Diabetes Symptoms: ಬೆಳಗಿನ ಹೊತ್ತು ಮಾತ್ರ ಕಾಣಿಸುವ ಮಧುಮೇಹದ ಈ ಲಕ್ಷಣಗಳನ್ನ ತಪ್ಪಿಯೂ ನಿರ್ಲಕ್ಷ್ಯ ಮಾಡದಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  Diabetes Symptoms: ಬೆಳಗಿನ ಹೊತ್ತು ಮಾತ್ರ ಕಾಣಿಸುವ ಮಧುಮೇಹದ ಈ ಲಕ್ಷಣಗಳನ್ನ ತಪ್ಪಿಯೂ ನಿರ್ಲಕ್ಷ್ಯ ಮಾಡದಿರಿ

Diabetes Symptoms: ಬೆಳಗಿನ ಹೊತ್ತು ಮಾತ್ರ ಕಾಣಿಸುವ ಮಧುಮೇಹದ ಈ ಲಕ್ಷಣಗಳನ್ನ ತಪ್ಪಿಯೂ ನಿರ್ಲಕ್ಷ್ಯ ಮಾಡದಿರಿ

ಮಧುಮೇಹ ಒಂದು ಜೀವನಶೈಲಿಗೆ ಸಂಬಂಧಿಸಿದ ಸಮಸ್ಯೆಯಾಗಿದ್ದು, ಇದನ್ನು ನಿರ್ಲಕ್ಷ್ಯ ಮಾಡಿದರೆ ಅಪಾಯ ಖಚಿತ. ಮಧುಮೇಹದ ಬಗ್ಗೆ ಸಾಕಷ್ಟು ಎಚ್ಚರ ವಹಿಸಬೇಕು. ಬೆಳಗಿನ ಜಾವದಲ್ಲಿ ಕಾಣಿಸುವ ಈ ಲಕ್ಷಣಗಳು ಮಧುಮೇಹದ ಸಂಕೇತವಾಗಿರಬಹುದು. ಇದು ನಿಮ್ಮಲ್ಲಿ ಸಕ್ಕರೆ ಕಾಯಿಲೆ ಬರುವ ಮುನ್ಸೂಚನೆಯಾಗಿದ್ದು, ಈ ಲಕ್ಷಣಗಳನ್ನು ತಪ್ಪಿಯೂ ಕಡೆಗಣಿಸದಿರಿ.

ಬೆಳಗಿನ ಜಾವದಲ್ಲಿ ಮಾತ್ರ ಕಾಣಿಸುವ ಮಧುಮೇಹದ ಲಕ್ಷಣಗಳು
ಬೆಳಗಿನ ಜಾವದಲ್ಲಿ ಮಾತ್ರ ಕಾಣಿಸುವ ಮಧುಮೇಹದ ಲಕ್ಷಣಗಳು (PC: Canva)

ಭಾರತವನ್ನು ಮಧುಮೇಹದ ರಾಜಧಾನಿ ಎಂದು ಕರೆಯುತ್ತಾರೆ. ಯಾಕೆಂದರೆ ಇಲ್ಲಿ ದಿನೇ ದಿನೇ ಮಧುಮೇಹಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮಧುಮೇಹವು ಸಾಮಾನ್ಯ ಕಾಯಿಲೆಯಾಗಿದ್ದರೂ, ಇದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ರಕ್ತದಲ್ಲಿನ ಸಕ್ಕರೆಯ ಮಟ್ಟ ಏರಿಕೆಯಾಗುವುದರಿಂದ ಸಾಕಷ್ಟು ಸಮಸ್ಯೆಗಳಾಗುತ್ತವೆ.

ಅದರಲ್ಲೂ ಟೈಪ್ 2 ಡಯಾಬಿಟಿಸ್ ರೋಗಲಕ್ಷಣ ರಹಿತವಾಗಿರುತ್ತದೆ. ಆರಂಭಿಕ ಹಂತದಲ್ಲಿ ಈ ಲಕ್ಷಣಗಳು ಗೋಚರವಾಗದೇ ಇರಬಹುದು. ಆ ಕಾರಣದಿಂದ ಹಲವರಿಗೆ ತಮಗೆ ಮಧುಮೇಹ ಇರುವುದು ತಿಳಿಯುವುದಿಲ್ಲ. ಆದರೆ ವಿಶೇಷವಾಗಿ ಬೆಳಗಿನ ಜಾವದಲ್ಲಿ ಅಥವಾ ಮುಂಜಾವಿನ ಹೊತ್ತಿನಲ್ಲಿ ಮಾತ್ರ ಕಾಣಿಸಿಕೊಳ್ಳುವ ಈ ಕೆಲವು ಲಕ್ಷಣಗಳು ಮಧುಮೇಹವನ್ನು ಸೂಚಿಸಬಹುದು. ಈ ಲಕ್ಷಣಗಳನ್ನು ಕಡೆಗಣಿಸದೇ ಗಂಭೀರವಾಗಿ ತೆಗೆದುಕೊಂಡು ಸೂಕ್ತ ಚಿಕಿತ್ಸೆ ಪಡೆಯಬೇಕು. ಬೆಳಗಿನ ಹೊತ್ತು ಮಾತ್ರ ಕಾಣಿಸುವ ಮಧುಮೇಹದ ಕೆಲವು ಲಕ್ಷಣಗಳು ಯಾವುವು ನೋಡಿ.

ಬಾಯಾರಿಕೆ ಹೆಚ್ಚುವುದು

ಒಮ್ಮೆ ಎಚ್ಚರವಾದಾಗ ವಿಪರೀತ ಬಾಯಾರಿಕೆ ಅನಿಸಿದರೆ, ಅದು ಸಹಜ. ಆದರೆ ವೈದ್ಯರ ಪ್ರಕಾರ ನಿಮಗೆ ಪದೇ ಪದೇ ಬಾಯಾರಿಕೆಯಾದರೆ ಮತ್ತು ಸಾಮಾನ್ಯಕ್ಕಿಂತ ಹೆಚ್ಚು ಬಾಯಾರಿಕೆಯಾಗುತ್ತಿದ್ದರೆ ಅದು ಮಧುಮೇಹದ ಸಂಕೇತವಾಗಿರಬಹುದು. ಇದರ ಬಗ್ಗೆ ನೀವು ಗಮನ ಹರಿಸಬೇಕಾಗುತ್ತದೆ. ರಕ್ತದಿಂದ ಹೆಚ್ಚುವರಿ ಸಕ್ಕರೆ ಅಂಶವನ್ನು ತೆಗೆದುಹಾಕಲು ಆಗಾಗ್ಗೆ ಮೂತ್ರ ವಿಸರ್ಜನೆ ಮಾಡುವುದರಿಂದ ದೇಹವು ಹೆಚ್ಚುವರಿ ನೀರನ್ನು ಕಳೆದುಕೊಳ್ಳಬಹುದು ಮತ್ತು ನಿರ್ಜಲೀಕರಣಕ್ಕೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ.

ಬೆಳಗಿನ ಹೈಪರ್ಗ್ಲೈಸೀಮಿಯಾ

ರಕ್ತದಲ್ಲಿನ ಸಕ್ಕರೆ ಮಟ್ಟವು ಸಾಮಾನ್ಯವಾಗಿ ಬೆಳಗಿನ ಜಾವ ಅಂದರ ಬೆಳಿಗ್ಗೆ 4 ರಿಂದ 8 ಗಂಟೆಯ ನಡುವೆ ಗಮನಾರ್ಹ ಏರಿಕೆಯಾಗುತ್ತದೆ. ಇದನ್ನು ಬೆಳಗಿನ ಜಾವದ ವಿದ್ಯಮಾನ ಎಂದೂ ಕರೆಯಲ್ಪಡುವ ಬೆಳಗಿನ ಹೈಪರ್ಗ್ಲೈಸೀಮಿಯಾ ಎನ್ನಲಾಗುತ್ತದೆ. ವೈದ್ಯರ ಪ್ರಕಾರ ಇದು ದೇಹದ ನೈಸರ್ಗಿಕ ಸಿರ್ಕಾಡಿಯನ್ ಲಯದಿಂದಾಗಿ ಸಂಭವಿಸುತ್ತದೆ. ಇದು ಗ್ಲೂಕೋಸ್ ಮತ್ತು ಕಾರ್ಟಿಸೋಲ್‌ನಂತಹ ಹಾರ್ಮೋನುಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇವು ಇನ್ಸುಲಿನ್ ಪ್ರತಿರೋಧಕ್ಕೆ ಕಾರಣವಾಗುತ್ತವೆ, ಇದರಿಂದಾಗಿ ಎಚ್ಚರವಾದಾಗ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗುತ್ತದೆ.

ಪದೇ ಪದೇ ಮೂತ್ರ ಬರುವುದು

ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾದಾಗ ಮೂತ್ರಪಿಂಡಗಳು ಹೆಚ್ಚುವರಿ ಸಕ್ಕರೆಯನ್ನು ರಕ್ತದಿಂದ ಫಿಲ್ಟರ್ ಮಾಡುವ ಮೂಲಕ ತೆಗೆದುಹಾಕುತ್ತವೆ. ಇದು ಇದರಿಂದ ಪದೇ ಪದೇ ಬರುತ್ತದೆ. ಅದರಲ್ಲೂ ಬೆಳಗಿನ ಜಾವದಲ್ಲಿ ಇದು ಹೆಚ್ಚು ಕಾಣಿಸುತ್ತದೆ.

ಬಾಯಿ ಒಣಗುವಿಕೆ

ಬೆಳಿಗ್ಗೆ ಎದ್ದಾಗ ಬಾಯಿ ಒಣಗುತ್ತಿದ್ದರೆ, ಅದು ಮಧುಮೇಹದ ಸಂಭಾವ್ಯ ಲಕ್ಷಣವೂ ಆಗಿರಬಹುದು. ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆಯಾಗುವುದು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಏಕೆಂದರೆ ದೇಹವು ಹೆಚ್ಚುವರಿ ಗ್ಲೂಕೋಸ್ ಅನ್ನು ಹೊರಹಾಕಲು ಸಾಕಷ್ಟು ನೀರನ್ನು ಬಳಸುತ್ತದೆ. ಇದು ಬಾಯಿ ಒಣಗಲು ಕಾರಣವಾಗುತ್ತದೆ.

ದೃಷ್ಟಿ ಮಂದವಾಗುವುದು

ಬೆಳ್ಳಿಗ್ಗೆ ಎದ್ದಾಗ ಸ್ಪಷ್ಟವಾಗಿ ನೋಡಲು ಸಾಧ್ಯವಾಗದಿದ್ದರೆ ರಕ್ತದಲ್ಲಿನ ಹೆಚ್ಚುವರಿ ಸಕ್ಕರೆಯಿಂದಾಗಿ ಕಣ್ಣುಗಳಲ್ಲಿನ ಸಣ್ಣ ರಕ್ತನಾಳಗಳಿಗೆ ಹಾನಿ ಉಂಟಾಗಬಹುದು ಮತ್ತು ದೃಷ್ಟಿ ಮಂದವಾಗಬಹುದು ಎಂದು ವೈದ್ಯರು ಹೇಳುತ್ತಾರೆ. ಇದು ಒಂದು ಅಥವಾ ಎರಡೂ ಕಣ್ಣುಗಳಲ್ಲಿ ಕಂಡುಬರುತ್ತದೆ.

ರಕ್ತದಲ್ಲಿನ ಸಕ್ಕರೆಯ ಮಟ್ಟ ಏರಿಕೆಯಾದರೆ ಕಣ್ಣಿನ ಮಸೂರದ ಊತಕ್ಕೂ ಕಾರಣವಾಗುತ್ತದೆ, ಇದು ದೃಷ್ಟಿ ಮಂದವಾಗಲು ಕಾರಣವಾಗುತ್ತದೆ. ಆದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾದಾಗ ಅದು ಸುಧಾರಿಸುವ ನಿರೀಕ್ಷೆಯಿದೆ. ಮಧುಮೇಹ ಹೊಂದಿರುವ ವ್ಯಕ್ತಿಯು ಚಿಕಿತ್ಸೆ ಪಡೆಯದಿದ್ದರೆ, ಈ ರಕ್ತನಾಳಗಳಿಗೆ ತೀವ್ರ ಹಾನಿಯಾಗಬಹುದು ಮತ್ತು ಅಂತಿಮವಾಗಿ ಶಾಶ್ವತ ದೃಷ್ಟಿ ನಷ್ಟ ಸಂಭವಿಸಬಹುದು.

ಕೈ, ಕಾಲುಗಳಲ್ಲಿ ಜುಮ್ಮೆನಿಸುವಿಕೆ ಮತ್ತು ಮರಗಟ್ಟುವಿಕೆ

ರಕ್ತದಲ್ಲಿ ಸಕ್ಕರೆ ಮಟ್ಟ ಏರಿಕೆಯಾದಾಗ ರಕ್ತ ಪರಿಚಲನೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಇದರಿಂದ ನಿಮ್ಮ ನರಗಳು ಹಾನಿಗೊಳಗಾಗಿವೆ ಎಂದು ಭಾವಿಸಬಹುದು. ಟೈಪ್ 2 ಮಧುಮೇಹ ಇರುವವರಲ್ಲಿ, ಇದು ಕೈ ಮತ್ತು ಕಾಲುಗಳಲ್ಲಿ ನೋವು ಅಥವಾ ಜುಮ್ಮೆನಿಸುವಿಕೆ ಅಥವಾ ಮರಗಟ್ಟುವಿಕೆಯ ಲಕ್ಷಣಗಳು ಕಾಣಿಸಬಹುದು. ಈ ಸ್ಥಿತಿಯು ಕಾಲಾನಂತರದಲ್ಲಿ ಹದಗೆಡುತ್ತದೆ ಮತ್ತು ಮಧುಮೇಹಕ್ಕೆ ಚಿಕಿತ್ಸೆ ಪಡೆಯದಿದ್ದರೆ ಹೆಚ್ಚು ಗಂಭೀರ ತೊಡಕುಗಳಿಗೆ ಕಾರಣವಾಗುತ್ತದೆ.

ಆರಂಭಿಕ ರೋಗನಿರ್ಣಯದ ಪ್ರಾಮುಖ್ಯವೇನು?

ಟೈಪ್ 2 ಮಧುಮೇಹದ ಆರಂಭಿಕ ಚಿಹ್ನೆಗಳನ್ನು ಗುರುತಿಸುವುದು ಮುಖ್ಯ ಎಂದು ವೈದ್ಯರು ಹೇಳುತ್ತಾರೆ. ಇದು ನಿಮಗೆ ರೋಗನಿರ್ಣಯ ಮಾಡಲು ಹಾಗೂ ಬೇಗ ಚಿಕಿತ್ಸೆ ಪಡೆಯಲು ಅನುವು ಮಾಡಿಕೊಡುತ್ತದೆ. ಸೂಕ್ತ ಚಿಕಿತ್ಸೆಯನ್ನು ಪಡೆಯುವುದು, ಜೀವನಶೈಲಿಯ ಬದಲಾವಣೆಗಳನ್ನು ಮಾಡುವುದು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ನಿಮ್ಮ ಆರೋಗ್ಯ ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸಬಹುದು. ಇದರಿಂದ ಜೀವಕ್ಕೆ ಅಪಾಯವಾಗುವುದನ್ನು ತಡೆಯಬಹುದು.

ನಿರಂತರವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆಯಾಗುತ್ತಿದ್ದರೆ, ಚಿಕಿತ್ಸೆ ಪಡೆಯದೇ ಬಿಟ್ಟರೆ ಈ ಕೆಳಗಿನ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು.

Whats_app_banner