಪ್ರಯೋಜನಗಳನ್ನು ಹೊಂದಿರಬಹುದು.

ಮಾವಿನ ಸಿಪ್ಪೆಯ ಉಪ್ಪಿನಕಾಯಿ: ಮಾವಿನಕಾಯಿಯಿಂದ ಮಾತ್ರವಲ್ಲ ಸಿಪ್ಪೆಯಿಂದಲೂ ಉಪ್ಪಿನಕಾಯಿ ತಯಾರಿಸಬಹುದು. ಸಿಪ್ಪೆಯನ್ನು ತೆಳುವಾದ ಹೋಳುಗಳಾಗಿ ಕತ್ತರಿಸಿ ಮತ್ತು ಅದನ್ನು ವಿನೆಗರ್, ಉಪ್ಪು ಮತ್ತು ಮಸಾಲೆಗಳೊಂದಿಗೆ ಮಿಶ್ರಣ ಮಾಡಿ. ಉಪ್ಪಿನಕಾಯಿ ರುಚಿ ತರಲು ಇದನ್ನು ಕೆಲವು ದಿನಗಳ ಕಾಲ ಹುದುಗಲು ಬಿಡಿ. ಮಾವಿನ ಸಿಪ್ಪೆಯ ಉಪ್ಪಿನಕಾಯಿ ನಿಮ್ಮ ಊಟಕ್ಕೆ ಸ್ವಲ್ಪ ಟ್ಯಾಂಗಿ ರುಚಿ ನೀಡಲು ಉತ್ತಮ ವಿಧಾನವಾಗಿದೆ. ಅನ್ನದೊಂದಿಗೆ ಇದು ಬೆಸ್ಟ್‌ ಕಾಂಬಿನೇಷನ್‌.

ಮಾವಿನ ಸಿಪ್ಪೆಯ ಚಟ್ನಿ: ರುಚಿಕರವಾದ ಮಾವಿನ ಸಿಪ್ಪೆಯ ಚಟ್ನಿ ತಯಾರಿಸಲು ಹಸಿಮೆಣಸು, ಶುಂಠಿ, ಬೆಳ್ಳುಳ್ಳಿ ಹಾಗೂ ಇತರ ಮಸಾಲೆಗಳು ಬೇಕು. ಈ ಎಲ್ಲವನ್ನೂ ಸೇರಿಸಿ ತರಿತರಿಯಾಗಿ ರುಬ್ಬಿದ್ರೆ ರುಚಿಯಾದ ಮಾವಿನಕಾಯಿ ಚಟ್ನಿ ತಿನ್ನಲು ಸಿದ್ಧ. ಇದು ಸಮೋಸಾ, ಪಕೋಡದಂತಹ ಸ್ನ್ಯಾಕ್ಸ್‌ ಜೊತೆ ತಿನ್ನಲು ಚೆನ್ನಾಗಿರುತ್ತದೆ. ಸ್ಯಾಂಡ್‌ವಿಚ್‌ಗಳ ಮೇಲೆ ಸ್ಪ್ರೆಡ್‌ ಆಗಿಯೂ ಬಳಸಬಹುದು.

ಮಾವಿನ ಸಿಪ್ಪೆಯ ಜಾಮ್‌ ಮಾವಿನ ಸಕ್ಕರೆ ಹಾಗೂ ನೀರಿನ ಜೊತೆ ಹಾಕಿ ದಪ್ಪವಾಗುವವರೆಗೂ ಕುದಿಸಬೇಕು. ಬೇಕೆಂದರೆ ಇದಕ್ಕೆ ಏಲಕ್ಕಿ ಅಥವಾ ದಾಲ್ಚಿನ್ನಿ ಸೇರಿಸಬಹುದು. ಇದರಿಂದ ರುಚಿ, ಪರಿಮಳ ಎರಡೂ ಹೆಚ್ಚುತ್ತದೆ. ಇದನ್ನು ಟೋಸ್ಟ್‌, ಪ್ಯಾನ್‌ಕೇಕ್‌ಗಳ ಮೇಲೆ ಹರಿದುಕೊಂಡು ಸವಿಯಬಹುದು.

ಇದು ಮಾವಿನಹಣ್ಣಿನಿಂದ ತಯಾರಿಸಬಹುದಾದ ಖಾದ್ಯಗಳ ಬಗ್ಗೆ ಆದರೆ ಇದರಿಂದ ಅಂದ, ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ವಿವರಿಸಿದ್ದಾರೆ ಗುರುಗ್ರಾಮದ ಬಿರ್ಲಾ ಆಸ್ಪತ್ರೆಯ ಚರ್ಮರೋಗ ತಜ್ಞೆ ಡಾ. ಸೀಮಾ ಒಬೆರಾಯ್‌ ಲಾಲ್‌.

ಬ್ಯೂಟಿಸ್ಕ್ರಬ್‌: ಮಾವಿನಹಣ್ಣಿನ ಸಿಪ್ಪೆಯನ್ನು ಒಣಗಿಸಿ ನುಣ್ಣಗೆ ಪುಡಿ ಮಾಡಿ ಬ್ಯೂಟಿಸ್ಕ್ರಬ್ ರೂಪದಲ್ಲಿ ಬಳಸಬಹುದು.  ಮುಖ ಅಥವಾ ದೇಹಕ್ಕೆ ಕೂಲಿಂಗ್ ಸ್ಕ್ರಬ್ ಮಾಡಲು ಈ ಪುಡಿಗೆ ಜೇನುತುಪ್ಪ ಅಥವಾ ಮೊಸರು ಸೇರಿಸಿ. ಮಾವಿನ ಸಿಪ್ಪೆಯ ನೈಸರ್ಗಿಕ ಕಿಣ್ವಗಳು ಚರ್ಮ ನಿರ್ಜೀವ ಕೋಶಗಳನ್ನು ತೊಡದು ಹಾಕಲು ಸಹಾಯ ಮಾಡುತ್ತವೆ, ಇದರಿಂದ ಚರ್ಮ ರಿಫ್ರೆಶ್ ಆಗಿ, ರೇಷ್ಮೆಯಂತೆ ಮೃದುವಾಗುತ್ತದೆ. 

ಕೂದಲ ರಕ್ಷಣೆ: ಶಾಂಪೂ ಹಾಕಿ ತಲೆಸ್ನಾನ ಮಾಡಿದ ನಂತರ ನಿಮ್ಮ ಕೂದಲನ್ನು ತೊಳೆಯಲು ಮಾವಿನ ಸಿಪ್ಪೆಯಿಂದ ತುಂಬಿದ ನೀರನ್ನು ಬಳಸಿ. ಇದು ನಿಮ್ಮ ನೆತ್ತಿಯನ್ನು ಪೋಷಿಸಬಲ್ಲದು ಮತ್ತು ನಿಮ್ಮ ಕೂದಲಿಗೆ ಹೊಳಪನ್ನು ನೀಡುತ್ತದೆ, ಕೂದಲಿನ ಎಳೆಗಳನ್ನು ಹೊಳೆಯುವಂತೆ ಮಾಡಿ ಕೂದಲಿಗ ಜೀವ ತುಂಬುವಂತೆ ಮಾಡುತ್ತದೆ.

ಸ್ಕಿನ್ ಟೋನರ್: ಮಾವಿನ ಸಿಪ್ಪೆಯನ್ನು ನೀರಿನಲ್ಲಿ ಕುದಿಸಿ ಮತ್ತು ದ್ರಾವಣವನ್ನು ತಣ್ಣಗಾಗಲು ಬಿಡಿ. ನಂತರ ಇದನ್ನು ಚರ್ಮಕ್ಕೆ ನೈಸರ್ಗಿಕ ಟೋನರ್ ಆಗಿ ಬಳಸಿ. ಇದು ರಂಧ್ರಗಳನ್ನು ಬಿಗಿಗೊಳಿಸಲು ಮತ್ತು ನಿಮ್ಮ ಮೈಬಣ್ಣವನ್ನು ರಿಫ್ರೆಶ್ ಮಾಡಲು ಸಹಾಯ ಮಾಡುತ್ತದೆ. ಬಿಸಿಲಿನಿಂದ ತ್ವಚೆ ಅಂದಗೆಟ್ಟಿದ್ದರೆ ಇದು ಬೆಸ್ಟ್‌. 

ನೋಡಿದ್ರಲ್ಲ ಬೇಡ ಎಂದು ಎಸೆಯುವ ಮಾವಿನಸಿಪ್ಪೆಯಿಂದ ಅಂದ, ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂದು. ಇನ್ನೂ ಮಾವಿನ ಸೀಸನ್‌ ಮುಗಿದಿಲ್ಲ, ನೀವು ಪ್ರತಿದಿನ ಮಾವು ತಿನ್ನುವವರಾಗಿದ್ರೆ ಸಿಪ್ಪೆ ಎಸಿಬೇಡಿ, ಇದನ್ನು ಹೀಗೆಲ್ಲಾ ಬಳಸಿ ನೋಡಿ.