ಕನ್ನಡ ಸುದ್ದಿ  /  ಜೀವನಶೈಲಿ  /  Cinnamon Water: ತೂಕ ಇಳಿಕೆಯಿಂದ ಮುಟ್ಟಿನ ನೋವಿನ ನಿವಾರಣೆವರೆಗೆ, ದಾಲ್ಚಿನ್ನಿ ನೀರು ಕುಡಿಯುವುದರಿಂದಾಗುವ 8 ಅದ್ಭುತ ಪ್ರಯೋಜನಗಳಿವು

Cinnamon Water: ತೂಕ ಇಳಿಕೆಯಿಂದ ಮುಟ್ಟಿನ ನೋವಿನ ನಿವಾರಣೆವರೆಗೆ, ದಾಲ್ಚಿನ್ನಿ ನೀರು ಕುಡಿಯುವುದರಿಂದಾಗುವ 8 ಅದ್ಭುತ ಪ್ರಯೋಜನಗಳಿವು

ದಾಲ್ಚಿನ್ನಿ ಖಾದ್ಯಗಳಿಗೆ ಪರಿಮಳ ನೀಡುವುದು ಮಾತ್ರವಲ್ಲ, ಇದರಿಂದ ಆರೋಗ್ಯಕ್ಕಿದೆ ಹಲವು ಪ್ರಯೋಜನ. ನಿಯಮಿತವಾಗಿ ದಾಲ್ಚಿನ್ನಿ ನೀರು ಕುಡಿಯುವುದರಿಂದ ತೂಕ ಇಳಿಕೆ, ಹೊಟ್ಟೆಯುಬ್ಬರ ಕಡಿಮೆಯಾಗುವುದು, ಮುಟ್ಟಿನ ಸಮಸ್ಯೆ ಸೇರಿದಂತೆ ಹಲವು ರೋಗಗಳಿಗೆ ಇದು ಮದ್ದಿನಂತ ಕೆಲಸ ಮಾಡುತ್ತದೆ. ಹಾಗಾದರೆ ಪ್ರತಿದಿನ ದಾಲ್ಚಿನ್ನಿ ನೀರು ಕುಡಿಯುವುದರಿಂದಾಗುವ ಪ್ರಯೋಜನ ತಿಳಿಯಿರಿ.

ತೂಕ ಇಳಿಕೆಯಿಂದ ಮುಟ್ಟಿನ ನೋವಿನ ನಿವಾರಣೆವರೆಗೆ, ದಾಲ್ಚಿನ್ನಿ ನೀರು ಸೇವನೆಯ 8 ಅದ್ಭುತ ಪ್ರಯೋಜನಗಳಿವು
ತೂಕ ಇಳಿಕೆಯಿಂದ ಮುಟ್ಟಿನ ನೋವಿನ ನಿವಾರಣೆವರೆಗೆ, ದಾಲ್ಚಿನ್ನಿ ನೀರು ಸೇವನೆಯ 8 ಅದ್ಭುತ ಪ್ರಯೋಜನಗಳಿವು

ಪಲಾವ್‌, ಬಿರಿಯಾನಿ, ಸಾಂಬಾರ್‌ ಸೇರಿದಂತೆ ಹಲವು ಖಾದ್ಯಗಳ ತಯಾರಿಯಲ್ಲಿ ಪರಿಮಳ ಹೆಚ್ಚಿಸಲು ಬಳಸುವ ದಾಲ್ಚಿನ್ನಿ ಅಥವಾ ಚಕ್ಕೆ ಆರೋಗ್ಯದ ಮೇಲೆ ಮ್ಯಾಜಿಕ್‌ ಮಾಡುವುದಂತೂ ನಿಜ. ಇದು ದೇಹದ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ಸಾಮಾನ್ಯ ಎಲ್ಲರ ಅಡುಗೆಮನೆಯಲ್ಲಿ ಸಿಗುವ ಚಕ್ಕೆ ತೂಕ ಇಳಿಕೆಗೂ ಬೆಸ್ಟ್‌, ಮಾತ್ರವಲ್ಲ ಹೆಣ್ಣುಮಕ್ಕಳಿಗೆ ಮುಟ್ಟಿನ ದಿನಗಳಲ್ಲಿ ಕಾಡುವ ನೋವು ನಿವಾರಣೆಗೂ ಇದು ಉತ್ತಮ. ಅಸಹಜ ಮುಟ್ಟನ್ನು ನಿಯಂತ್ರಿಸಿ ಮಹಿಳೆಯರ ಫಲವಂತಿಕೆ ಸುಧಾರಿಸಲು ಈ ದಾಲ್ಚಿನ್ನಿ ಹೇಳಿ ಮಾಡಿಸಿದ್ದು. ಬಹಳ ಪ್ರಾಚೀನ ಕಾಲದಿಂದಲೂ ಮಸಾಲೆ ಪದಾರ್ಥವಾಗಿ ಬಳಸುತ್ತಿರುವ ದಾಲ್ಚಿನ್ನಿಯಲ್ಲಿದೆ ಹಲವು ಆರೋಗ್ಯಗುಣ.

ಟ್ರೆಂಡಿಂಗ್​ ಸುದ್ದಿ

ಸೃಷ್ಟಿ ಕೌಶಿಕ್‌ ಎಂಬ ಆಯುರ್ವೇದ ತಜ್ಞೆ ಇನ್‌ಸ್ಟಾಗ್ರಾಂನಲ್ಲಿ ದಾಲ್ಚಿನ್ನಿ ಅಥವಾ ಚಕ್ಕೆಯ ನೀರು ಕುಡಿಯುವುದರಿಂದಾಗುವ ಪ್ರಯೋಜನಗಳನ್ನು ತಿಳಿಸಿದ್ದಾರೆ. ಇದರಿಂದ ಒಂದಲ್ಲ, ಎರಡದಲ್ಲ ಹತ್ತಾರು ಪ್ರಯೋಜನಗಳಿವೆ. ಹಾಗಾದರೆ ದಾಲ್ಚಿನ್ನಿ ನೀರಿಂದಾಗುವ ಆರೋಗ್ಯ ಪ್ರಯೋಜನಗಳ ಕುರಿತು ತಿಳಿಯೋಣ.

ಮುಟ್ಟಿನ ಸಮಸ್ಯೆಗಳನ್ನು ನಿಯಂತ್ರಿಸುತ್ತದೆ

ದಾಲ್ಚಿನ್ನಿ ಹಾರ್ಮೋನ್‌ಗಳನ್ನು ಸಮತೋಲನಗೊಳಿಸುತ್ತದೆ. ಇದು ಗರ್ಭಾಶಯಕ್ಕೆ ರಕ್ತದ ಹರಿವನ್ನು ಹೆಚ್ಚಿಸುವ ಮೂಲಕ ಋತುಚಕ್ರವನ್ನು ನಿಯಂತ್ರಿಸುತ್ತದೆ. ದಾಲ್ಚಿನ್ನಿ ನೀರು ಕುಡಿಯುವುದರಿಂದ ಅಸಹಜ ಮುಟ್ಟು, ಸಮಯಕ್ಕೆ ಸರಿಯಾಗಿ ಮುಟ್ಟಾಗದೇ ಇರುವುದು, ಮುಟ್ಟಿನ ಸಮಯದಲ್ಲಿ ನೋವು ಕಾಡುವುದು ಇಂತಹ ಹಲವು ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ.

ಮಹಿಳೆಯರಲ್ಲಿ ಫಲವಂತಿಕೆಯನ್ನು ಹೆಚ್ಚಿಸುತ್ತದೆ

ದಾಲ್ಚಿನ್ನಿಯು ಮಹಿಳೆಯರಲ್ಲಿ ಫಲವಂತಿಕೆಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಇದು ಅಂಡೋತ್ಪತ್ತಿಗೆ ಅಗತ್ಯವಾದ ಹಾರ್ಮೋನ್‌ಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ದಾಲ್ಚಿನ್ನಿ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ಗರ್ಭದಾರಣೆಯ ಸಾಧ್ಯತೆ ಹೆಚ್ಚುತ್ತದೆ.

ಪಿಸಿಓಎಸ್‌ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತದೆ

ದಾಲ್ಚಿನ್ನಿ ಇನ್ಸುಲಿನ್‌ ಸೂಕ್ಷ್ಮತೆಯನ್ನು ಸುಧಾರಿಸುವ ಮೂಲಕ ಮತ್ತು ಉರಿಯೂತವನ್ನು ಕಡಿಮೆ ಮಾಡುವ ಮೂಲಕ ಪಾಲಿಸಿಸ್ಟಿಕ್‌ ಓವರಿ ಸಿಂಡ್ರೋಮ್‌ (ಪಿಸಿಓಎಸ್‌) ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತದೆ ಎಂಬುದನ್ನು ಅಧ್ಯಯನಗಳು ಸಾಬೀತು ಪಡಿಸಿವೆ. ಜರ್ನಲ್ ಆಫ್ ಫರ್ಟಿಲಿಟಿ ಮತ್ತು ಸ್ಟೆರಿಲಿಟಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ದಾಲ್ಚಿನ್ನಿ ಋತುಚಕ್ರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸುಧಾರಿಸುತ್ತದೆ ಮತ್ತು ಪಿಸಿಓಎಸ್ ಹೊಂದಿರುವ ಮಹಿಳೆಯರಲ್ಲಿ ಅಂಡೋತ್ಪತ್ತಿಯನ್ನು ಹೆಚ್ಚಿಸುತ್ತದೆ. ದಾಲ್ಚಿನ್ನಿ ನೀರನ್ನು ಕುಡಿಯುವುದರಿಂದ ಅನಿಯಮಿತ ಮುಟ್ಟಿನ ಅವಧಿಗಳು, ಮೊಡವೆ ಮತ್ತು ದೇಹದಲ್ಲಿ ಬೇಡದ ಕೂದಲು ಬೆಳವಣಿಗೆಯಂತಹ ರೋಗಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

ತೂಕ ಇಳಿಕೆಗೂ ಸಹಕಾರಿ

ದಾಲ್ಚಿನ್ನಿ ದೇಹದಲ್ಲಿ ಇನ್ಸುಲಿನ್‌ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ. ಇದು ತೂಕ ಇಳಿಕೆಗೂ ಸಹಕಾರಿ. ಈ ನೀರನ್ನು ಕುಡಿಯವುದರಿಂದ ಪದೇ ಪದೇ ಹಸಿವಾಗುವುದು ನಿಲ್ಲುತ್ತದೆ. ಅಲ್ಲದೆ ಹೊಟ್ಟೆ ತುಂಬಿದಂತಿರುತ್ತದೆ.

ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ

ಈ ಮೊದಲೇ ಹೇಳಿದಂತೆ ದಾಲ್ಚಿನ್ನಿ ನೀರು ರಕ್ತದಲ್ಲಿನ ಇನ್ಸುಲಿನ್‌ ಸೂಕ್ಷ್ಮತೆಯನ್ನು ಸುಧಾರಿಸುವ ಮೂಲಕ ದೇಹದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಜರ್ನಲ್ ಆಫ್ ಮೆಡಿಸಿನಲ್ ಫುಡ್‌ನಲ್ಲಿ ಪ್ರಕಟವಾದ ಮೆಟಾ ಅನಾಲಿಸಿಸ್‌ ಪ್ರಕಾರ ದಾಲ್ಚಿನ್ನಿ ಸೇವನೆಯಿಂದ ಟೈಪ್‌ 2 ಮಧುಮೇಹ ಹೊಂದಿರುವ ಜನರಲ್ಲಿ ರಕ್ತದಲ್ಲಿನ ಗ್ಲೊಕೋಸ್‌ ಮತ್ತು ಹಿಮೊಗ್ಲೋಬಿನ್‌ ಸುಧಾರಣೆಗೆ ಸಹಾಯ ಮಾಡುತ್ತದೆ. ದಾಲ್ಚಿನ್ನಿ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟದ ಏರಿಳಿತವನ್ನು ತಡೆಯಲು ಸಹಾಯ ಮಾಡುತ್ತದೆ.

ರೋಗನಿರೋಧಕ ಶಕ್ತಿಯನ್ನು

ದಾಲ್ಚಿನ್ನಿ ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು ಅದು ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ದಾಲ್ಚಿನ್ನಿ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ನಿಮ್ಮ ದೇಹವು ಸೋಂಕುಗಳು ಮತ್ತು ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಜೀರ್ಣಕ್ರಿಯೆ ಹೆಚ್ಚಲು ಸಹಾಯ ಮಾಡುತ್ತದೆ

ದಾಲ್ಚಿನ್ನಿ ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಜೊತೆಗೆ ಇದು ಹೊಟ್ಟೆಯುಬ್ಬರನ್ನು ತಡೆಯುತ್ತದೆ. ಇದು ಹೊಟ್ಟೆಯ ಅಸ್ವಸ್ಥತೆಯ ನಿವಾರಣೆಗೂ ಸಹಾಯ ಮಾಡುತ್ತದೆ.

ಹೃದಯ ಆರೋಗ್ಯಕ್ಕೂ ಉತ್ತಮ

ದಾಲ್ಚಿನ್ನಿ ದೇಹದಲ್ಲಿ ಕೊಲೆಸ್ಟ್ರಾಲ್‌ ಮಟ್ಟವನ್ನು ಕಡಿಮೆ ಮಾಡುತ್ತದೆ. ಆ ಮೂಲಕ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳ ನಿವಾರಣೆಗೆ ಸಹಾಯ ಮಾಡುತ್ತದೆ. ನಿಯಮಿತವಾಗಿ ದಾಲ್ಚಿನ್ನಿ ನೀರನ್ನು ಕುಡಿಯುವುದರಿಂದ ಆರೋಗ್ಯದ ಆರೋಗ್ಯ ಸುಧಾರಿಸುತ್ತದೆ.

ದಾಲ್ಚಿನ್ನಿ ನೀರು ತಯಾರಿಸುವುದು ಹೇಗೆ?

ನೀರಿನಲ್ಲಿ ಚಕ್ಕೆಯ ತುಂಡು ಹಾಕಿ 15 ರಿಂದ 20 ನಿಮಿಷ ಕುದಿಸಿ. ನೀರು ಸಂಪೂರ್ಣ ತಣ್ಣಗಾದ ಮೇಲೆ ಜೇನುತುಪ್ಪ ಅಥವಾ ನಿಂಬೆರಸ ಸೇರಿಸಿ. ಯಾವುದೇ ಕಾರಣಕ್ಕೂ ಸಕ್ಕರೆ ಸೇರಿಸಬೇಡಿ. ಇದನ್ನು ಒಂದು ಬಾಟಲಿಯಲ್ಲಿ ಹಾಕಿಡಿ. ಇದನ್ನು 3 ರಿಂದ 4 ಗಂಟೆಗಳಿಗೊಮ್ಮೆ ಕುಡಿಯಿರಿ.

ವಿಭಾಗ