Mango Seeds: ಮಾವಿನಹಣ್ಣು ತಿಂದು ಅದರ ಗೊರಟೆ ಎಸೆಯಬೇಡಿ; ಇದರ ಪ್ರಯೋಜನ ಹಲವು
ಕನ್ನಡ ಸುದ್ದಿ  /  ಜೀವನಶೈಲಿ  /  Mango Seeds: ಮಾವಿನಹಣ್ಣು ತಿಂದು ಅದರ ಗೊರಟೆ ಎಸೆಯಬೇಡಿ; ಇದರ ಪ್ರಯೋಜನ ಹಲವು

Mango Seeds: ಮಾವಿನಹಣ್ಣು ತಿಂದು ಅದರ ಗೊರಟೆ ಎಸೆಯಬೇಡಿ; ಇದರ ಪ್ರಯೋಜನ ಹಲವು

ಬೇಸಿಗೆಯಲ್ಲಿ ಅನೇಕರು ಇಷ್ಟಪಡುವ ಹಣ್ಣುಗಳಲ್ಲಿ ಮಾವು ಕೂಡ ಒಂದು. ಮಾವಿನಹಣ್ಣು ತಿಂದು ಅದರ ಗೊರಟೆ ಎಸೆಯುವವರೇ ಹೆಚ್ಚು. ಇದರ ಪ್ರಯೋಜನ ತಿಳಿದ್ರೆ ನೀವೆಂದು ಅದರ ಗೊರಟೆ ಎಸೆಯಲ್ಲ. ಇಲ್ಲಿದೆ ಗೊರಟೆಯ ಆರೋಗ್ಯ ಪ್ರಯೋಜನ.

ಮಾವಿನಹಣ್ಣು ತಿಂದು ಅದರ ಗೊರಟೆ ಎಸೆಯಬೇಡಿ; ಇದರ ಪ್ರಯೋಜನ ಹಲವು
ಮಾವಿನಹಣ್ಣು ತಿಂದು ಅದರ ಗೊರಟೆ ಎಸೆಯಬೇಡಿ; ಇದರ ಪ್ರಯೋಜನ ಹಲವು (PC: Shutterstock )

ಸಿಹಿ ರಸಭರಿತ ಮಾವಿನಹಣ್ಣುಗಳು ತುಂಬಾ ರುಚಿಕರವಾಗಿರುತ್ತವೆ. ಬೇಸಿಗೆಯಲ್ಲಿ ಅನೇಕ ಜನರು ಮಾವಿನ ಹಣ್ಣು ತಿನ್ನಲು ಇಷ್ಟಪಡುತ್ತಾರೆ. ಮಾವಿನ ಹಣ್ಣಿನಲ್ಲಿ ಅನೇಕ ವಿಧಗಳಿವೆ. ಕೆಲವು ತುಂಬಾ ಸಿಹಿಯಾಗಿರುತ್ತವೆ. ಬಾಯಿಗೆ ಹಾಕಿದಾಗ ಕರಗುತ್ತದೆ. ಮಾವಿನಹಣ್ಣನ್ನು ತಿನ್ನುವಾಗ, ಅದರಲ್ಲಿನ ತಿರುಳನ್ನು ತಿಂದು ಗೊರಟೆಯನ್ನು ಎಸೆಯುತ್ತಾರೆ. ವಾಸ್ತವವಾಗಿ, ಈ ಬೀಜವು ಹಣ್ಣಿಗಿಂತ ಹೆಚ್ಚು ಪ್ರಯೋಜನಗಳನ್ನು ಹೊಂದಿದೆ. ಮಾವಿನಹಣ್ಣಿನ ಗೊರಟೆಯ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ.

ಮಾವಿನಹಣ್ಣಿನ ಗೊರಟೆಯ ಪ್ರಯೋಜನ

ರಕ್ತದಲ್ಲಿನ ಸಕ್ಕರೆಮಟ್ಟ ಕಾಪಾಡಿಕೊಳ್ಳಲು ಪ್ರಯೋಜನಕಾರಿ: ಮಧುಮೇಹಿಗಳಿಗೆ ಇದು ಪ್ರಯೋಜನಕಾರಿಯಾಗಿದೆ. ಮಾವಿನಹಣ್ಣಿನ ಗೊರಟೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಮಾವಿನ ಗೊರಟೆಯಲ್ಲಿರುವ ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಇದು ದೇಹವು ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಪಿತ್ತಜನಕಾಂಗಕ್ಕೆ ಪ್ರಯೋಜನಕಾರಿ: ಮಾವಿನಹಣ್ಣಿನ ಗೊರಟೆ ಪಿತ್ತಜನಕಾಂಗವನ್ನು ನಿರ್ವಿಷಗೊಳಿಸುವ ಗುಣಗಳನ್ನು ಹೊಂದಿದೆ. ಇವು ದೇಹದಿಂದ ಟಾಕ್ಸಿನ್ ತೆಗೆದುಹಾಕಲು ಸಹಾಯ ಮಾಡುತ್ತವೆ. ಇದು ಯಕೃತ್ತಿನ ಆರೋಗ್ಯವನ್ನು ಸುಧಾರಿಸುತ್ತದೆ.

ಆರೋಗ್ಯಕರ ಮೂಳೆಗೆ ಪ್ರಯೋಜನಕಾರಿ: ಮಾವಿನಹಣ್ಣಿನ ಗೊರಟೆಯಲ್ಲಿ ಕ್ಯಾಲ್ಸಿಯಂ, ರಂಜಕ ಮತ್ತು ಮೆಗ್ನೀಸಿಯಮ್ನಂತಹ ಪ್ರಮುಖ ಖನಿಜಗಳಿವೆ. ಇದು ಬಲವಾದ, ಆರೋಗ್ಯಕರ ಮೂಳೆಗಳನ್ನು ಕಾಪಾಡಿಕೊಳ್ಳಲು ಅವಶ್ಯಕವಾಗಿದೆ.

ಉರಿಯೂತ ನಿವಾರಕ: ಮಾವಿನ ಗೊರಟೆ ಉರಿಯೂತ ನಿವಾರಕ ಗುಣಗಳನ್ನು ಹೊಂದಿದ್ದು, ಇದು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಂಧಿವಾತದಂತಹ ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ ಇದು ಪ್ರಯೋಜನಕಾರಿಯಾಗಿದೆ.

ಜೀರ್ಣಕ್ರಿಯೆಗೆ ಪ್ರಯೋಜನಕಾರಿ: ಮಾವಿನ ಬೀಜದ ಪುಡಿ ಜೀರ್ಣಕ್ರಿಯೆಗೆ ಪ್ರಯೋಜನಕಾರಿ. ಆರೋಗ್ಯಕರ ಕರುಳನ್ನು ಕಾಪಾಡಿಕೊಳ್ಳುತ್ತದೆ ಹಾಗೂ ಅತಿಸಾರ ಮತ್ತು ಅಜೀರ್ಣದಂತಹ ಜೀರ್ಣಕಾರಿ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಉತ್ತಮ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ: ಮಾವಿನಹಣ್ಣಿನ ಗೊರಟೆ ಎಣ್ಣೆ ಚರ್ಮಕ್ಕೆ ಉತ್ತಮವಾದ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ. ಮಾವಿನ ಗೊರಟೆಗಳಿಂದ ತಯಾರಿಸಿದ ಕ್ರೀಮ್ ಅನ್ನು ಚರ್ಮಕ್ಕೆ ಸಹ ಬಳಸಬಹುದು. ಪುಡಿಯನ್ನು ಫೇಸ್ ಪ್ಯಾಕ್‌ನಲ್ಲಿ ಹಾಕಿ ಬಳಸಬಹುದು. ಇದಕ್ಕಾಗಿ ಮಾವಿನ ಹಣ್ಣಿನ ಗೊರಟೆಯನ್ನು ಚೆನ್ನಾಗಿ ಒಣಗಿಸಬೇಕು. ಅವು ಒಣಗಿದ ನಂತರ, ಮಿಕ್ಸಿಯಲ್ಲಿ ಸೇರಿಸಿ ಪುಡಿ ಮಾಡಬೇಕು. ಈ ಪುಡಿಯನ್ನು ಸ್ಮೂಥಿ ಅಥವಾ ಜ್ಯೂಸ್‌ಗಳೊಂದಿಗೆ ಬೆರೆಸಬೇಕು. ಈ ಪುಡಿಯನ್ನು ಚಹಾದಲ್ಲಿಯೂ ಸೇವಿಸಬಹುದು.

(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ).

Priyanka Gowda

eMail