ಸಂಕ್ರಾಂತಿ ಹಬ್ಬದ ಖಾದ್ಯಗಳಲ್ಲಿ ಎಳ್ಳು ಬಳಸೋದು ಒಳ್ಳೆಯದು; ಹೆಚ್ಚು ಸೇವನೆಯಿಂದ ಏನೆಲ್ಲಾ ಸಮಸ್ಯೆಗಳಾಗುತ್ತವೆ
Sesame Seeds Risks: ಸಂಕ್ರಾಂತಿದಲ್ಲಿ ರುಚಿ ರುಚಿಯಾದ ಖಾದ್ಯಗಳ ತಯಾರಿಸಲಾಗುತ್ತದೆ. ಎಳ್ಳು ಇಲ್ಲದೆ ಹಬ್ಬದ ಖಾದ್ಯಗಳು ಪೂರ್ಣಗೊಳ್ಳುವುದಿಲ್ಲ. ಈ ತಿಂಡಿ, ತಿನಿಸುಗಳನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಮತ್ತು ಸಂಕ್ರಾಂತಿಗೆ ಎಳ್ಳು ತಿನ್ನುವ ಸಂಪ್ರದಾಯ. ಆದರೆ ಮಿತಿ ಮೀರಿ ತಿನ್ನುವುದರಿಂದ ಆಗುವ ಅನಾನುಕೂಲತೆಗಳ ಬಗ್ಗೆಯೂ ತಿಳಿದಿರಬೇಕು.

ಸುಗ್ಗಿಯ ಹಬ್ಬ ಸಂಕ್ರಾಂತಿಯಲ್ಲಿ ಪ್ರತಿಯೊಬ್ಬರು ಎಳ್ಳಿನಿಂದ ಹಲವಾರು ರೀತಿಯ ಸಿಹಿ ಖಾದ್ಯಗಳನ್ನು ತಯಾರಿಸುವ ಮೂಲಕ ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತಾರೆ. ಇಲ್ಲಿ ಎಳ್ಳಿನ ಬೀಜಗಳು ಪ್ರಮುಖ ಪಾತ್ರವಹಿಸುತ್ತವೆ. ಏಕೆಂದರೆ ಎಳ್ಳಿನ ಬೀಜಗಳನ್ನು ಸಂಕ್ರಾಂತಿಗೆ ತಿನ್ನುವುದು ಒಳ್ಳೆಯದು ಎಂದು ನಂಬಲಾಗಿದೆ. ವಾಸ್ತವವಾಗಿ, ಎಳ್ಳಿನ ಪ್ರಯೋಜನಗಳನ್ನು ತಿಳಿದಿದ್ದರೂ, ಅನೇಕ ಜನರು ವಿವಿಧ ರೀತಿಯ ಹಿಟ್ಟುಗಳಿಂದ ಮಾಡಿದ ಭಕ್ಷ್ಯಗಳು ಮತ್ತು ವಿಶೇಷ ಪಲ್ಯಗಳಲ್ಲಿ ಎಳ್ಳಿನ ಬೀಜಗಳನ್ನು ಸೇರಿಸುತ್ತಾರೆ. ಈ ಖಾದ್ಯಗಳನ್ನು ಮಿತವಾಗಿ ಸೇವಿಸುವುದು ಒಳ್ಳೆಯದು. ಆದರೆ ತುಂಬಾ ಟೆಸ್ಟಿಯಾಗಿದೆ ಅಂತ ಹೆಚ್ಚು ಸೇರಿಸಿದರೆ ಏನೆಲ್ಲಾ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ತಿಳಿಯೋಣ.
ಎಳ್ಳನ್ನು ಅತಿಯಾಗಿ ತಿನ್ನುವುದರಿಂದ ಆಗುವ ಅನಾನುಕೂಲಗಳಿವು
1. ತೂಕ ಹೆಚ್ಚಳ
ಎಳ್ಳಿನಲ್ಲಿ ಹೆಚ್ಚಿನ ಕ್ಯಾಲೊರಿಗಳಿರುತ್ತವೆ. ಅವು ಹೆಚ್ಚಿನ ಪ್ರಮಾಣದ ಕೊಬ್ಬನ್ನು ಹೊಂದಿರುವುದರಿಂದ, ಹೆಚ್ಚು ತಿಂದರೆ ಹೆಚ್ಚಿನ ಕ್ಯಾಲೊರಿಗಳು ದೇಹವನ್ನು ಪ್ರವೇಶಿಸಲು ಕಾರಣವಾಗುತ್ತದೆ. ಇದು ತೂಕ ಹೆಚ್ಚಾಗುವ ಅಪಾಯವನ್ನು ಹೆಚ್ಚಿಸುತ್ತದೆ.
2. ಜೀರ್ಣಕಾರಿ ಸಮಸ್ಯೆಗಳು
ಎಳ್ಳಿನಲ್ಲಿ ಹೆಚ್ಚಿನ ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಆದರೆ, ಅತಿಯಾದ ಸೇವನೆಯಿಂದ ಗ್ಯಾಸ್, ಉಬ್ಬುವಿಕೆ ಅಥವಾ ಹೊಟ್ಟೆ ನೋವಿನಂತಹ ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು.
3. ರಕ್ತದೊತ್ತಡದ ಕುಸಿತ
ಎಳ್ಳಿನಲ್ಲಿ ಮೆಗ್ನೀಸಿಯಮ್ ಸಮೃದ್ಧವಾಗಿದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ. ಆದರೆ ಅತಿಯಾದ ಸೇವನೆಯು ರಕ್ತದೊತ್ತಡವನ್ನು ಸಾಕಷ್ಟು ಕಡಿಮೆ ಮಾಡುತ್ತದೆ. ಇದು ತಲೆತಿರುಗುವಿಕೆಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು, ವಿಶೇಷವಾಗಿ ರಕ್ತದೊತ್ತಡದ ಔಷಧಿಗಳನ್ನು ತೆಗೆದುಕೊಳ್ಳುವವರ ಮೇಲೆ ಹೆಚ್ಚು ಪರಿಣಾಮ ಬೀರಬಹುದು.
4. ಅಲರ್ಜಿ ಸಮಸ್ಯೆಗಳು
ಕೆಲವರಿಗೆ ಎಳ್ಳೆಂದರೆ ತುಂಬಾ ಅಲರ್ಜಿ. ಅತಿಯಾಗಿ ತಿನ್ನುವುದರಿಂದ ಚರ್ಮದ ಮೇಲೆ ದದ್ದುಗಳು, ಕಣ್ಣುಗಳಲ್ಲಿ ನೀರು ಬರುವುದು ಅಥವಾ ಹೊಟ್ಟೆ ನೋವಿನಂತಹ ಅಲರ್ಜಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
5. ಮೂತ್ರಪಿಂಡದ ಕಲ್ಲುಗಳು
ಎಳ್ಳಿನಲ್ಲಿ ಆಕ್ಸಲೇಟ್ ಗಳು ಸಮೃದ್ಧವಾಗಿವೆ. ಆಕ್ಸಲೇಟ್ ಗಳ ಹೆಚ್ಚಿನ ಸೇವನೆಯು ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಹೆಚ್ಚಿಸುತ್ತದೆ. ಮೂತ್ರಪಿಂಡದ ಕಲ್ಲುಗಳಿಂದ ಬಳಲುತ್ತಿರುವವರು ಹೆಚ್ಚು ಎಳ್ಳು ತಿನ್ನಬಾರದು, ಇದು ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸುತ್ತದೆ.
6. ಕಬ್ಬಿಣಾಂಶ ಅಧಿಕವಾಗಿರುವ
ಕಬ್ಬಿಣಾಂಶ ಎಳ್ಳಿನಲ್ಲಿ ಸಮೃದ್ಧವಾಗಿದೆ, ಆದ್ದರಿಂದ ಹೆಚ್ಚು ಸೇವಿಸುವುದರಿಂದ ದೇಹದಲ್ಲಿ ಕಬ್ಬಿಣದ ಸಂಗ್ರಹ ಹೆಚ್ಚಾಗುತ್ತದೆ. ಇದು ಯಕೃತ್ತು ಮತ್ತು ಹೃದಯದಂತಹ ಅಂಗಗಳಿಗೆ ಹಾನಿಗೆ ಕಾರಣವಾಗಬಹುದು. ವಿಶೇಷವಾಗಿ ಹಿಮೋಕ್ರೊಮಾಟೋಸಿಸ್ ನಿಂದ ಬಳಲುತ್ತಿರುವವರಿಗೆ ಹೆಚ್ಚು ಸಮಸ್ಯೆಯಾಗಬಹುದು.
ಎಳ್ಳು ತಿನ್ನುವುದರ ಪ್ರಯೋಜನಗಳು
ಎಳ್ಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ, ಆದರೆ ಹೆಚ್ಚು ಸೇವಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. 1-2 ಚಮಚ ಎಳ್ಳಿನ ಬೀಜಗಳನ್ನು ಸರಿಯಾದ ಪ್ರಮಾಣದಲ್ಲಿ ಅಂದರೆ ದಿನಕ್ಕೆ 1-2 ಚಮಚ ಎಳ್ಳಿನ ಬೀಜಗಳನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವುದು ಉತ್ತಮ. ಇದನ್ನು ನಿಯಮಿತವಾಗಿ ಸೇವಿಸುವ ಮೂಲಕ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಮೂಳೆಗಳ ದೌರ್ಬಲ್ಯವನ್ನು ಸುಧಾರಿಸುತ್ತದೆ. ಜೀರ್ಣಾಂಗ ವ್ಯವಸ್ಥೆಗೆ ಸಹಾಯ ಮಾಡುತ್ತವೆ. ಚರ್ಮದ ಆರೋಗ್ಯಕ್ಕೆ ಸಹಾಯ ಮಾಡುತ್ತವೆ. ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಉರಿಯೂತದ ಗುಣಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಕೀಲು ಸಮಸ್ಯೆಗಳನ್ನು ತಡೆಯುತ್ತದೆ. ಎಳ್ಳಿನಲ್ಲಿ ಪ್ರೋಟೀನ್ ಮತ್ತು ಪೋಷಕಾಂಶಗಳ ಸಹಾಯದಿಂದ, ದೇಹವು ಸಾಕಷ್ಟು ಶಕ್ತಿಯನ್ನು ಪಡೆಯುತ್ತದೆ. ಆದರೆ, ಇವುಗಳನ್ನು ತಿನ್ನುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿ ಉತ್ತಮವಾಗಿಲ್ಲದಿದ್ದರೆ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದನ್ನು ಮರೆಯಬೇಡಿ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.)
