ಕನ್ನಡ ಸುದ್ದಿ  /  Lifestyle  /  Health Tips Diabetes Benefits Of Barley Water For Diabetics Blood Sugar Control Weight Loss Barley Health Benefits Rst

ಮಧುಮೇಹಿಗಳಿಗೆ ದಿವ್ಯೌಷಧ ಬಾರ್ಲಿ ನೀರು; ಇದನ್ನು ಪ್ರತಿನಿತ್ಯ ಕುಡಿಯುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ

ಮಧುಮೇಹ ಇತ್ತೀಚಿಗೆ ಹಲವರನ್ನು ಕಾಡುತ್ತಿರುವ ಸಮಸ್ಯೆ. ಮಧುಮೇಹಿಗಳು ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಹಲವು ಮಾರ್ಗಗಳನ್ನು ಅನುಸರಿಸುತ್ತಾರೆ. ಆದರೆ ಎಲ್ಲವೂ ಪರಿಣಾಮಕಾರಿಯಾಗಿರುವುದಿಲ್ಲ. ಆದರೆ ಪ್ರತಿನಿತ್ಯ ಬಾರ್ಲಿ ನೀರು ಕುಡಿಯುವುದರಿಂದ ಮಧುಮೇಹಿಗಳಿಗೆ ನೂರಾರು ಪ್ರಯೋಜನಗಳಿವೆ.

ಮಧುಮೇಹಿಗಳಿಗೆ ಬಾರ್ಲಿ ನೀರು ದಿವ್ಯೌಷಧ; ಇದನ್ನು ಪ್ರತಿನಿತ್ಯ ಕುಡಿಯುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ
ಮಧುಮೇಹಿಗಳಿಗೆ ಬಾರ್ಲಿ ನೀರು ದಿವ್ಯೌಷಧ; ಇದನ್ನು ಪ್ರತಿನಿತ್ಯ ಕುಡಿಯುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ

ಜೀವನಶೈಲಿಗೆ ಸಂಬಂಧಿಸಿದ ಸಮಸ್ಯೆಗಳಲ್ಲಿ ಇತ್ತೀಚೆಗೆ ಅತಿ ಹೆಚ್ಚು ಕಾಡುತ್ತಿರುವುದು ಮಧುಮೇಹ. ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ನಮ್ಮ ದೇಶಕ್ಕೆ ಮಧುಮೇಹಿಗಳ ರಾಜಧಾನಿ ಎಂಬ ಕುಖ್ಯಾತಿಯೂ ಇದೆ. ಮಧುಮೇಹಿಗಳು ಮಧುಮೇಹ ನಿಯಂತ್ರಣಕ್ಕೆ ಹಲವು ಮಾರ್ಗಗಳನ್ನು ಹುಡುಕುತ್ತಲೇ ಇರುತ್ತಾರೆ. ಸಕ್ಕರೆಕಾಯಿಲೆಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗದೇ ಇದ್ದರೂ, ಆಹಾರಕ್ರಮ ಹಾಗೂ ಔಷಧಿಗಳ ಮೂಲಕ ಇದರ ಪರಿಣಾಮವನ್ನು ತಗ್ಗಿಸಬಹುದು. ಮಧುಮೇಹವನ್ನು ನಿಯಂತ್ರಿಸುವ ನೈಸರ್ಗಿಕ ಮಾರ್ಗಗಳಲ್ಲಿ ಬಾರ್ಲಿ ನೀರು ಕುಡಿಯುವುದು ಒಂದು. ಮಧುಮೇಹಿಗಳು ಪ್ರತಿನಿತ್ಯ ಬಾರ್ಲಿ ನೀರು ಕುಡಿಯುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ.

ಕರಗುವ ನಾರಿನಾಂಶ ಅಧಿಕವಾಗಿದೆ

ಬಾರ್ಲಿಯಲ್ಲಿ ಕರಗುವ ನಾರಿನಾಂಶ ಅಧಿಕವಾಗಿದೆ. ಗ್ಲುಕೋಸ್‌ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುವ ಸಾಮರ್ಥ್ಯ ಇದಕ್ಕಿದೆ. ಇದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆ ಕಾರಣಕ್ಕೆ ಬಾರ್ಲಿ ನೀರು ಮಧುಮೇಹಿಗಳಿಗೆ ಬಹಳ ಉತ್ತಮ.

ಗ್ಲೈಸೆಮಿಕ್‌ ಸೂಚ್ಯಂಕ ಕಡಿಮೆ ಇರುತ್ತದೆ

ಬಾರ್ಲಿ ನೀರು ಕಡಿಮೆ ಗ್ಲೈಸೆಮಿಕ್‌ ಸೂಚಿಯನ್ನು ಹೊಂದಿದ್ದು, ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವು ತ್ವರಿತವಾಗಿ ಏರಿಕೆಯಾಗುವುದನ್ನು ತಡೆಯುತ್ತದೆ. ಮಧುಮೇಹ ಹೊಂದಿರುವ ವ್ಯಕ್ತಿಗಳಲ್ಲಿ ಸ್ಥಿರವಾದ ಗ್ಲೂಕೋಸ್‌ ಮಟ್ಟವನು ಕಾಪಾಡಿಕೊಳ್ಳಲು ಈ ಗುಣಲಕ್ಷಣವು ವಿಶೇಷ ಅನುಕೂಲವನ್ನು ಮಾಡುತ್ತದೆ.

ತೂಕ ನಿಯಂತ್ರಣ

ಬಾರ್ಲಿ ನೀರಿನಲ್ಲಿ ಗಮನಾರ್ಹ ಪ್ರಮಾಣದ ನಾರಿನಾಂಶವಿದ್ದು ಇದು ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ. ಮಧುಮೇಹಿಗಳಿಗೆ ತೂಕ ನಿರ್ವಹಣೆ ಕೂಡ ನಿರ್ಣಾಯಕವಾಗಿದೆ.

ಹೃದಯದ ಆರೋಗ್ಯ ಪ್ರಯೋಜನ

ಬಾರ್ಲಿ ನೀರಿನಲ್ಲಿರುವ ಫೈಬರ್‌ ಅಂಶವು ಕೆಟ್ಟ ಕೊಲೆಸ್ಟ್ರಾಲ್‌ ಅನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಿಂದ ಹೃದಯದ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ. ಹೃದಯ ಸಂಬಂಧಿ ಸಮಸ್ಯೆ ಇರುವ ಮಧುಮೇಹಿ ರೋಗಿಗಳಿಗೆ ಇದು ಉತ್ತಮ ಪರಿಹಾರ ಅಂತಲೇ ಹೇಳಬಹುದು.

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ

ಬಾರ್ಲಿ ನೀರಿನ ಸೇವನೆಯು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದು ಮಧುಮೇಹ ಹೊಂದಿರುವ ವ್ಯಕ್ತಿಗಳಿಗೆ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಜೀರ್ಣಕ್ರಿಯೆ ಉತ್ತಮವಾಗಿರುವುದರಿಂದ ಇದು ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ. ರಕ್ತದಲ್ಲಿನ ಸಕ್ಕರೆ ಅಂಶದ ನಿಯಂತ್ರಣಕ್ಕೂ ಇದು ಸಹಕಾರಿ.

ಇನ್ಸುಲಿನ್‌ ಸಂವೇದನೆ

ಬಾರ್ಲಿ ನೀರು ಇನ್ಸುಲಿನ್‌ ಸೂಕ್ಷತೆಯನು ಹೆಚ್ಚಿಸುತ್ತಿದೆ. ಗ್ಲೊಕೋಸ್‌ ಅನ್ನು ಪರಿಣಾಮಕಾರಿ ಹೀರಿಕೊಳ್ಳುವಲ್ಲಿ ಜೀವಕೋಶಗಳಿಗೆ ಸಹಾಯ ಮಾಡುತ್ತದೆ.

ಆಕ್ಸಿಡೇಟಿವ್‌ ಹಾನಿಯಿಂದ ರಕ್ಷಣೆ

ಬಾರ್ಲಿ ನೀರಿನಲ್ಲಿ ವಿಟಮಿನ್‌ ಸಿ ಮತ್ತು ಸೆಲೆನಿಯಂನಂತಹ ಉತ್ಕರ್ಷಣ ನಿರೋಧಕ ಅಂಶಗಳಿದ್ದು, ಇದು ಸಕ್ಕರೆ ಮಟ್ಟಕ್ಕೆ ಸಂಬಂಧಿಸಿದ ಆಕ್ಸಿಡೇಟಿವ್‌ ಹಾನಿಯ ವಿರುದ್ಧ ರಕ್ಷಣೆ ನೀಡುತ್ತದೆ. ನಮ್ಮ ದೇಹದ ಒಟ್ಟಾರೆ ಯೋಗಕ್ಷೇಮಕ್ಕೆ ರಕ್ಷಣಾತ್ಮಕ ಪರಿಣಾಮವು ನಿರ್ಣಾಯಕವಾಗಿದೆ.

ಮಧುಮೇಹವನ್ನು ನಿಯಂತ್ರಿಸಲು ಪ್ರಯತ್ನಿಸುವವರು ಪ್ರತಿನಿತ್ಯ ಬಾರ್ಲಿ ನೀರು ಸೇವಿಸುವುದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯುತ್ತಾರೆ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವುದರಿಂದ ಹೃದಯದ ಆರೋಗ್ಯ ಕಾಪಾಡುವವರೆಗೆ ಹಲವಾರು ಪ್ರಯೋಜನಗಳನ್ನು ಹೊಂದಿದೆ. ಇದನ್ನು ಪ್ರತಿನಿತ್ಯ ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ.

(This copy first appeared in Hindustan Times Kannada website. To read more like this please logon to kannada.hindustantimes.com)