ಕನ್ನಡ ಸುದ್ದಿ  /  ಜೀವನಶೈಲಿ  /  ಕಡಿಮೆ ಆಹಾರ ತಿನ್ನುವುದರಿಂದ ತೂಕ ಇಳಿಕೆಯಾಗುವುದಿಲ್ಲ; ತೂಕ ನಷ್ಟದ ವೇಳೆ ಎದುರಾಗುವ ಸಾಮಾನ್ಯ ಸಮಸ್ಯೆಗಳಿವು

ಕಡಿಮೆ ಆಹಾರ ತಿನ್ನುವುದರಿಂದ ತೂಕ ಇಳಿಕೆಯಾಗುವುದಿಲ್ಲ; ತೂಕ ನಷ್ಟದ ವೇಳೆ ಎದುರಾಗುವ ಸಾಮಾನ್ಯ ಸಮಸ್ಯೆಗಳಿವು

ಸ್ಥೂಲಕಾಯ ಅಥವಾ ಬೊಜ್ಜಿನ ಸಮಸ್ಯೆಯಿಂದ ಬಹುತೇಕರು ಬಳಲುತ್ತಿದ್ದಾರೆ. ಇದಕ್ಕೆ ಆಹಾರ ಪದ್ಧತಿ, ಜೀವನ ಶೈಲಿಯೇ ಮುಖ್ಯ ಕಾರಣವಾಗಿದೆ. ದೇಹದ ತೂಕ ಇಳಿಸಿಕೊಳ್ಳಲು ದೇಹ ದಂಡಿಸುವುದು, ಕಡಿಮೆ ತಿನ್ನುವುದು ಇತ್ಯಾದಿ ಮಾಡುತ್ತಾರೆ. ಆದರೂ ತೂಕ ಕಡಿಮೆಯಾಗುವುದಿಲ್ಲ. ಇದಕ್ಕೆ ಸಾಮಾನ್ಯ ಸಮಸ್ಯೆಗಳೇನು ಎಂಬುದನ್ನ ಇಲ್ಲಿ ತಿಳಿಯಿರಿ.

ಕಡಿಮೆ ಆಹಾರ ತಿನ್ನುವುದರಿಂದ ತೂಕ ಇಳಿಕೆಯಾಗುವುದಿಲ್ಲ; ತೂಕ ನಷ್ಟದ ವೇಳೆ ಎದುರಾಗುವ ಸಾಮಾನ್ಯ ಸಮಸ್ಯೆಗಳ ಮಾಹಿತಿ ಇಲ್ಲಿದೆ.
ಕಡಿಮೆ ಆಹಾರ ತಿನ್ನುವುದರಿಂದ ತೂಕ ಇಳಿಕೆಯಾಗುವುದಿಲ್ಲ; ತೂಕ ನಷ್ಟದ ವೇಳೆ ಎದುರಾಗುವ ಸಾಮಾನ್ಯ ಸಮಸ್ಯೆಗಳ ಮಾಹಿತಿ ಇಲ್ಲಿದೆ.

ತೂಕ ಕಡಿಮೆಯಿದ್ದರೆ ತೂಕ ಹೆಚ್ಚಾಗುವುದು ಹೇಗೆ ಎಂಬ ಚಿಂತೆಯಾದರೆ, ತೂಕ ಹೆಚ್ಚಿದ್ದರೆ ತೂಕ ಇಳಿಸುವುದು ಹೇಗೆ ಎಂಬ ಚಿಂತೆ ಅನೇಕರದ್ದು. ತೂಕ ಕಡಿಮೆ ಮಾಡಿಕೊಳ್ಳಲು ಅನೇಕರು ವ್ಯಾಯಾಮ, ಯೋಗ, ಡಯೆಟ್ ಮುಂತಾದವುಗಳ ಮೊರೆ ಹೋಗುತ್ತಾರೆ. ಅದರಲ್ಲೂ ತಾವು ಹೆಚ್ಚು ತಿಂದರೆ ದಪ್ಪ ಆಗುತ್ತೇವೆ ಅಂತಾ ಕಡಿಮೆ ತಿನ್ನುತ್ತಾರೆ. ಕಡಿಮೆ ತಿನ್ನುವುದು ಹಾಗೂ ಹೆಚ್ಚು ವ್ಯಾಯಾಮ ಮಾಡುವುದರಿಂದ ತೂಕ ಕಡಿಮೆಯಾಗುತ್ತದೆ ಎಂದು ಹೇಳಲಾಗುವುದಿಲ್ಲ. ನೀವೇನಾದರೂ ತೂಕ ನಷ್ಟಕ್ಕೆ ಪ್ರಯತ್ನಿಸುತ್ತಿದ್ದರೆ ತೂಕ ಇಳಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿದ್ದರೆ ಶ್ಲಾಘನೀಯ ಪ್ರಯತ್ನ. ಇದು ಹಲವು ಸವಾಲುಗಳಿಂದ ಕೂಡಿರುತ್ತದೆ. ತೂಕವನ್ನು ಕಡಿಮೆ ಮಾಡಿಕೊಳ್ಳುವ ಹಾದಿಯಲ್ಲಿ ಅನೇಕರು ಎದುರಿಸುವ 5 ಸಾಮಾನ್ಯ ತೊಂದರೆಗಳು ಇಲ್ಲಿವೆ (Weight Loss Common Problems).

ಕಡುಬಯಕೆಗಳನ್ನು (ಕೊಬ್ಬು ಹೆಚ್ಚಿರುವ ಆಹಾರಗಳ ಮೇಲಿನ ವ್ಯಾಮೋಹ) ನಿರ್ವಹಿಸುವುದು:

ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುವಾಗ ನಿಮ್ಮಲ್ಲಿನ ಕಡುಬಯಕೆಗಳನ್ನು ಜಯಿಸುವುದು ಅತ್ಯಂತ ಕಷ್ಟಕರವಾದ ಅಡೆತಡೆಗಳಲ್ಲಿ ಒಂದಾಗಿದೆ. ತೂಕ ನಷ್ಟಕ್ಕೆ ಪ್ರಯತ್ನಿಸುತ್ತಿರುವವರು ಯಾವಾಗಲೂ ಆರೋಗ್ಯಕರ ಆಹಾರ ಸೇವನೆ ಮತ್ತು ಕಡಿಮೆ ಕ್ಯಾಲೊರಿಗಳನ್ನು ಸೇವಿಸಬೇಕು. ಕ್ಯಾಲೋರಿ ಸೇವನೆ ಮತ್ತು ಸಕ್ಕರೆಯ ಸೇವನೆಯನ್ನು ಕನಿಷ್ಠಕ್ಕೆ ಸೀಮಿತಗೊಳಿಸುವುದು ಬಹಳ ಕಷ್ಟವೆನಿಸುತ್ತದೆ. ಅನೇಕರ ಕಡುಬಯಕೆಗಳಲ್ಲಿ ಕ್ಯಾಲೋರಿ, ಕೊಬ್ಬು, ಸಕ್ಕರೆ, ಸೋಡಿಯಂ ಹೆಚ್ಚಿನ ಪ್ರಮಾಣದಲ್ಲಿದ್ದರೆ ಕಡಿಮೆ ಪೌಷ್ಟಿಕಾಂಶದ ಆಹಾರಗಳಿಗೆ ಕಾರಣವಾಗುತ್ತವೆ. ಕಡುಬಯಕೆಯನ್ನು ನಿರ್ಲಕ್ಷಿಸುವುದು ಕಷ್ಟಕರವಾಗಿರುತ್ತದೆ. ಜಂಕ್ ಫುಡ್ ನೋಡಿದಾಗ ಬಾಯಲ್ಲಿ ನೀರೂರಿ, ಒಂದು ದಿನ ತಿನ್ನೋಣ ಅಂತಾ ಕೆಲವರು ಈ ಆಹಾರಗಳನ್ನು ಸೇವಿಸುತ್ತಾರೆ.

ಟ್ರೆಂಡಿಂಗ್​ ಸುದ್ದಿ

ನಿರಾಶಾದಾಯಕ ಅನುಭವ:

ತೂಕ ನಷ್ಟದ ಪ್ರಯಾಣದ ವೇಳೆ ಆಹಾರಕ್ರಮ ಮತ್ತು ವ್ಯಾಯಾಮದಲ್ಲಿ ನಿರಂತರ ಪ್ರಯತ್ನಗಳ ಹೊರತಾಗಿಯೂ ನಿಮ್ಮ ತೂಕವು ಸ್ಥಿರವಾಗಿ ಉಳಿಯಬಹುದು. ದೇಹವು ತೂಕ ನಷ್ಟಕ್ಕೆ ಹೊಂದಿಕೊಳ್ಳುವುದು, ಆಹಾರ ಮತ್ತು ವ್ಯಾಯಾಮದಲ್ಲಿನ ಬದಲಾವಣೆಗಳಿಂದಾಗಿ ಇದು ಹೆಚ್ಚಾಗಿ ಸಂಭವಿಸುತ್ತದೆ. ಇದರಿಂದ ನಿಮಗೆ ನಿರಾಶಾದಾಯಕ ಅನುಭವವಾಗಬಹುದು. ನೀವು ನಿಮ್ಮ ಯೋಜನೆಗೆ ಬದ್ಧವಾಗಿದ್ದರೂ ಯಾವುದೇ ಪ್ರಗತಿ ಕಾಣುತ್ತಿಲ್ಲ ಎಂಬ ಬೇಸರ ಮೂಡಲು ಕಾರಣವಾಗಬಹುದು.

ಸಮಯ ನಿರ್ವಹಣೆ:

ನಿಯಮಿತ ವ್ಯಾಯಾಮ ಮಾಡುವುದು ಮತ್ತು ಆರೋಗ್ಯಕರ ಊಟವನ್ನು ತಯಾರಿಸುವುದಕ್ಕೆ ಸಮಯ ತೆಗೆದುಕೊಳ್ಳುತ್ತದೆ. ಬಿಡುವಿಲ್ಲದ ವೇಳಾಪಟ್ಟಿಯಲ್ಲಿ ಹಲವರು ಈ ಜೀವನಕ್ರಮಕ್ಕೆ ಹೊಂದಿಕೊಳ್ಳಲು ಮತ್ತು ಆರೋಗ್ಯಕರ ಊಟವನ್ನು ತಯಾರಿಸುವುದು ಹೊಸ ಸವಾಲೆನಿಸುತ್ತದೆ. ಇದು ಅನುಕೂಲಕರ ಆಹಾರಗಳ ಮೇಲೆ ಅವಲಂಬನೆಗೆ ಕಾರಣವಾಗಬಹುದು.

ಪ್ರೇರಣೆ ಕಾಪಾಡಿಕೊಳ್ಳುವುದು:

ತೂಕನಷ್ಟದ ವೇಳೆ ಹೆಚ್ಚಿನ ಮಟ್ಟದ ಪ್ರೇರಣೆಯನ್ನು ಕಾಪಾಡಿಕೊಳ್ಳುವುದು ಕಷ್ಟಕರವಾಗಿರುತ್ತದೆ. ಆರಂಭಿಕ ಹಂತದಲ್ಲಿ ಇದ್ದ ಉತ್ಸಾಹ ಬರುತ್ತಾ ಕ್ಷೀಣಿಸಲು ಕಾರಣವಾಗಬಹುದು. ಜೀವನಶೈಲಿಯ ಬದಲಾವಣೆಗಳನ್ನು ದೀರ್ಘಾವಧಿಯವರೆಗೆ ಮಾಡಿಕೊಳ್ಳುವುದು ಒಂದು ಹೋರಾಟವೇ ಹೌದು.

ಶುಭ ಸಮಾರಂಭಗಳಲ್ಲಿ ಪಾಲ್ಗೊಂಡು ಭೂರಿ ಭೋಜನ:

ಮದುವೆ, ಹುಟ್ಟುಹಬ್ಬದ ಪಾರ್ಟಿ ಮುಂತಾದ ಶುಭ ಸಮಾರಂಭಗಳಲ್ಲಿ ಪಾಲ್ಗೊಂಡರೆ ರುಚಿಕರವಾದ ಊಟವಿರುತ್ತದೆ. ಬಗೆ-ಬಗೆಯ ಖಾದ್ಯಗಳನ್ನು ನೋಡಿ ಹೊಟ್ಟೆ ಹಸಿವು ಹೆಚ್ಚಾಗಿ, ಭರ್ಜರಿಯಾಗಿ ಊಟ ಮಾಡುವಿರಿ. ವೆರೈಟಿ ಭಕ್ಷ್ಯಗಳು, ಪಾನೀಯಗಳನ್ನು ಕಂಡಾಗ ಡಯೆಟ್ ಪಾಲಿಸಿ ಮರೆತೇ ಹೋಗಿರುತ್ತದೆ. ಹೀಗಾಗಿ ನಿಮ್ಮ ತೂಕ ನಷ್ಟದ ಪ್ರಯಾಣಕ್ಕೆ ಇವು ಸವಾಲಾಗಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)