ಕನ್ನಡ ಸುದ್ದಿ  /  ಜೀವನಶೈಲಿ  /  Eggplant Health Benefits: ಬದನೆಕಾಯಿ ಅಂತ ಮೂಗು ಮುರಿಬೇಡಿ, ಇದರ ಆರೋಗ್ಯ ಪ್ರಯೋಜನಗಳನ್ನು ಕೇಳಿದ್ರೆ ಅಚ್ಚರಿ ಪಡ್ತೀರಿ

Eggplant Health Benefits: ಬದನೆಕಾಯಿ ಅಂತ ಮೂಗು ಮುರಿಬೇಡಿ, ಇದರ ಆರೋಗ್ಯ ಪ್ರಯೋಜನಗಳನ್ನು ಕೇಳಿದ್ರೆ ಅಚ್ಚರಿ ಪಡ್ತೀರಿ

ಬದನೆಕಾಯಿ ನಂಜು ಎಂಬ ಕಾರಣಕ್ಕೆ ಹಲವರು ತಿನ್ನಲು ಹಿಂದೇಟು ಹಾಕುತ್ತಾರೆ. ಆದರೆ ಇದರಲ್ಲಿ ನಾರಿನಾಂಶ, ವಿಟಮಿನ್‌ ಹಾಗೂ ಮಿನರಲ್ಸ್‌ನಂತಹ ಪೋಷಕಾಂಶಗಳು ಸಮೃದ್ಧವಾಗಿದೆ. ಇದು ಹೃದಯದ ಆರೋಗ್ಯ ಸೇರಿದಂತೆ ಒಟ್ಟಾರೆ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ.

ಬದನೆಕಾಯಿ ಅಂತ ಮೂಗು ಮುರಿಬೇಡಿ, ಇದರ ಆರೋಗ್ಯ ಪ್ರಯೋಜನಗಳನ್ನು ಕೇಳಿದ್ರೆ ಅಚ್ಚರಿ ಪಡ್ತೀರಿ
ಬದನೆಕಾಯಿ ಅಂತ ಮೂಗು ಮುರಿಬೇಡಿ, ಇದರ ಆರೋಗ್ಯ ಪ್ರಯೋಜನಗಳನ್ನು ಕೇಳಿದ್ರೆ ಅಚ್ಚರಿ ಪಡ್ತೀರಿ

ಬದನೆಕಾಯಿ ಎಂದರೆ ಮೂಗು ಮುರಿಯುವವರೇ ಹೆಚ್ಚು. ಇದನ್ನು ತಿನ್ನುವುದು ಹಲವರಿಗೆ ಇಷ್ಟವಾಗುವುದಿಲ್ಲ. ಇನ್ನು ಕೆಲವರಿಗೆ ಬದನೆಕಾಯಿ ರುಚಿ ಎನ್ನಿಸಿದರೂ ನಂಜು ಎನ್ನುವ ಕಾರಣ ತಿನ್ನಲು ಹಿಂದೇಟು ಹಾಕುತ್ತಾರೆ. ಬದನೆಕಾಯಿ ಬಹುಮುಖಿ ತರಕಾರಿ ಎಂದರೂ ತಪ್ಪಲ್ಲ. ಇದರಿಂದ ಸಾಂಬಾರ್‌, ಪಲ್ಯ, ಫ್ರೈ ಹೀಗೆ ಹಲವು ಬಗೆ ಬಗೆ ಖಾದ್ಯಗಳನ್ನು ತಯಾರಿಸಬಹುದು. ಅಡುಗೆಯ ರುಚಿಯ ಹೆಚ್ಚಿಸುವ ಬದನೆಕಾಯಿ ಆರೋಗ್ಯಕ್ಕೂ ಉತ್ತಮ. ಇದರಲ್ಲಿ ವಿಟಮಿನ್‌ ಎ ಮತ್ತು ಸಿಯಂತಹ ಉತ್ಕರ್ಷಣ ನಿರೋಧಕ ಅಂಶಗಳಿವೆ. ಇದು ಜೀವಕೋಶ ಕ್ಷೀಣತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಪೌಷ್ಟಿಕತಜ್ಞ ಲೋವ್ನಿತ್‌ ಬಾತ್ರಾ ಹೇಳುವ ಪ್ರಕಾರ ʼಬದನೆಕಾಯಿಯಲ್ಲಿ ನಾರಿನಾಂಶ ಸಮೃದ್ಧವಾಗಿದೆ. ಇದರಲ್ಲಿ ಕಡಿಮೆ ಕ್ಯಾಲೊರಿ ಇದ್ದು, ಹಲವು ಪೋಷಕಾಂಶಗಳಿವೆ. ಇದು ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳನ್ನು ಹೊಂದಿದೆʼ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಬದನೆಕಾಯಿಯ 5 ಅದ್ಭುತ ಪ್ರಯೋಜನಗಳಿವು

ಮೂಳೆಯ ಆರೋಗ್ಯ: ಬದನೆಕಾಯಿಯಲ್ಲಿ ಮೆಗ್ನೇಶಿಯಂ, ಮ್ಯಾಂಗನಿಸ್‌, ಪೊಟ್ಯಾಶಿಯಂ ಹಾಗೂ ಕಾಪರ್‌ ಅಂಶ ಸಮೃದ್ಧವಾಗಿದೆ. ಇದು ಮೂಳೆಗಳ ಆರೋಗ್ಯಕ್ಕೆ ಬಹಳ ಉತ್ತಮ. ಇದು ಮೂಳೆಗಳ ಸಾಂದ್ರತೆಯನ್ನು ವೃದ್ಧಿಸುತ್ತದೆ. ಮೂಳೆಗಳು ಬಲಗೊಳಲು ಇದು ಸಹಾಯ ಮಾಡುತ್ತದೆ. 

ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ: ಬದನೆಕಾಯಿಯನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ನಿಯಂತ್ರಣದಲ್ಲಿರುತ್ತದೆ. ಯಾಕೆಂದರೆ ಇದರಲ್ಲಿ ನಾರಿನಾಂಶ ಸಮೃದ್ಧವಾಗಿರುತ್ತದೆ. ಇದು ಜೀರ್ಣಕ್ರಿಯೆ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಇದರಲ್ಲಿ ಇರುವ ಪಾಲಿಫಿನಾಲ್‌ಗಳು ಅಥವಾ ನೈಸರ್ಗಿಕ ಸಸ್ಯ ಸಂಯುಕ್ತಗಳು ಸಕ್ಕರೆ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ ಹಾಗೂ ಇನ್ಸುಲಿನ್‌ ಸ್ರವಿಕೆಯನ್ನು ಹೆಚ್ಚಿಸಬಹುದು. ಇವೆರಡೂ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು: ಬದನೆಕಾಯಿ ಅಂಥೋಸಯಾನಿನ್‌ಗಳಲ್ಲಿ ಸಮೃದ್ಧವಾಗಿದೆ. ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿರುವ ವರ್ಣದ್ರವ್ಯವು ದೇಹಕ್ಕೆ ಪ್ರಯೋಜನಕಾಯಿಯಾಗಿದೆ. ಇದು ಜೀವಕೋಶಗಳಿಗೆ ಹಾನಿಯಾಗುವುದನ್ನು ತಡೆಯುತ್ತದೆ.

ಕ್ಯಾನ್ಸರ್‌ಗೆ ತಡೆಯಲು ಸಹಾಯ ಮಾಡುತ್ತದೆ: ಬಯೋಆಕ್ಟಿವ್‌ ಸಂಯುಕ್ತಗಳನ್ನು ಹೊಂದಿರುವ ಬದನೆಕಾಯಿ ಕ್ಯಾನ್ಸರ್‌ ಕೋಶಗಳನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿದೆ. ಬದನೆಯಲ್ಲಿರುವ ಸೋಲಾಸೋಡಿನ್ ರಾಮ್ನೋಸಿಲ್ ಗ್ಲೈಕೋಸೈಡ್ಸ್ (SRGs) ಸಂಯುಕ್ತವು ಗೆಡ್ಡೆಯ ಕೋಶಗಳ ಸಾವಿಗೆ ಕಾರಣವಾಗುತ್ತದೆ. ಇದು ಕೆಲವು ವಿಧದ ಕ್ಯಾನ್ಸರ್‌ ಮರುಕಳಿಸುವಿಕೆಯನ್ನು ನಿಯಂತ್ರಿಸುತ್ತದೆ.

ಜೀರ್ಣಕ್ರಿಯೆಯ ಆರೋಗ್ಯ: ಸಾಕಷ್ಟು ನೀರಿನಾಂಶ, ನಾರಿನಾಂಶ ಹಾಗೂ ವಿಟಮಿನ್‌ ಅಂಶ ಹೊಂದಿರುವ ಆಹಾರಗಳು ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಇದು ಜೀರ್ಣಕ್ರಿಯೆಯನ್ನು ವೃದ್ಧಿಸುತ್ತದೆ. ಇದರಲ್ಲಿ ನೀರಿನಾಂಶ ಹೆಚ್ಚಿದ್ದು, ಕಡಿಮೆ ಕ್ಯಾಲೊರಿ ಅಂಶ ಹೊಂದಿರುತ್ತದೆ. ಆ ಮೂಲಕ ಬದನೆಕಾಯಿ ಸೇವನೆಯು ತೂಕ ಇಳಿಕೆಗೂ ಉತ್ತಮ. 

 ಬದನೆಕಾಯಿಯಿಂದ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿರುವುದು ನಿಜ. ಆದರೆ ಇದನ್ನು ಅತಿಯಾಗಿ ತಿನ್ನುವುದು ಖಂಡಿತ ಆರೋಗ್ಯಕ್ಕೆ ಉತ್ತಮವಲ್ಲ. ನಿಮಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಿದ್ರೆ ಬದನೆಕಾಯಿ ತಿನ್ನುವ ಮುನ್ನ ತಜ್ಞರ ವೈದ್ಯರನ್ನು ಸಂಪರ್ಕಿಸಿ, ಅವರಿಂದ ಸಲಹೆ ಪಡೆಯುವುದು ಉತ್ತಮ. 

ವಿಭಾಗ