Moringa Water: ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನುಗ್ಗೆ ಸೊಪ್ಪಿನ ನೀರು ಕುಡಿಯಿರಿ; ಈ ಆರೋಗ್ಯ ಪ್ರಯೋಜನ ಪಡೆಯಿರಿ
ನುಗ್ಗೆ ಸೊಪ್ಪಿನ ನೀರು ಕುಡಿಯುವುದರಿಂದ ದೇಹಕ್ಕೆ ಅದ್ಭುತ ಪೋಷಕಾಂಶಗಳು ಸಿಗುತ್ತವೆ. ತೂಕ ನಷ್ಟ ಮತ್ತು ಡಿಟಾಕ್ಸ್‌ಗೆ ಸಹಾಯ ಮಾಡುತ್ತದೆ. ನುಗ್ಗೆ ಸೊಪ್ಪಿನ ನೀರು ಕುಡಿಯುವುದರಿಂದ ಆಗುವ ಆರೋಗ್ಯ ಪ್ರಯೋಜನಗಳನ್ನು ಇಲ್ಲಿ ತಿಳಿಯೋಣ.

ಪ್ರಾಚೀನ ಕಾಲದಿಂದಲೂ ಆಹಾರ ಮತ್ತು ಔಷಧಿಯಾಗಿ ದ್ವಿಗುಣಗೊಳ್ಳಬಹುದಾದ ಒಂದು ತರಕಾರಿ ಇದ್ದರೆ ಅದು ನುಗ್ಗೆಕಾಯಿ ಮಾತ್ರ. ಅನೇಕ ಅದ್ಭುತ ಪೋಷಕಾಂಶಗಳು ನುಗ್ಗಿಕಾಯಿ ಮತ್ತು ನುಗ್ಗೆ ಸೊಪ್ಪಿನಲ್ಲಿ ಅಪಾರ ಪ್ರಮಾಣದಲ್ಲಿವೆ. ನುಗ್ಗೆಸೊಪ್ಪಿನಲ್ಲಿ ಹಾಲಿಗಿಂತಲೂ ಹೆಚ್ಚು ಕ್ಯಾಲ್ಸಿಯಂನ ಅತ್ಯುತ್ತಮ ಮೂಲವಾಗಿದೆ. ಇದರಲ್ಲಿ ಕ್ಯಾರೆಟ್ ಗಿಂತ ವಿಟಮಿನ್ ಎ ಹತ್ತು ಪಟ್ಟು ಜಾಸ್ತಿ ಇದೆ. ನುಗ್ಗೆಕಾಯಿಯನ್ನು ಸೇವಿಸುವುದರಿಂದ ಇತರೆ ತರಕಾರಿಗಳಿಗಿಂತ ಹೆಚ್ಚಿನ ಪೋಷಕಾಂಶಗಳನ್ನು ಪಡೆಯಬಹುದು. ಚಯಾಪಚಯ ಕ್ರಿಯೆಯನ್ನು ಸುಲಭಗೊಳಿಸುವ ಜೊತೆಗೆ, ದೇಹದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ. ಕೂದಲು ಬೆಳವಣಿಗೆಗೆ ನೆರವಾಗುವುದರ ಜೊತೆಗೆ ಯಕೃತ್ತದ ಆರೋಗ್ಯ ಕಾಪಾಡಲು ನೆರವಾಗುತ್ತೆ.
ಚಿಕ್ಕ ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರು ತಮ್ಮ ದೇಹ ಮತ್ತು ಮನಸ್ಸನ್ನು ಉತ್ತಮ ರೀತಿಯಲ್ಲಿ ಪೋಷಿಸಿಕೊಳ್ಳಲು ನುಗ್ಗೆಕಾಯಿಯನ್ನು ಸೇವಿಸಬೇಕೆಂದು ವಿಶೇಷವಾಗಿ ಸಲಹೆ ನೀಡಲಾಗುತ್ತದೆ. ನುಗ್ಗೆ ಸೊಪ್ಪು ಅಥವಾ ಅದರ ಹೂವು, ನುಗ್ಗೆ ಸಸ್ಯದ ವಿವಿಧ ಭಾಗಗಳು ವೈವಿಧ್ಯಮಯ ಪ್ರಯೋಜನಗಳನ್ನು ಹೊಂದಿವೆ. ನುಗ್ಗೆ ಎಲೆಗಳು ಮತ್ತು ಪುಡಿಯನ್ನು ಚಹಾ ಮತ್ತು ಇತರ ಪಾಕಗಳ ಮೂಲಕ ಸೇವಿಸಲಾಗುತ್ತದೆ.
ಕಿತ್ತಳೆಗಿಂತ ಏಳು ಪಟ್ಟು ಹೆಚ್ಚು ವಿಟಮಿನ್ ಸಿ, ಕ್ಯಾರೆಟ್‌ಗಿಂತ 10 ಪಟ್ಟು ಹೆಚ್ಚು ವಿಟಮಿನ್ ಎ, ಹಾಲಿಗಿಂತ 17 ಪಟ್ಟು ಹೆಚ್ಚು ಕ್ಯಾಲ್ಸಿಯಂ, ಮೊಸರಿಗಿಂತ ಒಂಬತ್ತು ಪಟ್ಟು ಹೆಚ್ಚು ಪ್ರೋಟಿನ್, ಬಾಳೆಹಣ್ಣಿಗಿಂತ 15 ಪಟ್ಟು ಹೆಚ್ಚು ಪೊಟ್ಯಾಸಿಯಮ್ ಮತ್ತು ಪಾಲಕ್‌ಗಿಂತ 25 ಪಟ್ಟು ಹೆಚ್ಚು ಕಬ್ಬಿಣಾಂಶ ನುಗ್ಗೆಸೊಪ್ಪಿನಲ್ಲಿದೆ.
ನುಗ್ಗೆ ಎಂದರೇನು?
ನುಗ್ಗೆಕಾಯಿ ಭಾರತೀಯ ಉಪಖಂಡದಲ್ಲಿ ಕಂಡುಬರುವ ಸೂಪರ್ ಫುಡ್ ಆಗಿದೆ. ಇದನ್ನು ನುಗ್ಗೆಕಾಯಿ ಮರದಿಂದ ಪಡೆಯಲಾಗುತ್ತದೆ. ಇದನ್ನು ಪವಾಡ ಮರ ಅಂತಲೂ ಕರೆಯಲಾಗುತ್ತದೆ. ಇದರಲ್ಲಿ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಆಧುನಿಕ ಪೌಷ್ಟಿಕತಜ್ಞರು ಇದನ್ನು ಸೂಪರ್ ಫುಡ್ ಎಂದು ಕರೆಯುತ್ತಾರೆ.
ನುಗ್ಗೆ ಸೊಪ್ಪಿನ ನೀರು ಕುಡಿಯುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು
ನುಗ್ಗೆ ಸೊಪ್ಪನ್ನು ನೀರಿನಲ್ಲಿ ಕುದಿಸಿ ಅದರ ನೀರನ್ನು ಕುಡಿಯಬಹುದು. ಇಲ್ಲವೇ ನುಗ್ಗೆ ಸೊಪ್ಪನ್ನು ಎಲೆಗಳನ್ನು ಬಿಸಿಲಿನಲ್ಲಿ ಒಣಗಿಸಿ ನುಗ್ಗೆ ಪುಡಿಯನ್ನು ತಯಾರಿಸಬಹುದು. ದೇಹದಲ್ಲಿನ ವಿವಿಧ ಕಾಯಿಲೆಗಳು ಮತ್ತು ಪೌಷ್ಠಿಕಾಂಶದ ಕೊರತೆಗಾಗಿ ಖಾಲಿ ಹೊಟ್ಟೆಯಲ್ಲಿ ನುಗ್ಗೆ ನೀರನ್ನು ಕುಡಿಯಬಹುದು ಎಂದು ಆಯುರ್ವೇದ ಮತ್ತು ಕರುಳಿನ ಆರೋಗ್ಯ ತರಬೇತುದಾರ ಡಿಂಪಲ್ ಜಂಗ್ಡಾ ಹೇಳುತ್ತಾರೆ.
ಖಾಲಿ ಹೊಟ್ಟೆಯಲ್ಲಿ ನುಗ್ಗೆ ಸೊಪ್ಪಿನ ನೀರು ಕುಡಿಯುವುದರಿಂದ ಸಿಗುವ ಅದ್ಭುತ ಆರೋಗ್ಯ ಪ್ರಯೋಜನಗಳು
ನುಗ್ಗೆಕಾಯಿ ಅಥವಾ ನುಗ್ಗೆ ಸೊಪ್ಪಿನಲ್ಲಿ ಉತ್ಕರ್ಷಣ ನಿರೋಧಕಗಳ ಸಮೃದ್ಧವಾಗಿವೆ. ವಿಟಮಿನ್ ಎ, ಸಿ, ಇ, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಕಬ್ಬಿಣದಂತಹ ಅಗತ್ಯ ಜೀವಸತ್ವಗಳು, ಪೋಷಕಾಂಶಗಳು ಮತ್ತು ಖನಿಜಗಳಿಂದ ತುಂಬಿದೆ. ನೀವು ಹಿಮೋಗ್ಲೋಬಿನ್ ಕಡಿಮೆ ಹೊಂದಿದ್ದರೆ, ಈ ಮೇಲಿನ ಜೀವಸತ್ವಗಳ ಕೊರತೆಯಿಂದ ಬಳಲುತ್ತಿದ್ದರೆ, ಕೂದಲು ಉದುರುವಿಕೆ, ತೆಳುವಾದ ಮೂಳೆಗಳು ಅಥವಾ ಚರ್ಮದ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ ನೀವು ನಿಮ್ಮ ದೈನಂದಿನ ಆಹಾರದಲ್ಲಿ ನುಗ್ಗೆ ಸೊಪ್ಪಿನ ನೀರನ್ನು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ವಿಶೇಷವಾಗಿ ಮಳೆಗಾಲ ಮತ್ತು ಬೇಸಿಗೆಯಲ್ಲಿ ಈ ನೀರು ಸೋಂಕುಗಳು ಮತ್ತು ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಆಸ್ಟಿಯೊಪೊರೋಸಿಸ್ ಅಪಾಯವನ್ನು ಕಡಿಮೆ ಮಾಡುತ್ತೆ
ಸಸ್ಯಾಹಾರಿಗಳಿಗೆ ಕ್ಯಾಲ್ಸಿಯಂನ ದೈನಂದಿನ ಅಗತ್ಯಗಳನ್ನು ಪೂರೈಸಲು ನುಗ್ಗೆ ಸೊಪ್ಪು ಸಹಾಯ ಮಾಡುತ್ತದೆ. ಮೂಳೆ ನಷ್ಟವನ್ನು ತಡೆಯಲು ಸಹಾಯ ಮಾಡುತ್ತದೆ. ಆಸ್ಟಿಯೊಪೊರೋಸಿಸ್ ಅಪಾಯವನ್ನು ಕಡಿಮೆ ಮಾಡುತ್ತದೆ. ನುಗ್ಗೆ ವಿಟಮಿನ್ ಕೆ ಯ ಸಮೃದ್ಧ ಮೂಲವಾಗಿದೆ. ಇದು ಮೂಳೆಯ ಚಯಾಪಚಯ ಮತ್ತು ಖನಿಜೀಕರಣವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮೂಳೆ ರಚನೆಯಲ್ಲಿ ಒಳಗೊಂಡಿರುವ ಪ್ರೋಟೀನ್‌ಗಳನ್ನು ಸಕ್ರಿಯಗೊಳಿಸುತ್ತದೆ.
ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ
ನುಗ್ಗೆ ಸೊಪ್ಪಿನ ನೀರನ್ನು ಕುಡಿದರೆ ಚಯಾಪಚಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಇದರಲ್ಲಿ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಕಡಿಮೆ ಕ್ಯಾಲೊರಿಗಳನ್ನು ಹೊಂದಿದ್ದು, ಕಡುಬಯಕೆಯನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಮಧುಮೇಹಿಗಳಿಗೆ ಒಳ್ಳೆಯದು
ಇದು ಮಧುಮೇಹ ರೋಗಿಗಳಿಗೆ ಅತ್ಯುತ್ತಮವಾದ ಆಹಾರವಾಗಿದೆ. ಇದು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಮಧುಮೇಹ ಪೂರ್ವ ರೋಗಲಕ್ಷಣಗಳನ್ನು ಅನುಭವಿಸುತ್ತಿರುವ ಯಾರಾದರೂ ಖಾಲಿ ಹೊಟ್ಟೆಯಲ್ಲಿ ನುಗ್ಗೆ ನೀರನ್ನು ಸೇವಿಸಬಹುದು.
ನಿರ್ವಿಷಗೊಳಿಸಲು ಸಹಾಕಾರಿ
ನುಗ್ಗೆ ಸೊಪ್ಪಿನಲ್ಲಿ ನೈಸರ್ಗಿಕ ನಿರ್ವಿಷಗೊಳಿಸುವ ಗುಣಗಳನ್ನು ಹೊಂದಿದೆ. ಇದು ದೇಹವನ್ನು ಪರಿಣಾಮಕಾರಿಯಾಗಿ ನಿರ್ವಿಷಗೊಳಿಸಲು ಯಕೃತ್ತು ಮತ್ತು ಮೂತ್ರಪಿಂಡಕ್ಕೆ ನೆರವಾಗುತ್ತೆ. ಇದು ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಕೆಫೀನ್ ವ್ಯಸನದ ದುಷ್ಪರಿಣಾಮಗಳನ್ನು ಕಡಿಮೆ ಮಾಡುತ್ತದೆ.
ಚರ್ಮಕ್ಕೆ ಅದ್ಭುತ, ರಕ್ತಹೀನತೆಗೆ ಚಿಕಿತ್ಸೆಗೆ ಸಹಾಯ ಮಾಡುತ್ತೆ
ನುಗ್ಗೆ ಸೊಪ್ಪಿನಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ. ಇದು ಚರ್ಮಕ್ಕೆ ಅತ್ಯುತ್ತಮವಾಗಿದೆ. ಮೊಡವೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ. ಹೆಚ್ಚಿನ ಕಬ್ಬಿಣದ ಅಂಶದಿಂದಾಗಿ ನುಗ್ಗೆ ಪುಡಿ ಅಥವಾ ನುಗ್ಗೆ ನೀರು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಇದು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿ ಕಬ್ಬಿಣಾಂಶದ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ರಕ್ತಹೀನತೆಯ ವಿರುದ್ಧ ಹೋರಾಡುವವರಿಗೆ ಅಥವಾ ಕಡಿಮೆ ಹಿಮೋಗ್ಲೋಬಿನ್ ಮಟ್ಟವನ್ನು ಹೊಂದಿರುವವರಿಗೆ ಇದು ಉತ್ತಮ ಆಹಾರವಾಗಿದೆ.
