ಡಯಾಬಿಟಿಸ್‌ನಿಂದ ಕ್ಯಾನ್ಸರ್‌ವರೆಗೆ; ಕಣ್ಣಿನಲ್ಲೇ ಗೋಚರವಾಗುತ್ತೆ ಈ ಆರೋಗ್ಯ ಸಮಸ್ಯೆಗಳ ಆರಂಭಿಕ ಲಕ್ಷಣ, ನಿರ್ಲಕ್ಷ್ಯ ಮಾಡದಿರಿ
ಕಣ್ಣು ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದು. ಕಣ್ಣಿನಿಂದ ಇಡೀ ಜಗತ್ತನ್ನು ನೋಡಬಹುದು. ಆದರೆ ಈ ಕಣ್ಣು ನಮ್ಮ ಆರೋಗ್ಯ ಗುಟ್ಟನ್ನೂ ಬಿಚ್ಚಿಡುತ್ತದೆ ಎಂಬುದು ಸುಳ್ಳಲ್ಲ. ಮಧುಮೇಹ, ಅಧಿಕ ರಕ್ತದೊತ್ತಡ, ಕ್ಯಾನ್ಸರ್‌ನಂತಹ ಗಂಭೀರ ಆರೋಗ್ಯ ಸಮಸ್ಯೆಗಳ ಆರಂಭಿಕ ಲಕ್ಷಣಗಳನ್ನು ಕಣ್ಣಿನಿಂದಲೇ ತಿಳಿಯಬಹುದು.
ಸದ್ಯ ಮಧುಮೇಹ, ಕ್ಯಾನ್ಸರ್ ಹಾಗೂ ಅಧಿಕ ರಕ್ತದೊತ್ತಡ ಸಮಸ್ಯೆಗಳು ಮಾರಕವಾಗಿ ಜಗತ್ತನ್ನು ಕಾಡುತ್ತಿವೆ. ಒಂದು ಅಂದಾಜಿನ ಪ್ರಕಾರ, 2030ರ ವೇಳೆಗೆ ಮಧುಮೇಹವು ಪ್ರಸ್ತುತ ಜನಸಂಖ್ಯೆಯ ಸುಮಾರು ಎಂಟು ಪ್ರತಿಶತದಷ್ಟು ಜನರ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ 30 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ವರ್ಷದಲ್ಲಿ ಕನಿಷ್ಠ ಮೂರು ಬಾರಿ ಡಯಾಬಿಟಿಸ್‌ನಿಂದ ಬಳಲುತ್ತಿದ್ದೀರೋ ಇಲ್ಲವೋ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಪರೀಕ್ಷೆಗೆ ಒಳಗಾಗುವುದು ತುಂಬಾ ಅವಶ್ಯ.
ಮಧುಮೇಹವು ಪ್ರಾರಂಭವಾದ 6 ರಿಂದ 13 ವರ್ಷಗಳ ನಂತರ ಹೆಚ್ಚಾಗಿ ರೋಗನಿರ್ಣಯಗೊಳ್ಳುತ್ತದೆ. ಇದರಿಂದಾಗಿ ಪರಿಸ್ಥಿತಿ ಹದಗೆಡುತ್ತಿದೆ. ಆದರೆ ಮಧುಮೇಹದಿಂದ ಹಿಡಿದು ಕ್ಯಾನ್ಸರ್‌ವರೆಗಿನ ಕೆಲವು ಕಾಯಿಲೆಗಳನ್ನು ಕಣ್ಣಿನಲ್ಲಿ ಕಾಣುವ ಲಕ್ಷಣಗಳಿಂದ ಪತ್ತೆ ಹಚ್ಚಬಹುದು ಎಂದು ಅಧ್ಯಯನಗಳು ಹೇಳುತ್ತವೆ. ಮಧುಮೇಹ ಕಣ್ಣಿನ ದೃಷ್ಟಿಯ ಪರಿಣಾಮ ಬೀರುತ್ತದೆ. ನಿಮ್ಮ ಕಣ್ಣುಗಳು ಬಣ್ಣಗಳನ್ನು ನೋಡಲು ಹೆಣಗಾಡುತ್ತಿದ್ದರೆ ಮತ್ತು ನಿಮ್ಮ ದೃಷ್ಟಿ ಸಾಂದರ್ಭಿಕವಾಗಿ ಮಸುಕಾಗಿದ್ದರೆ ಅದನ್ನು ಲಘುವಾಗಿ ತೆಗೆದುಕೊಳ್ಳಬೇಡಿ.
ಹೃದ್ರೋಗವನ್ನು ತಿಳಿಸುತ್ತದೆ
ನಿಮ್ಮ ಕಣ್ಣುಗಳು ಮಧುಮೇಹವನ್ನು ಮಾತ್ರವಲ್ಲದೆ ಅಧಿಕ ರಕ್ತದೊತ್ತಡ ಮತ್ತು ದೇಹದಲ್ಲಿನ ಅಧಿಕ ಕೊಲೆಸ್ಟ್ರಾಲ್ ಬಗ್ಗೆಯೂ ತಿಳಿಸುತ್ತದೆ. ಕಣ್ಣುಗಳಲ್ಲಿ ರಕ್ತನಾಳಗಳು ಸ್ಪಷ್ಟವಾಗಿ ಗೋಚರಿಸಿದರೆ ಅದನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಕಣ್ಣಿನಲ್ಲಿ ರಕ್ತನಾಳಗಳ ಬಣ್ಣ ಕೆಂಪಾಗಿದ್ದರೆ ಹೃದಯದ ಆರೋಗ್ಯವು ಅಪಾಯದಲ್ಲಿದೆ ಎಂಬುದರ ಸಂಕೇತವಾಗಿದೆ.
ಅಧಿಕ ರಕ್ತದೊತ್ತಡ
ಅಧಿಕ ರಕ್ತದೊತ್ತಡವನ್ನು ‘ಸೈಲೆಂಟ್ ಕಿಲ್ಲರ್‘ ಎಂದು ಕರೆಯಲಾಗುತ್ತದೆ. ಇದು ಯಾವಾಗ ಪ್ರಾರಂಭವಾಗುತ್ತದೆ ಎಂದು ಹೇಳುವುದು ಕಷ್ಟ. ಅಧಿಕ ರಕ್ತದೊತ್ತಡವು ಕಣ್ಣಿನ ರಕ್ತನಾಳಗಳ ಸಂಕೋಚನಕ್ಕೆ ಕಾರಣವಾಗುತ್ತದೆ. ರೆಟಿನಾಕ್ಕೆ ಕೂಡ ಹಾನಿಗೊಳಗಾಗಬಹುದು. ನೀವು ದೃಷ್ಟಿಯಲ್ಲಿ ಯಾವುದೇ ವ್ಯತ್ಯಾಸವನ್ನು ಗಮನಿಸಿದರೆ, ತಕ್ಷಣವೇ ಅಧಿಕ ರಕ್ತದೊತ್ತಡವನ್ನು ಪರೀಕ್ಷಿಸಿ. ಅಂತೆಯೇ, ಕಾರ್ನಿಯಾದ ಹಳದಿ ತೇಪೆಗಳು (ಕ್ಸಾಂಥೆಲಾಸ್ಮಾ) ಹೆಚ್ಚಿನ ಕೊಲೆಸ್ಟ್ರಾಲ್‌ನೊಂದಿಗೆ ಕಣ್ಣುಗಳ ಸುತ್ತಲೂ ಕಾಣಿಸಿಕೊಳ್ಳುತ್ತವೆ. ನಿಯಮಿತ ಕಣ್ಣಿನ ಪರೀಕ್ಷೆಗಳ ಮೂಲಕ ಈ ಸಮಸ್ಯೆಗಳನ್ನು ಮೊದಲೇ ಕಂಡುಹಿಡಿಯಬಹುದು.
ಗ್ಲುಕೋಮಾ
ಇದು ಕಣ್ಣಿನ ಮೇಲಿನ ಅತಿಯಾದ ಒತ್ತಡದಿಂದ ಉಂಟಾಗುತ್ತದೆ. ಇದು ಕ್ರಮೇಣ ನರಗಳನ್ನು ಹಾನಿಗೊಳಿಸುತ್ತದೆ ಮತ್ತು ದೃಷ್ಟಿ ಕಳೆದುಕೊಳ್ಳುವಂತೆ ಮಾಡುತ್ತದೆ. ಕಡಿಮೆ ರಕ್ತದೊತ್ತಡ ಮತ್ತು ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಮುಂತಾದ ಕಾಯಿಲೆಗಳು ಗ್ಲುಕೋಮಾಗೆ ಕಾರಣವಾಗಬಹುದು. ನರ ಕಣ್ಣಿನ ನರಗಳ ಹಾನಿಗೆ ಕಾರಣವಾಗುತ್ತದೆ.
ಕ್ಯಾನ್ಸರ್ ಪತ್ತೆ ಮಾಡುವುದು ಹೇಗೆ?
ಕ್ಯಾನ್ಸರ್ ಇರುವವರು ರೆಟಿನೊಬ್ಲಾಸ್ಟೊಮಾದಂತಹ ಕಣ್ಣಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದು ಶ್ವಾಸಕೋಶ ಮತ್ತು ಯಕೃತ್ತಿನಂತಹ ಇತರ ಅಂಗಗಳಿಗೆ ಹರಡುತ್ತದೆ. ಅನೇಕ ರೀತಿಯ ಕ್ಯಾನ್ಸರ್ ಬೆಳವಣಿಗೆಯಾಗುವ ಸಾಧ್ಯತೆಯಿದೆ. ಅದರಲ್ಲೂ ಕೊಲೊನ್ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ರೋಗಲಕ್ಷಣಗಳು ಅಸಹಜ ಕಣ್ಣಿನ ಚಲನೆಗಳು, ಓದುವಲ್ಲಿ ತೊಂದರೆ, ಎರಡೆರಡಾಗಿ ಕಾಣಿಸುವುದು ಮತ್ತು ಆಗಾಗ್ಗೆ ಕಣ್ಣುಗಳು ಕೆಂಪಾಗುವುದು ಇಂತಹ ಲಕ್ಷಣಗಳನ್ನು ಹೊಂದಿರಬಹುದು.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)
–––
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope