ಒಂಟಿತನ ಪುರುಷರಿಗಿಂತ ಮಹಿಳೆಯರ ಮೇಲೆ ಹೆಚ್ಚು ಪರಿಣಾಮ ಬೀರುತ್ತಾ? ಅಧ್ಯಯನಗಳು ಹೇಳಿರುವ ವಾಸ್ತಾಂಶ ಹೀಗಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  ಒಂಟಿತನ ಪುರುಷರಿಗಿಂತ ಮಹಿಳೆಯರ ಮೇಲೆ ಹೆಚ್ಚು ಪರಿಣಾಮ ಬೀರುತ್ತಾ? ಅಧ್ಯಯನಗಳು ಹೇಳಿರುವ ವಾಸ್ತಾಂಶ ಹೀಗಿದೆ

ಒಂಟಿತನ ಪುರುಷರಿಗಿಂತ ಮಹಿಳೆಯರ ಮೇಲೆ ಹೆಚ್ಚು ಪರಿಣಾಮ ಬೀರುತ್ತಾ? ಅಧ್ಯಯನಗಳು ಹೇಳಿರುವ ವಾಸ್ತಾಂಶ ಹೀಗಿದೆ

Loneliness Effects: ಒಂಟಿತನವು ತುಂಬಾ ಅಪಾಯಕಾರಿ. ಇದು ವ್ಯಕ್ತಿಯನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಾನಿಗೊಳಿಸುತ್ತದೆ. ಅಧ್ಯಯನಗಳ ಪ್ರಕಾರ, ಇದು ಪುರುಷರಿಗಿಂತ ಮಹಿಳೆಯರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಮಹಿಳೆಯರಲ್ಲಿ ಅನೇಕ ಅಪಾಯಕಾರಿ ಕಾಯಿಲೆಗಳಿಗೆ ಇದು ಕಾರಣವಾಗಬಹುದು. ಈ ಕುರಿತ ವಿವರ ಇಲ್ಲಿದೆ.

ಒಂಟಿತನವು ಪುರುಷರಿಗಿಂತ ಮಹಿಳೆಯರ ಮೇಲೆ ಹೆಚ್ಚು ಪರಿಣಾಮ ಬೀರುತ್ತೆ. ಇದರಿಂದ ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂಬುದನ್ನು ತಿಳಿಯಿರಿ
ಒಂಟಿತನವು ಪುರುಷರಿಗಿಂತ ಮಹಿಳೆಯರ ಮೇಲೆ ಹೆಚ್ಚು ಪರಿಣಾಮ ಬೀರುತ್ತೆ. ಇದರಿಂದ ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂಬುದನ್ನು ತಿಳಿಯಿರಿ

ಒಂಟಿತನವು ಪ್ರತಿಯೊಬ್ಬರ ಜೀವನದ ಒಂದು ಹಂತದಲ್ಲಿ ಎದುರಿಸಬೇಕಾದ ಒಂದು ಸಾಮಾನ್ಯ ಹಂತ. ಕೆಲವರು ಇದನ್ನು ಮೀರಿ ನಿಲ್ಲುತ್ತಾರೆ. ಇನ್ನೂ ಕೆಲವರು ಒಂಟಿತನದಲ್ಲೇ ಜೀವಿಸುತ್ತಾರೆ. ವೈಯಕ್ತಿಕ ಘಟನೆಗಳು, ಅನುಭವಗಳು ಅಥವಾ ಆಸೆಗಳ ಪರಿಣಾಮವಾಗಿ ಪ್ರತ್ಯೇಕವಾಗಿ ಇರುತ್ತಾರೆ. ಪರಿಸ್ಥಿತಿಗಳ ಪ್ರಭಾವದಿಂದಾಗಿ ದೀರ್ಘಕಾಲದವರೆಗೆ ಒಂಟಿತನದಲ್ಲಿ ಉಳಿದರೆ, ಇಂಥ ಜನವರು ಹಲವು ರೀತಿಯ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಈ ಬಗ್ಗೆ ಅಧ್ಯಯನಗಳಿಂದ ತಿಳಿದುಬಂದಿರುವ ಮತ್ತೊಂದು ಆಘಾತಕಾರಿ ವಿಷಯವೆಂದರೆ ಇವರು ಸಂದರ್ಭಗಳ ಪ್ರಭಾವದಿಂದಾಗಿ ದೀರ್ಘಕಾಲದವರೆಗೆ ಒಂಟಿತನದಲ್ಲಿ ಉಳಿದರೆ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಒಂಟಿತನವು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ನಷ್ಟವನ್ನು ಉಂಟುಮಾಡುತ್ತಿದೆ.

ವೈಯಕ್ತಿಕ ಅನುಭವ, ವ್ಯಕ್ತಿಯು ವಾಸಿಸುವ ಪರಿಸರ, ಅವರ ವೈಯಕ್ತಿಕ ಆಸೆಗಳಿಂದ ಒಂಟಿತನವನ್ನು ಅನುಭವಿಸುವಂತೆ ಮಾಡುತ್ತದೆ. ದೀರ್ಘಕಾಲದ ಒಂಟಿತನ ವ್ಯಕ್ತಿಯ ಆರೋಗ್ಯ, ಆಲೋಚನೆಗಳು ಹಾಗೂ ದೀರ್ಘಾಯುಷ್ಯದ ಮೇಲೂ ಪರಿಣಾಮ ಬೀರಬಹುದು. ಇತ್ತೀಚಿನ ಅಧ್ಯಯನದಲ್ಲಿ, ಒಂಟಿತನವು ವ್ಯಕ್ತಿಯ ಹೃದಯದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎಂದು ಹೇಳಿರುವುದು ಗಮನಾರ್ಹ ವಿಷಯವಾಗಿದೆ.

ಬಯೋಲಾಜಿಕಲ್ ಸೈಕಾಲಜಿಯಲ್ಲಿ ಪ್ರಕಟವಾದ ಅಧ್ಯಯನದ ಫಲಿತಾಂಶದ ಪ್ರಕಾರ, ಒಂಟಿತನವು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಸಂಭವಿಸುವ ಸಾಧ್ಯತೆಯಿದೆ. ಒಂಟಿತನವು ಸಾಮಾಜಿಕ ಒತ್ತಡ ಮತ್ತು ಕೆಲವೊಂದು ಪರಿಸ್ಥಿತಿಗಳಲ್ಲಿ ಹೃದಯ ಬಡಿತದ ಇಳಿಕೆಗೆ ಕಾರಣವಾಗುತ್ತದೆ. ಇದು ಹೃದಯರಕ್ತನಾಳದ ಕಾರ್ಯವನ್ನು ನಿಯಂತ್ರಿಸುವ ಸ್ವಾಯತ್ತ ನರಮಂಡಲದ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಒಂಟಿತನವು ವ್ಯಕ್ತಿಯನ್ನು ತುಂಬಾ ಅತೃಪ್ತಿಗೊಳಿಸಬಹುದು. ಆದಾಗ್ಯೂ, ಇದು ದೇಹ ಮತ್ತು ಮನಸ್ಸಿನ ಮೇಲೆ ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ಪರಿಣಾಮ ಬೀರುತ್ತದೆ. ಪಾರ್ಶ್ವವಾಯುವಿನ ಅಪಾಯದಂತಹ ದೀರ್ಘಕಾಲೀನ ಕಾಯಿಲೆಗಳಿಗೆ ಕಾರಣವಾಗಬಹುದು.

ಒಂಟಿತ ಪರಿಣಾಮಗಳ ಬಗ್ಗೆ 17 ರಿಂದ 29 ವರ್ಷದೊಳಗಿನವರ ಮೇಲೆ ಅಧ್ಯಯನ

17 ರಿಂದ 29 ವರ್ಷದೊಳಗಿನ 97 ಆರೋಗ್ಯವಂತ ಕಾಲೇಜು ವಿದ್ಯಾರ್ಥಿಗಳ ಮೇಲೆ ಈ ಅಧ್ಯಯನವನ್ನು ನಡೆಸಲಾಯಿತು. ಧೂಮಪಾನ, ಮದ್ಯಪಾನ ಮತ್ತು ಕೆಫೀನ್ ಇಲ್ಲದೆ ಅವರನ್ನು 24 ಗಂಟೆಗಳ ಕಾಲ ಇರಿಸಲಾಯಿತು. ಈ ಅಧ್ಯಯದಲ್ಲಿ ಭಾಗವಹಿಸಿದ್ದವರಲ್ಲಿ ಒಂಟಿತನದ ಮಟ್ಟವನ್ನು ನ್ಯೂರೋಟಿಸಿಸಂ, ಸಾಮಾಜಿಕ ನೆಟ್ವರ್ಕ್ ಗಾತ್ರ, ಗೊಂದಲಕಾರಿ ಅಂಶಗಳು ಮತ್ತು ಮನಸ್ಥಿತಿ ನಿಯಂತ್ರಣದ ಅಂಶಗಳನ್ನು ಪರಿಗಣಿಸಲಾಗಿತ್ತು. ಈ ಪೈಕಿ ಕೆಲವರಲ್ಲಿ ಹೃದಯ ಬಡಿತವು ವಿಭಿನ್ನವಾಗಿ ಕಾಣಿಸಿದೆ. ವಿಶೇಷವಾಗಿ ಸಾಮಾಜಿಕವಾಗಿ ಒತ್ತಡದ ಸಂದರ್ಭಗಳಲ್ಲಿ ಕಡಿಮೆ ಪರಿಣಾಮಕಾರಿಯಾಗಿ ಕೆಲಸ ಮಾಡುವುದನ್ನೂ ಇದು ಸೂಚಿಸಲಾಗಿದೆ.

ಆರೋಗ್ಯ ಮನೋವಿಜ್ಞಾನ ತಜ್ಞರ ಪ್ರಕಾರ, "ಒಂಟಿತನ ಮತ್ತು ಹೃದಯದ ಆರೋಗ್ಯದ ನಡುವಿನ ಸಂಬಂಧವನ್ನು ಯಂತ್ರಗಳ ಮೂಲಕ ಪರೀಕ್ಷಿಸಲಾಗಿದೆ. ಇದು ತೀವ್ರ ಒತ್ತಡಕ್ಕೆ ಅಸಹಜ ಹೃದಯರಕ್ತನಾಳದ ಪ್ರತಿಕ್ರಿಯೆಗಳನ್ನು ಪ್ರಚೋದಿಸುತ್ತದೆ ಎಂಬುದನ್ನು ಕಂಡುಕೊಳ್ಳಲಾಗಿದೆ. ಹಿಂದಿನ ಅಧ್ಯಯನಗಳು ಒತ್ತಡಕ್ಕೆ ಪ್ರತಿಕ್ರಿಯೆಯಾಗಿ ಹೃದಯ ಬಡಿತ, ರಕ್ತದೊತ್ತಡ ಮತ್ತು ಹೃದಯದ ಪ್ರತಿಬಂಧಕತೆಯಂತಹ ಹೃದಯ ಕ್ರಿಯೆಗಳನ್ನು ಅನ್ವೇಷಿಸಿವೆ.

ಈ ಅಧ್ಯಯನದ ಕೊನೆಯಲ್ಲಿ, ಒತ್ತಡ ನಿಯಂತ್ರಣಕ್ಕಾಗಿ ಮಹಿಳೆಯರು ಸಾಮಾಜಿಕ ಸಂಬಂಧಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ ಎಂಬುದನ್ನು ಇದು ಸೂಚಿಸುತ್ತದೆ. ಪುರುಷರು ಸಾಮಾನ್ಯವಾಗಿ ತಮ್ಮ ಆಂತರಿಕ ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಹಿಂಜರಿಯುತ್ತಾರೆ. ಮಹಿಳೆಯರ ವಿಷಯದಲ್ಲಿ ಇದಕ್ಕೆ ವಿರುದ್ಧವಾಗಿದೆ. ಅವರು ಕಾಲಕಾಲಕ್ಕೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಬಯಸುತ್ತಾರೆ. ಈ ರೀತಿಯಾಗಿ, ಪುರುಷರು ಭಾವನೆಗಳನ್ನು ವ್ಯಕ್ತಪಡಿಸುವ ಅಭ್ಯಾಸವನ್ನು ಹೊಂದಿರುವುದಿಲ್ಲ ಮತ್ತು ಅವರು ಒಬ್ಬಂಟಿಯಾಗಿರುವಾಗಲೂ ಹೆಚ್ಚಿನ ವ್ಯತ್ಯಾಸವನ್ನು ಕಾಣುವುದಿಲ್ಲ. ಅಂತೆಯೇ, ಮಹಿಳೆಯರು ಒಂಟಿತನವನ್ನು ಅನುಭವಿಸಬೇಕಾದಾಗ, ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಳೆದುಕೊಳ್ಳುತ್ತಾರೆ ಎಂದು ಅಧ್ಯಯನ ಹೇಳಿದೆ.

Whats_app_banner