ದೇಹಕ್ಕೆ ಪ್ರೋಟೀನ್ ಎಷ್ಟು ಮುಖ್ಯವಾಗುತ್ತೆ? ವಿರಾಟ್ ಕೊಹ್ಲಿ, ಸುನಿಲ್ ಶೆಟ್ಟಿ, ನೀರಜ್ ಚೋಪ್ರಾ ಫಿಟ್ನೆಸ್‌ಗೆ ಹೇಗೆ ನೆರವಾಗಿದೆ ನೋಡಿ
ಫಿಟ್ನೆಸ್ ತರಬೇತುದಾರರೊಬ್ಬರು ಸಾಮಾಜಿಕ ಜಾಲತಾಣ ಎಕ್ಸ್ ಪೋಸ್ಟ್ ವೊಂದನ್ನು ಮಾಡಿದ್ದು, ನಮ್ಮ ಆಹಾರದಲ್ಲಿ ಪ್ರೋಟೀನ್ ಎಂತಹ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ವಿವರಿಸಿದ್ದಾರೆ. ಹೆಚ್ಚುವರಿ ಕೊಬ್ಬು ನಷ್ಟ, ಸ್ನಾಯುಗಳ ಸಂರಕ್ಷಣೆ ಹಾಗೂ ಒಟ್ಟಾರೆ ಆರೋಗ್ಯಕ್ಕೆ ಪೋಷಕಾಂಶಗಳ ಪ್ರಯೋಜನಗಳ ಬಗ್ಗೆ ತಿಳಿಸಿದ್ದಾರೆ.
ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂಬ ಆಸೆ ಇರುತ್ತದೆ. ಆದರೆ ಬದಲಾದ ಜೀವನಶೈಲಿ ಸೇರಿದಂತೆ ನಾನಾ ಕಾರಣಗಳಿಂದ ಇದು ಸಾಧ್ಯವಾಗುವುದಿಲ್ಲ. ಉತ್ತಮ ಫಿಟ್ನೆಸ್ ಕಾಯ್ದುಕೊಳ್ಳಲು ದೇಹಕ್ಕೆ ಬೇಕಾಗಿರುವ ಪ್ರೋಟೀನ್ ಗಳು ಮಹತ್ವದ ಪಾತ್ರ ವಹಿಸುತ್ತವೆ. ಈ ಮಾತು ಹಲವಾರು ಬಾರಿ ಸಾಬೀತಾಗಿದೆ. ಪ್ರೋಟೀನ್ ನಮ್ಮ ಆಹಾರದ ಅತ್ಯಗತ್ಯವಾಗಿರಬೇಕು. ಏಕೆಂದರೆ ಇದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ, ಬಾಲಿವುಡ್ ಹಿರಿಯ ನಟ ಸುನಿಲ್ ಶೆಟ್ಟಿ ಹಾಗೂ ಭಾರತದ ತಾರಾ ಜಾವೆಲಿನ್ ಪಟು ನೀರಜ್ ಚೋಪ್ರಾ ಸೇರಿದಂತೆ ಸೆಲೆಬ್ರಿಟಿಗಳು ಮತ್ತು ಕ್ರೀಡಾಪಟುಗಳು ಸಹ ಇದನ್ನು ನಂಬುತ್ತಾರೆ.
ಪುರುಷರಿಗೆ ಸಂಬಂಧಿಸಿದ ಫಿಟ್ನೆಸ್ ತರಬೇತುದಾರ ಅಭಿ ರಜಪೂತ್ ಎಂಬುವರು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್ ವೊಂದನ್ನು ಮಾಡಿ, ದೇಹಕ್ಕೆ ಪ್ರೋಟೀನ್ ಎಷ್ಟು ಮುಖ್ಯ, ಇದು ದಿನಚರಿಯ ಭಾಗವಾಗಿಸುವುದು ಹೇಗೆ, ಕೆಲವು ಸೆಲೆಬ್ರಿಟಿಗಳು ಇದನ್ನು ಹೇಗೆ ಅಳವಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂಬುದನ್ನು ವಿವರಿಸಿದ್ದಾರೆ.
ಪ್ರೋಟೀನ್ ಏಕೆ ನಿರ್ಣಾಯಕ?
ಹೆಚ್ಚಿನ ಜನರು 'ಪ್ರೋಟೀನ್ ಎಂದರೆ ಕೇವಲ ದಾಲ್ ಮತ್ತು ಸತು' ಎಂದು ಭಾವಿಸುತ್ತಾರೆ. ಆದರೆ, ಪ್ರೋಟೀನ್ ನಮ್ಮ ದೇಹಕ್ಕೆ ಏಕೆ ನಿರ್ಣಾಯಕ ಪೋಷಕಾಂಶವಾಗಿದೆ ಎಂಬುದನ್ನು ವಿವರಿಸಿರುವ ಇವರು, "ಪ್ರೋಟೀನ್, ಸ್ನಾಯುಗಳನ್ನು ಮತ್ತಷ್ಟು ಬಲಿಷ್ಟಗೊಳಿಸುತ್ತವೆ. ಜೊತೆಗೆ ನಿಮ್ಮನ್ನು ಹೆಚ್ಚು ಸಮಯದವರೆಗೆ ಹೊಟ್ಟೆ ತುಂಬಿದಂತೆ ಮಾಡುತ್ತದೆ, ಕಡುಬಯಕೆಗಳನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿನ ಹೆಚ್ಚುವರಿ ಕೊಬ್ಬು ಕಡಿಮೆ ಮಾಡಲು ಸಹಾಯ ಮಾಡುತ್ತೆ. ಇದು ಶಕ್ತಿ, ತ್ರಾಣ ಮತ್ತು ಚೇತರಿಕೆಯ ಅಡಿಪಾಯವಾಗಿದೆ. ಪ್ರೋಟೀನ್ ಅನ್ನು ನಿಮ್ಮ ದೇಹದ ಇಂಧನವೆಂದು ಭಾವಿಸಿ. ಇದರಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳಬಾರದೆಂದು ಹೇಳಿದ್ದಾರೆ.
ಭಾರತದ ಸ್ಟಾರ್ ಜಾವೆಲಿನ್ ಪಟು ನೀರಜ್ ಚೋಪ್ರಾ ಅವರ ಉದಾಹರಣೆಯನ್ನು ತೆಗೆದುಕೊಂಡಿರುವ ಅಭಿ ರಜಪೂತ್, ಈ ಹಿಂದೆ ಸಂದರ್ಶನವೊಂದರಲ್ಲಿ ಪ್ರೋಟೀನ್ ಗಾಗಿ ಚಿಕನ್, ಮೀನು, ಮೊಟ್ಟೆ, ಪನೀರ್ ತಿನ್ನುತ್ತಾರೆ ಎಂಬುದನ್ನು ಬಹಿರಂಗಪಡಿಸಿದ್ದಾರೆ, ಉತ್ತಮ ದೇಹ ಮತ್ತು ಕಾರ್ಯಕ್ಷಮತೆಯನ್ನು ಸಾಧಿಸಲು, ನೀವು ಹೊಸ ಆಹಾರ ಪದಾರ್ಥಗಳನ್ನು ಸೇರಿಸಬೇಕಾಗಿಲ್ಲ. ಬದಲಾಗಿ, ಉತ್ತಮ ಜೀರ್ಣಕ್ರಿಯೆ, ತ್ವರಿತ ಲಭ್ಯತೆ ಮತ್ತು ಸುಸ್ಥಿರ ಶಕ್ತಿಯ ಮೇಲೆ ಗಮನ ಹರಿಸಬೇಕು ಎಂದಿದ್ದಾರೆ.
ಉತ್ತಮ ಫಲಿತಾಂಶಕ್ಕಾಗಿ ಸರಳೀಕೃತ ಆಹಾರ
ಸುನಿಲ್ ಶೆಟ್ಟಿ ಅವರಂತೆ ಡಯಟಿಂಗ್ ತಂತ್ರಗಳನ್ನು ಅಳವಡಿಸಿಕೊಳ್ಳಲು ಒತ್ತು ನೀಡಬೇಕು ಎಂದಿರುವ ಈ ಫಿಟ್ನೆಸ್ ತರಬೇತುದಾರ, ಸುನಿಲ್ ಶೆಟ್ಟಿ ಅವರ ವಿಡಿಯೊವನ್ನು ಹಂಚಿಕೊಂಡು, ತಮ್ಮ ಊಟವನ್ನು ನಿರ್ಧರಿಸುವಾಗ ಅವರು ಗ್ರಾಮ್ ಅಂಶವನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತಾರೆ ಎಂದು ಬಹಿರಂಗಪಡಿಸಿದ್ದಾರೆ. "ಅವರ ಊಟದಲ್ಲಿ ಪ್ರೋಟೀನ್ ಮತ್ತು ಸೊಪ್ಪುಗಳು ಹೆಚ್ಚಾಗಿರುತ್ತವೆ. ಪ್ರಮಾಣೀಕರಿಸಿದ ಆಹಾರದ ಅರ್ಥವೇನು? ನೀವು ಎಷ್ಟು ತಿನ್ನುತ್ತಿದ್ದೀರಿ ಆದರೆ ಪ್ರತಿ ಮ್ಯಾಕ್ರೋನ್ಯೂಟ್ರಿಯಂಟ್ (ಮೂಲಗಳು) ಬಗ್ಗೆ ಗಮನ ಹರಿಸಿ. ಇದು ಗೇಮ್ ಚೇಂಜರ್ ತಂತ್ರವಾಗಿದೆ ಎಂದಿದ್ದಾರೆ.
ವಿರಾಟ್ ಕೊಹ್ಲಿಯ ಆಹಾರದ ಬಗ್ಗೆ ಕೂಡಾ ವೀಡಿಯೊವನ್ನು ಹಂಚಿಕೊಂಡಿದ್ದಾರೆ. "ಕೊಹ್ಲಿ ಮೈದಾನದಲ್ಲಿ ಮಾತ್ರವಲ್ಲದೆ ಮೈದಾನದ ಹೊರಗೆಯೂ ಶಿಸ್ತಿಗೆ ಹೆಸರುವಾಸಿಯಾಗಿದ್ದಾರೆ. ಅವರು ಕಟ್ಟುನಿಟ್ಟಾದ ಆಹಾರ ಯೋಜನೆಯನ್ನು ಅನುಸರಿಸುತ್ತಾರೆ ಮತ್ತು ಅವರು ಎಷ್ಟೇ ಬ್ಯುಸಿ ಇದ್ದರೂ ವರ್ಕೌಟ್ ಮಾಡುವುದನ್ನು ಎಂದಿಗೂ ತಪ್ಪಿಸುವುದಿಲ್ಲ. ಆದರೆ ನೀವು ವಿರಾಟ್ ಕೊಹ್ಲಿ ಅಲ್ಲ, ಆದ್ದರಿಂದ ಅನುಸರಿಸಬೇಕಾದ ಕೆಲವು ಪ್ರಾಯೋಗಿಕ ವಿಧಾನಗಳನ್ನು ಅರ್ಥಮಾಡಿಕೊಳ್ಳಬೇಕು. ಭಾರತೀಯ ಆಹಾರದಿಂದ ಹಲವಾರು ಸರಳೀಕೃತ ಪ್ರೋಟೀನ್ ಆಯ್ಕೆ ಮಾಡಿಕೊಳ್ಳಬೇಕು.
ಕೊನೆಯದಾಗಿ ನಮ್ಮ ದೈನಂದಿನ ಆಹಾರದಲ್ಲಿ ಪ್ರೋಟೀನ್ ನ ಮಹತ್ವವನ್ನು ಒತ್ತಿ ಹೇಳಿದ್ದಾರೆ. ಪ್ರೋಟೀನ್ ಕೇವಲ ಬಾಡಿಬಿಲ್ಡರ್ಗಳಿಗೆ ಮಾತ್ರವಲ್ಲ, ಪ್ರತಿಯೊಬ್ಬರ ಆಹಾರದ ಭಾಗವಾಗಿರಬೇಕು ಎಂದು ಅವರು ಹೇಳಿದ್ದಾರೆ. "ಇದು ಕೊಬ್ಬು ನಷ್ಟ, ಸ್ನಾಯು ಸಂರಕ್ಷಣೆ, ಚೇತರಿಕೆ ಮತ್ತು ಒಟ್ಟಾರೆ ಆರೋಗ್ಯದ ಅಡಿಪಾಯವಾಗಿದೆ. ಹೆಚ್ಚಿನ ಪ್ರೋಟೀನ್ ಊಟಕ್ಕೆ ಆದ್ಯತೆ ನೀಡುವ ಮೂಲಕ, ನೀವು ಕೂಡ ಪೂರ್ಣವಾಗಿ ಮತ್ತು ಶಕ್ತಿವಂತರಾಗಬಹುದು. ವೇಗವಾಗಿ ಚೇತರಿಸಿಕೊಳ್ಳುತ್ತೀರಿ. ಕೊಬ್ಬನ್ನು ಹೆಚ್ಚು ಪರಿಣಾಮಕಾರಿಯಾಗಿ ಕರಗಿಸಿ" ಎಂದು ತರಬೇತುದಾರ ಅಭಿ ಸಲಹೆ ನೀಡಿದ್ದಾರೆ.
(ಗಮನಿಸಿ: ಇದು ಸಾಮಾಜಿಕ ಜಾಲತಾಣವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)