Heart Health: ಹೃದ್ರೋಗ ತಡೆದು, ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ನೆರವಾಗುವ 5 ಪಾನೀಯಗಳಿವು; ಇದರ ಉಪಯೋಗ ತಿಳಿಯಿರಿ-health tips heart health tips drink these 5 healthy juices to maintain good heart health arc ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Heart Health: ಹೃದ್ರೋಗ ತಡೆದು, ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ನೆರವಾಗುವ 5 ಪಾನೀಯಗಳಿವು; ಇದರ ಉಪಯೋಗ ತಿಳಿಯಿರಿ

Heart Health: ಹೃದ್ರೋಗ ತಡೆದು, ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ನೆರವಾಗುವ 5 ಪಾನೀಯಗಳಿವು; ಇದರ ಉಪಯೋಗ ತಿಳಿಯಿರಿ

ನೀವು ಹೃದಯವನ್ನು ಪ್ರೀತಿಸಿದಷ್ಟೇ, ಅದರ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ. ಹೃದಯದ ಆರೋಗ್ಯಕ್ಕಾಗಿ ನಿಮ್ಮ ಆಹಾರ ಪದ್ಧತಿಯಲ್ಲಿ ಹಣ್ಣು, ತರಕಾರಿಗಳಿಂದ ತಯಾರಿಸಿರುವ ಕೆಲವ ಪಾನೀಯಗಳನ್ನು ಸೇವಿಸಬೇಕು. ಇದರಿಂದ ಹೃದ್ರೋಗಗಳಿಂದ ದೂರ ಇರಬಹುದು. ಅಂತಹ ಪಾನೀಯಗಳು ಯಾವುವು ನೋಡಿ.

 ಹೃದ್ರೋಗ ತಡೆದು, ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ನೆರವಾಗುವ 5 ಪಾನೀಯಗಳಿವು
ಹೃದ್ರೋಗ ತಡೆದು, ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ನೆರವಾಗುವ 5 ಪಾನೀಯಗಳಿವು

ಪ್ರೀತಿ, ಅನುಕಂಪ, ಭಾವನೆ ಈ ಎಲ್ಲ ಶಬ್ದಗಳನ್ನ ಸಾಮಾನ್ಯವಾಗಿ ಹೃದಯದ ಬಗ್ಗೆ ಮಾತನಾಡುವಾಗ ಕೇಳಿರುತ್ತೇವೆ. ಆದರೆ ಹೃದಯದ ಕಾಳಜಿ ಎಂದು ಕೇಳುವುದು ಸ್ವಲ್ಪ ಕಡಿಮೆಯೇ. ಹೃದಯ ಮತ್ತು ಹೃದಯದ ರಕ್ತನಾಳಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಎಂದರೆ ಆರೋಗ್ಯ ಹದಗೆಟ್ಟಾಗ ಮಾತ್ರ ಎಂದು ನಾವು ತಿಳಿದುಕೊಂಡುಬಿಟ್ಟಿದ್ದೇವೆ. ಜಗತ್ತಿನಲ್ಲಿ ಅತಿ ಹೆಚ್ಚು ಸಾವಿಗೆ ಪ್ರಮುಖ ಕಾರಣ ಹೃದಯದ ರಕ್ತನಾಳಗಳ ಕಾಯಿಲೆ ಎಂಬುದು ಇತ್ತೀಚಿನ ಅಧ್ಯಯನಗಳಿಂದ ತಿಳಿದು ಬಂದ ಸಂಗತಿ. ಹೃದಯದ ಆರೋಗ್ಯ ಕಾಪಾಡಿಕೊಳ್ಳಬೇಕು ಅನ್ನುವುದಕ್ಕೆ ಇದು ಸಾಕು. ಹೃದಯದ ಕಾಯಿಲೆಗಳು ಬಂದಾಗ ಮಾತ್ರ ಅದರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಲ್ಲ. ಕಾಯಿಲೆಗಳು ಬರದಂತೆ ಎಚ್ಚರಿಕೆ ವಹಿಸುವುದು ಜಾಣತನ. ಹೃದಯದ ಆರೋಗ್ಯ ಕಾಪಾಡಬಲ್ಲ ಆಹಾರಗಳನ್ನು ಪ್ರತಿನಿತ್ಯ ಸೇವಿಸುವುದರಿಂದ ಅಪಾಯವನ್ನು ತಡೆಗಟ್ಟಬಹುದು. ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುವ ಪಾನೀಯಗಳು ಇಲ್ಲಿವೆ.

ಆರೋಗ್ಯಕರ ಹೃದಯಕ್ಕೆ ಉತ್ತಮವಾದ ಪಾನೀಯಗಳು

ಬೀಟ್‌ರೂಟ್‌ ಜ್ಯೂಸ್‌

ಬೀಟ್‌ರೂಟ್‌ನಲ್ಲಿ ನೈಟ್ರೇಟ್‌ ಅಧಿಕವಾಗಿದೆ. ಅದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ರಕ್ತನಾಳಗಳಲ್ಲಿ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಬೀಟ್‌ರೂಟ್‌ನಿಂದ ತಯಾರಿಸಿದ ಜ್ಯೂಸ್‌ ಕುಡಿಯುವುದು ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಉತ್ತಮವಾಗಿದೆ. ಆದರೆ ಮೂತ್ರಪಿಂಡದಲ್ಲಿ ಕಲ್ಲುಗಳ ಸಮಸ್ಯೆಯಿಂದ ಬಳಲುತ್ತಿರುವವರು ಬೀಟ್ರೂಟ್‌ ಜ್ಯೂಸ್‌ ಅನ್ನು ಮಿತವಾಗಿ ಸೇವಿಸಿಬೇಕು.

ದಾಳಿಂಬೆ ಜ್ಯೂಸ್‌

ದಾಳಿಂಬೆಯು ಪಾಲಿಫಿನಾಲ್‌ನಿಂದ ಸಮೃದ್ಧವಾಗಿರುವ ಹಣ್ಣಾಗಿದೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ. ಇದು ಆಂಟಿಆಕ್ಸಿಡೆಂಟ್‌ ಮತ್ತು ಉರಿಯೂತ ವಿರೋಧಿ ಗುಣಲಕ್ಷಣವನ್ನು ಹೊಂದಿದೆ. ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಪಾಲಿಫಿನಾಲ್‌ ಭರಿತ ಹಣ್ಣಾದ ದಾಳಿಂಬೆ ಆಕ್ಸಿಡೇಟಿವ್‌ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಹೃದಯದ ಕಾಯಿಲೆಗಳಿಗೆ ಅಪಾಯಾಕಾರಿಯಾದ ಅಂಶಗಳನ್ನು ತಡೆಯುತ್ತದೆ. ಹಾಗಾಗಿ ದಾಳಿಂಬೆ ಜ್ಯೂಸ್‌ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.

ಸೊಪ್ಪುಗಳ ಜ್ಯೂಸ್‌

ಹಸಿರು ಸೊಪ್ಪುಗಳನ್ನು ಬಳಸಿ ತಯಾರಿಸಿದ ಜ್ಯೂಸ್‌ ಹೃದಯದ ಆರೋಗ್ಯಕ್ಕೆ ಉತ್ತಮವಾಗಿದೆ. ಪಾಲಕ್‌, ಕೇಲ್‌ ಮುಂತಾದ ಸೊಪ್ಪುಗಳನ್ನು ಸೇರಿಸಿ ಜ್ಯೂಸ್‌ ತಯಾರಿಸಬಹುದು. ಇದು ಹೃದಯದ ಕಾಯಿಲೆಗಳನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಹಸಿರು ಸೊಪ್ಪುಗಳು ಜೀವಸತ್ವಗಳು ಮತ್ತು ಖನಿಜಗಳಿಂದ ಪ್ಯಾಕ್‌ ಆಗಿರುತ್ತವೆ. ಇದು ಆಂಟಿಆಕ್ಸಿಡೆಂಟ್‌ ಮತ್ತು ಆಂಟಿಇನ್ಫ್ಲಮೇಟರಿ ಗುಣಗಳನ್ನು ಹೊಂದಿರುವುದರಿಂದ ಹೃದಯದ ಆರೊಗ್ಯ ಕಾಪಾಡಬಲ್ಲದು. ದೇಹದಲ್ಲಿ ರಕ್ತಪರಿಚಲನೆಯನ್ನು ಸುಧಾರಿಸುವುದರ ಮೂಲಕ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಟೊಮೆಟೊ ಜ್ಯೂಸ್‌

ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಮತ್ತೊಂದು ಉತ್ತಮವಾದ ಸೇರ್ಪಡೆಯೆಂದರೆ ಟೊಮೆಟೊ ಜ್ಯೂಸ್‌. ಅಧ್ಯಯನಗಳ ಪ್ರಕಾರ ಟೊಮೆಟೊ ಜ್ಯೂಸ್‌ ಕುಡಿಯುವುದರಿಂದ ಎಲ್‌ಡಿಎಲ್‌ ಕೊಲೆಸ್ಟ್ರಾಲ್‌ ಮಟ್ಟ ಮತ್ತು ರಕ್ತದೊತ್ತಡ ಕಡಿಮೆಯಾಗುತ್ತದೆ. ಟೊಮೆಟೊ ಜ್ಯೂಸ್‌ನಲ್ಲಿ ಲೈಕೊಪೀನ್‌ ಹೊಂದಿದೆ. ಇದು ಉರಿಯೂತ ಮತ್ತು ಎಲ್‌ಡಿಎಲ್‌ ಕೊಲೆಸ್ಟ್ರಾಲ್‌ ಕಡಿಮೆ ಮಾಡಿ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.

ಸಿಟ್ರಿಕ್‌ ಜ್ಯೂಸ್‌ಗಳು

ನೀವು ನಿಮ್ಮ ದಿನವನ್ನು ಕಿತ್ತಳೆ ಅಥವಾ ಮೂಸಂಬಿಯಂತಹ ಸಿಟ್ರಿಕ್‌ ಅಂಶ ಅಧಿಕವಾಗಿರುವ ಹಣ್ಣುಗಳ ಜ್ಯೂಸ್‌ ಕುಡಿಯುವದರಿಂದ ಪ್ರಾರಂಭಿಸಲು ಬಯಸುತ್ತೀರಾ? ಹಾಗಾದರೆ ನಿಮ್ಮ ಯೋಚನೆ ಸರಿಯಾಗಿದೆ. ಸಿಟ್ರಿಕ್‌ ಅಂಶವಿರುವ ಹಣ್ಣುಗಳಲ್ಲಿ ನಾರಿನಾಂಶ, ವಿಟಮಿನ್‌ ಸಿ ಮತ್ತು ಫ್ಲೆವೊನಾಯ್ಡ್‌ಗಳು ಇರುತ್ತವೆ. ಇವು ಕೊಲೆಸ್ಟ್ರಾಲ್‌ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಹೃದಯದ ಆರೋಗ್ಯ ಸುಧಾರಿಸುತ್ತವೆ.

ಜ್ಯೂಸ್‌ ಕುಡಿಯಲು ಉತ್ತಮ ಸಮಯ ಯಾವುದು?

ದಿನದ ಯಾವುದೇ ಸಮಯದಲ್ಲಾದರೂ ಜ್ಯೂಸ್‌ ಕುಡಿಯಬಹುದು. ನಿಮ್ಮ ಜೀವನಶೈಲಿ ಮತ್ತು ಆಹಾರಪದ್ಧತಿಗೆ ಅನುಗುಣವಾಗಿ ಕುಡಿಯವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ. ಬೆಳಗಿನ ಸಮಯದಲ್ಲಿ ಜ್ಯೂಸ್‌ ಕುಡಿದು ದಿನವನ್ನು ಕಿಕ್‌ಸ್ಟಾರ್ಟ್‌ ಮಾಡಬಹುದು ಅಥವಾ ಸಂಜೆಯ ವೇಳೆ ಟೀ, ಕಾಫಿಯ ಬದಲು ಜ್ಯೂಸ್‌ ಕುಡಿಯಬಹುದು. ತಜ್ಞ ವೈದ್ಯರೊಂದಿಗೆ ಸಮಾಲೋಚಿಸಿ ನಿಮ್ಮ ದೇಹಕ್ಕೆ ಸರಿಹೊಂದುವ ಜ್ಯೂಸ್‌ ಆಯ್ದುಕೊಳ್ಳಿ. ನಿಮ್ಮ ಹೃದಯದ ಆರೋಗ್ಯ ಕಾಪಾಡಿಕೊಳ್ಳಿ.

(This copy first appeared in Hindustan Times Kannada website. To read more like this please logon to kannada.hindustantimes.com)