ಪ್ರತಿದಿನ ಒಂದು ಹಪ್ಪಳ ತಿನ್ನುವುದರಿಂದ ಪಡೆಯಬಹುದು ಹಲವು ಆರೋಗ್ಯ ಪ್ರಯೋಜನ: ಏನೆಲ್ಲಾ ಅನುಕೂಲಗಳಿವೆ, ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ಜೀವನಶೈಲಿ  /  ಪ್ರತಿದಿನ ಒಂದು ಹಪ್ಪಳ ತಿನ್ನುವುದರಿಂದ ಪಡೆಯಬಹುದು ಹಲವು ಆರೋಗ್ಯ ಪ್ರಯೋಜನ: ಏನೆಲ್ಲಾ ಅನುಕೂಲಗಳಿವೆ, ಇಲ್ಲಿದೆ ಮಾಹಿತಿ

ಪ್ರತಿದಿನ ಒಂದು ಹಪ್ಪಳ ತಿನ್ನುವುದರಿಂದ ಪಡೆಯಬಹುದು ಹಲವು ಆರೋಗ್ಯ ಪ್ರಯೋಜನ: ಏನೆಲ್ಲಾ ಅನುಕೂಲಗಳಿವೆ, ಇಲ್ಲಿದೆ ಮಾಹಿತಿ

ಊಟದ ಜತೆ ಸಾಂಬಾರ್, ಪಲ್ಯ, ರಸಂ, ಉಪ್ಪಿನಕಾಯಿ ಇತ್ಯಾದಿ ಏನೇ ಇರಲಿ ಕರುಂ ಕುರುಂ ಹಪ್ಪಳ ಇಲ್ಲದಿದ್ದರೆ ಯಾವುದೇ ಹಬ್ಬದೂಟ ಅಥವಾ ಶುಭ ಕಾರ್ಯಕ್ರಮಗಳಲ್ಲಿನ ಊಟ ಅಪೂರ್ಣವಾದಂತೆಯೇ ಸರಿ. ರಸಂ, ಸಾಂಬಾರು ಬಡಿಸಿದಾಗ ಅನ್ನದ ಜೊತೆಗೆ ಹಪ್ಪಳವನ್ನು ತಿನ್ನುವುದೇ ಒಂದು ಆನಂದ.ಪ್ರತಿದಿನ ಹಪ್ಪಳ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳು ಸಿಗುತ್ತವೆ.

ಪ್ರತಿದಿನ ಹಪ್ಪಳ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳು ಸಿಗುತ್ತವೆ.
ಪ್ರತಿದಿನ ಹಪ್ಪಳ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳು ಸಿಗುತ್ತವೆ. (PC: Canva)

ಯಾವುದೇ ಶುಭ ಕಾರ್ಯಕ್ರಮಗಳಲ್ಲಿ ಊಟದ ಜತೆ ಪಾಪಡ್ ಅಥವಾ ಹಪ್ಪಳ ಇದ್ದೇ ಇರುತ್ತದೆ. ಅಕ್ಕಿ ಹಿಟ್ಟು, ಸಬ್ಬಕ್ಕಿ ಅಥವಾ ಕಡಲೆ ಹಿಟ್ಟು ಇತ್ಯಾದಿಯಿಂದ ಮಾಡಿದ ತೆಳುವಾದ, ಗರಿಗರಿಯಾದ ತಿನಿಸಾಗಿದೆ. ಇದನ್ನು ಸಾಮಾನ್ಯವಾಗಿ ಮಸಾಲೆಗಳನ್ನು ಹಾಕಿ ತಯಾರಿಸಲಾಗುತ್ತದೆ. ನಂತರ ಇದನ್ನು ಬಿಸಿಲಿನಲ್ಲಿ ಒಣಗಿಸಿ ಅಥವಾ ಹುರಿಯಲಾಗುತ್ತದೆ. ಊಟದ ಜತೆ ಸೈಡ್ ಡಿಶ್ ಆಗಿ ಸವಿಯಲಾಗುತ್ತದೆ. ಚಟ್ನಿ ಅಥವಾ ಟೊಮೆಟೋ, ಈರುಳ್ಳಿ ಸೇರಿಸಿದ ಮಸಾಲೆಗಳೊಂದಿಗೂ ಇದನ್ನು ಆನಂದಿಸಬಹುದು. ಇದರ ಕುರುಕುಲಾದ ವಿನ್ಯಾಸ ಮತ್ತು ಖಾರದ ಸುವಾಸನೆಯಿಂದ ಇದು ಭಾರತೀಯ ಪಾಕಪದ್ಧತಿಯಲ್ಲಿ ಬಹಳ ಜನಪ್ರಿಯವಾಗಿದೆ.

ಊಟದ ಜತೆ ಸಾಂಬಾರ್, ಪಲ್ಯ, ರಸಂ, ಉಪ್ಪಿನಕಾಯಿ ಇತ್ಯಾದಿ ಏನೇ ಇರಲಿ ಕರುಂ ಕುರುಂ ಹಪ್ಪಳ ಇಲ್ಲದಿದ್ದರೆ ಯಾವುದೇ ಹಬ್ಬದೂಟ ಅಥವಾ ಶುಭ ಕಾರ್ಯಕ್ರಮಗಳಲ್ಲಿನ ಊಟ ಅಪೂರ್ಣವಾದಂತೆಯೇ ಸರಿ. ರಸಂ, ಸಾಂಬಾರು ಬಡಿಸಿದಾಗ ಅನ್ನದ ಜೊತೆಗೆ ಹಪ್ಪಳವನ್ನು ತಿನ್ನುವುದೇ ಒಂದು ಆನಂದ. ಹಪ್ಪಳಗಳಲ್ಲಿ ಅನೇಕ ವಿಧಗಳಿವೆ. ಅವುಗಳಲ್ಲಿ, ಬೇಳೆ ಹಿಟ್ಟಿನಿಂದ ಮಾಡಿದ ಪಪ್ಪಡಗಳು ಆರೋಗ್ಯಕರವಾಗಿವೆ. ಮನೆಯಲ್ಲೇ ಮಾಡಿದ ಹಪ್ಪಳವಂತೂ ಇನ್ನೂ ಉತ್ತಮ. ಅಂದಹಾಗೆ, ಪ್ರತಿದಿನ ಹಪ್ಪಳ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳು ಸಿಗುತ್ತವೆ. ಏನೆಲ್ಲಾ ಪ್ರಯೋಜನಗಳು ದೊರಕಲಿವೆ ಎಂಬುದು ಇಲ್ಲಿದೆ.

ಪ್ರತಿದಿನ ಹಪ್ಪಳ ಸೇವನೆಯ ಆರೋಗ್ಯ ಪ್ರಯೋಜನಗಳು

ಹಪ್ಪಳ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಆಯುರ್ವೇದ ಹೇಳುತ್ತದೆ. ಈ ರುಚಿಕರವಾದ ತಿಂಡಿ ಅನೇಕ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಅವುಗಳ ಪ್ರಯೋಜನಗಳನ್ನು ಇಲ್ಲಿ ನೋಡೋಣ.

ಹಸಿವನ್ನು ಹೆಚ್ಚಿಸುತ್ತದೆ: ಊಟದ ಮೊದಲು ತಿನ್ನುವುದರಿಂದ ಹಪ್ಪಳವು ಹಸಿವನ್ನು ಉಂಟುಮಾಡುತ್ತದೆ. ಜ್ವರ ಬಂದಾಗ ಯಾವುದೇ ಆಹಾರವನ್ನು ತಿನ್ನಲು ಮನಸ್ಸಾಗುವುದಿಲ್ಲ. ಏನೂ ಬೇಡ ಎಂದೆನಿಸುತ್ತದೆ. ಹಸಿವು ಕೂಡ ಉಂಟಾಗುವುದಿಲ್ಲ. ಹೀಗಾಗಿ ಕರಿದ ಹಪ್ಪಳವನ್ನು ತಿನ್ನುವುದರಿಂದ ಹಸಿವು ಹೆಚ್ಚಾಗಿ ತಿನ್ನುವ ಬಯಕೆ ಹೆಚ್ಚಾಗುತ್ತದೆ.

ಜೀರ್ಣಶಕ್ತಿ: ಕೆಲವು ಆಹಾರಗಳನ್ನು ಸೇವಿಸಿದ ನಂತರ ಗಂಟಲು ಮತ್ತು ಬಾಯಿಯಲ್ಲಿ ಕೊಬ್ಬು ಸಂಗ್ರಹವಾಗುತ್ತದೆ. ಅಂತಹ ಊಟದ ನಂತರ ಹಪ್ಪಳ ತಿನ್ನುವುದರಿಂದ ಬಾಯಿ ಮತ್ತು ಗಂಟಲಿನ ಅಧಿಕ ಕೊಬ್ಬು ಕಡಿಮೆಯಾಗುತ್ತದೆ. ಮೆಂತ್ಯ ಕಾಳುಗಳೊಂದಿಗೆ ಕರಿಮೆಣಸು ಮತ್ತು ಸ್ವಲ್ಪ ಉಪ್ಪಿನೊಂದಿಗೆ ಸರಳವಾಗಿ ಹಪ್ಪಳವನ್ನು ತಯಾರಿಸಲಾಗುತ್ತದೆ. ಇದರಿಂದಾಗಿ ಈ ಹಪ್ಪಳಗಳು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತವೆ. ಸಾಂಬಾರ ಪದಾರ್ಥಗಳಿರುವ ಊಟವನ್ನು ಬಡಿಸುವಾಗ ಹಪ್ಪಳಗಳನ್ನು ಕೊಡುವುದು ಕೂಡ ಇದೇ ಕಾರಣಕ್ಕೆ. ಹಾಗೆ ತಿಂದರೆ ಕೊಬ್ಬು ಮತ್ತು ಮಸಾಲೆಗಳು ಸುಲಭವಾಗಿ ಜೀರ್ಣವಾಗುತ್ತವೆ.

ಕಣ್ಣು ಮತ್ತು ಕಿವಿ ಅಸ್ವಸ್ಥತೆಗಳು: ಆಯುರ್ವೇದ ತಜ್ಞರು ಹೇಳುವಂತೆ ಪ್ರತಿದಿನ ಹಪ್ಪಳವನ್ನು ತಿನ್ನುವುದರಿಂದ ಕಣ್ಣಿನ ಆರೋಗ್ಯದ ತೊಂದರೆಗಳನ್ನು ಮತ್ತು ಕಿವಿಗೆ ಸಂಬಂಧಿಸಿದ ಕಾಯಿಲೆಗಳನ್ನು ಸಹ ಕಡಿಮೆ ಮಾಡುತ್ತದೆ.

ಹಪ್ಪಳವನ್ನು ಯಾರು ತಿನ್ನಬಾರದು?

ಹಪ್ಪಳದಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನವಿದೆಯೋ, ಎಲ್ಲರಿಗೂ ಇದರಿಂದ ಪ್ರಯೋಜನ ಸಿಗುವುದಿಲ್ಲ. ಕೆಲವು ಸಮಸ್ಯೆ ಇರುವವರು ಇದನ್ನು ತಿಂದರೆ ಸಮಸ್ಯೆಗಳು ಉಂಟಾಗಬಹುದು. ಇವುಗಳಲ್ಲಿ ಸೋಡಿಯಂ ಅಧಿಕವಾಗಿರುತ್ತದೆ. ಹೀಗಾಗಿ ಅಧಿಕ ರಕ್ತದೊತ್ತಡ ರೋಗಿಗಳು ಕಡಿಮೆ ತಿನ್ನುವುದು ಉತ್ತಮ. ಬಾಯಿರುಚಿಗೆ ಹೆಚ್ಚು ತಿನ್ನುವುದರಿಂದ ಅಸಿಡಿಟಿ ಉಂಟಾಗುತ್ತದೆ. ಅದರಲ್ಲಿರುವ ಸೋಡಿಯಂನ ಪರಿಣಾಮವು ರಕ್ತದೊತ್ತಡದ ಮೇಲೆ ಪರಿಣಾಮ ಬೀರುತ್ತದೆ.

ಅಂದಹಾಗೆ, ಹಪ್ಪಳಗಳನ್ನು ಎಣ್ಣೆಯಲ್ಲಿ ಕರಿಯುವುದರಿಂದ ಹುರಿದು ಹಾಗೆಯೇ ತಿನ್ನುವುದರಿಂದ ಹೆಚ್ಚು ಪ್ರಯೋಜನವನ್ನು ಪಡೆಯಬಹುದು. ಅದಕ್ಕಾಗಿ ಹಪ್ಪಳಗಳನ್ನು ತಯಾರಿಸಲು ಸ್ಟೌವ್ ಮೇಲೆ ಸ್ಟ್ಯಾಂಡ್ ಇಡಬಹುದು. ಈ ಮೂಲಕ ಹಪ್ಪಳವನ್ನು ಸುಡಬಹುದು. ಬಾಣಲೆಯಲ್ಲಿ ಉಪ್ಪು ಹಾಕಿ ಅದು ಬಿಸಿಯಾದಾಗ ಹಪ್ಪಳ ಸುಟ್ಟು ತಿನ್ನಬಹುದು. ಕರ್ನಾಟಕದ ಕರಾವಳಿಯಲ್ಲಿ ಹಲಸಿನಕಾಯಿ ಹಪ್ಪಳ ತುಂಬಾನೇ ಫೇಮಸ್. ಮಳೆಗಾಲದಲ್ಲಿ ಸಂಜೆ ವೇಳೆಗೆ ಈ ಹಪ್ಪಳವನ್ನು ಎಣ್ಣೆಯಲ್ಲಿ ಕರಿದರೆ, ಕೆಲವೊಮ್ಮೆ ಕೆಂಡದಲ್ಲಿ ಸುಟ್ಟು ತಿನ್ನುತ್ತಾರೆ. ಎಣ್ಣೆಯಲ್ಲಿ ಕರಿಯುವುದರಿಂದ ಅವುಗಳ ಗುಣಗಳು ಸ್ವಲ್ಪ ಕಡಿಮೆಯಾಗುತ್ತವೆ.

Whats_app_banner