ಸೂರ್ಯ ನಮಸ್ಕಾರ ಇಂದೇ ಶುರುಮಾಡಿ, ಆಮೇಲೆ ರಿಸಲ್ಟ್ ನೋಡಿ; ನಿಮ್ಮ ಆರೋಗ್ಯ ಸುಧಾರಣೆಗೆ ಯೋಗಕ್ಕಿಂತ ಬೇರೆ ಮದ್ದಿಲ್ಲ
ಸೂರ್ಯ ನಮಸ್ಕಾರವು ಋತುಚಕ್ರವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. ಕಿಬ್ಬೊಟ್ಟೆಯ ಸ್ನಾಯುಗಳನ್ನು ಬಲಪಡಿಸುತ್ತದೆ. ವಿಶೇಷವಾಗಿ ಮುಟ್ಟಿನ ನೋವನ್ನು ಕಡಿಮೆ ಮಾಡುತ್ತದೆ . ಮಹಿಳೆಯರು ಅನೇಕ ಪ್ರಯೋಜನಗಳನ್ನು ಪಡೆಯಬಹುದು.
ಸೂರ್ಯನಿಗೆ ನಮಸ್ಕರಿಸುವುದನ್ನು ಅಥವಾ ಪೂಜಿಸುವುದನ್ನು ಸೂರ್ಯ ನಮಸ್ಕಾರ ಎಂದು ಕರೆಯಲಾಗುತ್ತದೆ. ಈ ಯೋಗ ಮಾಡುವುದರಿಂದ ದೇಹದಲ್ಲಿರುವ ನಾನಾ ಸಮಸ್ಯೆಗಳನ್ನು ದೂರ ಮಾಡಬಹುದು. ಈ ವಿಧಾನವು ಅನಾದಿ ಕಾಲದಿಂದಲೂ ಇದೆ. ಹಿಂದೆ ಋಷಿಮುನಿಗಳು ಸಹ ಯೋಗ ಮಾಡುತ್ತಿದ್ದರು. ನಂತರದ ಪೀಳಿಗೆಯೂ ಇದನ್ನು ಅನುಸರಿಸುತ್ತಾ ಬಂದಿದೆ. ಇದೇ ಕಾರಣಕ್ಕೆ ಇನ್ನು ಯೋಗದ ಬಗ್ಗೆ ಮಾಹಿತಿ ಹಾಗೂ ಅದರ ಪ್ರಯೋಜನಗಳನ್ನು ನಾವು ತಿಳಿದಿದ್ದೇವೆ.
ನಿರ್ಲಕ್ಷ್ಯ ಬೇಡ
ಆದರೆ ಇಂದಿನ ಬಿಡುವಿಲ್ಲದ ಜೀವನಶೈಲಿಯಲ್ಲಿ ಅನೇಕರು ಸೂರ್ಯ ನಮಸ್ಕಾರದ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ಯೋಗಾಸನ ಮಾಡುವುದಿಲ್ಲ. ಅದರ ಬದಲಾಗಿ ಜಿಮ್‌ಗೆ ಹೋಗುತ್ತಾರೆ. ಇಲ್ಲವೇ ಏನೂ ಮಾಡದೇ ಇರುವವರು ಇದ್ದಾರೆ. ಸೂರ್ಯ ನಮಸ್ಕಾರ ಮಾಡಿವುದರಿಂದ ಏನೆಲ್ಲ ಪ್ರಯೋಜನ ಇದೆ ಎಂದು ಗೊತ್ತಾದರೆ ನೀವೂ ಸಹ ಪ್ರತಿನಿತ್ಯ ಸೂರ್ಯ ನಮಸ್ಕಾರ ಮಾಡುತ್ತೀರ.
ಯಾವಾಗ ಮಾಡಬೇಕು?
ಸೂರ್ಯ ನಮಸ್ಕಾರವನ್ನು ಸರಿಯಾದ ರೀತಿಯಲ್ಲಿ ಮಾಡಬೇಕು. ನಿಮ್ಮ ದಿನದ ಆರಂಭದಲ್ಲಿ ನೀವು ಇದನ್ನು ಮಾಡಬೇಕು. ಬೆಳಗಿನ ಅವಧಿಯಲ್ಲಿ ಅದರಲ್ಲೂ ತಿಂಡಿ ತಿನ್ನುವುದಕ್ಕಿಂತ ಮೊದಲು ನೀವು ಇದನ್ನು ಮಾಡಬೇಕು. ಈ ರೀತಿ ಮಾಡಿ ನೀವುದಿನವನ್ನು ಪ್ರಾರಂಭಿಸುವುದು ದೇಹ ಮತ್ತು ಮನಸ್ಸನ್ನು ಆರೋಗ್ಯವಾಗಿರಿಸುತ್ತದೆ. ಪ್ರತಿದಿನ 5 ರಿಂದ 10 ನಿಮಿಷಗಳ ಕಾಲ ಸೂರ್ಯ ನಮಸ್ಕಾರ ಮಾಡಿದ ನಂತರ ಬೇರೆ ಯಾವುದೇ ಆಸನ ಮಾಡುವ ಅಗತ್ಯವಿಲ್ಲ.
ಸೂರ್ಯ ನಮಸ್ಕಾರ ಮಾಡಲು ನೀವು ಯಾರಿಂದಲಾದರೂ ಕೇಳಿತಿಳಿದುಕೊಳ್ಳಿ. ಇಲ್ಲವೇ ಯುಟ್ಯೂಬ್‌ಗಳಲ್ಲಿ ನೋಡಿ ಕಲಿಯಿರಿ. ಪರಿಣಿತರ ಹತ್ತಿರ ಕಲಿಯದೇ ಈ ಆಸನವನ್ನು ಅಥವಾ ಬೇರೆ ಯಾವುದೇ ಆಸನವನ್ನು ಪ್ರಯೋಗವೆಂದು ಮಾಡಬೇಡಿ. ಇದು ದೇಹದಲ್ಲಿನ ಹೆಚ್ಚುವರಿ ಕೊಬ್ಬುನ್ನು ಕಡಿಮೆಮಾಡುತ್ತದೆ. ಅದಕ್ಕಾಗಿಯೇ ವೈದ್ಯರು ಕೂಡ ಬೆಳಿಗ್ಗೆ ಸೂರ್ಯ ನಮಸ್ಕಾರವನ್ನು ಮಾಡಲು ಸಲಹೆ ನೀಡುತ್ತಾರೆ.
ರಕ್ತ ಪರಿಚಲನೆಗೆ ಸಹಕಾರಿ
ಪ್ರತಿದಿನ ಸೂರ್ಯ ನಮಸ್ಕಾರ ಮಾಡುವುದರಿಂದ ರಕ್ತ ಪರಿಚಲನೆಯು ಕ್ರಮಬದ್ಧವಾಗಿರುತ್ತದೆ. ಚರ್ಮವು ಪ್ರಕಾಶಮಾನವಾಗಿರುತ್ತದೆ. ಸೂರ್ಯ ನಮಸ್ಕಾರವು ವಯಸ್ಸಾದ ಸುಕ್ಕುಗಳನ್ನು ತಡೆಯುತ್ತದೆ. ಸೂರ್ಯ ನಮಸ್ಕಾರದ ಪ್ರಯೋಜನಗಳು ಇಲ್ಲಿವೆ.
ದಿನನಿತ್ಯ ಸೂರ್ಯ ನಮಸ್ಕಾರ ಮಾಡುವುದರಿಂದ ಜೀರ್ಣಾಂಗ ವ್ಯವಸ್ಥೆಯು ಸುಗಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಜೀರ್ಣಾಂಗ ವ್ಯವಸ್ಥೆಯಲ್ಲಿ ರಕ್ತ ಪರಿಚಲನೆ ಹೆಚ್ಚಿಸುತ್ತದೆ . ಇದು ಕರುಳಿನ ಕಾರ್ಯವನ್ನು ಸಹ ಸುಧಾರಿಸುತ್ತದೆ. ಗ್ಯಾಸ್ ಸಮಸ್ಯೆ, ಮಲಬದ್ಧತೆ ಸಮಸ್ಯೆ ಇದ್ದರೆ ನಿಯಮಿತವಾಗಿ ಮಾಡಿ.
ಮಾನಸಿಕ ಆರೋಗ್ಯ
ನಿಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸಲು ನೀವು ಬಯಸಿದರೆ, ನಿಯಮಿತವಾಗಿ ಸೂರ್ಯ ನಮಸ್ಕಾರವನ್ನು ಮಾಡಿ. ಇದು ನಿಮ್ಮ ದೇಹವನ್ನು ಉತ್ತಮ ಸ್ಥಿತಿಯಲ್ಲಿಡುವುದು ಮಾತ್ರವಲ್ಲದೆ ನಿಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ಇದು ಆತಂಕವನ್ನು ನಿವಾರಿಸಲು ಸಹ ಸಹಾಯ ಮಾಡುತ್ತದೆ. ಈ ಒತ್ತಡದ ಜೀವನಶೈಲಿಯಲ್ಲಿ ಸೂರ್ಯ ನಮಸ್ಕಾರಗಳು ನಿಮಗೆ ಸಾಕಷ್ಟು ಪರಿಹಾರವನ್ನು ನೀಡುತ್ತವೆ.
ನರಮಂಡಲ ಸುಧಾರಣೆ
ಸೂರ್ಯ ನಮಸ್ಕಾರವನ್ನು ನಿಯಮಿತವಾಗಿ ಮಾಡಿದರೆ. ಮೆದುಳು ಮತ್ತು ನರಮಂಡಲವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಸೂರ್ಯ ನಮಸ್ಕಾರದಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ.
ಕಿಬ್ಬೊಟ್ಟೆಯ ಸ್ನಾಯುಗಳನ್ನು ಬಲಪಡಿಸುತ್ತದೆ
ಇದಲ್ಲದೆ ಸೂರ್ಯ ನಮಸ್ಕಾರವು ಋತುಚಕ್ರವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. ಕಿಬ್ಬೊಟ್ಟೆಯ ಸ್ನಾಯುಗಳನ್ನು ಬಲಪಡಿಸುತ್ತದೆ. ವಿಶೇಷವಾಗಿ ಮುಟ್ಟಿನ ನೋವನ್ನು ಕಡಿಮೆ ಮಾಡುತ್ತದೆ . ಮಹಿಳೆಯರು ಅನೇಕ ಪ್ರಯೋಜನಗಳನ್ನು ಪಡೆಯಬಹುದು.
ವಿಭಾಗ