ಮಲಗುವ ಮುನ್ನ ಬಾಳೆಹಣ್ಣು ತಿಂದ್ರೆ ನಿದ್ದೆ ಚೆನ್ನಾಗಿ ಬರುತ್ತಾ? ಈ ಬಗ್ಗೆ ಅಧ್ಯಯನ ಕಂಡುಕೊಂಡ ಸತ್ಯವಿದು
ಬಾಳೆಹಣ್ಣು ಸಾಕಷ್ಟು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದನ್ನು ತಿನ್ನುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ ಎಂದು ಹೇಳಲಾಗುತ್ತದೆ. ರಾತ್ರಿ ಊಟದ ನಂತರ ಒಂದು ಬಾಳೆಹಣ್ಣು ತಿಂದರೆ ಚೆನ್ನಾಗಿ ನಿದ್ದೆ ಬರುತ್ತದೆ ಎಂದು ಹಲವರು ಹೇಳುತ್ತಾರೆ, ಈ ವಿಚಾರದ ಬಗ್ಗೆ ಅಧ್ಯಯನ ಹೇಳೋದೇನು ನೋಡಿ.
ಹಣ್ಣುಗಳಲ್ಲಿ ಸುಲಭವಾಗಿ ನಮಗೆ ಸಿಗುವುದು ಎಂದರೆ ಬಾಳೆಹಣ್ಣು. ಹಲವು ವರ್ಷಗಳಿಂದ ಇದು ನಮ್ಮ ಆಹಾರದ ಭಾಗವಾಗಿದೆ. ಕೆಲವರು ಮಲಗುವ ಸಮಯದಲ್ಲಿ ಇದನ್ನು ತಿನ್ನುತ್ತಾರೆ. ಈ ರೀತಿ ತಿಂದರೆ ಚೆನ್ನಾಗಿ ನಿದ್ದೆ ಬರುತ್ತದೆ ಎಂಬ ಮಾತು ಇದೆ. ಇದು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ. ವಾಸ್ತವವಾಗಿ, ಬಾಳೆಹಣ್ಣುಗಳು ನಿದ್ರೆಗೆ ಯಾವುದೇ ರೀತಿಯಲ್ಲಿ ಕೊಡುಗೆ ನೀಡುವುದಿಲ್ಲ ಎನ್ನುತ್ತಿದೆ ಇತ್ತೀಚಿನ ಅಧ್ಯಯನ.
ಬಾಳೆಹಣ್ಣುಗಳು ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ವಿಟಮಿನ್ ಬಿ 6 ನಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ಹೀಲಿಂಗ್ ಗುಣವನ್ನೂ ಹೊಂದಿದೆ. ಆದರೆ, ಒಂದು ಬಾಳೆಹಣ್ಣು ನಮ್ಮ ದೇಹಕ್ಕೆ ಮೇಲೆ ತಿಳಿಸಿದ ಪೋಷಕಾಂಶಗಳನ್ನು ಸಾಕಷ್ಟು ಪ್ರಮಾಣದಲ್ಲಿ ಒದಗಿಸುವುದಿಲ್ಲ. ಉದಾಹರಣೆಗೆ, ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಅಧಿಕವಾಗಿರುತ್ತದೆ. ಆದರೆ ಒಂದು ಬಾಳೆಹಣ್ಣು ನಮ್ಮ ದೇಹಕ್ಕೆ ಅಗತ್ಯವಿರುವ ಶೇಕಡಾ ಹತ್ತರಷ್ಟು ಪೊಟ್ಯಾಸಿಯಮ್ ಅನ್ನು ಮಾತ್ರ ನೀಡುತ್ತದೆ. ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ವಿಟಮಿನ್ ಬಿ 6 ಅಂಶಕ್ಕಾಗಿ ಬಾಳೆಹಣ್ಣುಗಳನ್ನು ಜಾಸ್ತಿ ತಿನ್ನಬೇಕು ಎನ್ನಲಾಗುತ್ತದೆ. ರಾತ್ರಿ ಊಟದ ನಂತರ ಬಾಳೆಹಣ್ಣು ತಿನ್ನುವುದರಿಂದ ಉತ್ತಮ ನಿದ್ರೆ ಬರುತ್ತದೆ ಎಂಬ ನಂಬಿಕೆಯಿಂದ ಕೆಲವರಲ್ಲಿದೆ.ಆದರೆ ಇದು ಸುಳ್ಳು ಎಂದು ಅಧ್ಯಯನ ಹೇಳುತ್ತದೆ.
ಮೆಗ್ನೀಸಿಯಮ್ ನಮಗೆ ಶಾಂತ ಮತ್ತು ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ಆದಾಗ್ಯೂ, ಬಾಳೆಹಣ್ಣುಗಳು 30 ಮಿಲಿಗ್ರಾಂಗಿಂತ ಕಡಿಮೆ ಮೆಗ್ನೀಸಿಯಮ್ ಅನ್ನು ಹೊಂದಿರುತ್ತವೆ. ಆದರೆ ದೇಹದ ದೈನಂದಿನ ಅಗತ್ಯವು 400 ಮಿಲಿಗ್ರಾಂ ಮೆಗ್ನೀಸಿಯಮ್ ಆಗಿರಬೇಕು. ಹಾಗಾಗಿ ನಾವು ಸೇವಿಸುವ ಆಹಾರದಲ್ಲಿ ಮೆಗ್ನೀಸಿಯಮ್ ಇರುವಂತೆ ನೋಡಿಕೊಳ್ಳಬೇಕು.
ವಿಟಮಿನ್ ಬಿ 6 ಮನಸ್ಥಿತಿಯನ್ನು ನಿಯಂತ್ರಿಸಲು ಮತ್ತು ಸಿರೊಟೋನಿನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ವಿಟಮಿನ್ ಬಿ 6 ನ ದೈನಂದಿನ ಅವಶ್ಯಕತೆ 1.3 ಮಿಲಿಗ್ರಾಂ. ಆದರೆ ಒಂದು ಬಾಳೆಹಣ್ಣಿನಲ್ಲಿ 0.4 ಮಿಲಿಗ್ರಾಂ ಇರುತ್ತದೆ. ವಿಟಮಿನ್ ಬಿ 6 ನಿದ್ರೆಯನ್ನು ಸುಧಾರಿಸುತ್ತದೆ. ಬಾಳೆಹಣ್ಣುಗಳು ಅಲ್ಪ ಪ್ರಮಾಣದ ವಿಟಮಿನ್ ಬಿ6 ಅನ್ನು ಮಾತ್ರ ನೀಡುತ್ತವೆ. ಈ ಪೋಷಕಾಂಶಕ್ಕಾಗಿ ಇತರ ಪದಾರ್ಥಗಳನ್ನು ಸಹ ತಿನ್ನಬೇಕು.
ಬಾಳೆಹಣ್ಣು ಉತ್ತಮ ನಿದ್ರೆಗೆ ಸಹಾಯ ಮಾಡುತ್ತಾ?
ಬಾಳೆಹಣ್ಣು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಪ್ರತಿದಿನ ಬಾಳೆಹಣ್ಣು ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ರಾತ್ರಿ ಮಲಗುವ ಮುನ್ನ ತಿನ್ನುವುದು ವಿಶೇಷವಾಗಿ ಪ್ರಯೋಜನಕಾರಿಯಲ್ಲ. ಬಾಳೆಹಣ್ಣನ್ನು ರಾತ್ರಿ ತಿನ್ನುವುದಕ್ಕಿಂತ ಬೆಳಿಗ್ಗೆ ತಿನ್ನುವುದು ಮುಖ್ಯ. ರಾತ್ರಿ ತಿಂದರೆ ಲೋಳೆಸರ ಉತ್ಪತ್ತಿಯಾಗಿ ಶೀತ ಉಂಟಾಗುತ್ತದೆ. ಬೆಳಗಿನ ಉಪಾಹಾರದ ಸಮಯದಲ್ಲಿ ಇದನ್ನು ತಿಂದರೆ ತುಂಬಾ ಪ್ರಯೋಜನವಾಗುತ್ತದೆ. ಆದರೆ ನಿಮಗೆ ಮಧುಮೇಹ ಸಮಸ್ಯೆ ಇದ್ದರೆ ಬಾಳೆ ಹಣ್ಣನ್ನು ಹೆಚ್ಚು ತಿನ್ನಬೇಡಿ. ಬಾಳೆಹಣ್ಣು ರಕ್ತದಲ್ಲಿನ ಸಕ್ಕರೆಯ ಸಮಸ್ಯೆಯನ್ನು ಬಹಳಷ್ಟು ಹೆಚ್ಚಿಸುತ್ತದೆ. ಹಾಗಾಗಿ ಮಧುಮೇಹಿಗಳು ಜಾಗರೂಕರಾಗಿರಬೇಕು.
ವಿಭಾಗ