ಆರೋಗ್ಯ ಆಗ್ಗಾಗ್ಗೆ ಕೆಡ್ತಿದ್ಯಾ; ಪ್ರತಿರಕ್ಷಣಾ ವ್ಯವಸ್ಥೆ ವೃದ್ಧಿಸುವ ಈ ಆಹಾರಗಳನ್ನು ಸೇವಿಸಿ ಫಿಟ್‌ ಆಗಿ
ಕನ್ನಡ ಸುದ್ದಿ  /  ಜೀವನಶೈಲಿ  /  ಆರೋಗ್ಯ ಆಗ್ಗಾಗ್ಗೆ ಕೆಡ್ತಿದ್ಯಾ; ಪ್ರತಿರಕ್ಷಣಾ ವ್ಯವಸ್ಥೆ ವೃದ್ಧಿಸುವ ಈ ಆಹಾರಗಳನ್ನು ಸೇವಿಸಿ ಫಿಟ್‌ ಆಗಿ

ಆರೋಗ್ಯ ಆಗ್ಗಾಗ್ಗೆ ಕೆಡ್ತಿದ್ಯಾ; ಪ್ರತಿರಕ್ಷಣಾ ವ್ಯವಸ್ಥೆ ವೃದ್ಧಿಸುವ ಈ ಆಹಾರಗಳನ್ನು ಸೇವಿಸಿ ಫಿಟ್‌ ಆಗಿ

Health Tips: ಶುಂಠಿಯಲ್ಲಿ ಉರಿಯೂತ ಕಡಿಮೆ ಮಾಡುವ ಗುಣವಿದೆ. ಇದು ಗಂಟಲಿನ ಊತ ಮತ್ತು ಇತರ ಉರಿಯೂತದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಶುಂಠಿಯ ವಾಸನೆ ವಾಕರಿಕೆ ಲಕ್ಷಣವನ್ನು ತಡೆಯುತ್ತದೆ.

ಪ್ರತಿರಕ್ಷಣಾ ವ್ಯವಸ್ಥೆ ಹೆಚ್ಚಿಸುವ ಆಹಾರಗಳು
ಪ್ರತಿರಕ್ಷಣಾ ವ್ಯವಸ್ಥೆ ಹೆಚ್ಚಿಸುವ ಆಹಾರಗಳು (PC: Pixabay)

Health Tips: ಜಂಕ್‌ ಫುಡ್‌ಗಳು, ಒತ್ತಡದ ಜೀವನ, ವಾತಾವರಣ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ನಮ್ಮ ಆರೋಗ್ಯ ಏರು ಪೇರಾಗುತ್ತದೆ. ಆದರೆ ಪದೇ ಪದೇ ಇಂತಹ ಸಮಸ್ಯೆ ಕಾಡದಂತೆ ಪ್ರತಿರಕ್ಷಣಾ ವ್ಯವಸ್ಥೆಯನ್ನು ವೃದ್ಧಿಸಿಕೊಳ್ಳಬೇಕಾಗಿರುವುದು ಬಹಳ ಮುಖ್ಯ. ಕೆಲವೊಂದು ನಿರ್ದಿಷ್ಟ ಆಹಾರಗಳು ನಮ್ಮ ದೇಹದ ನೈಸರ್ಗಿಕ ರಕ್ಷಣಾ ಕಾರ್ಯ ವಿಧಾನಗಳನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆ ಆಹಾರಗಳ ಬಗ್ಗೆ ತಿಳಿಯೋಣ.

ಸಿಟ್ರಸ್‌ ಹಣ್ಣುಗಳು

ಕಿತ್ತಳೆ ಹಣ್ಣು, ದ್ರಾಕ್ಷಿ, ನಿಂಬೆಹಣ್ಣು, ಮೂಸಂಬಿ ಸೇರಿದಂತೆ ವಿವಿಧ ಹಣ್ಣುಗಳಲ್ಲಿ ವಿಟಮಿನ್‌ ಸಿ ಪ್ರಮಾಣ ಸಮೃದ್ದವಾಗಿದೆ. ಇವುಗಳನ್ನು ಸಿಟ್ರಸ್‌ ಹಣ್ಣುಗಳು ಎಂದು ಕರೆಯಲಾಗುತ್ತದೆ. ಈ ಹಣ್ಣುಗಳನ್ನು ಸೇವಿಸಿದರೆ ದೇಹದಲ್ಲಿ ಬಿಳಿ ರಕ್ತಕಣಗಳು ಹೆಚ್ಚಾಗುತ್ತದೆ. ಸೋಂಕುಗಳ ವಿರುದ್ಧ ಹೋರಾಡಲು ಬಹಳ ಸಹಾಯಕಾರಿಯಾಗಿದೆ. ಆದ್ದರಿಂದ ಆಗ್ಗಾಗ್ಗೆ ಸಿಟ್ರಸ್‌ ಹಣ್ಣುಗಳನ್ನು ಸೇವಿಸಿ, ಮಕ್ಕಳಿಗೂ ಕೊಡಿ.

ಪಾಲಕ್‌ ಸೊಪ್ಪು

ಹಸಿರು ಸೊಪ್ಪುಗಳು ದೇಹಕ್ಕೆ ಬಹಳ ಒಳ್ಳೆಯದು. ಅದರಲ್ಲೂ ಪಾಲಕ್‌ ದೇಹಕ್ಕೆ ಬಹಳ ಒಳ್ಳೆಯದು. ಇದರಲ್ಲಿ ವಿಟಮಿನ್‌ ಸಿ ಹಾಗೂ ಉತ್ಕರ್ಷನಾ ನಿರೋಧಕಗಳಿವೆ. ಜೀವಸತ್ವಗಳು ಹಾಗೂ ಖನಿಜಾಂಶ ಹೆಚ್ಚಿನ ಪ್ರಮಾಣದಲ್ಲಿದೆ. ಬೀಟಾ ಕ್ಯಾರೋಟಿನ್ ಅಂಶ ಕೂಡಾ ಇದರಲ್ಲಿದ್ದು ನಮ್ಮ ಪ್ರತಿರಕ್ಷಣಾ ವ್ಯವಸ್ಥೆಗಳ ಸೋಂಕಿನ ಹೋರಾಟದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಅರಿಶಿನ

ಅರಿಶಿನದಲ್ಲಿನ ಕರ್ಕ್ಯುಮಿನ್ ಉರಿಯೂತದ ಮತ್ತು ಉತ್ಕರ್ಷಣಾ ನಿರೋಧಕ ಪರಿಣಾಮಗಳನ್ನು ಹೊಂದಿದೆ. ನಿಮ್ಮ ಆಹಾರದಲ್ಲಿ ಅರಿಶಿನವನ್ನು ಹೆಚ್ಚಾಗಿ ಬಳಸುವುದರಿಂದ ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆ ಹೆಚ್ಚುತ್ತದೆ.

ಬಾದಾಮಿ

ಬಾದಾಮಿಯಲ್ಲಿ ವಿಟಮಿನ್ ಇ ಅಂಶ ಹೇರಳವಾಗಿದೆ. ಇದು ಆರೋಗ್ಯಕರ ಪ್ರತಿರಕ್ಷಣಾ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ನಿರ್ಣಾಯಕವಾಗಿದೆ. ಇದು ಉತ್ಕರ್ಷಣಾ ನಿರೋಧಕವಾಗಿ ಕಾರ್ಯ ನಿರ್ವಹಿಸುವ ಕೊಬ್ಬಿನಲ್ಲಿ ಕರಗುವ ವಿಟಮಿನ್. ಇದು ಇಮ್ಯುನಿಟಿ ಸಿಸ್ಟಮ್‌ ಹೆಚ್ಚಿಸುವುದಲ್ಲದೆ, ಚರ್ಮ ಹಾಗೂ ಕೂದಲಿನ ರಕ್ಷಣೆಗೆ ಕೂಡಾ ಸಹಕಾರಿಯಾಗಿದೆ.

ಶುಂಠಿ

ಶುಂಠಿ ಅಡುಗೆಗೆ ಮಾತ್ರವಲ್ಲದೆ ಆರೋಗ್ಯಕ್ಕೂ ಬಹಳ ಉಪಯುಕ್ತ ವಸ್ತು. ಇದರಲ್ಲಿ ಉರಿಯೂತ ಕಡಿಮೆ ಮಾಡುವ ಗುಣವಿದೆ. ಇದು ಗಂಟಲಿನ ಊತ ಮತ್ತು ಇತರ ಉರಿಯೂತದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಶುಂಠಿಯ ವಾಸನೆ ವಾಕರಿಕೆ ಲಕ್ಷಣವನ್ನು ತಡೆಯುತ್ತದೆ. ಇದರಲ್ಲಿ ಇರುವಂತಹ ಜಿಂಜರೋಲ್ ಅಂಶವು ಉಷ್ಣವನ್ನು ಉಂಟು ಮಾಡುತ್ತದೆ. ಜೊತೆಗೆ ದೀರ್ಘಕಾಲಿಕ ನೋವು ಮತ್ತು ಕೊಲೆಸ್ಟ್ರಾಲ್ ತಗ್ಗಿಸುವ ಗುಣ ಶುಂಠಿಯಲ್ಲಿದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿ ಅಲಿಸಿನ್ ಅಂಶವನ್ನು ಹೊಂದಿದೆ. ಇದು ರೋಗನಿರೋಧಕ ಉತ್ತೇಜಿಸುವ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಬಿಳಿ ರಕ್ತ ಕಣಗಳ ಚಟುವಟಿಕೆಯನ್ನು ವರ್ಧಿಸುತ್ತದೆ. ಅನಾರೋಗ್ಯದ ವಿರುದ್ಧ ಹೋರಾಡಲು ಕೂಡಾ ಬೆಳ್ಳುಳ್ಳಿ ಸಹಾಯ ಮಾಡುತ್ತದೆ.

ಈ ವಸ್ತುಗಳನ್ನು ಪ್ರತಿದಿನ ನಿಮ್ಮ ಆಹಾರದಲ್ಲಿ ಬಳಸಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ವೃದ್ಧಿಸಿಕೊಳ್ಳಿ.

Whats_app_banner