ದೇವರಿಗೆ ಅರ್ಪಿಸುವ ತೆಂಗಿನಕಾಯಿಯಲ್ಲಿ ಅಡಕವಾಗಿದೆ ಹಲವು ಉಪಯೋಗ: ಈಡುಗಾಯಿಯ ಆರೋಗ್ಯ ಪ್ರಯೋಜನಗಳು ಏನೇನು, ಇಲ್ಲಿ ತಿಳಿದುಕೊಳ್ಳಿ-health tips coconut use and benefits nutrition benefits of coconut reasons to eat more coconut prk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ದೇವರಿಗೆ ಅರ್ಪಿಸುವ ತೆಂಗಿನಕಾಯಿಯಲ್ಲಿ ಅಡಕವಾಗಿದೆ ಹಲವು ಉಪಯೋಗ: ಈಡುಗಾಯಿಯ ಆರೋಗ್ಯ ಪ್ರಯೋಜನಗಳು ಏನೇನು, ಇಲ್ಲಿ ತಿಳಿದುಕೊಳ್ಳಿ

ದೇವರಿಗೆ ಅರ್ಪಿಸುವ ತೆಂಗಿನಕಾಯಿಯಲ್ಲಿ ಅಡಕವಾಗಿದೆ ಹಲವು ಉಪಯೋಗ: ಈಡುಗಾಯಿಯ ಆರೋಗ್ಯ ಪ್ರಯೋಜನಗಳು ಏನೇನು, ಇಲ್ಲಿ ತಿಳಿದುಕೊಳ್ಳಿ

ಭಾರತದಲ್ಲಿ ಅದರಲ್ಲೂ ದಕ್ಷಿಣ ಭಾರತದಲ್ಲಿ ತೆಂಗಿನಕಾಯಿಯ ಬಳಕೆ ಹೆಚ್ಚು. ದೇವರ ಪೂಜೆಯಿಂದ ಹಿಡಿದು ಅಡುಗೆ ಮನೆ ಬಳಕೆವರೆಗೆ ತೆಂಗಿನಕಾಯಿಯನ್ನು ಬಹುತೇಕ ನಿತ್ಯ ಬಳಸಲಾಗುತ್ತದೆ. ಇದೊಂದು ಸೂಪರ್ ಫುಡ್ ಎಂದರೆ ತಪ್ಪಿಲ್ಲ. ಇದರಲ್ಲಿ ಹಲವು ಆರೋಗ್ಯ ಪ್ರಯೋಜನಗಳು ಅಡಕವಾಗಿದ್ದು, ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ..

ತೆಂಗಿನಕಾಯಿಯಲ್ಲಿ ಹಲವು ಆರೋಗ್ಯ ಪ್ರಯೋಜನಗಳು ಅಡಕವಾಗಿದ್ದು, ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ..
ತೆಂಗಿನಕಾಯಿಯಲ್ಲಿ ಹಲವು ಆರೋಗ್ಯ ಪ್ರಯೋಜನಗಳು ಅಡಕವಾಗಿದ್ದು, ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.. (freepik)

ಭಾರತದಲ್ಲಿ ಅದರಲ್ಲೂ ದಕ್ಷಿಣ ಭಾರತದಲ್ಲಿ ತೆಂಗಿನಕಾಯಿ ಬಹಳ ಪ್ರಾಮುಖ್ಯತೆ ಪಡೆದಿದೆ. ತೆಂಗಿನಕಾಯಿಯನ್ನು ದೇವರ ಪೂಜೆಗೆ ಮುಖ್ಯವಾಗಿ ಬಳಸಲಾಗುತ್ತದೆ. ಹಾಗಂತ ಇದರ ಮೂಲ ಭಾರತವಲ್ಲ. ಇದು ಆಗ್ನೇಯ ಏಷ್ಯಾದಲ್ಲಿ ಹುಟ್ಟಿಕೊಂಡಿತು ಎಂದು ನಂಬಲಾಗಿದೆ. ಇಂಡೋನೇಷಿಯನ್ನರು ಮತ್ತು ಪಾಲಿನೇಷ್ಯನ್ನರಿಂದ ಜಗತ್ತಿನಾದ್ಯಂತ ಹರಡಿಕೊಂಡಿದೆ ಎಂದು ಹೇಳಲಾಗಿದೆ. ಭಾರತದಲ್ಲಿ ಹುಟ್ಟಿರದಿದ್ದರೂ ಕಲ್ಪವೃಕ್ಷಕ್ಕೆ ವಿಶೇಷ ಸ್ಥಾನಮಾನವಿದೆ. ಭಾರತದಲ್ಲೇ ಹುಟ್ಟಿದೆಯೇನೋ ಎಂಬಂತೆ ಅಷ್ಟು ಮಹತ್ವ ನೀಡಲಾಗಿದೆ. ಅದರಲ್ಲೂ ದಕ್ಷಿಣ ಭಾರತೀಯ ಅಡುಗೆ ಮನೆಗಳಲ್ಲಿ ತೆಂಗಿನಕಾಯಿ ಇಲ್ಲದೆ ಖಾದ್ಯಗಳು ತಯಾರಾಗುವುದೇ ಇಲ್ಲವೇನೋ ಎಂಬಂತಾಗಿದೆ. ಸಿಹಿ ತಿಂಡಿ, ಖಾದ್ಯಗಳಿಂದ ಹಿಡಿದು ಚಟ್ನಿವರೆಗೆ ತೆಂಗಿನಕಾಯಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ತೆಂಗಿನಕಾಯಿಯಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಪೌಷ್ಟಿಕಾಂಶದ ಸೂಪರ್‌ಫುಡ್ ಆಗಿದೆ: ತೆಂಗಿನಕಾಯಿಗಳು ವಿಟಮಿನ್‌ಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಇದರಲ್ಲಿ ಅಗತ್ಯ ಪೋಷಕಾಂಶಗಳು ಅಡಕವಾಗಿದೆ. ಕಾರ್ಬೋಹೈಡ್ರೇಟ್‌ಗಳು,ಪ್ರೊಟೀನ್‌ಗಳು, ಮ್ಯಾಂಗನೀಸ್‌ನಲ್ಲಿ ಸಮೃದ್ಧವಾಗಿರುವ ತೆಂಗಿನಕಾಯಿಯು ಮೂಳೆಯ ಆರೋಗ್ಯಕ್ಕೆ ಮತ್ತು ಚಯಾಪಚಯ ಕ್ರಿಯೆಗೆ ಅವಶ್ಯಕವಾಗಿದೆ.

ನಾರಿನಂಶಗಳಿಂದ ಸಮೃದ್ಧ: ತೆಂಗಿನಕಾಯಿಯು ನಾರಿನಾಂಶದಿಂದ ಸಮೃದ್ಧವಾಗಿದೆ. ಇದು ಗ್ಲೂಕೋಸ್‌ನ ಬಿಡುಗಡೆಯನ್ನು ನಿಧಾನಗೊಳಿಸುತ್ತದೆ ಹಾಗೂ ಅದನ್ನು ಶಕ್ತಿಯಾಗಿ ಪರಿವರ್ತಿಸುವ ಜೀವಕೋಶಕ್ಕೆ ಸಾಗಿಸುತ್ತದೆ. ಇದು ಮೇದೋಜ್ಜೀರಕ ಗ್ರಂಥಿ ಮತ್ತು ಕಿಣ್ವಗಳ ಮೇಲಿನ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಜೊತೆಗೆ ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ನಾರಿನಾಂಶವು ಕರುಳಿನ ಆರೋಗ್ಯ ಮತ್ತು ಕರುಳಿನ ಚಲನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಆರೋಗ್ಯ ಸುಧಾರಿಸಲು ಸಹಕಾರಿ: ಇದು ಆಂಟಿವೈರಲ್, ಆಂಟಿಫಂಗಲ್, ಆಂಟಿಬ್ಯಾಕ್ಟೀರಿಯಲ್ ಆಗಿದೆ. ಅಲ್ಲದೆ, ಇದರಲ್ಲಿ ಮೊನೊಲೌರಿನ್ ಮತ್ತು ಲಾರಿಕ್ ಆಮ್ಲದ ಹೆಚ್ಚಿನ ಅಂಶವಿದೆ. ಇದು ಬ್ಯಾಕ್ಟೀರಿಯಾ, ವೈರಸ್‌ಗಳು ಮತ್ತು ಶಿಲೀಂಧ್ರಗಳು ಮತ್ತು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಹೈಡ್ರೀಕರಿಸಲು ಸಹಕಾರಿ: ದೇಹದ ಹೈಡ್ರೀಕರಣಕ್ಕೆ ತೆಂಗಿನಕಾಯಿ ಸಹಕಾರಿಯಾಗಿದೆ. ಅಲ್ಲದೆ, ಇದು ವಯಸ್ಸಾದಂತೆ ಕಾಣುವುದನ್ನು ತಡೆಯಲೂ ಸಹಕಾರಿಯಾಗಿದೆ. ತೆಂಗಿನಕಾಯಿಯಲ್ಲಿರುವ ಸೈಟೋಕಿನಿನ್‌ಗಳು, ಕೈನೆಟಿನ್ ಮತ್ತು ಟ್ರಾನ್ಸ್-ಝೀಟಿನ್ ಅಂಶಗಳು ತ್ವಚೆ ಸುಕ್ಕಾಗುವುದನ್ನು ತಡೆಯುವಲ್ಲಿ ಸಹಕಾರಿಯಾಗಿದೆ. ಇದರ ಕೊಬ್ಬಿನಂಶವು ಚರ್ಮವನ್ನು ಪೋಷಿಸುತ್ತದೆ.

ಗರ್ಭಾವಸ್ಥೆಯಲ್ಲಿ ಪ್ರಯೋಜನಕಾರಿ: ತೆಂಗಿನ ನೀರು ಗರ್ಭಿಣಿಯರಿಗೆ ಬಹಳ ಪ್ರಯೋಜನಕಾರಿಯಾಗಿದೆ. ಇದು ತಾಯಿ ಮತ್ತು ಮಗುವಿನ ರೋಗನಿರೋಧಕ ಶಕ್ತಿ ಹಾಗೂ ಆರೋಗ್ಯವನ್ನು ಸುಧಾರಿಸುತ್ತದೆ. ಇದು ಸೋಂಕುಗಳು ಮತ್ತು ಇತರ ಕಾಯಿಲೆಗಳನ್ನು ತಡೆಯಲು ಸಹಕಾರಿ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಇದು ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿವೈರಲ್ ಗುಣಗಳನ್ನು ಹೊಂದಿದೆ. ದೇಹದಲ್ಲಿ ಆಮ್ನಿಯೋಟಿಕ್ ದ್ರವದ ಮಟ್ಟವನ್ನು ಹೆಚ್ಚಿಸುತ್ತದೆ. ಒಟ್ಟಾರೆ ಭ್ರೂಣದ ಆರೋಗ್ಯವನ್ನು ಸುಧಾರಿಸುತ್ತದೆ.

ಮಲಬದ್ಧತೆ ತಡೆಗಟ್ಟಲು ಸಹಕಾರಿ: ತೆಂಗಿನಕಾಯಿ ನಾರಿನಲ್ಲಿ ಸಮೃದ್ಧವಾಗಿದೆ, ಇದು ನೈಸರ್ಗಿಕ ಕರುಳಿನ ಚಲನೆಯನ್ನು ಉತ್ತೇಜಿಸಲು ಸಹಕಾರಿಯಾಗಿದೆ. ಮಲಬದ್ಧತೆಯಿಂದ ಬಳಳುತ್ತಿರುವವರಿಗೆ ಇದೊಂದು ಔಷಧಿಯಂತೆ ಕಾರ್ಯ ನಿರ್ವಹಿಸುತ್ತದೆ. ನಾರಿನಾಂಶದಿಂದ ಸಮೃದ್ಧವಾಗಿರುವುದರಿಂದ ಆಹಾರದಲ್ಲಿ ತೆಂಗಿನಕಾಯಿಯನ್ನು ಯಥೇಚ್ಛವಾಗಿ ಸೇರಿಸಬಹುದು.

ರಕ್ತದೊತ್ತಡ ನಿಯಂತ್ರಿಸಲು ಸಹಕಾರಿ: ತೆಂಗಿನಕಾಯಿಯಲ್ಲಿ ಅತ್ಯುತ್ತಮ ಪ್ರಮಾಣದಲ್ಲಿ ಪೊಟ್ಯಾಶಿಯಮ್ ಇದೆ. ಇದು ದೇಹದಿಂದ ಹೆಚ್ಚುವರಿ ಸೋಡಿಯಂ ಅನ್ನು ಹೊರಹಾಕಲು ಪ್ರಯೋಜನಕಾರಿಯಾಗಿದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ತೆಂಗಿನಕಾಯಿಯಲ್ಲಿ ಕೊಬ್ಬಿನಾಂಶ ಇದೆಯೇ?

ತೆಂಗಿನಕಾಯಿಯನ್ನು ಮಧ್ಯಮ ಪ್ರಮಾಣದಲ್ಲಿ ಸೇವಿಸುವುದು ಒಳಿತು. ತೆಂಗಿನಕಾಯಿಯ ಸೇವನೆಯು ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಇದು ಒಟ್ಟಾರೆ ಆಹಾರ ಸೇವನೆಯನ್ನು ಕಡಿಮೆ ಮಾಡುತ್ತದೆ ಮತ್ತು ತೂಕ ನಷ್ಟವನ್ನು ಉತ್ತೇಜಿಸುತ್ತದೆ. ಆದರೆ, ಅತಿಯಾಗಿ ಸೇವಿಸಿದರೆ ತೂಕ ಹೆಚ್ಚಾಗುವ ಸಾಧ್ಯತೆಯಿದೆ. ಇದರಲ್ಲಿ ಕೊಬ್ಬು ಮತ್ತು ಕ್ಯಾಲೋರಿ ಹೆಚ್ಚಿನ ಮಟ್ಟದಲ್ಲಿದೆ. ಹೀಗಾಗಿ ಮಧ್ಯಮ ಪ್ರಮಾಣದಲ್ಲಿ ಸೇವಿಸಬಹುದು.