ಪ್ರತಿದಿನ ಬೆಳಗೆದ್ದು ಈ ಪಾನೀಯ ಕುಡಿಯುವ ಅಭ್ಯಾಸ ಮಾಡಿ, ಡಾಕ್ಟರ್ ಬಳಿ ಹೋಗುವ ಪ್ರಮೇಯವೇ ಬರುವುದಿಲ್ಲ, ಪ್ರಯತ್ನಿಸಿ ನೋಡಿ-health tips home remedies 8 amazing reasons why you should drink coriander water daily coriander water health benfits rs ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಪ್ರತಿದಿನ ಬೆಳಗೆದ್ದು ಈ ಪಾನೀಯ ಕುಡಿಯುವ ಅಭ್ಯಾಸ ಮಾಡಿ, ಡಾಕ್ಟರ್ ಬಳಿ ಹೋಗುವ ಪ್ರಮೇಯವೇ ಬರುವುದಿಲ್ಲ, ಪ್ರಯತ್ನಿಸಿ ನೋಡಿ

ಪ್ರತಿದಿನ ಬೆಳಗೆದ್ದು ಈ ಪಾನೀಯ ಕುಡಿಯುವ ಅಭ್ಯಾಸ ಮಾಡಿ, ಡಾಕ್ಟರ್ ಬಳಿ ಹೋಗುವ ಪ್ರಮೇಯವೇ ಬರುವುದಿಲ್ಲ, ಪ್ರಯತ್ನಿಸಿ ನೋಡಿ

ಕೊತ್ತಂಬರಿಯನ್ನು ಬಹುತೇಕರು ಅಡುಗೆಗೆ ಬಳಸುತ್ತಾರೆ. ಇದು ಅಡುಗೆಯ ರುಚಿ ಹೆಚ್ಚಿಸುವುದಷ್ಟೇ ಅ‌ಲ್ಲ, ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ. ಕೊತ್ತಂಬರಿ ನೆನೆಸಿದ ನೀರನ್ನು ಪ್ರತಿದಿನ ಕುಡಿಯುವುದರಿಂದ ದೇಹದಲ್ಲಿ ಅದ್ಭುತ ಬದಲಾವಣೆಗಳಾಗುತ್ತವೆ. ಈ ನೀರನ್ನು ಪ್ರತಿದಿನ ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡಿ.

ಕೊತ್ತಂಬರಿ ನೀರು
ಕೊತ್ತಂಬರಿ ನೀರು

ಭಾರತೀಯ ಅಡುಗೆಮನೆಗಳಲ್ಲಿ ಕೊತ್ತಂಬರಿ, ಜೀರಿಗೆ, ಅರಿಸಿನ, ಮೆಣಸು ಮುಂತಾದ ಮಸಾಲೆ ಪದಾರ್ಥಗಳಿರುವುದು ಸಾಮಾನ್ಯ. ಇವು ರುಚಿಗಷ್ಟೇ ಅಲ್ಲ ಆರೋಗ್ಯದ ದೃಷ್ಟಿಯಿಂದಲೂ ಉತ್ತಮ. ಇವುಗಳಲ್ಲಿ ಜೀರಿಗೆ, ಅರಿಸಿನದ ಆರೋಗ್ಯ ಗುಣಗಳ ಬಗ್ಗೆ ಹಲವರು ಕೇಳಿರುತ್ತಾರೆ, ಆದರೆ ಕೊತ್ತಂಬರಿಯೂ ಆರೋಗ್ಯಕ್ಕೆ ಬಹಳ ಉತ್ತಮ. ಕೊತ್ತಂಬರಿಯನ್ನು ನೆನೆಸಿದ ನೀರು ಕುಡಿಯವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಪ್ರತಿದಿನ ಇದನ್ನು ಕುಡಿಯುವ ಅಭ್ಯಾಸ ಮಾಡಿಕೊಂಡರೆ ಕೆಲವೇ ದಿನಗಳಲ್ಲಿ ನೀವು ದೇಹದಲ್ಲಿ ಅದ್ಭುತ ಬದಲಾವಣೆಗಳಾಗಿರುವುದನ್ನು ನೀವು ಗಮನಿಸುತ್ತೀರಿ. ಇದರಿಂದಾಗುವ ಪ್ರಯೋಜನಗಳ ಪಟ್ಟಿ ಇಲ್ಲಿದೆ.

ಕೊತ್ತಂಬರಿ ಕಾಳು ನೆನೆಸಿದ ನೀರಿನಿಂದಾಗುವ ಆರೋಗ್ಯ ಪ್ರಯೋಜನಗಳು

ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ: ಕೊತ್ತಂಬರಿ ನೀರು ನೈಸರ್ಗಿಕವಾಗಿ ಜೀರ್ಣಕ್ರಿಯೆ ವೃದ್ಧಿಸುವ ಪಾನೀಯವಾಗಿದೆ. ಇದು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಂದ ದೇಹವನ್ನು ಕಾಪಾಡುತ್ತದೆ. ಹೊಟ್ಟೆಯುಬ್ಬರ ಕಡಿಮೆ ಮಾಡಿ, ಕರುಳಿನ ಚಲನೆಯನ್ನು ವೃದ್ಧಿಸುತ್ತದೆ. ಕೊತ್ತಂಬರಿ ಬೀಜಗಳಲ್ಲಿರುವ ಸಂಯುಕ್ತಗಳು ಜೀರ್ಣಕಾರಿ ಕಿಣ್ವಗಳ ಸ್ರವಿಸುವಿಕೆಯನ್ನು ಉತ್ತೇಜಿಸುತ್ತದೆ.

ರಕ್ತದಲ್ಲಿನ ರಕ್ತ ಪ್ರಮಾಣ ನಿಯಂತ್ರಣ: ಕೊತ್ತಂಬರಿಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಏಕೆಂದರೆ ಕೊತ್ತಂಬರಿ ಬೀಜಗಳಲ್ಲಿನ ಉತ್ಕರ್ಷಣ ನಿರೋಧಕಗಳು ಮತ್ತು ಸಾರಭೂತ ತೈಲಗಳು ಇನ್ಸುಲಿನ್ ಚಟುವಟಿಕೆಯನ್ನು ಹೆಚ್ಚಿಸುತ್ತವೆ. ಅದಕ್ಕಾಗಿಯೇ ಮಧುಮೇಹ ಅಥವಾ ಪ್ರಿಡಿಯಾಬಿಟಿಸ್‌ನಿಂದ ಬಳಲುತ್ತಿರುವವರು ಪ್ರತಿದಿನ ತಪ್ಪದೇ ಕೊತ್ತಂಬರಿ ನೀರು ಕುಡಿಯಬೇಕು.

ತೂಕ ನಷ್ಟ: ಕೊತ್ತಂಬರಿ ನೀರಿನಲ್ಲಿ ಕ್ಯಾಲೊರಿ ಅಂಶ ಕಡಿಮೆ ಇದೆ. ಇದು ಹಸಿವನ್ನು ನಿಯಂತ್ರಿಸುವ ಗುಣವನ್ನು ಹೊಂದಿದೆ. ಪ್ರತಿದಿನ ಬೆಳಗಿನ ಹೊತ್ತು ಕೊತ್ತಂಬರಿ ನೀವು ಕುಡಿಯುವುದರಿಂದ ಆಹಾರದ ಕಡುಬಯಕೆ ನಿಯಂತ್ರಣವಾಗುತ್ತದೆ. ಇದು ಅತಿಯಾಗಿ ತಿನ್ನುವುದನ್ನು ತಡೆದು ತೂಕ ನಿಯಂತ್ರಿಸಲು ನೆರವಾಗುತ್ತದೆ. ಸೊಂಟ ಸುತ್ತಲಿನ ಬೊಜ್ಜು ಕರಗಲು ಇದು ಸಹಕಾರಿ.

ಕೊಲೆಸ್ಟ್ರಾಲ್ ನಿಯಂತ್ರಣ: ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಏರಿಕೆಯಾಗುವುದರಿಂದ ಹೃದ್ರೋಗ ಸೇರಿದಂತೆ ಹಲವು ಗಂಭೀರ ಸಮಸ್ಯೆಗಳು ಎದುರಾಗುತ್ತವೆ. ಆದರೆ ಪ್ರತಿದಿನ ಕೊತ್ತಂಬರಿ ನೀವು ಕುಡಿಯುವ ಅಭ್ಯಾಸ ಮಾಡಿದ್ರೆ ನಿಧಾನಕ್ಕೆ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾಗಿ ಆರೋಗ್ಯ ಸುಧಾರಿಸುತ್ತದೆ. ಇದು ಹೃದಯರಕ್ತನಾಳದ ಸಮಸ್ಯೆಗಳ ನಿವಾರಣೆಗೂ ಸಹಕಾರಿ.

ಉರಿಯೂತದ ಲಕ್ಷಣಗಳು: ಕೊತ್ತಂಬರಿಯು ಆಂಟಿಆಕ್ಸಿಡೆಂಟ್‌ಗಳು, ವಿಟಮಿನ್‌ಗಳು ಮತ್ತು ಖನಿಜಗಳಿಂದ ತುಂಬಿರುವ ಕಾರಣ ಉರಿಯೂತದ ಗುಣಲಕ್ಷಣಗಳನ್ನು ಸಹ ಹೊಂದಿದೆ. ಇದು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಸಂಧಿವಾತ ಅಥವಾ ಉರಿಯೂತದ ಕರುಳಿನ ಕಾಯಿಲೆಯಿಂದ ಬಳಲುತ್ತಿರುವ ಜನರಿಗೆ ಇದು ಪ್ರಯೋಜನಕಾರಿಯಾಗಿದೆ.

ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ: ಹೆಚ್ಚುವರಿಯಾಗಿ, ವಿಟಮಿನ್ ಸಿ, ವಿಟಮಿನ್ ಎ ಮತ್ತು ಬೀಟಾ-ಕ್ಯಾರೋಟಿನ್ ಸೇರಿದಂತೆ ಉತ್ಕರ್ಷಣ ನಿರೋಧಕಗಳ ಸಮೃದ್ಧ ಪೂರೈಕೆಯು ವಿವಿಧ ದೀರ್ಘಕಾಲದ ಕಾಯಿಲೆಗಳು ಮತ್ತು ವಯಸ್ಸಾದ ಯುವಿ ಕಿರಣಗಳಂತಹ ಫ್ರಿ ರಾಡಿಕಲ್‌ಗಳು ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಎದುರಿಸಲು ಸಹಾಯ ಮಾಡುತ್ತದೆ.

ದೇಹವನ್ನು ನಿರ್ವಿಷಗೊಳಿಸುತ್ತದೆ: ಪ್ರತಿದಿನ ಕೊತ್ತಂಬರಿ ನೀವು ಕುಡಿಯುವುದರಿಂದ ಬಾಡಿ ಡಿಟಾಕ್ಸ್‌ ಆಗುತ್ತದೆ. ಇದರಿಂದ ದೇಹದಲ್ಲಿರುವ ವಿಷಾಂಶಗಳು ಹೊರಹೋಗುತ್ತವೆ. ಕೊತ್ತಂಬರಿ ನೀರು ಯಕೃತ್ತು ಮತ್ತು ಮೂತ್ರಪಿಂಡಗಳ ಸರಿಯಾದ ಕಾರ್ಯನಿರ್ವಹಣೆಯನ್ನು ಬೆಂಬಲಿಸುತ್ತದೆ.

ಚರ್ಮದ ಆರೋಗ್ಯ ಸುಧಾರಿಸುತ್ತದೆ: ಕೊತ್ತಂಬರಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ವಯಸ್ಸಾದ ಚಿಹ್ನೆಗಳನ್ನು ಕಡಿಮೆ ಮಾಡುವ ಮೂಲಕ ಆರೋಗ್ಯಕರ ಚರ್ಮವನ್ನು ಉತ್ತೇಜಿಸುತ್ತದೆ ಮತ್ತು ಮೊಡವೆ ಮತ್ತು ಎಸ್ಜಿಮಾದಂತಹ ಚರ್ಮದ ಸಮಸ್ಯೆಗಳನ್ನು ತಡೆಯುತ್ತದೆ. ಕೊತ್ತಂಬರಿ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ನೀವು ಬಯಸಿದ ದೋಷರಹಿತ ಮೈಬಣ್ಣ ಮತ್ತು ಸುಧಾರಿತ ಚರ್ಮದ ವಿನ್ಯಾಸವನ್ನು ಸಾಧಿಸಲು ಸಹಾಯ ಮಾಡುತ್ತದೆ.

ಕೊತ್ತಂಬರಿ ನೀರು ಮಾಡುವುದು ಹೇಗೆ?

ಒಂದು ಲೋಟ ನೀರಿಗೆ 1ರಿಂದ 2 ಚಮಚ ಕೊತ್ತಂಬರಿ ಬೀಜ ಸೇರಿಸಿ. ಇದನ್ನು ರಾತ್ರಿಯಿಡಿ ನೆನೆಸಿಡಿ ಅಥವಾ ಯಾವುದೇ ಸಮಯದಲ್ಲಿ ಕನಿಷ್ಠ 8 ಗಂಟೆಗಳ ಸಮಯ ನೆನೆಸಿಡಿ. ನಂತರ ಈ ನೀರನ್ನು ಸೋಸಿ ಕುಡಿಯಿರಿ. ಗರಿಷ್ಠ ಪ್ರಯೋಜನಗಳಿಗಾಗಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಉತ್ತಮ. ಸಾಧ್ಯವಾಗಿಲ್ಲ ಎಂದರೆ ಉಪಾಹಾರದ ನಂತರವೂ ಕುಡಿಯಬಹುದು.

mysore-dasara_Entry_Point