Home Remedies: ಮಳೆಗಾಲದ ಚಳಿಯಲ್ಲಿ ಕಾಡುವ ಅಸ್ತಮಾಗೆ ಸುಲಭದ ಮನೆಮದ್ದುಗಳು ಇಲ್ಲಿವೆ
ಕನ್ನಡ ಸುದ್ದಿ  /  ಜೀವನಶೈಲಿ  /  Home Remedies: ಮಳೆಗಾಲದ ಚಳಿಯಲ್ಲಿ ಕಾಡುವ ಅಸ್ತಮಾಗೆ ಸುಲಭದ ಮನೆಮದ್ದುಗಳು ಇಲ್ಲಿವೆ

Home Remedies: ಮಳೆಗಾಲದ ಚಳಿಯಲ್ಲಿ ಕಾಡುವ ಅಸ್ತಮಾಗೆ ಸುಲಭದ ಮನೆಮದ್ದುಗಳು ಇಲ್ಲಿವೆ

ಅಸ್ತಮಾವನ್ನು ಹಲವರು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ, ಮಳೆಗಾಲ ಸೇರಿದಂತೆ ತಂಪು ವಾತಾವರಣಕ್ಕೆ ಅಸ್ತಮಾ ಸಮಸ್ಯೆ ಗಂಭೀರವಾಗುವ ಸಾಧ್ಯತೆ ಇದೆ. ಮಳೆಗಾಲದಲ್ಲಿ ಮನೆಯಲ್ಲಿಯೇ ಕೆಲವೊಂದು ಮನೆ ಔಷಧಿಗಳನ್ನು ಅನುಸರಿಸಿ ಆರೋಗ್ಯದ ಕಾಳಜಿ ವಹಿಸಬಹುದು.

ಮಳೆಗಾಲದ ಚಳಿಯಲ್ಲಿ ಕಾಡುವ ಅಸ್ತಮಾಗೆ ಸುಲಭದ ಮನೆಮದ್ದುಗಳು ಇಲ್ಲಿವೆ
ಮಳೆಗಾಲದ ಚಳಿಯಲ್ಲಿ ಕಾಡುವ ಅಸ್ತಮಾಗೆ ಸುಲಭದ ಮನೆಮದ್ದುಗಳು ಇಲ್ಲಿವೆ

ತಂಪು ವಾತಾವರಣದಲ್ಲಿ ಅಸ್ತಮಾ ಸಮಸ್ಯೆ ಹೆಚ್ಚು ಕಾಡುತ್ತದೆ. ಮಳೆಗಾಲದ ಚಳಿಗೆ ಇದು ಉಲ್ಬಣಗೊಳ್ಳುತ್ತದೆ. ಆಯುರ್ವೇದದ ಪ್ರಕಾರ, ಅಸ್ತಮಾ ಹೊಟ್ಟೆಯಲ್ಲಿ ಆರಂಭವಾಗುತ್ತದೆ. ಹೆಚ್ಚು ಎಣ್ಣೆಯುಕ್ತ, ಕರಿದ ಮತ್ತು ಜೀರ್ಣಿಸಿಕೊಳ್ಳಲು ಕಷ್ಟಕರವಾದ ಪದಾರ್ಥಗಳ ಸೇವನೆಯಿಂದ ಕಫಾದಲ್ಲಿ ಅಸ್ವಸ್ಥತೆ ಕಾಣಿಸಿಕೊಳ್ಳುತ್ತದೆ. ಈ ಕಫ ಸಂಗ್ರಹಣೆಯಿಂದ ಅಸ್ತಮಾ ಕಾಣಿಸಿಕೊಳ್ಳುತ್ತದೆ. ನಮ್ಮ ಹೊಟ್ಟೆಯು ‘ಅಮಾ’ ಎಂದು ಕರೆಯುವ ಜೀರ್ಣವಾಗದಂಥ ವಸ್ತುವನ್ನು ದೇಹದ ಜೀರ್ಣಾಂಗ ವ್ಯವಸ್ಥೆಗೆ ಕೊಡುತ್ತದೆ. ಇದು ದೇಹದಲ್ಲಿ ಪರಿಚಲನೆಗೊಂಡು ಜೀವ ನೀಡುವ ಶಕ್ತಿಯ ಮೇಲ್ಮುಖ ಚಲನೆಯನ್ನು ನಿರ್ಬಂಧಿಸಲು ಪ್ರಾರಂಭಿಸುತ್ತದೆ.

ಅಮಾ ಉರಿಯೂತವನ್ನು ಉಂಟುಮಾಡುತ್ತದೆ. ಹೀಗಾಗಿ ಉಸಿರಾಟದ ವಾಯುಮಾರ್ಗಗಳು ಸಂಕುಚಿತಗೊಳ್ಳುತ್ತವೆ. ಕೆಮ್ಮು, ಉಬ್ಬಸ ಆರಂಭವಾಗುತ್ತದೆ. ವಾತಾವರಣವು ತಂಪಾಗಿ ಅನಾರೋಗ್ಯಕ್ಕೆ ಒಳಗಾದರೆ, ಪರಿಸ್ಥಿತಿಯು ಪೂರ್ಣ ಪ್ರಮಾಣದಲ್ಲಿ ಅಸ್ತಮಾ ಆಗುವ ಸಾಧ್ಯತೆ ಇದೆ. ಹೀಗಾಗಿ ಆರಂಭದಲ್ಲೇ ಅಸ್ತಮಾಗೆ ಪರಿಹಾರ ಕಂಡುಕೊಳ್ಳಬೇಕು.

ಅಸ್ತಮಾಗೆ ಚಿಕಿತ್ಸೆಯು ಆರಂಭಿಕ ಹಂತದಿಂದಲೇ ಆರಂಭವಾಗಬೇಕು. ಹೊಟ್ಟೆಯ ದಟ್ಟಣೆಯನ್ನು ಶುದ್ಧೀಕರಿಸಬೇಕು. ಆಹಾರದಲ್ಲಿ ತರಕಾರಿ ಸೂಪ್‌, ಬಿಸಿ ನೀರು ಮತ್ತು ಗಿಡಮೂಲಿಕೆ ಚಹಾ ಮಾತ್ರ ಇರಬೇಕು.

ಪುದೀನಾ ಚಹಾವನ್ನು ಕುಡಿಯುವ ಮೂಲಕ ಜೀರ್ಣಾಂಗ ವ್ಯವಸ್ಥೆಯಲ್ಲಿ ಸಿಲುಕಿರುವ ವಾತವನ್ನು ನಿವಾರಿಸಬಹುದು. ಅಜ್ವೈನ್ ಮತ್ತು ಸೌನ್ಫ್ ನೀರಿನ ಕಷಾಯ ಕೂಡಾ ಉತ್ತಮ. ಇದೇ ವೇಳೆ ಪ್ರಾಣಾಯಾಮ ಮತ್ತು ಯೋಗವನ್ನು ನಿತ್ಯ ಅಭ್ಯಾಸ ಮಾಡಬಹುದು.

ಶ್ವಾಸಕೋಶದಿಂದ ದಟ್ಟಣೆಯನ್ನು ಹೊಟ್ಟೆಗೆ ಸರಿಸಬಹುದು. ಹೊಟ್ಟೆಯಿಂದ ಅದನ್ನು ಹೊರಹಾಕಲು ಕ್ರಮ ಅನುಸರಿಸಬಹುದು. ಇದಕ್ಕೆ ಗಿಡಮೂಲಿಕೆಗಳು ಸಹಾಯ ಮಾಡುತ್ತವೆ. ದಾಲ್ಚಿನಿ, ಕರಿಮೆಣಸು, ತುಳಸಿ, ಶುಂಠಿ, ಅರಿಶಿನ ಇದಕ್ಕೆ ನೆರವಾಗುತ್ತದೆ.

ಸರಳ ಮನೆಮದ್ದುಗಳು

1. ಶುಂಠಿ, ತುಳಸಿ ಮತ್ತು ಕರಿಮೆಣಸಿನ ದ್ರಾವಣವನ್ನು ಚೆನ್ನಾಗಿ ಕುದಿಸಿ. ಅರ್ಧ ಚಮಚ ಜೇನುತುಪ್ಪದೊಂದಿಗೆ ಸೇವಿಸಿ.

2. ಒಂದು ಚಮಚ ಮುಲೇತಿಯನ್ನು ಒಂದು ಚಿಟಿಕೆ ಪಿಪ್ಪಲಿ ಪುಡಿಯೊಂದಿಗೆ ಕುದಿಸಿ. ಉಬ್ಬಸ ಹೆಚ್ಚಾದಾಗ ನಿಧಾನವಾಗಿ ಸೇವಿಸಿ.

3. ಎದೆ ಮತ್ತು ಬೆನ್ನಿನ ಮೇಲೆ ಬೆಚ್ಚಗಿನ ಸಾಸಿವೆ ಎಣ್ಣೆ ಹಚ್ಚಿ. ಹೊಕ್ಕುಳ ಮೇಲೂ ಕೆಲವು ಹನಿಗಳನ್ನು ಹಾಕಿ.

4. ಸ್ವಲ್ಪ ಅರಿಶಿನ ಮತ್ತು ಕರಿಮೆಣಸಿಗೆ ಸಾಸಿವೆ ಕಾಳುಗಳನ್ನು ಹಾಕಿ ಕುದಿಸಿ. ಸ್ವಲ್ಪ ಸ್ವಲ್ಪವೇ ಸೇವಿಸಿ.

Whats_app_banner