ಡ್ರೈ ಶಾಂಪೂ, ಸನ್‌ಸ್ಕ್ರೀನ್‌ನಲ್ಲಿದೆ ಕ್ಯಾನ್ಸರ್‌ಗೆ ಕಾರಣವಾಗಬಲ್ಲ ರಾಸಾಯನಿಕ, ಇವುಗಳ ಬಳಕೆ ಸೂಕ್ತವೇ? ಹೀಗಿದೆ ತಜ್ಞರ ಉತ್ತರ
ಕನ್ನಡ ಸುದ್ದಿ  /  ಜೀವನಶೈಲಿ  /  ಡ್ರೈ ಶಾಂಪೂ, ಸನ್‌ಸ್ಕ್ರೀನ್‌ನಲ್ಲಿದೆ ಕ್ಯಾನ್ಸರ್‌ಗೆ ಕಾರಣವಾಗಬಲ್ಲ ರಾಸಾಯನಿಕ, ಇವುಗಳ ಬಳಕೆ ಸೂಕ್ತವೇ? ಹೀಗಿದೆ ತಜ್ಞರ ಉತ್ತರ

ಡ್ರೈ ಶಾಂಪೂ, ಸನ್‌ಸ್ಕ್ರೀನ್‌ನಲ್ಲಿದೆ ಕ್ಯಾನ್ಸರ್‌ಗೆ ಕಾರಣವಾಗಬಲ್ಲ ರಾಸಾಯನಿಕ, ಇವುಗಳ ಬಳಕೆ ಸೂಕ್ತವೇ? ಹೀಗಿದೆ ತಜ್ಞರ ಉತ್ತರ

ಡ್ರೈ ಶ್ಯಾಂಪೂ, ಸನ್‌ಸ್ಕ್ರೀನ್ ಲೋಷನ್‌ಗಳು ಹಾಗೂ ಮೊಡವೆ ನಿವಾರಕಗಳಲ್ಲಿ ಕ್ಯಾನ್ಸರ್‌ಕಾರಕ ಅಂಶಗಳಿವೆ ಎಂದು ವರದಿಯೊಂದು ಹೇಳುತ್ತಿದೆ. ಆ ಕಾರಣಕ್ಕೆ ಇವುಗಳನ್ನ ಬಳಸುವ ಬಗ್ಗೆ ಗೊಂದಲ ಉಂಟಾಗಿದೆ. ಹಾಗಾದರೆ ಈ ವಸ್ತುಗಳ ಬಳಕೆಯಿಂದ ನಿಜಕ್ಕೂ ಕ್ಯಾನ್ಸರ್ ಬರುತ್ತಾ, ಏನಿದರ ಸತ್ಯಾಸತ್ಯತೆ, ಇಲ್ಲಿದೆ ಮಾಹಿತಿ ತಿಳಿದುಕೊಳ್ಳಿ.

ಡ್ರೈ ಶಾಂಪೂ, ಸನ್‌ಸ್ಕ್ರೀನ್‌ನಲ್ಲಿದೆ ಕ್ಯಾನ್ಸರ್ ಉಂಟು ಮಾಡುವ ರಾಸಾಯನಿಕ
ಡ್ರೈ ಶಾಂಪೂ, ಸನ್‌ಸ್ಕ್ರೀನ್‌ನಲ್ಲಿದೆ ಕ್ಯಾನ್ಸರ್ ಉಂಟು ಮಾಡುವ ರಾಸಾಯನಿಕ (PC: Canva)

ಸದ್ಯ ಜಗತ್ತನ್ನು ಕಾಡುತ್ತಿರುವ ಮಾರಕ ರೋಗಗಳಲ್ಲಿ ಕ್ಯಾನ್ಸರ್‌ಗೆ ಅಗ್ರಸ್ಥಾನವಿದೆ. 2050ರ ಹೊತ್ತಿಗೆ ಕ್ಯಾನ್ಸರ್ ಪ್ರಕರಣಗಳಲ್ಲಿ ಭಾರಿ ಏರಿಕೆಯಾಗಲಿದೆ. ಆ ಸಮಯದಲ್ಲಿ 35 ಮಿಲಿಯನ್‌ಗಿಂತಲೂ ಹೆಚ್ಚು ಹೊಸ ಕ್ಯಾನ್ಸರ್ ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 2022ರಲ್ಲಿ 20 ಮಿಲಿಯನ್‌ಗಿಂತ ಹೆಚ್ಚು ಅಂದರೆ ಶೇ 77 ರಷ್ಟು ಕ್ಯಾನ್ಸರ್ ಪ್ರಕರಣಗಳಲ್ಲಿ ಏರಿಕೆಯಾಗಿದೆ. ಕ್ಯಾನ್ಸರ್ ಪ್ರಕರಣಗಳು ಹೆಚ್ಚಲು ಪರಿಸರದಲ್ಲಿನ ರಾಸಾಯನಿಕಗಳು ಸೇರಿದಂತೆ ಇನ್ನಿತರ ಅಪಾಯಕಾರಿ ಅಂಶಗಳು ಕಾರಣವಾಗುತ್ತಿವೆ.

ಅಪಾಯಕಾರಿ ರಾಸಾಯನಿಕವಾದ ಬೆಂಜೀನ್ ಕ್ಯಾನ್ಸರ್‌ಗೆ ಕಾರಣವಾಗಬಹುದು ಎಂದು ವರದಿಯೊಂದು ತಿಳಿಸಿದೆ. ಡ್ರೈಶಾಂಪೂ, ಮೊಡವೆ ನಿವಾರಕಗಳು ಹಾಗೂ ಸನ್‌ಸ್ಕ್ರೀನ್‌ ಕ್ರೀಮ್‌ಗಳಲ್ಲಿ ಈ ರಾಸಾಯನಿಕವು ಪ್ರಾಥಮಿಕವಾಗಿ ಕಂಡುಬರುತ್ತದೆ.

ಎನ್ವಿರಾನ್‌ಮೆಂಟಲ್‌ ಪ್ರೊಟೆಕ್ಷನ್ ಏಜೆನ್ಸಿ (EPA) ಹೇಳುವಂತೆ ಅಧಿಕ ಪ್ರಮಾಣದ ಬೆಂಜೀನ್ ಅನ್ನು ದೀರ್ಘಾವಧಿಯವರೆಗೆ ಬಳಸುವುದು ಲ್ಯುಕೇಮಿಯಾ ಹಾಗೂ ಇತರ ರಕ್ತ ಕ್ಯಾನ್ಸರ್‌ಗಳಿಗೆ ಕಾರಣವಾಗುತ್ತದೆ. ವಲಿಸರ್‌ನ ಇತ್ತೀಚಿನ ಅಧ್ಯಯನವು ಮೊಡವೆಗಳನ್ನು ಕಡಿಮೆ ಮಾಡಲು ಬಳಸುವ ಬೆನ್‌ಝಾಯ್ಲ್ ಪೆರಾಕ್ಸೈಡ್ ಅನ್ನು ಒಳಗೊಂಡಿರುವ ಸುಮಾರು ಮೂರನೇ ಒಂದು ಭಾಗದಷ್ಟು ಉತ್ಪನ್ನಗಳಲ್ಲಿ ಎಫ್‌ಡಿಎ ಅನುಮತಿಸುವುದಕ್ಕಿಂತ ಹೆಚ್ಚಿನ ಬೆಂಜೀನ್ ಮಟ್ಟವನ್ನು ಹೊಂದಿದೆ ಎಂದು ಕಂಡುಹಿಡಿದಿದೆ.

ಆದರೆ ಹಲವಾರು ವಿಜ್ಞಾನಿಗಳು ಈ ಸಂಶೋಧನೆಯ ಅಧ್ಯಯನದ ಫಲಿತಾಂಶವನ್ನು ಒಪ್ಪಿಲ್ಲ. ಅವರ ಪ್ರಕಾರ ಈ ಉತ್ಪನ್ನಗಳನ್ನು ಹೆಚ್ಚಿನ ತಾಪಮಾನದಲ್ಲಿ ಬಿಸಿ ಮಾಡಿದಾಗ ಆ ಉತ್ಪನ್ನಗಳಲ್ಲಿ ಇರುವುದಕ್ಕಿಂತ ಹೆಚ್ಚಿನ ಬೆಂಜೀನ್ ಮಟ್ಟವನ್ನು ತೋರಿಸುತ್ತವೆ. ಆಸ್ಟ್ರೇಲಿಯಾದ ರಸಾಯನಶಾಸ್ತ್ರಜ್ಞ ಮಿಚೆಲ್ ವಾಂಗ್ ಅವರು ಆನ್‌ಲೈನ್‌ನಲ್ಲಿ ವಲಿಸರ್ ಫಲಿತಾಂಶಗಳನ್ನು ಟೀಕಿಸಿದ್ದಾರೆ. ಇದು ಸಂಪೂರ್ಣ ನಿಜವಲ್ಲ ಎಂದು ಅವರು ಹೇಳಿದ್ದಾರೆ.

ಬೆಂಜೀನ್ ಎಂದರೇನು?

ಬೆಂಜೀನ್ ಬಣ್ಣರಹಿತ, ಸುಡುವ ದ್ರವವಾಗಿದ್ದು, ಸಿಹಿ ವಾಸನೆಯನ್ನು ಹೊಂದಿರುತ್ತದೆ. ಗಾಳಿಗೆ ಒಡ್ಡಿಕೊಂಡಾಗ ಅದು ತ್ವರಿತವಾಗಿ ಅನಿಲವಾಗಿ ಬದಲಾಗುತ್ತದೆ. ಬೆಂಜೀನ್ ಅಮೆರಿಕದಲ್ಲಿ ಹೆಚ್ಚು ವ್ಯಾಪಕವಾಗಿ ಬಳಸಲಾಗುವ 20 ರಾಸಾಯನಿಕಗಳಲ್ಲಿ ಒಂದಾಗಿದೆ. ಪ್ಲಾಸ್ಟಿಕ್, ರಬ್ಬರ್, ಬಣ್ಣಗಳು, ಮಾರ್ಜಕಗಳು, ಔಷಧಗಳು ಮತ್ತು ಕೀಟನಾಶಕಗಳಂತಹ ವಸ್ತುಗಳನ್ನು ತಯಾರಿಸಲು ಇದನ್ನು ಬಳಸಲಾಗುತ್ತದೆ.

ಸೆಲ್ಫ್‌ ಕೇರ್‌ ಉತ್ಪನ್ನಗಳಲ್ಲಿನ ಬೆಂಜೀನ್‌ನಿಂದ ಅಪಾಯ

ಸೆಲ್ಫ್‌ ಕೇರ್‌ ಉತ್ಪನ್ನಗಳಲ್ಲಿರುವ ಬೆಂಜೀನ್ ಸದ್ಯಕ್ಕೆ ಕಾಳಜಿಯ ವಿಷಯವಾಗಿದೆ. ಏಕೆಂದರೆ ಇದರ ಸಣ್ಣ ಪ್ರಮಾಣವು ಸಹ ನಿಮ್ಮ ಆರೋಗ್ಯಕ್ಕೆ ಹಾನಿಕಾರವಾಗಿದೆ. ಈ ನಿಟ್ಟಿನಲ್ಲಿ, ಅಮೆರಿಕನ್ ಕ್ಯಾನ್ಸರ್ ಸೊಸೈಟಿಯು ಬೆಂಜೀನ್‌ಗೆ ಒಡ್ಡಿಕೊಳ್ಳುವುದರಿಂದ ಲ್ಯುಕೇಮಿಯಾ ಮತ್ತು ಇತರ ರಕ್ತ ಕ್ಯಾನ್ಸರ್‌ಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೇಳುತ್ತದೆ.

ಸೆಲ್ಫ್‌ ಕೇರ್‌ ಉತ್ಪನ್ನಗಳನ್ನು ಸುರಕ್ಷಿತವಾಗಿ ಬಳಸುವುದು ಹೇಗೆ?

ಬೆಂಜೀನ್‌ಗೆ ಹೆಚ್ಚು ಒಡ್ಡಿಕೊಳ್ಳುವುದನ್ನು ತಪ್ಪಿಸಲು, ನಿಮ್ಮ ಸೆಲ್ಫ್‌ ಕೇರ್‌ ಉತ್ಪನ್ನಗಳನ್ನು ತಂಪಾದ ಸ್ಥಳದಲ್ಲಿ ಸಂಗ್ರಹಿಸಿ ಇಡಿ. ಏರೋಸಾಲ್ ಸ್ಪ್ರೇಗಳನ್ನು ತಪ್ಪಿಸಿ. ನೀವು ಬೆನ್ಝಾಯ್ಲ್ ಪೆರಾಕ್ಸೈಡ್ ಹೊಂದಿರುವ ಉತ್ಪನ್ನಗಳನ್ನು ಬಳಸುವ ಮೊದಲು ವೈದ್ಯರ ಸಲಹೆ ಪಡೆಯಿರಿ. ಹೆಚ್ಚಿನ ಸನ್‌ಸ್ಕ್ರೀನ್‌ಗಳು ಬೆಂಜೀನ್‌ನ ಹಾನಿಕಾರಕ ಮಟ್ಟವನ್ನು ಹೊಂದಿರುವುದಿಲ್ಲ ಎಂದು ತಜ್ಞರು ಹೇಳುತ್ತಾರೆ. ಆದರೆ ಸನ್‌ಸ್ಕ್ರೀನ್ ಕ್ರೀಮ್ ಅನ್ನು ಬಿಸಿಲಿಗೆ ಒಡ್ಡುವಂತೆ ಇಡದೇ ಇರುವುದು ಉತ್ತಮ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope

Whats_app_banner