Dengue: ಡೆಂಗ್ಯೂ ಜ್ವರದಿಂದ ಬೇಗನೆ ಚೇತರಿಸಿಕೊಳ್ಳಬೇಕು ಅಂದ್ರೆ ಈ 7 ವಿವಿಧ ಬಗೆಯ ಹಣ್ಣು, ತರಕಾರಿಗಳನ್ನು ಸೇವಿಸಿ
ಡೆಂಗ್ಯೂ ಜ್ವರದಿಂದ ಬಳಲುತ್ತಿರುವವರು, ಬೇಗನೇ ಚೇತರಿಸಿಕೊಳ್ಳಲು ಸಾಕಷ್ಟು ಪೌಷ್ಟಿಕಾಂಶವುಳ್ಳ ಆಹಾರ ಸೇವಿಸುವುದು ಬಹಳ ಮುಖ್ಯವಾಗುತ್ತದೆ. ಕಿವಿ ಫ್ರೂಟ್‌ನಿಂದ ಕುಂಬಳಕಾಯಿವರೆಗೆ ಡೆಂಗ್ಯೂ ನಿವಾರಣೆಗೆ ಸೂಪರ್ ಫುಡ್ ಎನ್ನಿಸುವ ಕೆಲವು ಹಣ್ಣು, ತರಕಾರಿಗಳಿವು.
ಕಳೆದ ಕೆಲ ತಿಂಗಳಿನಿಂದ ದೇಶದಾದ್ಯಂತ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. 2023ರಲ್ಲಿ ಸೊಳ್ಳೆಯಿಂದ ಹರಡುವ ರೋಗಗಳ ಸಂಖ್ಯೆಯು ಹೆಚ್ಚಿದೆ. ವಾತಾವರಣದಲ್ಲಿ ಆಗಾಗ ವ್ಯತ್ಯಯವಾಗುತ್ತಿರುವುದು ಡೆಂಗ್ಯೂವಿನಂತಹ ಸಮಸ್ಯೆ ಹೆಚ್ಚಲು ಕಾರಣವಾಗಿದೆ. ಡಿಇಎನ್‌ವಿ ಎಂಬ ವೈರಸ್‌ನಿಂದ ಡೆಂಗ್ಯೂವು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. 2023ರಲ್ಲಿ ಕೇವಲ ಭಾರತ ಮಾತ್ರವಲ್ಲ, ಪ್ರಪಂಚದಾದ್ಯಂತ ಡೆಂಗ್ಯೂ ಪ್ರಕರಣಗಳಲ್ಲಿ ಏರಿಕೆಯಾಗಿದೆ.
ಡೆಂಗ್ಯೂ ಜ್ವರ ಬಂದಾಗ ಔಷಧಿಗಳಿಗಿಂತ ಹೆಚ್ಚು ಪೌಷ್ಟಿಕಾಂಶವುಳ್ಳ ಆಹಾರಗಳ ಸೇವನೆಗೆ ಹೆಚ್ಚು ಒತ್ತು ನೀಡಬೇಕು. ಪ್ಲೇಟ್ಲೇಟ್‌ಗಳ ಸಂಖ್ಯೆ ವೃದ್ಧಿಯಾಗುವ ಹಾಗೂ ಉರಿಯೂತ ಕಡಿಮೆ ಮಾಡುವ ಆಹಾರಗಳನ್ನು ಹೆಚ್ಚು ಸೇವಿಸಬೇಕು. ಇದು ದೇಹವನ್ನು ಸದೃಢವಾಗಿರಿಸಲು ಸಹಾಯ ಮಾಡುತ್ತದೆ. ಪ್ಲೇಟ್‌ಲೆಟ್‌ಗಳನ್ನು ಉತ್ಪಾದಿಸಲು ರಕ್ತದ ಹಿಮೋಗ್ಲೋಬಿನ್ ಮಟ್ಟವನ್ನು ಕಾಪಾಡಿಕೊಳ್ಳಲು ನಿಮ್ಮ ದೇಹಕ್ಕೆ ಕಬ್ಬಿಣದಂತಹ ಅಗತ್ಯ ಪೋಷಕಾಂಶಗಳು ಸಹ ಬೇಕಾಗುತ್ತದೆ. ಹಣ್ಣುಗಳು ಮತ್ತು ತರಕಾರಿಗಳು ಜೀವಸತ್ವಗಳು, ಖನಿಜಗಳು, ಫೈಬರ್ ಮತ್ತು ಇತರ ಅಗತ್ಯ ಪೋಷಕಾಂಶಗಳಿಂದ ತುಂಬಿರುತ್ತವೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಚೇತರಿಕೆಗೆ ಸಹಾಯ ಮಾಡುತ್ತದೆ. ಮುಂಬೈನ
ಮೀರಾ ರೋಡ್‌ನಲ್ಲಿರುವ ವೊಕ್ಹಾರ್ಡ್ ಆಸ್ಪತ್ರೆಯಲ್ಲಿ ಹಿರಿಯ ಪೌಷ್ಟಿಕತಜ್ಞರಾಗಿರುವ ರಿಯಾ ದೇಸಾಯಿ, ಡೆಂಗ್ಯೂ ಜ್ವರದಿಂದ ಬೇಗನೆ ಚೇತರಿಸಿಕೊಳ್ಳಲು ನೆರವಾಗಲು 7 ಹಣ್ಣು, ತರಕಾರಿಗಳ ಬಗ್ಗೆ ಇಲ್ಲಿ ತಿಳಿಸಿದ್ದಾರೆ.
ಕಿವಿ
ಡೆಂಗ್ಯೂ ಜ್ವರದಿಂದ ಬಳಲುತ್ತಿರುವಾಗ ಪರಿಣಾಮಕಾರಿಯಾಗಿ ಚೇತರಿಸಿಕೊಳ್ಳಲು ಕಿವಿ ಹಣ್ಣು ಉತ್ತಮ. ಇದರಲ್ಲಿ ವಿಟಮಿನ್ ಸಿ ಹಾಗೂ ಪೊಟ್ಯಾಶಿಯಂ ಅಂಶಗಳಿವೆ. ಪಾಲಿಫಿನಾಲ್, ಆಂಟಿಆಕ್ಸಿಡೆಂಟ್‌ಗಳಾದ ಗ್ಯಾಲಿಕ್ ಆಸಿಡ್ ಮತ್ತು ಟ್ರೋಲಾಕ್ಸ್ ಸಮನಾಗಿರುತ್ತದೆ. ಇದು ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆ ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಸೋಂಕಿನ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ನೆರವಾಗುತ್ತದೆ. ರೋಗನಿರೋಧಕ ಶಕ್ತಿಯನ್ನು ಸುಧಾರಿಸುವುದರ ಜೊತೆಗೆ ದೇಹದಲ್ಲಿ ಎಲೆಕ್ಟ್ರೋಲೈಟ್‌ಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.
ಪಪ್ಪಾಯ
ಪಪ್ಪಾಯಿಯು ಕೆಲವು ಜೈವಿಕವಾಗಿ ಸಕ್ರಿಯವಾಗಿರುವ ಸಂಯುಕ್ತಗಳಾದ ಪಾಪೈನ್, ಕ್ಯಾರಿಕೇನ್, ಚೈಮೊಪಪೈನ್, ಅಸಿಟೋಜೆನಿನ್ ಅಂಶಗಳನ್ನು ಹೊಂದಿದೆ. ಇದು ಉರಿಯೂತದ ಗುಣಲಕ್ಷಣಗಳನ್ನು ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇದು ದೇಹದ ಪ್ರತಿರಕ್ಷಣಾ ಸ್ಥಿತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಡೆಂಗ್ಯೂ ಸಂಬಂಧಿತ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.
ದಾಳಿಂಬೆ
ದಾಳಿಂಬೆಯಲ್ಲಿ ಕಬ್ಬಿಣ ಅಂಶವು ಸಮೃದ್ಧವಾಗಿದೆ. ಇದು ಹೆಮಟೊಲಾಜಿಕಲ್ ನಿಯತಾಂಕಗಳನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ. ಪ್ಲೇಟ್ಲೆಟ್ ಸಂಖ್ಯೆ ವೃದ್ಧಿಯಾಗಲು ದಾಳಿಂಬೆ ಉತಮ. ಇದು ಡೆಂಗ್ಯೂ ಜ್ವರ ಬಿಟ್ಟ ನಂತರ ಕಾಡುವ ಆಯಾಸ, ಬಳಲಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದೇಹದಲ್ಲಿ ಶಕ್ತಿಯ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಪಾಲಕ್
ವಿಟಮಿನ್ ಕೆ ಸಮೃದ್ಧವಾಗಿರುವ ಪಾಲಕ್ ಸೊಪ್ಪು ಪ್ಲೇಟ್ಲೆಟ್ ಸಂಖ್ಯೆಯನ್ನು ನೇರವಾಗಿ ಹೆಚ್ಚಿಸುವುದಿಲ್ಲ. ಆದರೆ ಇದು ರಕ್ತಕಣಗಳು ಉತ್ತಮವಾಗಿ ಹೆಪ್ಪುಗಟ್ಟಲು ಸಹಾಯ ಮಾಡುತ್ತದೆ. ಪಾಲಕ್ ಸೊಪ್ಪಿನಲ್ಲಿ ಉತ್ತಮ ಪ್ರಮಾಣದ ಕಬ್ಬಿಣ, ಫೋಲೆಟ್, ಒಮೆಗಾ 3 ಕೊಬ್ಬಿನಾಮ್ಲ ಇದೆ. ಉರಿಯೂತದ ಸೈಟೊಕಿನ್‌ಗಳನ್ನು ನಿಗ್ರಹಿಸುವ ಮೂಲಕ ದೇಹದಾದ್ಯಂತ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ವೈರಸ್‌ನಿಂದ ಉಂಟಾಗುವ ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸಲು ಸಹಾಯ ಮಾಡುತ್ತದೆ ಮತ್ತು ಆಯಾಸ ಮತ್ತು ದೌರ್ಬಲ್ಯದಂತಹ ರೋಗಲಕ್ಷಣಗಳಿಂದ ವೇಗವಾಗಿ ಚೇತರಿಸಿಕೊಳ್ಳಲು ಉತ್ತೇಜಿಸುತ್ತದೆ.
ಬಿಟ್ರೂಟ್
ಇದರಲ್ಲಿ ಕೆಂಪು ರಕ್ತ ಕಣಗಳ ಉತ್ಪಾದನೆಗೆ ಅಗತ್ಯವಾದ ಕಬ್ಬಿಣ ಮತ್ತು ಫೋಲಿಕ್ ಆಮ್ಲ ಹೇರಳವಾಗಿರುತ್ತದೆ. ಬೀಟ್ರೂಟ್ ನಿಮ್ಮ ಯಕೃತ್ತನ್ನು ಶುದ್ಧೀಕರಿಸಲು ಮತ್ತು ಅದರ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುವ ನಿರ್ವಿಶೀಕರಣ ಗುಣಲಕ್ಷಣಗಳನ್ನು ಹೊಂದಿದೆ. ಡೆಂಗ್ಯೂ ಸಂಬಂಧಿತ ಉರಿಯೂತದಿಂದಾಗಿ ದೇಹದಲ್ಲಿ ಪ್ಲೇಟ್ಲೆಟ್‌ಗಳ ಫ್ರಿ ರಾಡಿಕಲ್ ಹಾನಿಯನ್ನು ತಡೆಯುತ್ತದೆ. ಬೀಟ್ರೂಟ್ ಹೆಮಟೊಲಾಜಿಕಲ್ ನಿಯತಾಂಕಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಆದರೆ ಬೀಟ್ರೂಟ್ ಪೇಟ್ಲೆಟ್‌ಗಳ ಮೇಲೆ ನೇರ ಪರಿಣಾಮ ಬೀರುವುದರ ಬಗ್ಗೆ ಯಾವುದೇ ಪುರಾವೆಗಳಿಲ್ಲ.
ಸಿಟ್ರಸ್ ಹಣ್ಣುಗಳು
ಸಿಟ್ರಸ್ ಹಣ್ಣುಗಳಾದ ಕಿತ್ತಳೆ, ನೆಲ್ಲಿಕಾಯಿ, ನಿಂಬೆ ಇತ್ಯಾದಿಗಳಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ, ದೇಹದಲ್ಲಿ ಆಕ್ಸಿಡೀಕರಣವನ್ನು ಕಡಿಮೆ ಮಾಡುತ್ತದೆ, ಡೆಂಗ್ಯೂ ಜ್ವರದಲ್ಲಿ ಪ್ಲೇಟ್‌ಲೆಟ್‌ಗಳೊಂದಿಗೆ ರಕ್ತಪರಿಚಲನೆಯ ಮರುಪೂರಣವನ್ನು ವೇಗಗೊಳಿಸುತ್ತದೆ. ರಕ್ತಸ್ರಾವದ ಅಪಾಯ ಮತ್ತು ಪ್ಲೇಟ್ಲೆಟ್ ವರ್ಗಾವಣೆಯ ಅಗತ್ಯವನ್ನು ಕಡಿಮೆ ಮಾಡುತ್ತದೆ.
ಕುಂಬಳಕಾಯಿ
ಈ ಬಹುಮುಖ ತರಕಾರಿ ವಿಟಮಿನ್ ಎ ಮತ್ತು ಬೀಟಾ-ಕ್ಯಾರೋಟಿನ್ ನಂತಹ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ, ಇದು ದೇಹದಲ್ಲಿ ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡದ ವಿರುದ್ಧ ಹೋರಾಡುತ್ತದೆ.
ವಿಭಾಗ