Male Fertility: ವೀರ್ಯಾಣುವಿನ ಸಂಖ್ಯೆ, ಪುರುಷ ಫಲವಂತಿಕೆಯ ಮೇಲೆ ಪರಿಣಾಮ ಬೀರುವ 5 ಆಹಾರಗಳಿವು, ಇವುಗಳಿಂದ ದೂರವಿದ್ದಷ್ಟೂ ಉತ್ತಮ
ಕನ್ನಡ ಸುದ್ದಿ  /  ಜೀವನಶೈಲಿ  /  Male Fertility: ವೀರ್ಯಾಣುವಿನ ಸಂಖ್ಯೆ, ಪುರುಷ ಫಲವಂತಿಕೆಯ ಮೇಲೆ ಪರಿಣಾಮ ಬೀರುವ 5 ಆಹಾರಗಳಿವು, ಇವುಗಳಿಂದ ದೂರವಿದ್ದಷ್ಟೂ ಉತ್ತಮ

Male Fertility: ವೀರ್ಯಾಣುವಿನ ಸಂಖ್ಯೆ, ಪುರುಷ ಫಲವಂತಿಕೆಯ ಮೇಲೆ ಪರಿಣಾಮ ಬೀರುವ 5 ಆಹಾರಗಳಿವು, ಇವುಗಳಿಂದ ದೂರವಿದ್ದಷ್ಟೂ ಉತ್ತಮ

ಇತ್ತೀಚಿನ ದಿನಗಳಲ್ಲಿ ಪುರುಷರಲ್ಲಿ ವೀರ್ಯಾಣುವಿನ ಸಂಖ್ಯೆ ಕಡಿಮೆಯಾಗುವ ಕಾರಣ ಮಕ್ಕಳಾಗದೇ ಇರುವುದು, ತಡವಾಗಿ ಮಕ್ಕಳು ಹುಟ್ಟುವುದು ಮುಂತಾದ ಸಮಸ್ಯೆ ಎದುರಾಗುತ್ತಿದೆ. ಇದಕ್ಕೆ ಈ ಕೆಲವು ಆಹಾರಗಳು ಕಾರಣವಾಗಬಹುದು, ತಿಳಿದಿರಲಿ.

 ವೀರ್ಯಾಣುವಿನ ಸಂಖ್ಯೆ, ಪುರುಷ ಫಲವಂತಿಕೆಯ ಮೇಲೆ ಪರಿಣಾಮ ಬೀರುವ 5 ಆಹಾರಗಳಿವು
ವೀರ್ಯಾಣುವಿನ ಸಂಖ್ಯೆ, ಪುರುಷ ಫಲವಂತಿಕೆಯ ಮೇಲೆ ಪರಿಣಾಮ ಬೀರುವ 5 ಆಹಾರಗಳಿವು

ಪ್ರಸ್ತುತ ಬದಲಾಗುತ್ತಿರುವ ಜೀವನಶೈಲಿಯು ನಮ್ಮ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮಗಳನ್ನು ಬೀರುತ್ತಿದೆ. ಒತ್ತಡದ ಕೆಲಸ ಮತ್ತು ಬಿಡುವಿಲ್ಲದ ಜೀವನಶೈಲಿಯಿಂದಾಗಿ, ಅನೇಕ ಜನರು ತಮ್ಮ ಆರೋಗ್ಯದ ಕಡೆ ಸರಿಯಾದ ಗಮನ ಹರಿಸುವುದಿಲ್ಲ. ಈಗ ಆಹಾರ ಪದ್ಧತಿಯಲ್ಲೂ ಭಾರಿ ಬದಲಾವಣೆಯಾಗಿದೆ. ಈ ಕಳಪೆ ಆಹಾರ ಪದ್ಧತಿಗಳ ಪರಿಣಾಮವು ಒಟ್ಟಾರೆ ಆರೋಗ್ಯದ ಮೇಲೆ, ವಿಶೇಷವಾಗಿ ಫಲವಂತಿಕೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಚಿಕ್ಕ ವಯಸ್ಸಿನಲ್ಲಿಯೇ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಹಲವರು ಹೇಳುತ್ತಾರೆ. ಇದಕ್ಕೆ ಕೆಲವು ಆರೋಗ್ಯ ಸಮಸ್ಯೆಗಳು ಕಾರಣವಾದರೂ, ಆಹಾರ ಪದ್ಧತಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಪುರುಷರಲ್ಲಿ ವೀರ್ಯಾಣುವಿನ ಸಂಖ್ಯೆ ಕಡಿಮೆಯಾದರೆ, ಅದು ಮಗು ಪಡೆಯಲು ತೊಂದರೆ ಉಂಟು ಮಾಡಬಹುದು.

ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಲು ಅನೇಕ ಕಾರಣಗಳಿವೆ. ಇವುಗಳಲ್ಲಿ ಧೂಮಪಾನ, ಮದ್ಯಪಾನ, ಮಾದಕ ವ್ಯಸನ, ಬೊಜ್ಜು ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳು ಸೇರಿವೆ. ಇದರೊಂದಿಗೆ, ಆಹಾರವು ಪುರುಷರ ವೀರ್ಯಾಣುಗಳ ಸಂಖ್ಯೆಯ ಮೇಲೆ ಪ್ರಮುಖ ಪರಿಣಾಮ ಬೀರುತ್ತದೆ. ಪುರುಷರ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗದಂತೆ ಮತ್ತು ಆರೋಗ್ಯವಾಗಿರಲು, ತಿನ್ನುವ ಆಹಾರಗಳ ಬಗ್ಗೆ ಗಮನ ಹರಿಸಬೇಕು. ಯಾವ ಆಹಾರಗಳು ವೀರ್ಯಾಣುಗಳ ಸಂಖ್ಯೆಯ ಮೇಲೆ ಪರಿಣಾಮ ಬೀರುತ್ತವೆ ಎಂಬ ಬಗ್ಗೆ ಇಲ್ಲಿದೆ ವಿವರ.

ಸಂಸ್ಕರಿಸಿದ ಮಾಂಸಗಳು

ಸಂಸ್ಕರಿಸಿದ ಮಾಂಸಗಳು ರುಚಿಕರವಾಗಿರುತ್ತವೆ. ಆದರೆ ಆ ಮಾಂಸವನ್ನು ಸಂಸ್ಕರಿಸಲು ಬಳಸುವ ರಾಸಾಯನಿಕಗಳು ವೀರ್ಯ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತವೆ. ವೀರ್ಯಾಣುಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದನ್ನು ತಪ್ಪಿಸಲು ನೀವು ಪ್ರೊಸೆಸ್ಡ್ ಮೀಟ್ ಅಥವಾ ಸಂಸ್ಕರಿಸಿದ ಮಾಂಸ ತಿನ್ನುವುದನ್ನು ತಪ್ಪಿಸಿ.

ಸೋಯಾ ಉತ್ಪನ್ನಗಳು

ಸೋಯಾ ಉತ್ಪನ್ನಗಳಲ್ಲಿ ಕ್ಯಾಲ್ಸಿಯಂ ಅಧಿಕವಾಗಿರಬಹುದು. ಪುರುಷರು ಈ ಸೋಯಾ ಉತ್ಪನ್ನಗಳನ್ನು ಹೆಚ್ಚು ತಿನ್ನಬಾರದು. ಏಕೆಂದರೆ ಸೋಯಾ ಉತ್ಪನ್ನಗಳು ಸಸ್ಯ ಆಧಾರಿತ ಈಸ್ಟ್ರೋಜೆನ್‌ಗಳು, ಫೈಟೊಈಸ್ಟ್ರೋಜೆನ್‌ಗಳನ್ನು ಹೊಂದಿರುತ್ತವೆ. ಅಧಿಕವಾಗಿ ಸೇವಿಸಿದರೆ, ಪುರುಷರಲ್ಲಿ ಬಂಜೆತನ ಉಂಟಾಗುವ ಸಾಧ್ಯತೆ ಇರುತ್ತದೆ.

ಟ್ರಾನ್ಸ್ ಕೊಬ್ಬುಗಳು

ಹೃದ್ರೋಗಕ್ಕೆ ಪ್ರಮುಖ ಕಾರಣ ಟ್ರಾನ್ಸ್ ಕೊಬ್ಬುಗಳು. ಈ ಟ್ರಾನ್ಸ್ ಕೊಬ್ಬುಗಳಲ್ಲಿ ಸಮೃದ್ಧವಾಗಿರುವ ಹೆಚ್ಚಿನ ಆಹಾರವನ್ನು ಸೇವಿಸುವುದರಿಂದ ಹೃದಯ ಕಾಯಿಲೆಯ ಅಪಾಯ ಹೆಚ್ಚಾಗುವುದಲ್ಲದೆ, ವೀರ್ಯಾಣುಗಳ ಸಂಖ್ಯೆ ಮತ್ತು ಪುರುಷರ ಫಲವಂತಿಕೆ ಕಡಿಮೆಯಾಗುತ್ತದೆ. ಟ್ರಾನ್ಸ್ ಕೊಬ್ಬಿನಾಂಶ ಇರುವ ಯಾವುದೇ ಆಹಾರಗಳನ್ನು ಸೇವಿಸದಿರಿ.

ಅಧಿಕ ಕೊಬ್ಬಿನಾಂಶ ಇರುವ ಹಾಲು

ಹಾಲು ದೇಹಕ್ಕೆ ಆರೋಗ್ಯಕರ. ಆದರೆ ಅಧಿಕ ಕೊಬ್ಬಿನಾಂಶ ಇರುವ ಹಾಲು ಹಾನಿಕರ. ಜಾನುವಾರುಗಳಿಗೆ ನೀಡುವ ಸ್ಟೀರಾಯ್ಡ್‌ಗಳು ದೇಹಕ್ಕೆ ಹಾನಿಕಾರಕ ಮತ್ತು ವೀರ್ಯಾಣುಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಈ ರೀತಿಯ ಆಹಾರಗಳನ್ನು ಹೆಚ್ಚು ಸೇವಿಸದಂತೆ ನೋಡಿಕೊಳ್ಳಬೇಕು.

ಕೀಟನಾಶಕಗಳ ಪರಿಣಾಮ

ತರಕಾರಿಗಳು ಮತ್ತು ಹಣ್ಣುಗಳ ಮೇಲೆ ಕೀಟನಾಶಕಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಕೀಟನಾಶಕಗಳಿಂದ ಸಂಸ್ಕರಿಸಿದ ಆಹಾರ ಉತ್ಪನ್ನಗಳನ್ನು ಸರಿಯಾಗಿ ತೊಳೆಯದೆ ಸೇವಿಸಿದರೆ, ಅದು ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಾನ್‌ಸ್ಟಿಕ್ ಪಾತ್ರೆಗಳಲ್ಲಿರುವ ಕೆಲವು ರಾಸಾಯನಿಕಗಳು ಪುರುಷರ ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತವೆ. ನಾನ್‌ಸ್ಟಿಕ್ ಪಾತ್ರೆಗಳಲ್ಲಿ ಅತಿಯಾಗಿ ಬೇಯಿಸುವುದನ್ನು ತಪ್ಪಿಸಿ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Whats_app_banner