ಥೈರಾಯ್ಡ್‌ನಿಂದ ಕೊಲೆಸ್ಟ್ರಾಲ್‌ವರೆಗೆ, ಯಾವ ಆರೋಗ್ಯ ಸಮಸ್ಯೆಗೆ ಯಾವ ಡ್ರೈಫ್ರೂಟ್ಸ್ ತಿನ್ನಬೇಕು, ಇಲ್ಲಿದೆ ತಜ್ಞರ ಮಾಹಿತಿ
ಕನ್ನಡ ಸುದ್ದಿ  /  ಜೀವನಶೈಲಿ  /  ಥೈರಾಯ್ಡ್‌ನಿಂದ ಕೊಲೆಸ್ಟ್ರಾಲ್‌ವರೆಗೆ, ಯಾವ ಆರೋಗ್ಯ ಸಮಸ್ಯೆಗೆ ಯಾವ ಡ್ರೈಫ್ರೂಟ್ಸ್ ತಿನ್ನಬೇಕು, ಇಲ್ಲಿದೆ ತಜ್ಞರ ಮಾಹಿತಿ

ಥೈರಾಯ್ಡ್‌ನಿಂದ ಕೊಲೆಸ್ಟ್ರಾಲ್‌ವರೆಗೆ, ಯಾವ ಆರೋಗ್ಯ ಸಮಸ್ಯೆಗೆ ಯಾವ ಡ್ರೈಫ್ರೂಟ್ಸ್ ತಿನ್ನಬೇಕು, ಇಲ್ಲಿದೆ ತಜ್ಞರ ಮಾಹಿತಿ

ಒಣಹಣ್ಣುಗಳು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಇವುಗಳನ್ನು ತಿನ್ನುವುದರಿಂದ ಆರೋಗ್ಯ ನೂರಾರು ಪ್ರಯೋಜನಗಳಿವೆ. ಆದರೆ ಕೀಲುನೋವು, ಥೈರಾಯಿಡ್‌, ಹೃದಯದ ಸಮಸ್ಯೆ, ಕೊಲೆಸ್ಟ್ರಾಲ್ ಹೀಗೆ ಬೇರೆ ಬೇರೆ ಆರೋಗ್ಯ ಸಮಸ್ಯೆಗಳಿಗೆ ಬೇರೆ ಬೇರೆ ರೀತಿಯ ಒಣಹಣ್ಣುಗಳನ್ನು ತಿನ್ನಬೇಕು. ಹಾಗಾದರೆ ಯಾವ ಸಮಸ್ಯೆ ಇರುವವರು ಯಾವ ಡ್ರೈಫ್ರೂಟ್ಸ್ ತಿಂದರೆ ಉತ್ತಮ ಎನ್ನುವುದರ ವಿವರ ಇಲ್ಲಿದೆ.

ಒಣಹಣ್ಣುಗಳು
ಒಣಹಣ್ಣುಗಳು

ಬಾದಾಮಿ, ವಾಲ್‌ನಟ್‌, ಪಿಸ್ತಾ ಹೀಗೆ ವಿವಿಧ ರೀತಿ ಒಣಹಣ್ಣುಗಳು ಆರೋಗ್ಯಕ್ಕೆ ಬಹಳ ಉತ್ತಮ. ಇವನ್ನು ತಿನ್ನುವುದರಿಂದ ಆರೋಗ್ಯಕ್ಕೆ ನೂರಾರು ಪ್ರಯೋಜನಗಳಿವೆ ಎಂಬುದನ್ನು ನೀವು ಕೇಳಿರಬಹುದು. ಜೊತೆಗೆ ಅದನ್ನು ಅನುಸರಿಸುತ್ತಲೂ ಇರಬಹುದು. ಆದರೆ ಎಲ್ಲಾ ಒಣಹಣ್ಣುಗಳು ಎಲ್ಲರಿಗೂ ಹೊಂದಿಕೆ ಆಗುವುದಿಲ್ಲ. ಆರೋಗ್ಯ ಸಮಸ್ಯೆಯನ್ನು ಅವಲಂಬಿಸಿ ನೀವು ಯಾವ ಒಣಹಣ್ಣು ತಿನ್ನಬೇಕು ಎನ್ನುವುದನ್ನು ಆಯ್ಕೆ ಮಾಡಿಕೊಳ್ಳಬೇಕು. ಬಾದಾಮಿ, ಪಿಸ್ತಾ ಮತ್ತು ಗೋಡಂಬಿ ಮಾತ್ರವಲ್ಲದೆ, ಆರೋಗ್ಯಕ್ಕೆ ಉತ್ತಮವಾದ ಅನೇಕ ಒಣಹಣ್ಣುಗಳಿವೆ. ದೇಹದಲ್ಲಿನ ವಿವಿಧ ಸಮಸ್ಯೆಗಳ ಆಧಾರದ ಮೇಲೆ ಡ್ರೈಫ್ರೂಟ್ಸ್‌ಗಳನ್ನು ಆರಿಸಿ ತಿನ್ನಲು ವೈದ್ಯರು ಶಿಫಾರಸು ಮಾಡುತ್ತಾರೆ.

ನೀವು ಥೈರಾಯ್ಡ್, ಕೆಟ್ಟ ಕೊಲೆಸ್ಟ್ರಾಲ್ ಮತ್ತು ಹೃದ್ರೋಗದಂತಹ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಯಾವ ರೀತಿಯ ಡ್ರೈಫ್ರೂಟ್ಸ್‌ಗಳನ್ನು ತಿನ್ನಬೇಕೆಂದು ಎಂಬುದನ್ನು ತಿಳಿದುಕೊಳ್ಳಬೇಕು. ಯಾವ ಆರೋಗ್ಯ ಸಮಸ್ಯೆಗಳಿಗೆ ಯಾವ ಒಣಹಣ್ಣು ಉತ್ತಮ ಎಂಬ ವಿವರ ಇಲ್ಲಿದೆ.

ಕೆಟ್ಟ ಕೊಲೆಸ್ಟ್ರಾಲ್

ಮಕಾಡಾಮಿಯಾ ಬೀಜಗಳು ಏಕಪರ್ಯಾಪ್ತ ಕೊಬ್ಬು, ಪ್ರೊಟೀನ್‌ಗಳಿಂದ ಸಮೃದ್ಧವಾಗಿವೆ. ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಾಗ ಮಕಾಡಾಮಿಯಾ ಬೀಜಗಳನ್ನು ತಿನ್ನುವುದು ಪ್ರಯೋಜನಕಾರಿ. ಇದು ರಕ್ತದಲ್ಲಿ ಹೆಚ್ಚಾಗುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಇದು ಒಳ್ಳೆಯ ಕೊಲೆಸ್ಟ್ರಾಲ್ ಪ್ರಮಾಣವನ್ನು ಸಹ ಹೆಚ್ಚಿಸುತ್ತದೆ. ಈ ಬೀಜಗಳು ಸೂಪರ್ ಮಾರ್ಕೆಟ್‌ಗಳು ಮತ್ತು ಇ-ಕಾಮರ್ಸ್ ತಾಣಗಳಲ್ಲಿ ಲಭ್ಯವಿವೆ. ಪ್ರತಿದಿನ ಕೆಲವು ಬೀಜಗಳನ್ನು ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ.

ಹೃದಯದ ಆರೋಗ್ಯಕ್ಕೆ 

ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಯಸಿದರೆ ಆಹಾರದಲ್ಲಿ ಹ್ಯಾಝೆಲ್‌ನಟ್‌ ಸೇವಿಸಬೇಕು. 2003 ರ ಎಫ್‌ಡಿಎ ವರದಿಯ ಪ್ರಕಾರ, ಹ್ಯಾಝೆಲ್ನಟ್ ಅನ್ನು ತಿನ್ನುವುದರಿಂದ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಬಹುದು. ಹಾಗಾಗಿ ಪ್ರತಿದಿನ ಒಂದು ಹಿಡಿ ಹ್ಯಾಝೆಲ್‌ನಟ್‌ ತಿನ್ನುವ ಅಭ್ಯಾಸ ರೂಢಿಸಿಕೊಳ್ಳಿ. 

ಇದರೊಂದಿಗೆ ವಾಲ್‌ನಟ್‌ ಕೂಡ ಸೇವಿಸಬಹುದು. ವಾಲ್‌ನಟ್‌ನಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿದೆ. ಇವು ಹೃದಯದ ಆರೋಗ್ಯಕ್ಕೆ ಬಹಳ ಉತ್ತಮ. ಜ್ಞಾಪಕಶಕ್ತಿಯನ್ನು ಚುರುಕುಗೊಳಿಸಲು ಬಯಸಿದರೆ, ಪ್ರತಿದಿನ ವಾಲ್‌ನಟ್‌ ತಿನ್ನುವುದು ಮಕ್ಕಳಿಗೂ ಮತ್ತು ದೊಡ್ಡವರಿಗೂ ಪ್ರಯೋಜನಕಾರಿಯಾಗಿದೆ.

ಕಣ್ಣಿನ ಆರೋಗ್ಯಕ್ಕೆ 

ಇದು ಕಣ್ಣುಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಕಣ್ಣಿನ ಒತ್ತಡವನ್ನು ಕಡಿಮೆ ಮಾಡಲು, ಪ್ರತಿದಿನ ಪಿಸ್ತಾ ತಿನ್ನುವ ಅಭ್ಯಾಸ ರೂಢಿಸಿಕೊಳ್ಳಬೇಕು. ಕಣ್ಣು ನೋವು ಮತ್ತು ತಲೆ ಭಾರವಿದ್ದರೆ, ಪ್ರತಿದಿನ ಪಿಸ್ತಾ ಬೀಜಗಳನ್ನು ತಿನ್ನುವುದು ಪ್ರಯೋಜನಕಾರಿ. ಪ್ರತಿದಿನ ಒಂದಿಷ್ಟು ಪಿಸ್ತಾ ತಿಂದರೆ ಕೆಲವೇ ದಿನಗಳಲ್ಲಿ ಉತ್ತಮ ಬದಲಾವಣೆಗಳನ್ನು ಕಾಣಬಹುದು.

 ಥೈರಾಯ್ಡ್ ಸಮಸ್ಯೆಗೆ

ಬ್ರೆಜಿಲ್ ನಟ್‌ ಥೈರಾಯ್ಡ್ ಕಾರ್ಯವನ್ನು ನಿಯಂತ್ರಿಸಲು ಉತ್ತಮವಾಗಿದೆ. ಇದು ಸೆಲೆನಿಯನ್‌ನಲ್ಲಿ ಸಮೃದ್ಧವಾಗಿದೆ. ಇದು ಥೈರಾಯ್ಡ್ ಕಾರ್ಯವನ್ನು ಸರಿಪಡಿಸುತ್ತದೆ.

ಕೀಲು ನೋವು 

ಮೂಳೆಗಳು ಮತ್ತು ಕೀಲುಗಳಲ್ಲಿನ ನೋವಿನಿಂದ ಬಳಲುತ್ತಿರುವ ಜನರು ಪೆಕನ್ ಎಂಬ ಬೀಜಗಳನ್ನು ತಿನ್ನಲು ಅಭ್ಯಾಸ ಮಾಡಿಕೊಳ್ಳಬೇಕು. ಇವು ಸಂಧಿವಾತದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಇವು ಮೂಳೆಗಳಿಗೆ ಬಲವನ್ನು ನೀಡುತ್ತವೆ. ಪೆಕನ್ ಬೀಜಗಳಲ್ಲಿ ಮ್ಯಾಂಗನೀಸ್ ಹೇರಳವಾಗಿದೆ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Whats_app_banner