ಸಕ್ಕರೆ ಕಾಯಿಲೆ ಇರುವವರು ಊಟಕ್ಕೆ ಅರ್ಧ ಗಂಟೆ ಮೊದಲು ಇದನ್ನ ತಿನ್ಬೇಕು, ರಕ್ತದಲ್ಲಿನ ಸಕ್ಕರೆಯ ಮಟ್ಟ ಏರಿಕೆಯಾಗುತ್ತೆ ಅನ್ನೋ ಚಿಂತೆಯೇ ಇರೋಲ್ಲ
ಕನ್ನಡ ಸುದ್ದಿ  /  ಜೀವನಶೈಲಿ  /  ಸಕ್ಕರೆ ಕಾಯಿಲೆ ಇರುವವರು ಊಟಕ್ಕೆ ಅರ್ಧ ಗಂಟೆ ಮೊದಲು ಇದನ್ನ ತಿನ್ಬೇಕು, ರಕ್ತದಲ್ಲಿನ ಸಕ್ಕರೆಯ ಮಟ್ಟ ಏರಿಕೆಯಾಗುತ್ತೆ ಅನ್ನೋ ಚಿಂತೆಯೇ ಇರೋಲ್ಲ

ಸಕ್ಕರೆ ಕಾಯಿಲೆ ಇರುವವರು ಊಟಕ್ಕೆ ಅರ್ಧ ಗಂಟೆ ಮೊದಲು ಇದನ್ನ ತಿನ್ಬೇಕು, ರಕ್ತದಲ್ಲಿನ ಸಕ್ಕರೆಯ ಮಟ್ಟ ಏರಿಕೆಯಾಗುತ್ತೆ ಅನ್ನೋ ಚಿಂತೆಯೇ ಇರೋಲ್ಲ

ಮಧುಮೇಹಿಗಳು ತಮ್ಮ ಆಹಾರದ ವಿಚಾರದಲ್ಲಿ ಸಾಕಷ್ಟು ಕಟ್ಟುನಿಟ್ಟಾಗಿರಬೇಕು. ಯಾಕೆಂದರೆ ತಿನ್ನುವ ವಿಚಾರದಲ್ಲಿ ಕೊಂಚ ಎಡವಿದ್ರೂ ರಕ್ತದಲ್ಲಿನ ಸಕ್ಕರೆಯ ಮಟ್ಟ ಏರಿಕೆಯಾಗಬಹುದು. ಆದರೆ ಎಂದಿಗೂ ರಕ್ತದಲ್ಲಿ ಸಕ್ಕರೆಯ ಮಟ್ಟ ಏರಿಕೆಯಾಗಬಾರದು ಅಂದ್ರೆ ಊಟಕ್ಕೂ ಮುನ್ನ ಇದನ್ನ ಸೇವಿಸುವ ಅಭ್ಯಾಸ ಮಾಡಬೇಕು.

ಮಧುಮೇಹ ನಿಯಂತ್ರಣ
ಮಧುಮೇಹ ನಿಯಂತ್ರಣ

ಮಧುಮೇಹ ಮತ್ತು ಪ್ರಿ-ಡಯಾಬಿಟಿಸ್ ಇರುವವರು ರಕ್ತದಲ್ಲಿ ಸಕ್ಕರೆಯ ಮಟ್ಟ ಏರಿಕೆಯಾಗುವುದನ್ನು ತಪ್ಪಿಸಲು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಮಧುಮೇಹಿಗಳು ಆಹಾರ ಸೇವಿಸಿದಾಗ, ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ಹೆಚ್ಚಾಗುತ್ತದೆ. ಅಂತಹ ಬೆಳವಣಿಗೆಯನ್ನು ತಪ್ಪಿಸಲು ಊಟಕ್ಕೂ ಮುನ್ನ ಒಂದು ವಸ್ತುವನ್ನು ಸೇವಿಸಬೇಕು. ಹಾಗಾದರೆ ಏನದು ಅಂತ ಕೇಳ್ತೀರಾ ಮುಂದೆ ಓದಿ.

ಮಧುಮೇಹಿಗಳು ಸಾಮಾನ್ಯವಾಗಿ ತಿನ್ನುವ ವಿಚಾರದಲ್ಲಿ ಸಾಕಷ್ಟು ಕಟ್ಟುನಿಟ್ಟಿನ ಕ್ರಮ ಪಾಲಿಸುತ್ತಾರೆ, ಯಾಕೆಂದರೆ ಅವರು ತಿನ್ನುವ ಆಹಾರವು ರಕ್ತದಲ್ಲಿನ ಸಕ್ಕರೆಯ ಪ್ರಮಾಣದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಇತ್ತೀಚಿನದ ಅಧ್ಯಯನದ ಪ್ರಕಾರ ಬಾದಾಮಿ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ನಿಯಂತ್ರಣದಲ್ಲಿ ಇರುತ್ತದೆ ಎಂದು ಹೇಳಲಾಗುತ್ತಿದೆ. 

ಮಧುಮೇಹ ಮತ್ತು ಬಾದಾಮಿ 

ಮಧುಮೇಹಿಗಳು ಊಟಕ್ಕೂ ಮುನ್ನ ಬಾದಾಮಿಯನ್ನು ತಿನ್ನಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಮೊದಲೇ ಬಾದಾಮಿಯನ್ನು ನೆನೆಸಿಟ್ಟುಕೊಳ್ಳಬೇಕು. ಊಟ ಮಾಡಲು ಅರ್ಧ ಗಂಟೆ ಇರುವಾಗ ಬಾದಾಮಿ ಸಿಪ್ಪೆ ತೆಗೆದು ತಿನ್ನಬೇಕು. ಈ ರೀತಿ ತಿಂದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುವುದನ್ನು ತಡೆಯಬಹುದು ಎಂದು ಹೊಸ ಅಧ್ಯಯನವೊಂದು ಹೇಳಿದೆ.

ಬಾದಾಮಿಯು ವಿಟಮಿನ್ ಇ ಮತ್ತು ಮ್ಯಾಂಗನೀಸ್ ಜೊತೆಗೆ ಅನೇಕ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ. ಇದು ಪ್ರೊಟೀನ್, ಫೈಬರ್, ತಾಮ್ರ, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಅನ್ನು ಸಹ ಒಳಗೊಂಡಿದೆ. ಇವೆಲ್ಲವೂ ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ. ನಿಮ್ಮ ಊಟಕ್ಕೂ ಮೊದಲು ಬಾದಾಮಿ ತಿನ್ನುವುದು ಇನ್ಸುಲಿನ್ ಬಿಡುಗಡೆಗೆ ಸಹಾಯ ಮಾಡುತ್ತದೆ. ಬಾದಾಮಿಯಲ್ಲಿರುವ ನಾರಿನಾಂಶವು ಗ್ಲೂಕೋಸ್ ಹೀರಿಕೊಳ್ಳುವುದನ್ನು ತಡೆಯುತ್ತದೆ. ಬಾದಾಮಿಯಲ್ಲಿನ ಉತ್ತಮ ಕೊಬ್ಬಿನಾಂಶವು ಗ್ಲೂಕೋಸ್ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ.

ಮೊದಲೇ ಹೇಳಿದಂತೆ ಇದರಲ್ಲಿ ಸತು ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿರುವ ಕಾರಣ ಅಡಿಪೋಸ್ ಅಂಗಾಂಶದಲ್ಲಿ ಟೈರೋಸಿನ್ ಕೈನೇಸ್ ಗ್ರಾಹಕವನ್ನು ಉತ್ತೇಜಿಸುತ್ತದೆ. ಇದು ಇನ್ಸುಲಿನ್ ಸೂಕ್ಷ್ಮತೆಯನ್ನು ಸಹ ಸುಧಾರಿಸುತ್ತದೆ. ವಾಸ್ತವವಾಗಿ, ಮಧುಮೇಹ ರೋಗಿಗಳಲ್ಲಿ ಮೆಗ್ನೀಸಿಯಮ್ ಕೊರತೆಯು ಸಾಮಾನ್ಯವಾಗಿದೆ. ಬಾದಾಮಿಯಲ್ಲಿರುವ ಮೆಗ್ನೀಸಿಯಮ್ ದೇಹವನ್ನು ಪ್ರವೇಶಿಸಿದಾಗ, ಅದು ಅವುಗಳ ಇನ್ಸುಲಿನ್ ಸಂವೇದನೆಯನ್ನು ಹೆಚ್ಚಿಸುತ್ತದೆ.

ಮಧುಮೇಹಿಗಳು ದಿನಕ್ಕೆ ಎಷ್ಟು ಬಾದಾಮಿ ತಿನ್ನಬಹುದು 

ಮಧುಮೇಹಿಗಳು ದಿನಕ್ಕೆ ನಾಲ್ಕು ನೆನೆಸಿದ ಬಾದಾಮಿ ತಿನ್ನಬೇಕು. ಟೈಪ್ 2 ಡಯಾಬಿಟಿಸ್ ಇರುವವರಿಗೆ ಹೃದಯದ ತೊಂದರೆಗಳು ಬರುವ ಸಾಧ್ಯತೆ ಹೆಚ್ಚು. ಬಾದಾಮಿಯಲ್ಲಿ ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳಿವೆ. ಬೆಳಗಿನ ಉಪಾಹಾರದಲ್ಲಿ ಅವುಗಳನ್ನು ಸೇರಿಸುವುದು ಇನ್ನೂ ಉತ್ತಮವಾಗಿದೆ. ಪ್ರತಿದಿನ ರಾತ್ರಿ ಊಟಕ್ಕೆ ಅರ್ಧ ಗಂಟೆ ಮೊದಲು ಮೂರು ಬಾದಾಮಿ ತಿನ್ನುವುದನ್ನು ರೂಢಿ ಮಾಡಿಕೊಳ್ಳಿ. ಮಧುಮೇಹಿಗಳಿಗೆ ಇದು ತುಂಬಾ ಪ್ರಯೋಜನಕಾರಿ.

ಪ್ರತಿದಿನ ಬಾದಾಮಿ ತಿನ್ನುವುದರಿಂದ ಮೆದುಳು ಆರೋಗ್ಯವಾಗಿರುತ್ತದೆ. ಬಾದಾಮಿಯಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ. ಇದು ಮೆದುಳನ್ನು ಮಾತ್ರವಲ್ಲದೆ ತ್ವಚೆಯನ್ನೂ ಕಾಂತಿಯುತವಾಗಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿ ಇಡಲಾಗುತ್ತದೆ.

ಪ್ರತಿದಿನ ನಾಲ್ಕು ನೆನೆಸಿದ ಬಾದಾಮಿಯನ್ನು ತಿನ್ನುವುದರಿಂದ ತೂಕವನ್ನು ತ್ವರಿತವಾಗಿ ಕಳೆದುಕೊಳ್ಳಬಹುದು. ಇದರಲ್ಲಿರುವ ಕಾರ್ಬೋಹೈಡ್ರೇಟ್‌ಗಳು ಮತ್ತು ಪ್ರೊಟೀನ್‌ಗಳು ಹೊಟ್ಟೆ ತುಂಬುವಂತೆ ಮಾಡುತ್ತದೆ. ಆದ್ದರಿಂದ ನೀವು ಇತರ ಆಹಾರಗಳನ್ನು ಕಡಿಮೆ ತಿನ್ನುತ್ತೀರಿ.

ಇದು ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒಳಗೊಂಡಿದೆ. ವಿಟಮಿನ್ ಇ, ಮೆಗ್ನೀಸಿಯಮ್ ಮತ್ತು ಫೈಬರ್ ಸಮೃದ್ಧವಾಗಿದೆ. ಇವೆಲ್ಲವೂ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಮಧುಮೇಹ ಇರುವವರು ಬಾದಾಮಿಯನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನವನ್ನು ಆಧರಿಸಿದ್ದು, ಈ ಮಾಹಿತಿಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ನೀವು ತಪ್ಪದೇ ತಜ್ಞರನ್ನು ಸಂಪರ್ಕಿಸಬೇಕು.)

Whats_app_banner