Weight Loss: ಪ್ರತಿದಿನ 5 ನಿಮಿಷ ಈ ಸರಳ ವ್ಯಾಯಾಮ ಮಾಡಿ; ತೂಕ ಇಳಿಕೆ ಜೊತೆಗೆ ಈ 5 ಪ್ರಯೋಜನಗಳನ್ನು ಪಡೆಯಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  Weight Loss: ಪ್ರತಿದಿನ 5 ನಿಮಿಷ ಈ ಸರಳ ವ್ಯಾಯಾಮ ಮಾಡಿ; ತೂಕ ಇಳಿಕೆ ಜೊತೆಗೆ ಈ 5 ಪ್ರಯೋಜನಗಳನ್ನು ಪಡೆಯಿರಿ

Weight Loss: ಪ್ರತಿದಿನ 5 ನಿಮಿಷ ಈ ಸರಳ ವ್ಯಾಯಾಮ ಮಾಡಿ; ತೂಕ ಇಳಿಕೆ ಜೊತೆಗೆ ಈ 5 ಪ್ರಯೋಜನಗಳನ್ನು ಪಡೆಯಿರಿ

ಫಿಟ್ನೆಸ್ ಗಾಗಿ ಕೆಲವು ಸರಳ ವ್ಯಾಯಾಮಗಳು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ನೆರವಾಗುತ್ತವೆ. ಇವು ತೂಕ ನಷ್ಟದ ಜೊತೆಗೆ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತವೆ. ಗಮನಾರ್ಹ ಪ್ರಯೋಜನಗಳನ್ನು ನೀಡುವ ಸರಳ ವ್ಯಾಯಾಮಗಳು ಮತ್ತು ಅವುಗಳನ್ನು ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

ಪ್ರತಿದಿನ ದಿನ 5 ನಿಮಿಷ ವ್ಯಾಯಾಮ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿಯಿರಿ
ಪ್ರತಿದಿನ ದಿನ 5 ನಿಮಿಷ ವ್ಯಾಯಾಮ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿಯಿರಿ

ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ದೈಹಿಕ ಸಾಮರ್ಥ್ಯವನ್ನು ಸುಧಾರಿಸಬಹುದು. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಬಹುದು. ನಿಯಮಿತ ವ್ಯಾಯಾಮದಿಂದ ಇನ್ನೂ ಅನೇಕ ಪ್ರಯೋಜನಗಳಿವೆ. ಇಲ್ಲಿ ನೀಡಲಾಗಿರುವ ವ್ಯಾಯಾಮಗಳನ್ನು ಮಾಡಲು ಸುಲಭ, ಉತ್ತಮ ಪ್ರಯೋಜನಗಳನ್ನು ನೀಡುತ್ತದೆ. ಅಂತಹ ಒಂದು ವ್ಯಾಯಾಮ 'ವಾಲ್ ಸಿಟ್'. ಕನ್ನಡದಲ್ಲಿ ಇದನ್ನು ಗೋಡೆ ಕುರ್ಚಿ ಎಂದು ಕರೆಯಲಾಗುತ್ತದೆ. ಇದು ಮಕ್ಕಳಿಗೆ ಶಿಕ್ಷೆಯಾಗಿ ಜನಪ್ರಿಯವಾಯಿತು. ಈ ವಾಲ್ ಸಿಟ್ ವ್ಯಾಯಾಮವನ್ನು ಪ್ರತಿದಿನ ಕನಿಷ್ಠ 5 ನಿಮಿಷಗಳ ಕಾಲ ಮಾಡುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು.

ವಾಲ್ ಸಿಟ್ ವ್ಯಾಯಾಮವೆಂದರೆ ನಾವು ಖುರ್ಚಿಯಲ್ಲಿ ಕುಳಿತುಕೊಳ್ಳುವ ರೀತಿ ಗೋಡೆಗೆ ಒರಗಿಕೊಂಡು ಅರ್ಧ ಮೊಣಕಾಲಿನಲ್ಲಿ ಕುಳಿತುಕೊಳ್ಳುವುದು. ಹೀಗೆ ಮಾಡುವುದರಿಂದ ದೇಹದಲ್ಲಿನ ಕೊಬ್ಬನ್ನು ಸುಡಲು ಇದು ಉಪಯುಕ್ತವಾಗಿದೆ. ಪ್ಲಾಂಕ್ ಮತ್ತು ಸ್ಕ್ವಾಟ್ಸ್ ಗಳಂತೆಯೇ ಉತ್ತಮ ಫಿಟ್‌ನೆಸ್ ನೀಡುತ್ತದೆ. ಇದಕ್ಕಾಗಿಯೇ ಈ ಸರಳ ವ್ಯಾಯಾಮವನ್ನು ನಿಯಮಿತವಾಗಿ ಮಾಡಬೇಕು. ವಾಲ್ ಸಿಟ್ ವ್ಯಾಯಾಮದ ಪ್ರಯೋಜನಗಳು ಇವು.

ತೂಕ ಇಳಿಸಲು ನೆರವಾಗುತ್ತೆ

ತೂಕ ಇಳಿಸಿಕೊಳ್ಳಲು ಬಯಸುವವರಿಗೆ ವಾಲ್ ಸಿಟ್ ವ್ಯಾಯಾಮ ತುಂಬಾ ಪ್ರಯೋಜನಕಾರಿಯಾಗಿದೆ. ಈ ವ್ಯಾಯಾಮವು ಹೆಚ್ಚಿನ ಕ್ಯಾಲೊರಿಗಳನ್ನು ಸುಡುತ್ತದೆ. ಗೋಡೆಗೆ ಬೆನ್ನು ಇಟ್ಟು ಅರ್ಧ ಮೊಣಕಾಲಿನಲ್ಲಿ ಕುಳಿತುಕೊಳ್ಳುವ ಸಮಯದಲ್ಲಿ ಸ್ನಾಯುಗಳು ಬಿಗಿಯಾಗಿರುತ್ತವೆ. ಇದು ಹೆಚ್ಚಿನ ಕ್ಯಾಲೊರಿಗಳನ್ನು ಸುಡುತ್ತದೆ. ಅಲ್ಲದೆ, ಗೋಡೆಯ ಕುರ್ಚಿಯ ಸಮಯದಲ್ಲಿ ಹೃದಯ ಬಡಿತ ಕೂಡ ವೇಗವಾಗಿರುತ್ತದೆ. ಇದು ಕ್ಯಾಲೊರಿಗಳನ್ನು ಸುಡುವಲ್ಲಿ ಸಹ ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಪ್ರತಿದಿನ ವಾಲ್ ಸಿಟ್ ಮಾಡುವುದರಿಂದ ತೂಕ ಇಳಿಸಲು ಸಹಾಯ ಮಾಡುತ್ತದೆ.

ಸ್ನಾಯುಗಳ ಶಕ್ತಿ ಹೆಚ್ಚಾಗುತ್ತೆ

ವಾಲ್ ಸಿಟ್ಟಿಂಗ್ ಸಹ ಸ್ನಾಯುಗಳ ಬಲವನ್ನು ಹೆಚ್ಚಿಸುತ್ತದೆ. ಈ ವ್ಯಾಯಾಮವು ಕಾಲುಗಳು ಮತ್ತು ಸೊಂಟ ಸೇರಿದಂತೆ ದೇಹದ ವಿವಿಧ ಭಾಗಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಇದು ಸ್ನಾಯುವಿನ ಬಲವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ದೇಹದ ಸ್ಥಿರತೆಯೂ ಸುಧಾರಿಸುತ್ತದೆ. ಕೆಳಗಿನ ದೇಹದ ಶಕ್ತಿಯನ್ನು ಹೆಚ್ಚಿಸಲು ಈ ವ್ಯಾಯಾಮ ವಿಶೇಷವಾಗಿ ಉಪಯುಕ್ತವಾಗಿದೆ. ಕೊಬ್ಬನ್ನು ಕರಗಿಸಲು ನೆರವಾಗುತ್ತದೆ.

ದೇಹ ಸರಳಗೊಳ್ಳುತ್ತೆ

ನಿಯಮಿತವಾಗಿ ವಾಲ್ ಸಿಟ್ ಮಾಡುವುದರಿಂದ ದೇಹದ ನಮ್ಯತೆ ಹೆಚ್ಚುತ್ತದೆ. ಸಮತೋಲನವೂ ಸುಧಾರಿಸುತ್ತದೆ. ಈ ವ್ಯಾಯಾಮದಲ್ಲಿ ಎರಡೂ ಕಾಲುಗಳ ಮೇಲೆ ಸಂಪೂರ್ಣ ಒತ್ತಡವಿರುತ್ತದೆ. ಇದು ಸಮತೋಲನವನ್ನು ಸುಧಾರಿಸುತ್ತದೆ. ದೇಹದ ಭಂಗಿಯೂ ಸುಧಾರಿಸುತ್ತದೆ. ಈ ವ್ಯಾಯಾಮವು ದೇಹವನ್ನು ಹಗುರಗೊಳಿಸುತ್ತೆ.

ಹೊಟ್ಟೆಯ ಸುತ್ತಲಿನ ಸ್ನಾಯುಗಳಿಗೆ ಪ್ರಯೋಜನ

ವಾಲ್ ಸಿಟ್ ವ್ಯಾಯಾಮವು ಬೆನ್ನುಮೂಳೆ ಮತ್ತು ಕಿಬ್ಬೊಟ್ಟೆಯನ್ನು ಒಳಗೊಂಡಂತೆ ಕೋರ್ ಸ್ಥಿರತೆಯನ್ನು ಹೆಚ್ಚಿಸುತ್ತದೆ. ಗೋಡೆಯ ವಿರುದ್ಧ ಕುಳಿತುಕೊಳ್ಳುವುದರಿಂದ ಹೊಟ್ಟೆಯ ಮೇಲೆ ಒತ್ತಡ ಬೀಳುತ್ತದೆ. ಇದು ಹೊಟ್ಟೆಯ ಸುತ್ತಲಿನ ಸ್ನಾಯುಗಳಿಗೆ ಪ್ರಯೋಜನವನ್ನು ನೀಡುತ್ತದೆ.

ಏಕಾಗ್ರತೆ ಹೆಚ್ಚುತ್ತೆ

ನಿಯಮಿತವಾಗಿ ವಾಲ್ ಸಿಟ್ ಮಾಡುವುದರಿಂದ ಏಕಾಗ್ರತೆ ಹೆಚ್ಚುತ್ತದೆ. ಈ ವ್ಯಾಯಾಮದಲ್ಲಿ ದೀರ್ಘಕಾಲ ಕುಳಿತುಕೊಳ್ಳಲು ಏಕಾಗ್ರತೆ ಮತ್ತು ಸಾಮರ್ಥ್ಯದ ಅಗತ್ಯವಿರುತ್ತದೆ. ಇದನ್ನು ಪ್ರತಿದಿನ ಮಾಡುವುದರಿಂದ ಗಮನವು ಸುಧಾರಿಸುತ್ತದೆ. ಈ ವಾಲ್ ಸಿಟ್ ವ್ಯಾಯಾಮವು ಇತರ ವಿಷಯಗಳಲ್ಲಿ ಏಕಾಗ್ರತೆಯನ್ನು ಸುಧಾರಿಸುತ್ತದೆ.

ವಾಲ್ ಸಿಟ್ ಮಾಡುವುದು ಹೇಗೆ?

  • ಮೊದಲು ಗೋಡೆಗೆ ಒರಗಿಕೊಳ್ಳಿ. ಕಾಲುಗಳು ಭುಜದ ಅಗಲದಲ್ಲಿರಬೇಕು.
  • ಕಾಲುಗಳನ್ನು ನಮ್ಮ ಕಡೆಗೆ ತಂದು ಮೊಣಕಾಲುಗಳನ್ನು ಬಗ್ಗಿಸಿ ಮತ್ತು ಕ್ರಮೇಣ ದೇಹವನ್ನು ಗೋಡೆಯಿಂದ ಕಡಿಮೆ ಮಾಡಿ.
  • ಮೊಣಕಾಲುಗಳನ್ನು 90 ಡಿಗ್ರಿಯಲ್ಲಿ ಬಾಗಿಸಬೇಕು. ಮೊಣಕಾಲುಗಳು ಪಾದಗಳಿಗಿಂತ ಹೆಚ್ಚು ಬಾಗದಂತೆ ಎಚ್ಚರಿಕೆ ವಹಿಸಬೇಕು.
  • ಈ ಭಂಗಿಯು ಕುರ್ಚಿಯಂತೆ ಗೋಡೆಯ ಮೇಲೆ ಕುಳಿತಂತೆ ಇರುತ್ತದೆ.
  • ಸಾಧ್ಯವಾದಷ್ಟು ಕಾಲ ಈ ರೀತಿ ಕುಳಿತುಕೊಳ್ಳಿ. ನಂತರ ಮತ್ತೆ ನಿಂತುಕೊಳ್ಳಿ. ಇದನ್ನು ಪುನರಾವರ್ತಿಸಬೇಕು.

ಗಮನಿಸಿ: ಇದು ಪ್ರಚಲಿತದಲ್ಲಿರುವ ಆರೋಗ್ಯಕ್ಕೆ ಸಂಬಂಧಿಸಿದ ವರದಿಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

Whats_app_banner