ಪ್ರತಿದಿನ ಅರ್ಧ ಚಮಚ ಅಜವಾನ ಅಗಿದರೆ ಈ ಎಲ್ಲಾ ಸಮಸ್ಯೆಗಳಿಗೆ ಸಿಗುತ್ತೆ ಪರಿಹಾರ; ರಕ್ತದೊತ್ತಡ ನಿಯಂತ್ರಣದಿಂದ ಜೀರ್ಣಕ್ರಿಯೆ ಸುಧಾರಿಸುವವರೆಗೆ
ಓಮ ಅಥವಾ ಅಜವಾನ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದನ್ನು ಪ್ರತಿದಿನ ಅಗಿಯುವುದರಿಂದ ಆರೋಗ್ಯಕ್ಕೆ ಸಿಗುತ್ತೆ ಹಲವು ಪ್ರಯೋಜನ. ಪ್ರತಿದಿನ ಅರ್ಧ ಚಮಚ ಓಮ ಆಗಿಯುವ ಅಭ್ಯಾಸ ಮಾಡಿ, ಇದರಿಂದ ಎಷ್ಟೆಲ್ಲಾ ಉಪಯೋಗಗಳಿವೆ ಎಂಬ ವಿವರ ಇಲ್ಲಿದೆ ನೋಡಿ.

ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಓಮ ಅಥವಾ ಅಜ್ವಾನದ ಬಳಕೆ ರೂಢಿಯಲ್ಲಿತ್ತು. ಉಪ್ಪಿನಕಾಯಿ ತಯಾರಿಸಲು ಸಾಮಾನ್ಯವಾಗಿ ಓಮ ಬಳಸಿಯೇ ಬಳಸುತ್ತಿದ್ದರು. ಇದು ಒಂದು ರೀತಿಯ ಪರಿಮಳ ನೀಡುವ ಜೊತೆಗೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನೂ ಹೊಂದಿದೆ. ಆಯುರ್ವೇದದಲ್ಲೂ ಓಮಕ್ಕೆ ವಿಶೇಷ ಪ್ರಾಧಾನ್ಯ ನೀಡಲಾಗುತ್ತದೆ. ಪ್ರತಿದಿನ ಓಮ ತಿನ್ನುವುದರಿಂದ ದೇಹಾರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳು ಸಿಗುತ್ತವೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಆಸಿಡಿಟಿ ನಿವಾರಣೆಗೂ ಅಜ್ವಾನ ಮದ್ದು. ಇದು ದೇಹದ ಚಯಾಪಚಯ ಕ್ರಿಯೆಯನ್ನು ಉತ್ತೇಜಿಸುತ್ತದೆ. ಉಸಿರಾಟದ ತೊಂದರೆಗಳನ್ನು ನಿವಾರಿಸುವ ಜೊತೆಗೆ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ.
ಪ್ರತಿದಿನ ಅರ್ಧ ಚಮಚ ಓಮ ತಿನ್ನುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ನೋಡೋಣ.
ಬಾಯಿ, ಉಸಿರಿನ ಆರೋಗ್ಯ ಸುಧಾರಣೆ
ಓಮ ಉಸಿರಾಟವನ್ನು ತಾಜಾಗೊಳಿಸುತ್ತದೆ. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ. ಒಸಡಿನ ಸೋಂಕನ್ನು ಗುಣಪಡಿಸುತ್ತದೆ. ಹಲ್ಲುನೋವನ್ನು ನಿವಾರಿಸುತ್ತದೆ. ಬಾಯಿಯ ಸೋಂಕನ್ನು ಸಹ ತಡೆದು, ಬಾಯಿಯ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ.
ಸೋಂಕುಗಳನ್ನು ತಡೆಯುತ್ತದೆ
ಓಮದಲ್ಲಿರುವ ಥೈಮೋಲ್, ಆಂಟಿಮೈಕ್ರೊಬಿಯಲ್ ಗುಣಗಳು ಬ್ಯಾಕ್ಟೀರಿಯಾದ ಸೋಂಕುಗಳ ವಿರುದ್ಧ ಹೋರಾಡುತ್ತದೆ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದು ಹಲವು ರೋಗಗಳ ನಿವಾರಣೆಗೆ ಸಹಾಯ ಮಾಡುತ್ತದೆ.
ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ
ನಿಯಮಿತವಾಗಿ ಓಮ ತಿನ್ನುವುದರಿಂದ ದೇಹದ ಚಯಾಪಚಯ ಕ್ರಿಯೆ ಸುಧಾರಿಸುತ್ತದೆ. ಇದರಿಂದ ಸರಿಯಾದ ತೂಕ ನಿರ್ವಹಣೆ ಸಾಧ್ಯವಿದೆ. ಇದು ದೇಹದ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ ಹಾಗೂ ದೇಹದ ಒಟ್ಟಾರೆ ದಕ್ಷತೆಯನ್ನು ಸುಧಾರಿಸುತ್ತದೆ.
ಮುಟ್ಟಿನ ನೋವು
ಓಮವು ಸೆಳೆತ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಪ್ರತಿದಿನ ಓಮ ಅಗಿಯುವುದರಿಂದ ಗರ್ಭಾಶಯದಲ್ಲಿನ ಅಂಗಾಂಶಗಳು ಶಾಂತಗೊಳ್ಳುತ್ತವೆ. ಇದು ದೇಹಕ್ಕೆ ನೈಸರ್ಗಿಕ ಪರಿಹಾರವನ್ನು ನೀಡುತ್ತದೆ. ಇದು ಮುಟ್ಟಿನ ಸಮಯದಲ್ಲಿ ಉಂಟಾಗುವ ನೋವನ್ನು ನಿವಾರಿಸುತ್ತದೆ. ವಿಶೇಷವಾಗಿ ಮುಟ್ಟಿನ ಸಮಯದಲ್ಲಿ ಕಾಣಿಸುವ ಹೊಟ್ಟೆ ನೋವಿಗೆ ಪರಿಹಾರ ನೀಡುತ್ತದೆ.
ಉಸಿರಾಟದ ತೊಂದರೆಗಳನ್ನು ನಿವಾರಿಸುತ್ತದೆ
ಓಮದಲ್ಲಿರುವ ಥೈಮೋಲ್ ಎಂಬ ಸಂಯುಕ್ತವು ಉಸಿರಿನ ನಾಳದಲ್ಲಿ ಸಂಗ್ರಹವಾಗಿರುವ ವಿವಿಧ ಅಡಚಣೆಗಳು ಮತ್ತು ನಿಕ್ಷೇಪಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಮತ್ತು ಸುಲಭವಾಗಿ ಉಸಿರಾಡಲು ಸಹಾಯ ಮಾಡುತ್ತದೆ. ವಿಶೇಷವಾಗಿ ಆಸ್ತಮಾ, ಬ್ರಾಂಕೈಟಿಸ್ ಮತ್ತು ಶೀತಗಳನ್ನು ನಿವಾರಿಸುತ್ತದೆ.
ಆಸಿಡಿಟಿಯನ್ನು ನಿವಾರಿಸುತ್ತದೆ
ಅಜವಾನವು ಹೊಟ್ಟೆಯಲ್ಲಿರುವ ಆಮ್ಲವನ್ನು ಸಮತೋಲನಗೊಳಿಸುತ್ತದೆ. ಇದು ಎದೆಯುರಿ ಮತ್ತು ಆಸಿಡಿಯಿಯಿಂದ ಪರಿಹಾರ ನೀಡುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಸರಪಡಿಸುವ ಮೂಲಕ, ಹೊಟ್ಟೆಯ ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ.
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ
ಅಜ್ವಾನದಲ್ಲಿರುವ ಜೀರ್ಣಕಾರಿ ಕಿಣ್ವಗಳು ಹೊಟ್ಟೆ ಉಬ್ಬರವನ್ನು ಗುಣಪಡಿಸಬಹುದು. ಇದು ಗ್ಯಾಸ್ಟ್ರಿಕ್ ಅಥವಾ ಅಜೀರ್ಣ ಉಂಟಾಗುವುದನ್ನು ತಡೆಯುತ್ತದೆ. ಪ್ರತಿದಿನ ಓಮ ಸೇವಿಸುವ ಅಭ್ಯಾಸ ಮಾಡಿಕೊಂಡರೆ, ಅದು ಕರುಳಿನ ಆರೋಗ್ಯ ಹಾಗೂ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದು ತಿಂದರೆ ಹೊಟ್ಟೆಯುಬ್ಬರ ನಿವಾರಣೆಯಾಗುತ್ತದೆ.
ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ
ಅಜವಾನ ಪೊಟ್ಯಾಸಿಯಮ್‌ನಲ್ಲಿ ಸಮೃದ್ಧವಾಗಿದೆ. ಇದು ನಿಮ್ಮ ದೇಹದ ರಕ್ತನಾಳಗಳನ್ನು ಸಡಿಲಗೊಳಿಸುತ್ತದೆ. ಇದು ದೇಹದಲ್ಲಿ ರಕ್ತ ಪರಿಚಲನೆ ಹೆಚ್ಚಿಸುತ್ತದೆ. ಅಜ್ವೈನ್ ನೈಸರ್ಗಿಕವಾಗಿ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.
ಕೀಲು ನೋವು ಕಡಿಮೆ ಮಾಡುತ್ತದೆ
ಅಜವಾನದಲ್ಲಿರುವ ಉರಿಯೂತ ನಿವಾರಕ ಗುಣಗಳು ಕೀಲು ನೋವಿನಿಂದ ಉಂಟಾಗುವ ಅಸ್ವಸ್ಥತೆಯನ್ನು ನಿವಾರಿಸುತ್ತದೆ. ಕೀಲುಗಳಲ್ಲಿನ ಬಿಗಿತ ಮತ್ತು ನೋವನ್ನು ನಿವಾರಿಸುತ್ತದೆ. ಅದನ್ನು ನೇರವಾಗಿ ಸೇವಿಸಿದರೂ ಅಥವಾ ಪುಡಿ ರೂಪದಲ್ಲಿ ತೆಗೆದುಕೊಂಡರೂ ಅದು ಆರೋಗ್ಯಕರ. ಇವು ಕೀಲು ನೋವು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)
