ಕನ್ನಡ ಸುದ್ದಿ  /  ಜೀವನಶೈಲಿ  /  ಆಗ್ಗಾಗ್ಗೆ ತಲೆ ತಿರುಗುತ್ತಾ, ಈ 5 ಆಸನಗಳು ನಿಮ್ಮ ಆರೋಗ್ಯ ಸಮಸ್ಯೆಗೆ ರಾಮಬಾಣ; ಇಂದಿನಿಂದಲೇ ಅಭ್ಯಾಸ ಮಾಡಿ

ಆಗ್ಗಾಗ್ಗೆ ತಲೆ ತಿರುಗುತ್ತಾ, ಈ 5 ಆಸನಗಳು ನಿಮ್ಮ ಆರೋಗ್ಯ ಸಮಸ್ಯೆಗೆ ರಾಮಬಾಣ; ಇಂದಿನಿಂದಲೇ ಅಭ್ಯಾಸ ಮಾಡಿ

Yoga Asans for Dizziness: ಕೋನಾಸನವನ್ನು ಚಿಟ್ಟೆ ಭಂಗಿ ಎಂದೂ ಕರೆಯಲಾಗುತ್ತದೆ. ನೆಲದ ಮೇಲೆ ಕುಳಿತುಕೊಂಡು ನಿಮ್ಮ ಎರಡೂ ಪಾದಗಳನ್ನು ನಿಧಾನವಾಗಿ ಜೋಡಿಸಿ. ನಂತರ ನಿಮ್ಮ ತೊಡೆಗಳನ್ನು ಚಿಟ್ಟೆಗಳು ರೆಕ್ಕೆಗಳನ್ನು ಬಡಿಯುವಂತೆ ಅಲುಗಾಡಿಸಿ.

ತಲೆ ಸುತ್ತುವಿಕೆ ಸಮಸ್ಯೆಗೆ ಪರಿಹಾರ ನೀಡುವ ಯೋಗ ಭಂಗಿಗಳು
ತಲೆ ಸುತ್ತುವಿಕೆ ಸಮಸ್ಯೆಗೆ ಪರಿಹಾರ ನೀಡುವ ಯೋಗ ಭಂಗಿಗಳು (PC Freepik)

Yoga Asans for Dizziness: ಯೋಗ ಪ್ರತಿಯೊಬ್ಬರ ಜೀವನಕ್ಕೂ ಅತ್ಯಂತ ಅವಶ್ಯಕವಾದ ಚಟುವಟಿಕೆ. ಯೋಗದಿಂದ ಎಷ್ಟೋ ಆರೋಗ್ಯ ಸಮಸ್ಯೆಗಳು ನಿಯಂತ್ರಣಕ್ಕೆ ಬರುತ್ತವೆ. ಕೆಲವೊಂದು ಆರೋಗ್ಯ ಸಮಸ್ಯೆಗಳಿಗೆ ನಿರ್ದಿಷ್ಟ ಯೋಗ ಭಂಗಿಗಳಿವೆ. ಇದನ್ನು ಅಭ್ಯಾಸ ಮಾಡಿದರೆ ಸಮಸ್ಯೆ ನಿವಾರಣೆ ಆಗುತ್ತದೆ.

ಟ್ರೆಂಡಿಂಗ್​ ಸುದ್ದಿ

ಬಹುತೇಕ ಮಹಿಳೆಯರು ಅನುಭವಿಸುವ ಆರೋಗ್ಯ ಸಮಸ್ಯೆಗಳಲ್ಲಿ ತಲೆತಿರುಗುವಿಕೆ ಕೂಡಾ ಒಂದು. ಈ ಸಮಸ್ಯೆಗೆ ಕೆಲವೊಂದು ಆಸನಗಳು ರಾಮಬಾಣದಂತಿವೆ. ತಲೆತಿರುಗುವಿಕೆ ಸಮಸ್ಯೆ ಇದ್ದಾಗ ಯೋಗ ಹೇಗೆ ಮಾಡುವುದು ಎಂದುಕೊಳ್ಳಬೇಡಿ. ಮುಂದಿನ ಬಾರಿ ಈ ಸಮಸ್ಯೆ ಬಾರದಿರಲು ನೀವು ನಾರ್ಮಲ್‌ ಇದ್ದಾಗ ಈ ಯೋಗಾಭ್ಯಾಸ ಮಾಡಬಹುದು. ಯೋಗವು ತಲೆ ತಿರುಗುವಿಕೆಯನ್ನು ಸಂಪೂರ್ಣವಾಗಿ ಗುಣಪಡಿಸದಿದ್ದರೂ ತಕ್ಕ ಮಟ್ಟಿಗೆ ಪರಿಹಾರ ನೀಡುತ್ತದೆ.

ನಾಡಿಶೋಧನಾ ಪ್ರಾಣಾಯಾಮ

ಇದನ್ನು ಅನುಲೋಮ ವಿಲೋಮ ಪ್ರಾಣಾಯಾಮ ಎಂದೂ ಕರೆಯಲಾಗುತ್ತದೆ. ಈ ವ್ಯಾಯಾಮ ಮಾಡಲು ಮೊದಲು ಸುಖಾಸನದಲ್ಲಿ ಕುಳಿತುಕೊಳ್ಳಬೇಕು. ನಂತರ ಕಣ್ಣುಗಳನ್ನು ಮುಚ್ಚಿ, ನಿಧಾನವಾಗಿ ಉಸಿರಾಡಿ. ಬಲಗೈನ ತೋರುಬೆರಳು, ಮಧ್ಯದ ಬೆರಳನ್ನು ಹುಬ್ಬುಗಳ ಮಧ್ಯೆ ತಾಕುವಂತೆ ಇಡಿ. ಬಲಭಾಗದ ಹೆಬ್ಬೆರಳನ್ನು ಮೂಗಿನ ಮೇಲಿಟ್ಟು ನಿಧಾನವಾಗಿ ಉಸಿರಾಡಿ, ಸ್ವಲ್ಪ ಸಮಯದ ನಂತರ ಕಿರುಬೆರಳನ್ನು ಮೂಗಿನ ಮೇಲಿಟ್ಟು ಉಸಿರಾಡಿ. ಇದೇ ರೀತಿ 9 ಬಾರಿ ಮಾಡಿ ನಂತರ ನಿಧಾನವಾಗಿ ಕಣ್ಣು ತೆಗೆಯಿರಿ.

ಬಾಲಾಸನ

ಬಾಲಾಸನವನ್ನು ಚೈಲ್ಡ್‌ ಪೋಸ್‌ ಎಂದೂ ಕರೆಯಲಾಗುತ್ತದೆ. ಇದು ತಲೆಸುತ್ತು ಮಾತ್ರವಲ್ಲದೆ ಒತ್ತಡವನ್ನು ಕಡಿಮೆ ಮಾಡುತ್ತದೆ. ಕಾಲುಗಳನ್ನು ಮಡಚಿ ವಜ್ರಾಸನ ಮಾಡಿ. ಮಂಡಿಗಳ ನಡುವೆ ಸ್ವಲ್ಪ ಗ್ಯಾಪ್‌ ಇರಲಿ. ದೀರ್ಘವಾಗಿ ಉಸಿರು ತೆಗೆದುಕೊಳ್ಳುತ್ತಾ ಕೈಗಳನ್ನು ತಲೆಯ ನೇರವಾಗಿ ಮೇಲಕ್ಕೆ ಉಸಿರನ್ನು ಬಿಡಿ. ಹಸ್ತುಗಳು ಹಾಗೂ ಹಣೆಯನ್ನು ನೆಲದ ಮೇಲೆ ಹಾಗೇ ಇಟ್ಟು ಸುಮಾರು 10 ಸಕೆಂಡ್‌ ನಂತರ ಮತ್ತೆ ಉಸಿರಾಡುತ್ತಾ ಮೇಲೆ ಬನ್ನಿ 5 ಬಾರಿ ಹೀಗೇ ಪುನರಾವರ್ತಿಸಿ.

ಬದ್ಧ ಕೋನಾಸನ

ಇದನ್ನು ಚಿಟ್ಟೆ ಭಂಗಿ ಎಂದೂ ಕರೆಯಲಾಗುತ್ತದೆ. ನೆಲದ ಮೇಲೆ ಕುಳಿತುಕೊಂಡು ನಿಮ್ಮ ಎರಡೂ ಪಾದಗಳನ್ನು ನಿಧಾನವಾಗಿ ಜೋಡಿಸಿ. ನಂತರ ನಿಮ್ಮ ತೊಡೆಗಳನ್ನು ಚಿಟ್ಟೆಗಳು ರೆಕ್ಕೆಗಳನ್ನು ಬಡಿಯುವಂತೆ ಅಲುಗಾಡಿಸಿ. ಮಧ್ಯೆ ಕೆಲವು ಸೆಕೆಂಡ್‌ ಬ್ರೇಕ್‌ ನೀಡಿ ನಂತರ ಮತ್ತೆ ಮುಂದುವರೆಸಿ.

ಪಶ್ಚಿಮೊತ್ತಾಸನ

ತಲೆಸುತ್ತುವಿಕೆ ಮಾತ್ರವಲ್ಲ, ನಿಮ್ಮ ಹೊಟ್ಟೆಯ ಬೊಜ್ಜನ್ನು ಕರಗಿಸಲು ಕೂಡಾ ಈ ಯೋಗ ಸಹಕಾರಿಯಾಗಿದೆ. ಎರಡೂ ಕಾಲುಗಳನ್ನು ಮುಂದಕ್ಕೆ ಚಾಚಿ, ಎರಡೂ ಕೈಗಳನ್ನು ಕಾಲುಗಳ ಹೆಬ್ಬರೆಳ ತುದಿಯನ್ನು ಹಿಡಿದು ನಿಮ್ಮ ಹಣೆಯನ್ನು ಮಂಡಿಗೆ ಬಾಗಿಸಿ, ಹೀಗೆ 10 ಸೆಕೆಂಡ್‌ ಇರಿ. ನಂತರ ಇದೇ ರೀತಿ 5-6 ಬಾರಿ ಪುನರಾವರ್ತಿಸಿ.

ಶವಾಸನ

ಸಾಮಾನ್ಯವಾಗಿ ಇದನ್ನು ಎಲ್ಲಾ ಯೋಗಾಸನ ಮಾಡಿದ ನಂತರ ಕೊನೆಯಲ್ಲಿ ಮಾಡಲಾಗುತ್ತದೆ. ನೆಲದ ಮೇಲೆ ಅಂಗಾತನಾಗಿ ಮಲಗಿಕೊಳ್ಳಿ. ನಿಮ್ಮ ಕೈ ಕಾಲುಗಳನ್ನು ಫ್ರೀ ಆಗಿ ಬಿಟ್ಟು 5 ನಿಮಿಷ ಮಲಗಿ. ಇದು ತಲೆ ಸುತ್ತುವಿಕೆಗೆ ಅತ್ಯಂತ ಪರಿಣಾಮಕಾರಿ ಆಸನವಾಗಿದೆ.