ಕನ್ನಡ ಸುದ್ದಿ  /  ಜೀವನಶೈಲಿ  /  Vampire Facials: ವಾಂಪೈರ್‌ ಫೇಶಿಯಲ್‌ ಮಾಡಿಸೋದ್ರಿಂದ ಎಚ್‌ಐವಿ ಸೋಂಕು ಹರಡಬಹುದು ಎಚ್ಚರ, ಸೌಂದರ್ಯಕ್ಕಿಂತ ಆರೋಗ್ಯ ಮುಖ್ಯ ಮರಿಬೇಡಿ

Vampire Facials: ವಾಂಪೈರ್‌ ಫೇಶಿಯಲ್‌ ಮಾಡಿಸೋದ್ರಿಂದ ಎಚ್‌ಐವಿ ಸೋಂಕು ಹರಡಬಹುದು ಎಚ್ಚರ, ಸೌಂದರ್ಯಕ್ಕಿಂತ ಆರೋಗ್ಯ ಮುಖ್ಯ ಮರಿಬೇಡಿ

ಇತ್ತೀಚಿನ ದಿನಗಳಲ್ಲಿ ಸೌಂದರ್ಯ ಹೆಚ್ಚಿಸಲು ಹೊಸ ಹೊಸ ಫೇಶಿಯಲ್‌ ಕ್ರಮಗಳನ್ನು ಪರಿಚಯಿಸಲಾಗುತ್ತಿದೆ. ಇದರಲ್ಲಿ ವಾಂಪೈರ್‌ ಫೇಶಿಯಲ್‌ (Vampire Facial) ಕೂಡ ಒಂದು. ಆದರೆ ಇದನ್ನು ಮಾಡಿಸಿದ ಮೂವರು ಮಹಿಳೆಯರು ಎಚ್‌ಐವಿ ಸೋಂಕಿಗೆ ಒಳಗಾಗಿರುವ ಕುರಿತು ವರದಿ ಪ್ರಕಟವಾಗಿದೆ. ಹಾಗಾದ್ರೆ ಈ ಫೇಶಿಯಲ್‌ ಮಾಡಿಸುವುದು ಅಪಾಯವೇ, ಇದರಿಂದ ಸೋಂಕು ತಲುಗಿದ್ದು ಹೇಗೆ ನೋಡಿ.

ವಾಂಪೈರ್‌ ಫೇಶಿಯಲ್‌ ಮಾಡಿಸೋದ್ರಿಂದ ಎಚ್‌ಐವಿ ಸೋಂಕು ಹರಡಬಹುದು ಎಚ್ಚರ
ವಾಂಪೈರ್‌ ಫೇಶಿಯಲ್‌ ಮಾಡಿಸೋದ್ರಿಂದ ಎಚ್‌ಐವಿ ಸೋಂಕು ಹರಡಬಹುದು ಎಚ್ಚರ

ಸೌಂದರ್ಯ ವರ್ಧಿಸಿಕೊಳ್ಳುವ ಸಲುವಾಗಿ ಹೆಣ್ಣುಮಕ್ಕಳು ದುಬಾರಿ ಚಿಕಿತ್ಸೆಗಳಿಗೆ ಒಳಗಾಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸಹಜವಾಗಿದೆ. ಅಂದ ಹೆಚ್ಚಿಸುವ ಬಗೆ ಬಗೆಯ ಫೇಶಿಯಲ್‌ ವಿಧಾನಗಳು ಈಗ ಸೌಂದರ್ಯ ಜಗತ್ತಿಗೆ ಕಾಲಿರಿಸಿವೆ. ಅವುಗಳಲ್ಲಿ ವಾಂಪೈರ್‌ ಫೇಶಿಯಲ್‌ ಕೂಡ ಒಂದು. ಸದಾ ನವ ಯುವತಿಯರಂತೆ ಕಾಣಿಸಬೇಕು ಎಂದು ಬಯಸುವ ಹೆಣ್ಣುಮಕ್ಕಳು ವಾಂಪೈರ್‌ ಫೇಶಿಯಲ್‌ ಮೊರೆ ಹೋಗುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಆದರೆ ಇತ್ತೀಚಿನ ವರದಿಯೊಂದನ್ನು ಕೇಳಿದ್ರೆ ನೀವು ಖಂಡಿತ ಶಾಕ್‌ ಆಗ್ತೀರಿ. ವಾಂಪೈರ್‌ ಫೇಶಿಯಲ್‌ ಮಾಡಿಸಿಕೊಂಡ ಮೂವರು ಮಹಿಳೆಯರು ಎಚ್‌ಐವಿ ಸೋಂಕಿಗೆ ಒಳಗಾಗಿದ್ದಾರೆ. ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಈ ಮಾಹಿತಿ ತಿಳಿಸಿದೆ. ಸಂಸ್ಥೆಯ ವರದಿಯ ಪ್ರಕಾರ, ನ್ಯೂ ಮೆಕ್ಸಿಕೋದಲ್ಲಿ ವಾಂಪೈರ್‌ ಫೇಶಿಯಲ್‌ ಮಾಡಿಸಿಕೊಂಡು ಮಹಿಳೆಯರಲ್ಲಿ ಎಚ್‌ಐವಿ ಸೋಂಕು ಕಾಣಿಸಿದೆ.

ವಾಂಪೈರ್ ಫೇಶಿಯಲ್ ಎಂದರೇನು?

ವ್ಯಾಂಪೈರ್ ಫೇಶಿಯಲ್ ಅನ್ನು ಪಿಆರ್‌ಪಿ ಥೆರಪಿ (ಪ್ಲೇಟ್ಲೆಟ್ ರಿಚ್ ಪ್ಲಾಸ್ಮಾ) ಎಂದೂ ಕರೆಯಲಾಗುತ್ತದೆ. ಇದು ಪ್ಲಾಸ್ಮಾ, ಬಿಳಿ ರಕ್ತಕಣಗಳು, ಪ್ಲೇಟ್ಲೆಟ್‌ಗಳು ಮತ್ತು ಕೆಂಪು ರಕ್ತಕಣಗಳನ್ನು ಪ್ರತ್ಯೇಕಿಸುತ್ತದೆ. ಪ್ಲಾಸ್ಮಾ ಪ್ಲೇಟ್ಲೆಟ್‌ಳಲ್ಲಿ ಸಮೃದ್ಧವಾಗಿದೆ. ಪ್ಲೇಟ್ಲೆಟ್‌ಳನ್ನು ಮುಖದ ಮೇಲಿನ ಚರ್ಮಕ್ಕೆ ಚುಚ್ಚಲಾಗುತ್ತದೆ. ಹೀಗೆ ಮಾಡುವುದರಿಂದ ಕಾಲಜನ್ ಉತ್ಪಾದನೆ ಹೆಚ್ಚುತ್ತದೆ. ಕಾಲಜನ್ ಉತ್ಪಾದನೆ ಹೆಚ್ಚಾದಾಗ ಚರ್ಮದಲ್ಲಿ ಸುಕ್ಕುಗಳು ಮತ್ತು ಸೂಕ್ಷ್ಮ ರೇಖೆಗಳು ರೂಪುಗೊಳ್ಳುವುದಿಲ್ಲ. ಚರ್ಮದಲ್ಲಿ ವಯಸ್ಸಾದಂತೆ ಕಾಣುವ ಯಾವ ಲಕ್ಷಣಗಳೂ ಗೋಚರವಾಗುವುದಿಲ್ಲ. ಇದು ಸೂರ್ಯನ ಬೆಳಕಿನಿಂದ ಉಂಟಾಗುವ ಚರ್ಮದ ಹಾನಿಯನ್ನು ಕಡಿಮೆ ಮಾಡುತ್ತದೆ. ಜೊತೆಗೆ ಮೊಡವೆಗಳನ್ನೂ ತಡೆಯುತ್ತದೆ. ಹಾಗಾಗಿಯೇ ವಾಂಪೈರ್ ಫೇಶಿಯಲ್ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಇದು ಭಾರತದಲ್ಲೂ ಹೆಚ್ಚು ಸದ್ದು ಮಾಡುತ್ತಿದೆ.

ಈ ಫೇಶಿಯಲ್ ಮಾಡಿದ ನಂತರ ಕೆಲವು ಗಂಟೆಗಳ ಕಾಲ ವಿಶ್ರಾಂತಿ ಪಡೆಯಬೇಕು. ಒಂದು ವಾರದವರೆಗೆ ಪ್ರಖರವಾದ ಬಿಸಿಲಿನಲ್ಲಿ ಹೊರಗಡೆ ಹೋಗುವಂತಿಲ್ಲ. ಹೆಚ್ಚು ಶ್ರಮ ಬೇಡುವ ವ್ಯಾಯಾಮ ಮಾಡುವಂತಿಲ್ಲ. ಅತಿಯಾದ ಬೆವರುವಿಕೆಗೆ ಕಾರಣವಾಗುವ ಚಟುವಟಿಕೆಗಳನ್ನು ಮಾಡದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಇದು ದುಬಾರಿ ವೆಚ್ಚದ ಚಿಕಿತ್ಸೆಯಾಗಿದ್ದು, ವಾಂಪೈರ್‌ ಫೇಶಿಯಲ್‌ ಮಾಡಿಸಿಕೊಳ್ಳಲು 15 ಸಾವಿರದಿಂದ 30 ಸಾವಿರ ರೂಪಾಯಿಗಳವರೆಗೆ ಖರ್ಚಾಗುತ್ತದೆ.

ಈ ಫೇಶಿಯಲ್‌ನಿಂದ ಅಂದ ಹೆಚ್ಚುವುದೇನೋ ನಿಜ, ಆದರೆ ಇದನ್ನು ಮಾಡಿಸಿಕೊಳ್ಳುವ ರಕ್ತ ಶುದ್ಧವಾಗಿರಬೇಕು. ಸೋಂಕಿತರ ರಕ್ತವನ್ನು ಸಂಗ್ರಹಿಸಿ ಚರ್ಮಕ್ಕೆ ಚುಚ್ಚಿದರೆ, ಹಲವು ರೋಗಗಳು ಬರುವ ಸಾಧ್ಯತೆಯಿದೆ.

ಸದ್ಯ ಐಎಚ್‌ವಿ ಸೋಂಕಿತರಾದ ಮಹಿಳೆಯರು ಎಚ್‌ಐವಿ-ಪಾಸಿಟಿವ್ ರಕ್ತ ಅಥವಾ ಸೂಜಿಗಳನ್ನು ಹಂಚಿಕೊಳ್ಳುವ ಮೂಲಕ ರೋಗಕ್ಕೆ ತುತ್ತಾಗಿದ್ದಾರೆ ಎಂದು ವರದಿಗಳು ಹೇಳುತ್ತವೆ. ಸಾಮಾನ್ಯವಾಗಿ ಈ ಕಾಸ್ಮೆಟಿಕ್ ಪ್ರಕ್ರಿಯೆಯಲ್ಲಿ ವಾಂಪೈರ್‌ ಫೇಶಿಯಲ್‌ ಮಾಡಿಸಿಕೊಳ್ಳುವವರ ಸ್ವಂತ ರಕ್ತವನ್ನು ವರ್ಗಾವಣೆ ಮಾಡಲಾಗುತ್ತದೆ. ಆದರೂ ಸೋಂಕು ಕಾಣಿಸಿಕೊಂಡು ಆತಂಕಕ್ಕೆ ಕಾರಣವಾಗಿದೆ. ಮಾತ್ರವಲ್ಲ ಈ ವಿಚಾರ ಪ್ರಪಂಚದಾದ್ಯಂತ ಸದ್ದು ಮಾಡುತ್ತಿದೆ.

ಅದೇನೇ ಇರಲಿ, ಸೌಂದರ್ಯಕ್ಕಿಂತ ಆರೋಗ್ಯ ಮುಖ್ಯ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಇಂತಹ ಸೌಂದರ್ಯವರ್ಧಕ ವಿಧಾನಗಳನ್ನು ಆಶ್ರಯಿಸುವುದಕ್ಕಿಂತ ಆರೋಗ್ಯಕರ ಆಹಾರವನ್ನು ಸೇವಿಸುವ ಮೂಲಕ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವುದು ಉತ್ತಮ.

ಸೋಂಕು ಹರಡಿದ್ದು ಹೀಗೆ

ವಾಂಪೈರ್‌ ಫೇಶಿಯಲ್‌ನಿಂದ ಎಚ್‌ಐವಿ ತಗುಲಿದ ಮೂವರು ಮಹಿಳೆಯರು 40 ರಿಂದ 50 ವಯಸ್ಸಿನವರು. ಅವರು ತಮ್ಮ ಗಂಡನನ್ನು ಹೊರತುಪಡಿಸಿ ಯಾರೊಂದಿಗೂ ಲೈಂಗಿಕ ಸಂಬಂಧ ಹೊಂದಿಲ್ಲ ಎಂದು ಹೇಳುತ್ತಾರೆ. ಅಲ್ಲದೆ, 2018ರಲ್ಲಿ, ಅವರು ಕೊನೆಯ ಬಾರಿಗೆ ವಾಂಪೈರ್‌ ಫೇಶಿಯಲ್‌ ಮಾಡಿಸಿಕೊಂಡಿದ್ದರು. ನಂತರ ಅವರು ಯಾವುದೇ ಚುಚ್ಚುಮದ್ದು ಅಥವಾ ವ್ಯಾಕ್ಸಿನೇಷನ್ ತೆಗೆದುಕೊಂಡಿಲ್ಲ ಎಂದು ಅವರು ಹೇಳುತ್ತಾರೆ. ಜೊತೆಗೆ ಇವರೆಲ್ಲರೂ ಒಂದೇ ಸ್ಥಳದಲ್ಲಿ ವಾಂಪೈರ್‌ ಫೇಶಿಯಲ್‌ ಮಾಡಿಸಿಕೊಂಡಿದ್ದಾರೆ. ಅವರು ಫೇಶಿಯಲ್‌ ಮಾಡಿಸಿಕೊಂಡ ಪಾರ್ಲರ್‌ಗೆ ಹೋಗಿ ನೋಡಿದಾಗ ಅಲ್ಲಿ ಬಳಸಿದ ಸೂಜಿಗಳನ್ನು ಬಳಸುತ್ತಿದ್ದು, ಕೆಲವರು ರಕ್ತವನ್ನು ಶೇಖರಿಸಿ ಫೇಶಿಯಲ್‌ಗೆ ಬಳಸುತ್ತಿರುವುದು ಕಂಡು ಬಂದಿದೆ. ಆ ಮೂಲಕ ಈ ಮಹಿಳೆಯರಿಗೆ ಎಚ್‌ಐವಿ ಸೋಂಕು ಹರಡಿದೆ.

ವಿಭಾಗ