ಕನ್ನಡ ಸುದ್ದಿ  /  ಜೀವನಶೈಲಿ  /  Nettle Tea: ನೆಟಲ್‌ ಟೀ; ಈ ಹರ್ಬಲ್‌ ಟೀ ಕುಡಿಯೋದ್ರಿಂದ ಸಿಗುವ 10 ಆರೋಗ್ಯ ಪ್ರಯೋಜನಗಳಿವು

Nettle Tea: ನೆಟಲ್‌ ಟೀ; ಈ ಹರ್ಬಲ್‌ ಟೀ ಕುಡಿಯೋದ್ರಿಂದ ಸಿಗುವ 10 ಆರೋಗ್ಯ ಪ್ರಯೋಜನಗಳಿವು

Nettle Tea: ನೆಟಲ್‌ ಟೀ ಎಂದರೇನು? ಇದು ಹೊಂದಿರುವ ಪೋಷಕಾಂಶಗಳು ಯಾವವು? ಈ ಗಿಡಮೂಲಿಕೆ ಚಹಾ ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು ಇಲ್ಲಿವೆ. (ಬರಹ: ಅರ್ಚನಾ ವಿ. ಭಟ್‌)

Nettle Tea: ನೆಟಲ್‌ ಟೀ; ಈ ಹರ್ಬಲ್‌ ಟೀ ಕುಡಿಯೋದ್ರಿಂದ ಸಿಗುವ 10 ಆರೋಗ್ಯ ಪ್ರಯೋಜನಗಳಿವು
Nettle Tea: ನೆಟಲ್‌ ಟೀ; ಈ ಹರ್ಬಲ್‌ ಟೀ ಕುಡಿಯೋದ್ರಿಂದ ಸಿಗುವ 10 ಆರೋಗ್ಯ ಪ್ರಯೋಜನಗಳಿವು

ಸಸ್ಯಗಳ ಎಲೆಗಳು ಮತ್ತು ಬೇರುಗಳಿಂದ ತಯಾರಿಸುವ ಚಹಾಕ್ಕೆ ಗಿಡಮೂಲಿಕೆ ಚಹಾ ಅಥವಾ ಹರ್ಬಲ್‌ ಟೀ ಎನ್ನುತ್ತಾರೆ. ನೆಟಲ್‌ ಗಿಡದ ಎಲೆಗಳಿಂದ ತಯಾರಿಸುವ ನೆಟಲ್‌ ಟೀ ಸಹ ಒಂದು ಗಿಡಮೂಲಿಕೆ ಚಹಾವಾಗಿದೆ. ನೆಟಲ್‌ ಗಿಡ ತುರಿಕೆಯ ಗುಣಲಕ್ಷಣ ಹೊಂದಿರುವ ಸಸ್ಯವಾದರೂ ಅದನ್ನು ಒಣಗಿಸಿದಾಗ ಅಥವಾ ಬಿಸಿ ನೀರಿನಲ್ಲಿ ಕುದಿಸಿದಾಗ ಅದು ತುರಿಕೆಯ ಸಂವೇದನೆಯನ್ನು ಕಳೆದುಕೊಳ್ಳುತ್ತದೆ ಮತ್ತು ಸೇವಿಸಲು ಏನೂ ಅಡ್ಡಿಯಿಲ್ಲ. ಸಾಮಾನ್ಯವಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ದೊರೆಯುವ ಈ ಸಸ್ಯವನ್ನು ಕನ್ನಡದಲ್ಲಿ ಚುರಿಕೆ ಸೊಪ್ಪು ಅಥವಾ ತುರಿಕೆ ಸೊಪ್ಪು ಎಂದು ಕರೆದರೆ, ಹಿಂದಿಯಲ್ಲಿ ಬಿಚುವಾ ಸೊಪ್ಪು ಎಂದು ಕರೆಯುತ್ತಾರೆ.

ಟ್ರೆಂಡಿಂಗ್​ ಸುದ್ದಿ

ಈ ಗಿಡದ ಚಹಾವನ್ನು ಬೇರೆ ಬೇರೆ ಆರೋಗ್ಯ ಪ್ರಯೋಜನಗಳಿಗಾಗಿ ಸೇವಿಸಲಾಗುತ್ತದೆ. ಇದು ವಿಟಮಿನ್‌ ಎ, ಸಿ ಮತ್ತು ಕೆ ಹೊಂದಿದ್ದು, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಮ್ಯಾಗ್ನೀಸಿಯಂ ನಂತಹ ಖನಿಜಗಳಿಂದ ಸಮೃದ್ದವಾಗಿದೆ. ಅಧಿಕ ಆಂಟಿಒಕ್ಸಿಡೆಂಟ್‌ ಹೊಂದಿರುವ ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡಬಲ್ಲದು. ಈ ಗಿಡದ ಎಲೆಗಳಿಂದ ತಯಾರಿಸಿದ ಚಹಾವು ಅನೇಕ ಸಂಯುಕ್ತಗಳನ್ನು ಹೊಂದಿರುವದರಿಂದ ದೇಹದ ಉರಿಯೂತ, ಸಂಧಿವಾತ ಮುಂತಾದ ಪರಿಸ್ಥಿತಿಗಳಿಗೆ ಸಮಪರ್ಕವಾಗಿ ಪರಿಹಾರ ನೀಡಬಲ್ಲದು. ನೆಟಲ್ ಟೀ ಸೇವನೆಯಿಂದ ಸಿಗುವ ಸಾಮಾನ್ಯ ಪ್ರಯೋಜಗಳು ಇಲ್ಲಿವೆ.

ಇದನ್ನೂ ಓದಿ: Raw Onion Benefits: ತೂಕ ಇಳಿಕೆಯಿಂದ ಚರ್ಮದ ಆರೋಗ್ಯ ಸುಧಾರಣೆವರೆಗೆ ಹಸಿ ಈರುಳ್ಳಿ ಸೇವನೆಯ 10 ಪ್ರಯೋಜನಗಳಿವು

ನೆಟಲ್‌ ಟೀ ಸೇವನೆಯಿಂದ ಸಿಗುವ 10 ಆರೋಗ್ಯ ಪ್ರಯೋಜನಗಳು

1. ಪೋಷಕಾಂಶಗಳಿಂದ ಸಮೃದ್ಧವಾಗಿದೆ

ನೆಟಲ್‌ ಗಿಡದ ಎಲೆಗಳಿಂದ ತಯಾರಿಸುವ ಚಹಾವು ವಿಟಮಿನ್‌ ಎ, ಸಿ ಮತ್ತು ಕೆ ಹೊಂದಿದ್ದು ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್‌ನಂತಹ ಖನಿಜಗಳಿಂದ ಸಮೃದ್ದವಾಗಿದೆ. ಈ ಪೋಷಕಾಂಶಗಳು ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸಹಾಯಮಾಡುತ್ತವೆ.

2. ಉರಿಯೂತ ಶಮನ ಮಾಡುವ ಗುಣ ಹೊಂದಿದೆ

ನೆಟಲ್‌ ಟೀ ಉರಿಯೂತ ಶಮನ ಮಾಡುವ ಹಲವಾರು ಸಂಯುಕ್ತಗಳನ್ನು ಹೊಂದಿದೆ. ನಿಯಮಿತವಾಗಿ ಸೇವಿಸುವುದರಿಂದ ಉರಿಯೂತ ಮತ್ತು ಸಂಧೀವಾತ ನಿವಾರಿಸಿಕೊಳ್ಳಲು ಸಹಾಯ ಮಾಡುತ್ತದೆ.

3. ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಇದು ಬಿಳಿರಕ್ತ ಕಣಗಳ ಉತ್ಪಾದನೆಯನ್ನು ಹೆಚ್ಚಿಸುವುದರಿಂದ ರೋಗನಿರೋಧಕ ಶಕ್ತಿ ಉತ್ತೇಜಿಸುತ್ತದೆ. ಇದರಿಂದ ಸೋಂಕು ಮತ್ತು ರೋಗಗಳ ವಿರುದ್ದ ಹೋರಾಡಲು ದೇಹವನ್ನು ಬಲಪಡಿಸುತ್ತದೆ.

4. ಹೃದಯದ ರಕ್ತನಾಳಗಳ ಆರೋಗ್ಯ ಕಾಪಾಡುತ್ತದೆ

ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್‌ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುವ ನೆಟಲ್‌ ಟೀ ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ. ಇದು ರಕ್ತಪರಿಚಲನೆಯನ್ನು ಸುಧಾರಿಸಿ, ಹೃದಯದ ರಕ್ತನಾಳಗಳ ಕಾಯಿಲೆಗಳ ಅಪಾಯ ಕಡಿಮೆ ಮಾಡುತ್ತದೆ.

5. ಅಲರ್ಜಿ ನಿವಾರಿಸುತ್ತದೆ

ಆಂಟಿಹಿಸ್ಟಮೈನ್‌ ಗುಣ ಹೊಂದಿರುವ ನೆಟಲ್‌ ಟೀ ಅಲರ್ಜಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸೀನುವಿಕೆ, ತುರಿಕೆ ಮತ್ತು ಋತುಮಾನದ ಅಲರ್ಜಿಗಳನ್ನು ದೂರಮಾಡಲು ಸಹಾಯ ಮಾಡುತ್ತದೆ.

6. ದೇಹವನ್ನು ನಿರ್ವಿಷಗೊಳಿಸುತ್ತದೆ

ನೆಟಲ್ ಗಿಡದಿಂದ ತಯಾರಿಸಿದ ಚಹಾವು ಮೂತ್ರವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ದೇಹದಿಂದ ವಿಷ ಮತ್ತು ತ್ಯಾಜ್ಯ ವಸ್ತುಗಳನ್ನು ಹೊರಹಾಕುವುದರ ಮೂಲಕ ಮೂತ್ರಪಿಂಡ ಶುದ್ಧೀಕರಿಸಲು ಮತ್ತು ಯಕೃತ್ತಿನ ಕಾರ್ಯ ಸುಧಾರಿಸಲು ಸಹಾಯ ಮಾಡುತ್ತದೆ.

7. ಜೀರ್ಣಕ್ರಿಯೆ ಸುಧಾರಿಸುತ್ತದೆ

ನೆಟಲ್‌ ಟೀ ಯು ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸುತ್ತದೆ. ಇದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಹೊಟ್ಟೆಯುಬ್ಬರ, ಮಲಬದ್ಧತೆ ಮತ್ತು ಅಜೀರ್ಣದಂತಹ ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುತ್ತದೆ.

8. ಚರ್ಮದ ಆರೋಗ್ಯ ಕಾಪಾಡುತ್ತದೆ

ಇದು ಉರಿಯೂತವನ್ನು ಕಡಿಮೆ ಮಾಡುವ ಮೂಲಕ ಚರ್ಮದ ಆರೋಗ್ಯ ಸುಧಾರಿಸುತ್ತದೆ. ಮೊಡವೆ ನಿವಾರಿಸಿ, ಚರ್ಮದ ಕಾಂತಿ ಹೆಚ್ಚಿಸುತ್ತದೆ. ಎಸ್ಜಿಮಾ ಅಥವಾ ಸೋರಿಯಾಸಿಸ್‌ನಂತಹ ಚರ್ಮದ ಖಾಯಿಲೆಗಳನ್ನು ಗುಣಪಡಿಸಲು ಇದ ಪ್ರಯೋಜನಕಾರಿಯಾಗಿದೆ.

9. ಮಧುಮೇಹವನ್ನು ನಿಯಂತ್ರಿಸುತ್ತದೆ

ನೆಟಲ್ ಟೀ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ಇನ್ಸುಲಿನ್ ಪ್ರಮಾಣ ಸುಧಾರಿಸಲು ಸಹಾಯ ಮಾಡುತ್ತದೆ. ಇದು ಮಧುಮೇಹ ಹೊಂದಿರುವ ವ್ಯಕ್ತಿಗಳಿಗೂ ಉತ್ತಮವಾಗಿದೆ.

10. ಕೂದಲು ಮತ್ತು ಉರುರುಗಳ ಆರೋಗ್ಯ ಕಾಪಾಡುತ್ತದೆ

ನೆಟಲ್‌ ಗಿಡದಿಂದ ತಯಾರಿಸಿದ ಟೀ ಕೂದಲಿನ ಬೆಳವಣಿಗೆ ಉತ್ತೇಜಿಸುತ್ತದೆ ಮತ್ತು ಉಗುರುಗಳ ಆರೋಗ್ಯವನ್ನು ಹೆಚ್ಚಿಸುತ್ತದೆ.

ಪೋಷಕಾಂಶ ಮತ್ತು ವಿವಿಧ ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ನೆಟಲ್‌ ಟೀ, ಉತ್ತಮ ಆರೋಗ್ಯ ಪ್ರಯೋಜನಗಳನ್ನು ಒದಗಿಸಬಹುದು. ಆದರೆ ನೀವು ನಿಮ್ಮ ನಿತ್ಯದ ಆಹಾರಕ್ರಮದಲ್ಲಿ ಸೇರಿಸಿಕೊಳ್ಳವು ಮೊದಲು ತಜ್ಞ ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ.

(ಬರಹ: ಅರ್ಚನಾ ವಿ. ಭಟ್‌)

ವಿಭಾಗ