ಮುತ್ತು ಕೊಡೋದು ಡೇಂಜರ್, ಒಂದೇ ಒಂದು ಮುತ್ತು ಉಸಿರಾಟದ ಸಮಸ್ಯೆಯಿಂದ ಕ್ಯಾನ್ಸರ್‌ವರೆಗೆ ಈ ಎಲ್ಲ ಸಮಸ್ಯೆಗೆ ಕಾರಣವಾಗಬಹುದು
ಪ್ರೀತಿಯನ್ನು ವ್ಯಕ್ತಪಡಿಸಲು ಲಿಪ್ ಕಿಸ್ ಮಾಡುವುದು ಈಗಿನ ಟ್ರೆಂಡ್. ಆದರೆ ಆ ಒಂದೇ ಒಂದು ಮುತ್ತು ಕ್ಯಾನ್ಸರ್‌ನಿಂದ ಉಸಿರಾಟದ ಸಮಸ್ಯೆವರೆಗೆ ಸಾಕಷ್ಟು ತೊಂದರೆಗಳನ್ನು ಉಂಟು ಮಾಡುತ್ತದೆ ಎಂಬುದನ್ನು ಮರೆಯದಿರಿ.

ಮುತ್ತೇ ಪ್ರಥಮ ಅದುವೇ ಜಗದ ನಿಯಮ ಎಂದು ರವಿಚಂದ್ರನ್ ಹಾಡಿರುವುದನ್ನು ನೀವು ಕೇಳಿರುತ್ತೀರಿ. ಪ್ರೀತಿ ಆರಂಭವಾದಾಗ ಮುತ್ತಿನ ಮೂಲಕ ಪ್ರೀತಿ ಪಯಣಕ್ಕೆ ಮುನ್ನುಡಿ ಬರೆಯುವವರು ಹಲವರು. ಚುಂಬನದಿಂದಲೇ ಪ್ರೀತಿಯ ಆಳವನ್ನೂ ತಿಳಿಯಬಹುದು ಎಂದು ಹೇಳಲಾಗುತ್ತದೆ. ಮುತ್ತಿನಲ್ಲಿ ಅದೇನೋ ಮತ್ತು ಇರುವುದು ನಿಜ. ಒಂದೇ ಒಂದು ಮುತ್ತಿಗಾಗಿ ರಾಜ್ಯಗಳನ್ನು ತ್ಯಜಿಸಿದ ರಾಜರು ಇತಿಹಾಸದಲ್ಲಿ ಇದ್ದಾರೆ. ಚುಂಬನದ ಮಹತ್ವ ಅಂಥದ್ದು. ಮುತ್ತಿನಿಂದ ಸಕಾರಾತ್ಮಕ ಪರಿಣಾಮಗಳಷ್ಟೇ ನಕಾರಾತ್ಮಕ ಪರಿಣಾಮಗಳೂ ಇವೆ. ಒಂದು ಮುತ್ತು ಮನದಾಳದ ಪ್ರೀತಿಯನ್ನು ವ್ಯಕ್ತಪಡಿಸುವುದು ಮಾತ್ರವಲ್ಲದೇ, ಜೀವವನ್ನು ತೆಗೆಯುವ ಅಸ್ತ್ರವೂ ಆಗಬಹುದು. ಕೆಲವು ಸಂದರ್ಭಗಳಲ್ಲಿ ಚುಂಬನವು ಕ್ಯಾನ್ಸರ್ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಮುತ್ತಿನಿಂದ ಬರುವ ಆರೋಗ್ಯ ಸಮಸ್ಯೆಗಳಿವು
ಉಸಿರಾಟದ ಸಮಸ್ಯೆ
ಶೀತ ಮತ್ತು ಕೆಮ್ಮಿನಂತಹ ಉಸಿರಾಟದ ವೈರಸ್‌ಗಳು ಸೋಂಕಿತ ವ್ಯಕ್ತಿಯಿಂದ ಮುತ್ತು ಕೊಟ್ಟ ವ್ಯಕ್ತಿಗೆ ಬೇಗನೆ ಹರಡಬಹುದು. ಇದರಿಂದ ಕೆಲವೇ ಗಂಟೆಗಳಲ್ಲಿ ಅನಾರೋಗ್ಯ ಕಾಡಬಹುದು. ಮುತ್ತಿನ ವಿವಿಧ ರೀತಿಯ ಉಸಿರಾಟದ ಸಮಸ್ಯೆಗಳಿಗೂ ಕಾರಣವಾಗಬಹುದು.
ಒಸಡಿನ ಸಮಸ್ಯೆ
ಚುಂಬನದ ಮೂಲಕ ಹರಡುವ ಕಾಯಿಲೆಗಳಲ್ಲಿ ವಸಡಿನ ಕಾಯಿಲೆಯೂ ಒಂದು. ಇದನ್ನು ಅನೇಕ ಜನರು ಒಪ್ಪುವುದಿಲ್ಲ. ಆದರೆ ದೀರ್ಘ ಚುಂಬನ ಆ ಕ್ಷಣಕ್ಕೆ ಖುಷಿಕೊಟ್ಟರು ಇದರಿಂದ ಒಸಡುಗಳಿಗೆ ಹಾನಿ ಮಾಡುವ ಬ್ಯಾಕ್ಟೀರಿಯಾಗಳು ಬೇಗನೆ ವರ್ಗಾವಣೆಯಾಗುತ್ತವೆ. ಈ ಬ್ಯಾಕ್ಟೀರಿಯಾ ಹಲ್ಲು ಮತ್ತು ಒಸಡುಗಳನ್ನು ಸಹ ಪ್ರವೇಶಿಸುತ್ತವೆ. ಮುತ್ತು ಕೊಡುವುದರಿಂದ ವೈರಸ್ ಹರಡಬಾರದು ಎಂದರೆ ಮುತ್ತು ಕೊಡುವ ಮೊದಲು ಚೆನ್ನಾಗಿ ಬಾಯಿ ತೊಳೆಯಬೇಕು.
ಗಂಟಲು ಕ್ಯಾನ್ಸರ್
ಆಳವಾದ ಚುಂಬನ ಅಥವಾ ದೀರ್ಘ ಚುಂಬನದಿಂದ ಬರುವ ಮತ್ತೊಂದು ಸಮಸ್ಯೆ ಗಂಟಲು ಕ್ಯಾನ್ಸರ್. ತುಟಿಗಳ ಮೇಲಿನ ಚುಂಬನವು ದೀರ್ಘಕಾಲ, ಹೆಚ್ಚು ತೀವ್ರವಾದಾಗ ಲಾಲಾರಸವು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ವರ್ಗಾಯಿಸಲ್ಪಡುತ್ತದೆ. ಒಬ್ಬ ವ್ಯಕ್ತಿಯು ಅನೇಕ ಜನರೊಂದಿಗೆ ಮೌಖಿಕ ಸಂಭೋಗವನ್ನು ಹೊಂದಿದ್ದರೆ, ಮಾನವ ಪ್ಯಾಪಿಲೋಮವೈರಸ್ ಅವರ ಗಂಟಲು ಅಥವಾ ನಾಲಿಗೆಯ ಮೇಲೆ ಉಳಿಯಬಹುದು. ಅಂತಹ ವ್ಯಕ್ತಿಯನ್ನು ಚುಂಬಿಸುವುದರಿಂದ ವೈರಸ್ ಹರಡುವ ಮತ್ತು ಗಂಟಲು ಕ್ಯಾನ್ಸರ್ ಬರುವ ಅಪಾಯವಿದೆ.
ಮೆನಿಂಜೈಟಿಸ್
ಚುಂಬನದ ಮೂಲಕ ಹರಡುವ ಪ್ರಮುಖ ಬ್ಯಾಕ್ಟೀರಿಯಾದ ಸೋಂಕು ಮೆನಿಂಜೈಟಿಸ್. ಇದರ ಹರಡುವಿಕೆಯು ಜ್ವರ, ತಲೆನೋವು ಮತ್ತು ಗಂಟಲು ಬಿಗಿತದಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಸಿಫಿಲಿಸ್ ವೈರಸ್
ಒಬ್ಬ ವ್ಯಕ್ತಿಯು ಬಹು ಜನರೊಂದಿಗೆ ಹೆಚ್ಚು ಲೈಂಗಿಕ ಸಂಪರ್ಕ ಹೊಂದಿದ್ದಷ್ಟೂ, ಅವರಿಗೆ ಸಿಫಿಲಿಸ್ ವೈರಸ್ ಬರುವ ಸಾಧ್ಯತೆ ಹೆಚ್ಚಾಗುತ್ತದೆ. ಅಂತಹ ವ್ಯಕ್ತಿಯನ್ನು ಚುಂಬಿಸುವುದು ಅಪಾಯಕಾರಿ ಕಾಯಿಲೆಗೆ ಕಾರಣವಾಗಬಹುದು.
ಹರ್ಪಿಸ್
ಹರ್ಪಿಸ್ ಚುಂಬನದ ಮೂಲಕ ಮಾತ್ರ ಹರಡುತ್ತದೆ. ಇದು ಬಾಯಿಯ ಸುತ್ತ ಹುಣ್ಣುಗಳಿಗೆ ಕಾರಣವಾಗಬಹುದು. ಶೀತ ಸಂಬಂಧಿ ಸಮಸ್ಯೆಯೂ ಇದರಿಂದ ಹರಡುತ್ತದೆ.
ಇನ್ಫ್ಲುಯೆನ್ಸ
ಇನ್ಫ್ಲುಯೆನ್ಸ ವೈರಸ್‌ಗೆ ಕಾರಣವೆಂದರೆ ಇನ್ಫ್ಲುಯೆನ್ಸ ವೈರಸ್ ಇರುವ ಜನರು ತಮ್ಮ ಲಾಲಾರಸ ಅಥವಾ ಲೋಳೆಯಿಂದ ಇತರರಿಗೆ ಚುಂಬಿಸಿದರೆ ವೈರಸ್ ಹರಡಬಹುದು. ಈ ವೈರಸ್‌ನಿಂದ ಗಂಟಲು ನೋವು, ಮೂಗು ಕಟ್ಟಿಕೊಳ್ಳುವುದು, ಶೀತ, ತಲೆನೋವು, ಜ್ವರ, ಕಾಂಜಂಕ್ಟಿವಿಟಿಸ್, ಗಂಟಲು ನೋವು, ಸೈನಸ್, ಕಣ್ಣು ಮತ್ತು ಕಿವಿ ಸೋಂಕು, ಕಫ ಮತ್ತು ಒಣ ಕೆಮ್ಮು ಮುಂತಾದ ಸಮಸ್ಯೆಗಳು ಉಂಟಾಗುತ್ತವೆ.
ಪ್ರೀತಿ ವ್ಯಕ್ತಪಡಿಸುವ ಅಥವಾ ಪ್ರೀತಿ ದಕ್ಕಿದ ಖುಷಿಯಲ್ಲಿ ಮುತ್ತನ್ನು ಪಡೆಯುವ ಅಥವಾ ನೀಡುವ ಮುನ್ನ ಎಚ್ಚರ ವಹಿಸಿ. ಒಂದೇ ಒಂದು ಮುತ್ತು ನಿಮ್ಮ ಜೀವಕ್ಕೆ ಕಂಟಕವಾಗಬಹುದು ಎಚ್ಚರ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

ವಿಭಾಗ