Blood Transfusion: ರಕ್ತದ ಗುಂಪು ವ್ಯತ್ಯಾಸವಾಗಿ ಬೇರೆ ಗ್ರೂಪ್‌ನ ರಕ್ತ ನಮ್ಮ ದೇಹ ಸೇರಿದ್ರೆ ಏನಾಗುತ್ತದೆ?
Blood transfusion: ಮನುಷ್ಯನ ದೇಹದ ಅಗತ್ಯಗಳಲ್ಲಿ ರಕ್ತವೂ ಒಂದು. ರಕ್ತಕ್ಕೆ ಬೇರೆ ಬೇರೆ ಗ್ರೂಪ್ ಅಥವಾ ವರ್ಗಗಳಿರುತ್ತವೆ. ಅನಾರೋಗ್ಯಕ್ಕೆ ಒಳಗಾಗಿ ರಕ್ತದ ಅವಶ್ಯಕತೆ ಬಿದ್ದರೆ ಅದೇ ಗ್ರೂಪ್‌ನ ರಕ್ತವನ್ನು ವರ್ಗಾಯಿಸಬೇಕಾಗುತ್ತದೆ. ಒಂದು ವೇಳೆ ಮಿಸ್ ಆಗಿ ಬೇರೆ ವರ್ಗದ ರಕ್ತ ದೇಹ ಸೇರಿದ್ರೆ ಏನಾಗುತ್ತದೆ ಎಂಬುದನ್ನು ನೋಡೋಣ.
ಈ ಜಗತ್ತಿನಲ್ಲಿರುವ ಪ್ರತಿ ವ್ಯಕ್ತಿಯು ತನ್ನದೇ ಆದ ರಕ್ತದ ವರ್ಗವನ್ನು ಹೊಂದಿರುತ್ತಾನೆ. ಪ್ರತಿ ವ್ಯಕ್ತಿಯ ರಕ್ತದ ಗುಂಪು ಒಬ್ಬರಿಗಿಂತ ಇನ್ನೊಬ್ಬರದ್ದು ಭಿನ್ನವಾಗಿರುತ್ತದೆ. ಸಾಮಾನ್ಯವಾಗಿ A+, b+, AB+, O+, O- ರಕ್ತದ ಗುಂಪುಗಳಲ್ಲಿ ಮುಖ್ಯವಾಗಿರುತ್ತವೆ. ಕೆಲವು ಅಪರೂಪದ ರಕ್ತದ ವರ್ಗಗಳೂ ಇರುತ್ತವೆ. ಯಾವುದೇ ಶಸ್ತ್ರಚಿಕಿತ್ಸೆ ಮಾಡುವಾಗ ಅಥವಾ ಅಪಘಾತವಾದ ಸಮಯದಲ್ಲಿ ರಕ್ತ ವರ್ಗಾವಣೆಯ ಅಗತ್ಯ ಬರುತ್ತದೆ. ಆ ಸಮಯದಲ್ಲಿ ರೋಗಿಯ ರಕ್ತದ ಗುಂಪು ತಿಳಿದುಕೊಂಡು ಅದೇ ಗುಂಪಿನ ರಕ್ತವನ್ನು ವರ್ಗಾಯಿಸಲಾಗುತ್ತದೆ. ಆದರೆ, ಇಂತಹ ಸಂದರ್ಭಗಳಲ್ಲಿ ಎಂದಾದರೂ ತಪ್ಪಿ ಬೇರೆ ಗುಂಪಿನ ರಕ್ತವನ್ನು ರೋಗಿಗೆ ವರ್ಗಾಯಿಸಿದರೆ ಏನಾಗಬಹುದು ಎಂಬುದನ್ನು ಊಹಿಸಿದ್ದೀರಾ? ಅದಕ್ಕೆ ಉತ್ತರ ಇಲ್ಲಿದೆ ನೋಡಿ.
ಯಾವುದೇ ವ್ಯಕ್ತಿಯ ದೇಹಕ್ಕೆ ರಕ್ತ ಕೊಡುವುದು ಅಥವಾ ರಕ್ತ ವರ್ಗಾವಣೆ ಮಾಡುವ ಮುನ್ನ ಆ ರಕ್ತದ ವರ್ಗ ಆ ವ್ಯಕ್ತಿಗೆ ಹೊಂದಿಕೆಯಾಗುವುದೋ ಇಲ್ಲವೋ ಎಂಬುದನ್ನು ನೋಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಒಂದು ವೇಳೆ ರಕ್ತದ ಗುಂಪು ತಪ್ಪಾಗಿ ಬೇರೆ ರಕ್ತ ಗುಂಪಿನ ನೀಡಿದರೆ ಆ ವ್ಯಕ್ತಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದು ಆ ವ್ಯಕ್ತಿಯ ದೇಹದ ಮೇಲೆ ಹಲವು ರೀತಿಯಲ್ಲಿ ಪರಿಣಾಮ ಬೀರುತ್ತದೆ.
ರಕ್ತದ ಗುಂಪು ಬದಲಾದರೆ ಏನಾಗುತ್ತದೆ?
ನಮ್ಮ ದೇಹಕ್ಕೆ ಬೇರೆ ಗುಂಪಿನ ರಕ್ತ ಸೇರಿದರೆ ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಇದರಿಂದಾಗಿ ಯಕೃತ್ತು ಹಾಗೂ ಮೂತ್ರಪಿಂಡಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ತಪ್ಪು ರಕ್ತದ ಗುಂಪಿನ ರಕ್ತವನ್ನು ವರ್ಗಾಯಿಸುವುದರಿಂದ ಇದು ತ್ವರಿತವಾಗಿ ಮೂತ್ರಪಿಂಡಕ್ಕೆ ಹಾನಿ ಉಂಟು ಮಾಡುತ್ತದೆ. ರಕ್ತ ವರ್ಗಾವಣೆಯ ನಂತರ ವಾಕರಿಕೆ, ಜ್ವರ, ಎದೆನೋವು, ಬೆನ್ನುನೋವು, ಅತಿಯಾದ ನಡುಕ, ಮೂತ್ರದ ಬಣ್ಣದ ಬದಲಾಗುವುದು ಮುಂತಾದ ಸಮಸ್ಯೆಗಳು ಕಾಣಿಸಿದರೆ ರಕ್ತದ ವರ್ಗ ಬದಲಾಗಿದೆ ಎಂದರ್ಥ.
ಜೀವನಪೂರ್ತಿ ಸಮಸ್ಯೆ ತಪ್ಪಿದ್ದಲ್ಲ
ನಮ್ಮ ರಕ್ತಕ್ಕೆ ಹೊಂದಿಕೆಯಾಗದ ರಕ್ತವನ್ನು ನೀಡುವುದು ಜೀವನದ್ದುದ್ದಕ್ಕೂ ಪರಿಣಾಮ ಉಂಟಾಗುವಂತೆ ಮಾಡುತ್ತದೆ. ಇದರಿಂದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ರಕ್ತ ಸಂಬಂಧಿ ಸಮಸ್ಯೆಗಳು ಕಾಣಿಸುತ್ತವೆ. ಸಣ್ಣಪುಟ್ಟ ಗಾಯವಾದರೂ ಅಧಿಕ ರಕ್ತಸ್ರಾವವಾಗಬಹುದು. ಅಲ್ಲದೇ ದೇಹದಲ್ಲಿ ಅಸಮರ್ಪಕ ರಕ್ತ ಪೂರೈಕೆಯ ಕಾರಣ ಸೋಂಕು ದೇಹದ ವಿವಿಧ ಭಾಗಗಳಿಗೆ ಹರಡಬಹುದು.
ತಪ್ಪಾದ ರಕ್ತದ ಗುಂಪು ಮೂತ್ರಪಿಂಡದೊಂದಿಗೆ ಹೃದಯದ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಅರ್ಲಜಿಯಂತಹ ಸಮಸ್ಯೆ ಎದುರಾಗಬಹುದು. ದೇಹವು ಹಳದಿ ಬಣ್ಣಕ್ಕೆ ತಿರುಗಿ ಕಾಮಾಲೆ ರೋಗ ಕಾಣಿಸಬಹುದು. ಆ ಕಾರಣಕ್ಕೆ ಯಾವುದೇ ಕಾರಣಕ್ಕೂ ರಕ್ತದ ವರ್ಗಾವಣೆಯಾಗುವಾಗ ವರ್ಗ ಅಥವಾ ರಕ್ತದ ಗುಂಪು ಬದಲಾಗಬಾರದು ಎಂದು ಹೇಳುವುದು.
ಒಬ್ಬ ವ್ಯಕ್ತಿಯ ರಕ್ತದ ಗುಂಪು, ಅವನು ಯಾವ ಗುಂಪಿನಿಂದ ರಕ್ತ ಪಡೆಯಬಹುದು ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ವೈದ್ಯರ ಬಳಿ ರಕ್ತ ವರ್ಗಾವಣೆಯ ಸಂದರ್ಭ ಖಚಿತ ಪಡಿಸಿಕೊಳ್ಳಿ. ಓ ಪಾಸಿಟಿವ್ ಹಾಗೂ ಓ ನೆಗೆಟಿವ್ ರಕ್ತದ ಗುಂಪು ಹೊಂದಿರುವ ವ್ಯಕ್ತಿಗಳು ಯಾರಿಗೆ ಬೇಕಾದರೂ ರಕ್ತ ಕೊಡಬಹುದು. ಆದರೆ ,ಅವರಿಗೆ ರಕ್ತದ ಅಗತ್ಯವಿದ್ದರೆ ಆ ರಕ್ತದ ಗುಂಪು ಮಾತ್ರ ಆಗಿರಬೇಕು.
ರಕ್ತದಾನ ಮಹಾದಾನ. ನಿಮಗೆ ಸಾಧ್ಯವಾದಾಗಲ್ಲೆಲ್ಲಾ ರಕ್ತದಾನಿ ಮಾಡಿ, ಇದರಿಂದ ಹಲವು ಜೀವಗಳಿಗೆ ಜೀವದಾನ ಮಾಡಲು ಸಾಧ್ಯವಿದೆ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)
ವಿಭಾಗ