ಹೃದಯ ದುರ್ಬಲವಾಗಿರುವುದನ್ನ ಸೂಚಿಸುವ 3 ಸಂಕೇತಗಳಿವು; ತಜ್ಞರು ನೀಡಿದ ಈ ಸೂಚನೆಗಳನ್ನ ಕಡೆಗಣಿಸದಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  ಹೃದಯ ದುರ್ಬಲವಾಗಿರುವುದನ್ನ ಸೂಚಿಸುವ 3 ಸಂಕೇತಗಳಿವು; ತಜ್ಞರು ನೀಡಿದ ಈ ಸೂಚನೆಗಳನ್ನ ಕಡೆಗಣಿಸದಿರಿ

ಹೃದಯ ದುರ್ಬಲವಾಗಿರುವುದನ್ನ ಸೂಚಿಸುವ 3 ಸಂಕೇತಗಳಿವು; ತಜ್ಞರು ನೀಡಿದ ಈ ಸೂಚನೆಗಳನ್ನ ಕಡೆಗಣಿಸದಿರಿ

ಹೃದ್ರೋಗ ಅಥವಾ ಹೃದಯದ ಸಮಸ್ಯೆ ಎಂದರೆ ಎದೆನೋವು, ಉಸಿರಾಟದಲ್ಲಿನ ವ್ಯತ್ಯಾಸ ಎಂದುಕೊಳ್ಳುವವರೇ ಹೆಚ್ಚು. ಆದರೆ ಇನ್ನೂ ಕೆಲವು ಸಾಮಾನ್ಯ ಲಕ್ಷಣಗಳು ಹೃದಯ ದುರ್ಬಲವಾಗಿರುವುದನ್ನು ಸೂಚಿಸಬಹುದು. ಹೃದಯದ ವೈಫಲ್ಯವನ್ನು ಸೂಚಿಸುವಂತಹ ಇಂತಹ ಕೆಲವು ಸಾಮಾನ್ಯ ಲಕ್ಷಣಗಳು ಹೀಗಿವೆ ನೋಡಿ.

ನಿಮ್ಮ ಹೃದಯ ದುರ್ಬಲವಾಗಿದೆ ಎಂದು ಸೂಚಿಸುವ 3 ಸಂಕೇತಗಳಿವು
ನಿಮ್ಮ ಹೃದಯ ದುರ್ಬಲವಾಗಿದೆ ಎಂದು ಸೂಚಿಸುವ 3 ಸಂಕೇತಗಳಿವು (PC: Canva)

ಇತ್ತೀಚಿನ ದಿನಗಳಲ್ಲಿ ಹೃದ್ರೋಗದ ಸಮಸ್ಯೆ ದಿನೇ ದಿನೇ ಹೆಚ್ಚುತ್ತಿದೆ. ಯಾವುದೇ ಸಮಸ್ಯೆ ಇಲ್ಲದವರು ಕೂಡ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಸಾಮಾನ್ಯವಾಗಿ ಎದೆನೋವು, ಎದೆ ಬಿಗಿತ, ಉಸಿರಾಟದಲ್ಲಿನ ತೊಂದರೆಗಳು, ಎದೆಯಲ್ಲಿ ತೀವ್ರವಾದ ಒತ್ತಡ ಇವು ಹೃದಯದ ಸಮಸ್ಯೆ ಸೂಚಿಸುವ ಪ್ರಮುಖ ಲಕ್ಷಣಗಳಾಗಿವೆ ಎಂದು ನಾವು ಭಾವಿಸುತ್ತೇವೆ. ಆದರೆ ಅಮೆರಿಕ ಮೂಲದ ಹೃದಯ ಶಸ್ತ್ರಚಿಕಿತ್ಸಕ ಡಾ. ಜೆರೆಮಿ ಲಂಡನ್ ಅವರ ಪ್ರಕಾರ ಹೃದಯವು ತೊಂದರೆಯಲ್ಲಿರುವಾಗ ಕಾಣಿಸುವ ಕೆಲವು ಸಾಮಾನ್ಯ ಲಕ್ಷಣಗಳನ್ನು ಬಹುತೇಕರು ನಿರ್ಲಕ್ಷ್ಯ ಮಾಡುತ್ತಾರೆ. 

ಅದು ಮಾರಣಾಂತಿಕ ಹೃದಯಾಘಾತ, ಪಾರ್ಶ್ವವಾಯು - ಅಥವಾ ಸಂಭವನೀಯ ಹೃದ್ರೋಗವನ್ನು ಪತ್ತೆಹಚ್ಚುವಲ್ಲಿ ಮತ್ತು ಚಿಕಿತ್ಸೆ ಪಡೆಯುವಲ್ಲಿ ನಿರ್ಣಾಯಕ ವಿಳಂಬಕ್ಕೆ ಕಾರಣವಾಗುತ್ತದೆ. ಅವರು ಹೇಳುವಂತೆ ಹೃದ್ರೋಗಕ್ಕೆ ಸಂಬಂಧಿಸಿದ ಈ ವಿಚಾರಗಳತ್ತ ನಾವು ಗಮನ ಹರಿಸಬೇಕು, ಇವು ನಮ್ಮ ಹೃದಯ ದುರ್ಬಲವಾಗಿದೆ ಎಂದು ಸೂಚಿಸುವ ಅಂಶಗಳಾಗಿವೆ. ಅಂತಹ 3 ಅಂಶಗಳು ಇಲ್ಲಿವೆ, ಇದನ್ನು ಎಂದಿಗೂ ನಿರ್ಲಕ್ಷ್ಯ ಮಾಡಬಾರದು. 

ನಡೆಯುವಾಗ ಉಸಿರಾಟದ ತೊಂದರೆ

ಉಸಿರಾಟದ ತೊಂದರೆಯು ಹೃದಯ ವೈಫಲ್ಯದ ಸಾಮಾನ್ಯ ಲಕ್ಷಣವಾಗಿದೆ. ಇದು ಸಂಕಟದ ಅನುಭವ ನೀಡುವ ಜೊತೆಗೆ ಉಸಿರುಗಟ್ಟಿಸುವ ಭಾವನೆಯನ್ನು ಉಂಟುಮಾಡಬಹುದು. ಡಾ. ಲಂಡನ್ ಪ್ರಕಾರ, ಉಸಿರಾಟದ ತೊಂದರೆಯು ಆರಂಭದಲ್ಲಿ ಉಸಿರಾಡುವಾಗ ಹೆಚ್ಚು ಪರಿಶ್ರಮ ಕೇಳಬಹುದು. ಆದರೆ ಕ್ರಮೇಣ ಪರಿಸ್ಥಿತಿ ಕೆಟ್ಟದಾಗಬಹುದು. ಇದು ನಿಮ್ಮನ್ನು ಸಾಮಾನ್ಯಕ್ಕಿಂತ ಗಟ್ಟಿಯಾಗಿ, ವೇಗವಾಗಿ ಅಥವಾ ಆಳವಾಗಿ ಉಸಿರಾಡುವಂತೆ ಮಾಡುತ್ತದೆ. ಹೃದಯ ಮತ್ತು ಶ್ವಾಸಕೋಶದ ಸ್ಥಿತಿ ಹದಗೆಟ್ಟಿದ್ದರೆ ಈ ರೀತಿಯಾಗುತ್ತದೆ. ಶೀತ, ಕೆಮ್ಮು, ತೀವ್ರ ಜ್ವರ ಅಥವಾ ಉಬ್ಬಸದ ಜೊತೆಗೆ ಉಸಿರಾಟದ ಸಮಸ್ಯೆ ಹಾಗೂ ಕಣಕಾಲುಗಳು ಮತ್ತು ಪಾದಗಳ ಊತದಿಂದ ಕೂಡಿದ್ದರೆ ನೀವು ಈ ಬಗ್ಗೆ ತಕ್ಷಣ ಗಮನ ಹರಿಸಬೇಕು ಎಂದು ಅವರು ಹೇಳುತ್ತಾರೆ.

ಕಾಲುಗಳು ಊದಿಕೊಳ್ಳುವುದು

ಅಂಗಾಂಶಗಳಲ್ಲಿ ದ್ರವದ ಶೇಖರಣೆಯಾದಾಗ ನಿಮ್ಮ ಕಾಲುಗಳಲ್ಲಿ ಊತ ಸಂಭವಿಸುತ್ತದೆ. ಇದನ್ನು ಎಡಿಮಾ ಎಂದು ಕರೆಯಲಾಗುತ್ತದೆ. ಡಾ. ಲಂಡನ್ ಪ್ರಕಾರ, ನಿಮ್ಮ ಕಾಲುಗಳ ರಕ್ತನಾಳಗಳಲ್ಲಿ ರಕ್ತ ಬ್ಯಾಕ್ಅಪ್ ಆಗುವುದು ಹೃದಯವು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸೂಚಿಸುತ್ತದೆ ಮತ್ತು ಇದನ್ನು ಹೃದಯ ವೈಫಲ್ಯದ ಗಮನಾರ್ಹ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ. ನಿಮ್ಮ ಹೃದಯವು ಸರಿಯಾಗಿ ಕೆಲಸ ಮಾಡದಿದ್ದಾಗ, ರಕ್ತದ ಹರಿವು ನಿಧಾನಗೊಳ್ಳುತ್ತದೆ ಮತ್ತು ನಿಮ್ಮ ಕಾಲುಗಳಲ್ಲಿನ ರಕ್ತನಾಳಗಳಲ್ಲಿ ರಕ್ತ ಬ್ಯಾಕ್ಅಪ್ ಆಗುತ್ತದೆ. ಇದು ನಿಮ್ಮ ಅಂಗಾಂಶಗಳಲ್ಲಿ ದ್ರವವನ್ನು ನಿರ್ಮಿಸಲು ಕಾರಣವಾಗುತ್ತದೆ.  ಇದರಿಂದ ಹೊಟ್ಟೆಯಲ್ಲಿ ಊತ ಬರುವುದು ಅಥವಾ ತೂಕ ಹೆಚ್ಚಳವಾಗುವುದನ್ನು ಗಮನಿಸಬಹುದು. ಎದೆನೋವು, ಉಸಿರಾಟದ ತೊಂದರೆ, ಮೂರ್ಛೆ, ತಲೆತಿರುಗುವಿಕೆ ಅಥವಾ ಕೆಮ್ಮುವಾಗ ರಕ್ತ ಬರುವುದು, ಇದ್ದಕ್ಕಿದ್ದಂತೆ ಕಾರಣವಿಲ್ಲದೇ ಕಾಲುಗಳಲ್ಲಿ ಊತ ಕಾಣಿಸುವುದು ಕಂಡರೆ ವೈದ್ಯರನ್ನು ಭೇಟಿ ಮಾಡಬೇಕಾಗುತ್ತದೆ.  

ಕೆಮ್ಮು 

ಹೃದಯ ಸ್ಥಂಭನದ ಮುಖ್ಯ ಲಕ್ಷಣವೆಂದರೆ ಕಾಗ್ನೆಟಿವ್ ಕಾಫ್. ಇದು ಉಸಿರಾಡಲು ತೊಂದರೆಯಾಗುವಷ್ಟು ಕೆಮ್ಮು ತರಿಸುತ್ತದೆ. ಶ್ವಾಸಕೋಶದಲ್ಲಿ ದ್ರವಾಂಶ ಸಂಗ್ರಹವಾದಾಗ ಈ ಸಮಸ್ಯೆ ಇನ್ನಷ್ಟು ಹದಗಡೆಬಹುದು. ಇದನ್ನು ಹೃದಯದ ಕೆಮ್ಮು ಅಥವಾ ಕಾಗ್ನೆಟಿವ್ ಕಾಫ್ ಎಂದು ಕರೆಯಲಾಗುತ್ತದೆ. ಈ ಕೆಮ್ಮು ಇದ್ದಾಗ ತೇವ ಅಥವಾ ರಕ್ತ ಲೇಪಿತ ಲೋಳೆಯಂತಹ ಕಫ ಕಾಣಿಸಬಹುದು. ಶ್ವಾಸಕೋಶದಲ್ಲಿ ದ್ರವದ ಕಾರಣದಿಂದಾಗಿ ಉಸಿರಾಡಲು ಕಷ್ಟವಾಗುವಂತಹ ಕೆಮ್ಮು ಕಾಣಿಸಬಹುದು.  

Whats_app_banner