Weight Loss: 140 ಕೆಜಿಯಿದ್ದ ಉದ್ಯಮಿ 2.5 ವರ್ಷದಲ್ಲಿ 60 ಕೆಜಿ ತೂಕ ತಗ್ಗಿಸಿಕೊಂಡ್ರು; ಇವರ ಡಯಟ್, ಫಿಟ್ನೆಸ್ ಪ್ಲಾನ್ ಹೇಗಿತ್ತು?
ಉದ್ಯಮಿಯೊಬ್ಬರು ಛಲ ಬಿಡದೆ ಎರಡೂವರೆ ವರ್ಷದಲ್ಲಿ ಬರೋಬ್ಬರಿ 60 ಕೆಜಿ ತೂಕ ಇಳಿಸಿಕೊಂಡಿದ್ದಾರೆ. 140 ಕೆಜಿ ತೂಕವಿದ್ದ ಈತನ ಆಹಾರ ಕ್ರಮ, ಫಿಟ್ನೆಸ್ ಪ್ಲಾನ್ ಹೇಗೆ ವರ್ಕೌಟ್ ಆಯ್ತು ಅನ್ನೋದರ ವಿವರ ಇಲ್ಲಿದೆ.

ಹರಿಯಾಣದ ರೆವಾರಿಯದ 46 ವರ್ಷದ ಉದ್ಯಮಿ ಅಶಿಶ್ ಸಚ್‌ದೇವ್ 140 ಕೆಜಿ ತೂಕವನ್ನು ಹೊಂದಿದ್ದರು. ಆದರೆ ಸಾಕಷ್ಟು ವರ್ಕೌಟ್, ಆಹಾರದ ಕ್ರಮದ ಮೂಲಕ ಎರಡೂವರೆ ವರ್ಷದಲ್ಲಿ ಬರೋಬ್ಬರಿ 60.9 ಕೆಜಿ ತೂಕವನ್ನು ಕಳೆದುಕೊಂಡಿದ್ದಾರೆ. ಆ ಮೂಲಕ ತೂಕವನ್ನು ಹೇಗೆ ತಗ್ಗಿಸಿಕೊಂಡು ಎಂಬ ಚಿಂತೆಯಲ್ಲಿರುವ ಸಾವಿರಾರು ಮಂದಿಗೆ ಸ್ಪೂರ್ತಿಯಾಗಿದ್ದಾರೆ. 140 ಕೆಜಿಯಿದ್ದ ಅಶಿಶ್ ತೂಕ ಇಳಿಸಿಕೊಂಡ ಬಗ್ಗೆ ಮಾತನಾಡಿದ್ದಾರೆ.
ನಾನು ಸ್ಥಳಕಾಯನಾಗಿದ್ದೆ. ನನ್ನ ಗಾತ್ರದ ಬಟ್ಟೆಗಳನ್ನು ಖರೀದಿಸುವುದು ಕಷ್ಟ ಹಾಗೂ ದೊಡ್ಡ ಸವಾಲಾಗಿತ್ತು. ನನ್ನ ದೇಹಕ್ಕೆ ಸೂಟ್ ಆಗುವಂತಹ ಬಟ್ಟೆಗಳು ಬೇಕಾದರೆ ನಾನು ಎಷ್ಟು ಸಲ ರಾಜಧಾನಿ ದೆಹಲಿಗೆ ಹೋಗಬೇಕಾಯಿತು. ಎಷ್ಟೋ ಸಲ ತೂಕದ ಕಾರಣ ಅಧಿಕ ರಕ್ತದೊತ್ತಡ, ಕೀಲು ನೋವು ಹಾಗೂ ಮೆಮೊರಿ ನಷ್ಟದ ಸಮಸ್ಯೆಗಳನ್ನೂ ಎದುರಿಸಿದ್ದೇನೆ ಎಂದು ಎಟೈಮ್ಸ್ ಲೈಫ್‌ಸ್ಟೈಲ್‌ನೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಹೇಗಾದರೂ ಮಾಡಿ ತೂಕವನ್ನು ಇಳಿಸಿಕೊಳ್ಳಲೇಬೇಕೆಂದು ಪಣವನ್ನು ತೊಟ್ಟೆ. ಮೊದಲಿಗೆ ಅಧ್ಯಾತ್ಮಿಕತೆಯ ಮೊರೆ ಹೋದೆ. ನಾನು ಆರ್ಟ್ ಆಫ್ ಲಿವಿಂಗ್ ಮೂಲಕ ಅಧ್ಯಾತ್ಮಿಕ ಸಂಪರ್ಕವನ್ನು ಹೊಂದಿದ ಬಳಿಕ ದೃಷ್ಟಿಕೋ, ಮೌಲ್ಯಗಳು ಜೀವನದ ವಿಧಾನವನ್ನು ಬದಲಾಯಿಸಿತು. ಧ್ಯಾನ ಮಾಡಲು ಆರಂಭಿಸಿದ ಬಳಿಕ ನನ್ನ ದೌರ್ಬಲ್ಯಗಳೇನು ಅನ್ನೋದು ಗೊತ್ತಾಯಿತು. ಧ್ಯಾನ ನನ್ನ ಬಗ್ಗೆ ನನಗೆ ಅನೇಕ ವಿಷಯಗಳನ್ನು ಅರಿತುಕೊಳ್ಳಲು ಸಹಾಯ ಮಾಡಿತು. ತನ್ನ ತೂಕ ಇಳಿಕೆಯಲ್ಲಿ ಅಧ್ಯಾತ್ಮಿಕತೆ ಪ್ರಮುಖ ಪಾತ್ರವಹಿಸಿತು ಎಂದು ವಿವರಿಸಿದ್ದಾರೆ.
ಸಚ್‌ದೇವ್ ತೂಕ ಇಳಿಸಿಕೊಳ್ಳಲು ಎಷ್ಟೇ ಪ್ರಯತ್ನ ಪಟ್ಟರೂ ಅದು ಅಷ್ಟು ಸುಲಭವಾಗಿರಲಿಲ್ಲ. ನನ್ನ ಎಲ್ಲಾ ಪ್ರಯತ್ನಗಳ ಹೊರತಾಗಿಯೂ 10 ತಿಂಗಳಲ್ಲಿ ಕೇವಲ 1 ಕೆಜಿ ತೂಕವನ್ನು ಮಾತ್ರ ಕಳೆದುಕೊಂಡಿದ್ದೆ. ಆದರೆ ತೂಕ ಕಡಿಮೆ ಮಾಡಿಕೊಳ್ಳುವ ಪ್ರಯತ್ನವನ್ನು ಮಾತ್ರ ಬಿಡಲಿಲ್ಲ. ಅಂತಿಮವಾಗಿ ನಂಬಲಾಗದಷ್ಟು ಬದಲಾವಣೆಯನ್ನು ಕಂಡೆ ಎಂದು ಹೇಳಿದ್ದಾರೆ. ಆದರೆ ಇದು ಹೇಗೆ ಸಾಧ್ಯವಾಯಿತು ಎಂಬುದನ್ನು ಅಶಿಶ್ ತಿಳಿಸಿದ್ದಾರೆ.
- ಬೇಗ ಮಲಗುವುದು ಮತ್ತು ಬೇಗ ಏಳುವುದು - ತೂಕನ್ನು ಕಡಿಮೆ ಮಾಡಿಕೊಳ್ಳಬೇಕೆಂಬ ಗುರಿಯಲ್ಲಿ ಉದ್ಯಮಿ ಅಶಿಶ್ ಸಚ್‌ದೇವ್ ಅವರಿಗೆ ನೆರವಾಗಿದ್ದು, ನಿದ್ದೆಯ ಕ್ರಮ. ರಾತ್ರಿ ಬೇಗ ಮಲಗುವುದು, ಬೆಳಗ್ಗೆ ಬೇಗ ಏಳುವುದನ್ನು ರೂಢಿಸಿಕೊಂಡಿದ್ದಾರೆ.
- ಜಂಕ್ ಫುಡ್ ಮತ್ತು ಸಕ್ಕರೆ ಅಂಶ ಹೆಚ್ಚಿರುವ ಆಹಾರದಿಂದ ಅಂತರ ಕಾಯ್ದುಕೊಂಡಿದ್ದು - ತೂಕ ಇಳಿಕೆಯಲ್ಲಿ ಜಂಕ್ ಫುಡ್ ತ್ಯಜಿಸಿರುವುದು ಕೂಡ ಪ್ರಮುಖ ಪಾತ್ರವಿಹಿಸಿದೆ. ಜೊತೆಗೆ ಸಕ್ಕರೆ ಅಂಶ ಹೆಚ್ಚಿರುವ ಆಹಾರ ತಿನ್ನುವುದನ್ನು ನಿಲ್ಲಿಸಿದ್ದಾರೆ.
ಉದ್ಯಮಿ ಅಶಿಶ್ ಸಚ್‌ದೇವ್ ಆಹಾರ ಕ್ರಮ ಹೇಗಿತ್ತು?
ತೂಕ ಇಳಿಸಿಕೊಳ್ಳಲು ಅಶಿಶ್ ಅವರು ಉತ್ತಮ ಆಹಾರ ಕ್ರಮವನ್ನು ಅಳವಡಿಸಿಕೊಂಡಿದ್ದರು. ಅದು ಹೇಗೆತ್ತು ಅನ್ನೋದರ ವಿವರವೂ ಇಲ್ಲಿದೆ.
ಬೆಳಗಿನ ಉಪಹಾರ: 4 ಮೊಟ್ಟೆಯ ಬಿಳಿಭಾಗ, ಎರಡು ಸಂಪೂರ್ಣ ಮೊಟ್ಟೆಗಳು ಹಾಗೂ ಓಟ್ಸ್ ಇಲ್ಲವೇ ಪೋಹಾ ಅಥಾ ಹಸಿರು ದಾಲ್ ಸೇವನೆ
ಮಧ್ಯಾಹ್ನದ ಊಟ: ಸಲಾಡ್ ಹಣ್ಣುಗಳು, 1 ಬೌಲ್ ಕಲೋಚಿತ ತರಕಾರಿಗಳು ಹಾಗೂ 1 ಬೌಲ್ ಮೊಸರು
ರಾತ್ರಿ 7 ಗಂಟೆಗೆ: 4 ಮೊಟ್ಟೆಯ ಬಿಳಿಭಾಗ, ಎರಡು ಸಂಪೂರ್ಣ ಮೊಟ್ಟೆಗಳು, 1 ಬೌಲ್ ತರಕಾರಿ, ಸಲಾಡ್ ಹಾಗೂ 2 ಮಲ್ಟಿಗ್ರೇನ್ ರೊಟ್ಟಿಗಳು
ವರ್ಕೌಟ್‌ಗೂ ಮುನ್ನ ಊಟ: ಅದರಲ್ಲಿ ರೈಸ್ ಕೇಕ್ ಮತ್ತು ಕಡಲೆಕಾಯಿ ಬೆಣ್ಣೆ, ತಾಲೀಮು ನಂತರದ ಊಟದಲ್ಲಿ ಪ್ರೋಟಿನ್ ಶೇಕ್ ಹಾಗೂ ಕಾಳುಗಳು ಇರುತ್ತವೆ. ಇದರ ಜೊತೆಗೆ ಹೆಚ್ಚುವರಿ ಆಹಾರವಾಗಿ ಕೊಬರಿ ಚಟ್ನಿಯೊಂದಿಗೆ ಓಟ್ಸ್ ಇಡ್ಲಿ, ತರಕಾರಿ ಕಿಚಡಿ, ತರಕಾರಿ ಗಂಜಿ, ಮೊಳಕೆಕಾಳುಗಳನ್ನು ಸೇವಿಸಿದ್ದಾರೆ. ಇವರ ವರ್ಕೌಟ್ ದಿನಚರಿಯನ್ನು ನೋಡುವುದಾದರೆ 3 ರಿಂದ 4 ದಿನ ವ್ಯಾಯಾಮ ಮಾಡುವುದು, 1 ರಿಂದ 2 ದಿನ ಓಟ, ಸೈಕ್ಲಿಂಗ್‌ನಂತಹ ವರ್ಕೌಟ್ ಹಾಗೂ 1 ದಿನ ಯೋಗ ಮಾಡುತ್ತಾರೆ. ನಿಯಮಿತ ವ್ಯಾಯಾಮದ ಜೊತೆಗೆ ವಿಶ್ರಾಂತಿಗೂ ಸಮಯವನ್ನು ನೀಡುತ್ತಿದ್ದರು.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
