ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಪಾನೀಯ ಸೇವಿಸುವುದರಿಂದ ಬೇಗನೆ ತೂಕ ಇಳಿಯೋದಷ್ಟೇ ಅಲ್ಲ, ಆರೋಗ್ಯಕ್ಕೂ ಇಷ್ಟೆಲ್ಲಾ ಪ್ರಯೋಜನಗಳಿವೆ
ಕನ್ನಡ ಸುದ್ದಿ  /  ಜೀವನಶೈಲಿ  /  ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಪಾನೀಯ ಸೇವಿಸುವುದರಿಂದ ಬೇಗನೆ ತೂಕ ಇಳಿಯೋದಷ್ಟೇ ಅಲ್ಲ, ಆರೋಗ್ಯಕ್ಕೂ ಇಷ್ಟೆಲ್ಲಾ ಪ್ರಯೋಜನಗಳಿವೆ

ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಪಾನೀಯ ಸೇವಿಸುವುದರಿಂದ ಬೇಗನೆ ತೂಕ ಇಳಿಯೋದಷ್ಟೇ ಅಲ್ಲ, ಆರೋಗ್ಯಕ್ಕೂ ಇಷ್ಟೆಲ್ಲಾ ಪ್ರಯೋಜನಗಳಿವೆ

ಭಾರತದ ಸಾಂಬಾರ ಪದಾರ್ಥಗಳಲ್ಲಿ ಅಗ್ರಸ್ಥಾನ ಪಡೆದಿರುವ ಬೆಳ್ಳುಳ್ಳಿ ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಇದು ತೂಕ ಇಳಿಕೆಗೂ ಪ್ರಯೋಜನಕಾರಿ ಎಂಬುದು ಹಲವರಿಗೆ ತಿಳಿದಿಲ್ಲ. ಪ್ರತಿದಿನ ಬೆಳ್ಳುಳ್ಳಿ ನೀರು ಕುಡಿಯುವುದರಿಂದ ತೂಕ ಇಳಿಕೆಗೆ ಹೇಗೆ ಸಹಾಯವಾಗುತ್ತದೆ, ಇದನ್ನು ತಯಾರಿಸುವುದು ಹೇಗೆ ನೋಡಿ.

ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಪಾನೀಯ ಸೇವಿಸುವುದರಿಂದ ಬೇಗನೆ ತೂಕ ಕಡಿಮೆಯಾಗೋದಷ್ಟೇ ಅಲ್ಲ, ಆರೋಗ್ಯಕ್ಕೂ ಇಷ್ಟೆಲ್ಲಾ ಪ್ರಯೋಜನಗಳಿವೆ
ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಪಾನೀಯ ಸೇವಿಸುವುದರಿಂದ ಬೇಗನೆ ತೂಕ ಕಡಿಮೆಯಾಗೋದಷ್ಟೇ ಅಲ್ಲ, ಆರೋಗ್ಯಕ್ಕೂ ಇಷ್ಟೆಲ್ಲಾ ಪ್ರಯೋಜನಗಳಿವೆ

ಭಾರತೀಯ ಅಡುಗೆಯಲ್ಲಿ ಸಿಗುವ ಸಾಮಾನ್ಯ ಪದಾರ್ಥಗಳಲ್ಲಿ ಬೆಳ್ಳುಳ್ಳಿ ಕೂಡ ಒಂದು. ಇದನ್ನ ನಾವು ನಮ್ಮ ಪ್ರತಿದಿನ ಅಡುಗೆಯಲ್ಲಿ ಬಳಸುತ್ತೇವೆ. ಒಗ್ಗರಣೆ ಹಾಕಲು ಬೆಳ್ಳುಳ್ಳಿ ಇಲ್ಲ ಅಂದ್ರೆ ಅದು ಘಮ ಬರುವುದಿಲ್ಲ. ಸಾಂಬಾರಿನೊಂದಿಗೆ ಬೆಳ್ಳುಳ್ಳಿ ಇರಲೇಬೇಕು. ಇಂತಹ ಬಹುಪಯೋಗಿ ಬೆಳ್ಳುಳ್ಳಿಯಿಂದ ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಗಳಿವೆ. ಆದರೆ ಇದು ತೂಕ ಇಳಿಕೆಗೂ ಸಹಕಾರಿ ಎಂಬುದು ಹಲವರಿಗೆ ತಿಳಿದಿಲ್ಲ.

ಬೆಳ್ಳುಳ್ಳಿ ಶಾಟ್ಸ್‌ ಅಥವಾ ಬೆಳ್ಳುಳ್ಳಿ ನೀರು, ಪಾನೀಯ ಕುಡಿಯುವುದರಿಂದ ಬೇಗನೆ ತೂಕ ಕಡಿಮೆ ಮಾಡಿಕೊಳ್ಳಬಹುದು. ಇದನ್ನು ನಿಂಬೆ ಹಾಗೂ ಜೇನುತುಪ್ಪ ಸೇರಿಸಿ ತಯಾರಿಸಲಾಗುತ್ತದೆ. ಕೊಬ್ಬು ಕಡಿಮೆ ಮಾಡಲು ಇದು ಉತ್ತಮ ಪಾನೀಯವಾಗಿದೆ. ಅನಾದಿ ಕಾಲದಿಂದಲೂ ಕೊಬ್ಬು ಕರಗಿಸಲು ಬೆಳ್ಳುಳ್ಳಿ ಸೇವಿಸಲಾಗುತ್ತಿತ್ತು.

ತೂಕ ನಷ್ಟದ ವಿಚಾರಕ್ಕೆ ಬಂದಾಗ ಬೆಳ್ಳುಳ್ಳಿ ಶಾಟ್ಸ್‌ ಅನ್ನು ಬೆಳಗಿನ ಹೊತ್ತು ಸೇವಿಸುವುದು ಉತ್ತಮ. ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಶಾಟ್ಸ್‌ ಸೇವಿಸುವುದರಿಂದ ಹೆಚ್ಚು ಕೊಬ್ಬು ಕರಗಿಸಲು ಸಾಧ್ಯವಾಗುತ್ತದೆ.

ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಶಾರ್ಟ್‌ ಕುಡಿಯುವುದರ ಪ್ರಯೋಜನಗಳು

ಅಧಿಕ ಕೊಲೆಸ್ಟ್ರಾಲ್‌: ಕೆಟ್ಟ ಕೊಲೆಸ್ಟ್ರಾಲ್ ಅಥವಾ ಎಲ್‌ಡಿಎಲ್‌ ಪ್ರಮಾಣದ ಏರಿಕೆಯಿಂದ ಹೃದ್ರೋಗದ ಸಮಸ್ಯೆ ಹೆಚ್ಚುತ್ತದೆ. ಬೆಳ್ಳುಳ್ಳಿ ಸೇವನೆ ಅಥವಾ ಬೆಳ್ಳುಳ್ಳಿ ಶಾರ್ಟ್‌ ಸೇವನೆ ನೈಸರ್ಗಿಕವಾಗಿ LDL ಮಟ್ಟವನ್ನು ಕಡಿಮೆ ಮಾಡಲು ಸಾಮಾನ್ಯವಾಗಿ ಸೂಚಿಸಲಾದ ಮನೆಮದ್ದುಗಳಲ್ಲಿ ಒಂದಾಗಿದೆ. ಸಂಯುಕ್ತಗಳು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ, ಇದು ತೂಕ ನಷ್ಟಕ್ಕೂ ಉತ್ತಮ.

ತೂಕ ನಿರ್ವಹಣೆ: ಬೆಳ್ಳುಳ್ಳಿ ಮೂತ್ರವರ್ಧಕವಾಗಿದೆ. ಹೊಟ್ಟೆಯ ಕೊಬ್ಬು ಮತ್ತು ಒಟ್ಟಾರೆ ಕ್ಯಾಲೊರಿಗಳನ್ನು ಸುಡಲು ನಿಂಬೆ ಮತ್ತು ಜೇನುತುಪ್ಪದ ನೀರು ಉತ್ತಮವಾಗಿದೆ. ಆದ್ದರಿಂದ, ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯ ಶಾಟ್ಸ್‌ ಅನ್ನು ಮಿತವಾಗಿ ಮತ್ತು ನಿರಂತರವಾಗಿ ಸೇವಿಸುವುದರಿಂದ ತೂಕ ನಿರ್ವಹಣೆ ಸಾಧ್ಯವಾಗುತ್ತದೆ.

ಜೀರ್ಣಕ್ರಿಯೆ ಸುಧಾರಿಸುತ್ತದೆ: ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯ ಶಾಟ್ ತೆಗೆದುಕೊಳ್ಳುವುದು ಉತ್ತಮ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದು ಗ್ಯಾಸ್ಟ್ರಿಕ್‌ ಸಮಸ್ಯೆಯನ್ನು ನಿವಾರಿಸುತ್ತದೆ. ಅಲ್ಲದೇ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನೂ ಕಡಿಮೆ ಮಾಡುತ್ತದೆ. ಉತ್ತಮ ಜೀರ್ಣಕ್ರಿಯೆಯು ಉತ್ತಮ ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚುತ್ತದೆ: ಮಳೆಗಾಲದಲಿ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಕಾಲೋಚಿತ ಜ್ವರ, ವೈರಲ್ ಸೋಂಕುಗಳಿಂದ ದೇಹವನ್ನು ರಕ್ಷಿಸಿಕೊಳ್ಳಲು ರೋಗನಿರೋಧಕ ಶಕ್ತಿ ಸಮೃದ್ಧವಾಗಿರಬೇಕು. ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು ಬೆಳ್ಳುಳ್ಳಿ ಸೇವನೆ ಉತ್ತಮ. ಇದು ಅಲಿಸಿನ್ ಅಂಶ, ಬ್ಯಾಕ್ಟೀರಿಯಾ ವಿರೋಧಿ, ಆಂಟಿವೈರಲ್ ಗುಣಲಕ್ಷಣಗಳನ್ನು ಹೊಂದಿದ್ದು ಅದು ಪ್ರತಿರಕ್ಷಣಾ ಕಾರ್ಯವನ್ನು ನಿರ್ಮಿಸಲು ಸಹಾಯ ಮಾಡುತ್ತದೆ.

ರಕ್ತದಲ್ಲಿನ ಸಕ್ಕರೆಯಂಶವನ್ನು ನಿಯಂತ್ರಿಸುತ್ತದೆ: ಅಡ್ರಾಕ್ ಇನ್ಸುಲಿನ್ ಸೂಕ್ಷ್ಮತೆಯನ್ನು ಕಾಪಾಡಿಕೊಳ್ಳಲು ಬೆಳ್ಳುಳ್ಳಿ ಹೆಸರುವಾಸಿಯಾಗಿದೆ. ಬೆಳ್ಳುಳ್ಳಿ ಶಾಟ್‌ ನಿರಂತರವಾಗಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಇದ್ದಕ್ಕಿದ್ದಂತೆ ಏರಿಕೆಯಾಗುವುದನ್ನು ತಡೆಯಬಹುದು.

ತೂಕ ಇಳಿಕೆಯ ವಿಧಾನದಲ್ಲಿ ಗಾರ್ಲಿಕ್‌ ಶಾಟ್ಸ್‌ ಅಥವಾ ಬೆಳ್ಳುಳ್ಳಿ ಶಾರ್ಟ್‌ ಹೊಸ ಉಪಕ್ರಮವಾಗಿರಬಹುದು. ಆದರೆ ಇದು ಕೊಬ್ಬನ್ನು ಸುಡುತ್ತದೆ. ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಒಟ್ಟಾರೆ ಆರೋಗ್ಯಕ್ಕೆ ಇದರಿಂದ ಸಾಕಷ್ಟು ಪ್ರಯೋಜನಗಳಿವೆ. ಆದರೆ ಬೆಳ್ಳುಳ್ಳಿ ಅಲರ್ಜಿ ಇರುವವರು ಇದನ್ನು ಸೇವಿಸುವ ಮುನ್ನ ತಜ್ಞರಿಂದ ಅಭಿಪ್ರಾಯ ಪಡೆದು ಮುಂದುವರಿಯುವುದು ಉತ್ತಮ.

Whats_app_banner