Green Tea: ಪ್ರತಿದಿನ ಮೂರು ಕಪ್ ಗ್ರೀನ್ ಟೀ ಕುಡಿದರೆ ಸಿಗುತ್ತೆ ಹಲವು ಆರೋಗ್ಯ ಲಾಭ, ಇಲ್ಲಿದೆ ಈ ಬಗ್ಗೆ ಇನ್ನಷ್ಟು ಮಾಹಿತಿ
Green Tea: ಗ್ರೀನ್ ಟೀ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಹೊಸ ಅಧ್ಯಯನದ ಪ್ರಕಾರ, ಗ್ರೀನ್ ಟೀಯಲ್ಲಿ ಆಂಟಿಆಕ್ಸಿಡೆಂಟ್‍ಗಳು ಸಮೃದ್ಧವಾಗಿವೆ.ಇದು ಮೆದುಳಿನ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ. ಪ್ರತಿದಿನ ಗ್ರೀನ್ ಟೀ ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ವಯಸ್ಸಾದಂತೆ, ಮೆದುಳಿನ ಆರೋಗ್ಯವು ಹದಗೆಡಲು ಪ್ರಾರಂಭಿಸುತ್ತದೆ. ಇದು ಅಲ್ಝೈಮರ್ ಕಾಯಿಲೆ, ರಕ್ತನಾಳಗಳ ಸಮಸ್ಯೆಗಳು, ಬುದ್ಧಿಮಾಂದ್ಯತೆ ಮತ್ತು ಇತರ ನ್ಯೂರೋಡಿಜೆನರೇಟಿವ್ ಪರಿಸ್ಥಿತಿಗಳಿಗೆ ಕಾರಣವಾಗಬಹುದು. ಹೀಗಾಗಿ ಮುಂಜಾಗ್ರತೆ ವಹಿಸುವುದು ಬಹಳ ಮುಖ್ಯ. ಆದ್ದರಿಂದ ಅರಿವಿನ ಕುಸಿತದ ಅಪಾಯವನ್ನು ಕಡಿಮೆ ಮಾಡುವ ಆಹಾರ ಮತ್ತು ಪಾನೀಯಗಳನ್ನು ಸೇವಿಸುವ ಅವಶ್ಯಕತೆಯಿದೆ. ಎನ್ಪಿಜೆ ಸೈನ್ಸ್ ಆಫ್ ಫುಡ್‍ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಪ್ರತಿದಿನ ಗ್ರೀನ್ ಟೀ ಕುಡಿಯುವುದರಿಂದ ಮೆದುಳಿನ ಆರೋಗ್ಯ ಹದಗೆಡದಂತೆ ರಕ್ಷಿಸುತ್ತದೆ. ಈ ಜನಪ್ರಿಯ ಪಾನೀಯವನ್ನು ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಮೆದುಳಿನ ಆರೋಗ್ಯದ ಮೇಲೆ ಗ್ರೀನ್ ಟೀ ಪರಿಣಾಮ
ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಗ್ರೀನ್ ಟೀ ಈಗಾಗಲೇ ಶಕ್ತಿಯುತ ಪಾನೀಯವೆಂದು ಗುರುತಿಸಲ್ಪಟ್ಟಿದೆ. ಗ್ರೀನ್ ಟೀ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಹೀಗಾಗಿ ಬಹುತೇಕರು ಗ್ರೀನ್ ಟೀ ಕುಡಿಯುತ್ತಾರೆ. ಈಹೊಸ ಅಧ್ಯಯನವು ಗ್ರೀನ್ ಟೀಯ ಪ್ರಯೋಜನಗಳನ್ನು ಮತ್ತಷ್ಟು ವಿವರಿಸಿದೆ. ಗ್ರೀನ್ ಟೀ ಮೆದುಳಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ ಎಂದು ಹೇಳಿದೆ.
ಗ್ರೀನ್ ಟೀ ಕುಡಿಯುವುದರಿಂದ ಮೆದುಳಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಇದು ಮೆದುಳಿನಲ್ಲಿ ಸೆರೆಬ್ರಲ್ ಬಿಳಿ ದ್ರವ್ಯದ ಗಾಯಗಳನ್ನು ಕಡಿಮೆ ಮಾಡುತ್ತದೆ. ವಯಸ್ಸಾದಂತೆ, ಮೆದುಳು ಬಿಳಿ ದ್ರವ್ಯದ ಬಳಿ ಗಾಯಗಳಂತಹ ಸಮಸ್ಯೆಗಳನ್ನು ಅಭಿವೃದ್ಧಿಪಡಿಸುತ್ತದೆ. ಬಿಳಿ ದ್ರವ್ಯದ ಗಾಯಗಳು ಸಣ್ಣ ನಾಳದ ಕಾಯಿಲೆಗಳನ್ನು ಸೂಚಿಸುತ್ತವೆ. ಇವು ಅರಿವಿನ ಕುಸಿತ, ರಕ್ತನಾಳ, ಬುದ್ಧಿಮಾಂದ್ಯತೆ, ಅಲ್ಝೈಮರ್ ಕಾಯಿಲೆಗೆ ಸಂಬಂಧಿಸಿವೆ. ಅಮೆರಿಕನ್ ಬ್ರೈನ್ ಫೌಂಡೇಶನ್ ಪ್ರಕಾರ, ಉರಿಯೂತವು ಮೆದುಳಿನ ಅಪಧಮನಿಗಳ ಕಿರಿದಾಗುವಿಕೆಗೆ ಕಾರಣವಾಗುತ್ತದೆ.
ನೀವು ಎಷ್ಟು ಗ್ರೀನ್ ಟೀ ಕುಡಿಯಬೇಕು?
ಮೆದುಳಿನ ಬಿಳಿ ದ್ರವ್ಯವು ನರಮಂಡಲದ ವಿವಿಧ ಭಾಗಗಳ ನಡುವೆ ಸಂಕೇತಗಳ ಪ್ರಸರಣದಲ್ಲಿ ಸಹಾಯ ಮಾಡುತ್ತದೆ. ಗ್ರೀನ್ ಟೀ ಕುಡಿದವರಲ್ಲಿ ಮೆದುಳಿನ ಬಿಳಿ ದ್ರವ್ಯದ ಬಳಿ ಕಡಿಮೆ ಗಾಯಗಳಿವೆ ಎಂದು ಅಧ್ಯಯನದ ಫಲಿತಾಂಶಗಳು ಬಹಿರಂಗಪಡಿಸಿವೆ. ಫಲಿತಾಂಶಗಳನ್ನು ವಿಶ್ಲೇಷಿಸಿದ ನಂತರ, ಸಂಶೋಧಕರು ಎಷ್ಟು ಗ್ರೀನ್ ಟೀ ಕುಡಿಯಬೇಕು ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ.
ಪ್ರತಿದಿನ ಸುಮಾರು ಮೂರು ಕಪ್ ಗ್ರೀನ್ ಟೀ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಂಶೋಧನೆ ತೋರಿಸಿದೆ. ಅದಕ್ಕಿಂತ ಹೆಚ್ಚು ಗ್ರೀನ್ ಟೀ ಕುಡಿಯದಿರುವುದು ಉತ್ತಮ. ಗ್ರೀನ್ ಟೀಯಲ್ಲಿ ಆಂಟಿಆಕ್ಸಿಡೆಂಟ್‍ಗಳು ಮತ್ತು ಉರಿಯೂತ ನಿವಾರಕ ಗುಣಲಕ್ಷಣಗಳು ಸಮೃದ್ಧವಾಗಿವೆ. ಇದು ಕ್ಯಾಟೆಚಿನ್ ಎಂಬ ಸಂಯುಕ್ತವನ್ನು ಹೊಂದಿರುತ್ತದೆ. ಇದು ಮೆದುಳಿನಲ್ಲಿ ರಕ್ತನಾಳದ ಹಾನಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅಧ್ಯಯನವು ವಿವರಿಸಿದೆ.
ಆದ್ದರಿಂದ ಹಾಲಿನ ಚಹಾ ಮತ್ತು ಕಾಫಿ ಕುಡಿಯುವ ಬದಲು ಪ್ರತಿದಿನ ಗ್ರೀನ್ ಟೀ ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳುವುದು ಉತ್ತಮ. ಅನೇಕ ಜನರು ಗ್ರೀನ್ ಟೀಯ ರುಚಿಯನ್ನು ಇಷ್ಟಪಡುವುದಿಲ್ಲ. ಹೀಗಾಗಿ ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಕುಡಿಯಬಹುದು.
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.)
