Health Tips: ನೆನಪಿನ ಶಕ್ತಿ ಹೆಚ್ಚಿಸುವ ಬಾದಾಮಿಯನ್ನು ಯಾವ ಹೊತ್ತಿನಲ್ಲಿ ಸೇವಿಸಬೇಕು? ಎಷ್ಟು ಸೇವಿಸಬೇಕು ?
Almonds: ಬಾದಾಮಿ ಸೇವನೆಯು ಆರೋಗ್ಯಕ್ಕೆ ಒಳ್ಳೆಯದು ನಿಜ. ಆದರೆ ಒಬ್ಬ ಮನುಷ್ಯ ಪ್ರತಿದಿನ ಎಷ್ಟು ಬಾದಾಮಿ ಸೇವಿಸಬೇಕು..? ಯಾವ ಹೊತ್ತಿನಲ್ಲಿ ಬಾದಾಮಿ ತಿನ್ನುವುದು ಒಳ್ಳೆಯದು..? ಇಷ್ಟ ಎಂದು ಬಾದಾಮಿಯನ್ನು ಅತಿಯಾಗಿ ತಿಂದರೆ ಆಗುವ ದುಷ್ಪರಿಣಾಮಗಳೇನು..? ಇಲ್ಲಿದೆ ಸಂಪೂರ್ಣ ಮಾಹಿತಿ.
Almonds: ಪ್ರತಿದಿನ ಬಾದಾಮಿ ಸೇವನೆ ಮಾಡಿದರೆ ನೆನಪಿನ ಶಕ್ತಿ ಸುಧಾರಿಸುತ್ತದೆ ಎಂಬ ಮಾತನ್ನು ನೀವು ಕೂಡ ಕೇಳಿರಬಹುದು. ಹೌದು ಮೆದುಳಿನ ಕಾರ್ಯಚಟುವಟಿಕೆಗಳ ಮೇಲೆ ಪ್ರಮುಖ ಪರಿಣಾಮವನ್ನು ಬೀರುವ ಮೆದುಳನ್ನು ಬಹುತೇಕರು ಇಷ್ಟಪಡುತ್ತಾರೆ. ಬಾದಾಮಿಯು ಬಹುತೇಕ ಎಲ್ಲಾ ಸಿಹಿ ತಿನಿಸುಗಳ ರುಚಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಬಾದಾಮಿಯು ಪೋಷಕಾಂಶಗಳಿಂದ ಸಮೃದ್ಧವಾದ ಒಂದು ಶಕ್ತಿ ಕೇಂದ್ರ ಎಂದು ಹೇಳಿದರೆ ತಪ್ಪಾಗಲಾರದು. ಅಗಾಧವಾದ ಫೈಬರ್ ಸೇರಿದಂತೆ ವಿವಿಧ ಪೋಷಕಾಂಶಗಳನ್ನು ಹೊಂದಿರುವ ಬಾದಾಮಿಯು ದೇಹಕ್ಕೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ.
ನೆನಪಿನ ಶಕ್ತಿ ವೃದ್ಧಿಸುವುದರಿಂದ ಹಿಡಿದು ಚರ್ಮದ ಆರೋಗ್ಯ ಸುಧಾರಿಸುವವರೆಗೂ ಬಾದಾಮಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಬೆಳಗ್ಗೆ ಎದ್ದ ಕೂಡಲೇ ಒಂದು ಹಿಡಿ ಬಾದಾಮಿಯನ್ನು ತಿನ್ನುವ ಅಭ್ಯಾಸ ಅನೇಕರಿಗೆ ಇದ್ದಿರಬಹುದು. ಆದರೆ ಬಾದಾಮಿ ಎಷ್ಟು ಸೇವಿಸಬೇಕು ಎಂದು ಎಂದಾದರೂ ಯೋಚಿಸಿದ್ದೀರೇ..?
ಒಂದು ದಿನದಲ್ಲಿ ಎಷ್ಟು ಬಾದಾಮಿ ಸೇವಿಸಬಹುದು..?
ಯಾವುದರಿಂದ ಎಷ್ಟೇ ಲಾಭವಿದ್ದರೂ ಸಹ ಯಾವುದೂ ಕೂಡ ಅತಿಯಾಗಬಾರದು. ಹೀಗಾಗಿ ಬಾದಾಮಿ ಸೇವನೆ ಮಾಡುವಾಗ ಕೂಡ ನೀವು ಒಂದು ಮಿತಿಯನ್ನು ಹೇರಿಕೊಂಡು ಅದಕ್ಕೆ ಅನುಗುಣವಾಗಿ ಬಾದಾಮಿ ಸೇವನೆ ಮಾಡಬೇಕು. ವಯಸ್ಕರು ಪ್ರತಿದಿನಕ್ಕೆ 20-25 ಬಾದಾಮಿ ಸೇವನೆ ಮಾಡುವುದು ಆರೋಗ್ಯಕರ ಎಂದು ಹೇಳಬಹುದಾಗಿದೆ. ಮಕ್ಕಳು 10 ಬಾದಾಮಿ ಸೇವನೆ ಮಾಡಬಹುದು.
ಇನ್ನು ಬಾದಾಮಿಯನ್ನು ಯಾವ ಹೊತ್ತಿನಲ್ಲಿ ಸೇವಿಸುವುದು ಒಳ್ಳೆಯದು ಎಂದು ಕೇಳಿದರೆ ದಿನದಲ್ಲಿ ಯಾವುದೇ ಸಮಯದಲ್ಲಿಯೂ ನೀವು ಬಾದಾಮಿ ಸೇವನೆ ಮಾಡಬಹುದು. ಅದರಲ್ಲೂ ಬೆಳಗ್ಗೆ ಅಥವಾ ಸಂಜೆ ಬಾದಾಮಿ ಸೇವನೆ ಮಾಡುವುದು ಇನ್ನೂ ಹೆಚ್ಚು ಒಳ್ಳೆಯದು ಎಂದು ಹೇಳಬಹುದು.
ಬಾದಾಮಿಯಲ್ಲಿಯೂ ಇದೆ ಅಡ್ಡಪರಿಣಾಮ
ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆ : ಬಾದಾಮಿಯಲ್ಲಿ ಫೈಬರ್ ಅಂಶ ಅಗಾಧಪ್ರಮಾಣದಲ್ಲಿ ಇರುತ್ತದೆ. ಇದರಿಂದ ಜೀರ್ಣಕ್ರಿಯೆಗೆ ಒಳ್ಳೆಯದೇ. ಆದರೆ ಅತಿಯಾದ ಬಾದಾಮಿ ಸೇವಿಸುವುದು ಅಥವಾ ಸರಿಯಾಗಿ ಅಗಿಯದೇ ಬಾದಾಮಿ ಸೇವನೆ ಮಾಡುವುದರಿಂದ ಅರ್ಜಿಣ , ಅತಿಸಾರದಂತಹ ಸಮಸ್ಯೆಗಳು ಉಂಟಾಗಬಹುದು.
ಮೂತ್ರಪಿಂಡದಲ್ಲಿ ಕಲ್ಲು : ಬಾದಾಮಿಯಲ್ಲಿ ನೈಸರ್ಗಿಕವಾಗಿ ಇರುವ ಸಂಯುಕ್ತಗಳಾದ ಆಕ್ಸಲೇಟ್ಗಳು ಇರುತ್ತವೆ, ಆಕ್ಸಲೇಟ್ಗಳಿಂದ ಮೂತ್ರಪಿಂಡಗಳಲ್ಲಿ ಕಲ್ಲುಗಳ ಉತ್ಪಾದನೆಯಾಗುತ್ತದೆ.
ತೂಕ ಏರಿಕೆ : ಬಾದಾಮಿಯಲ್ಲಿ ಪೋಷಕಾಂಶ ಪ್ರಮಾಣ ಹೇರಳವಾಗಿ ಇರುತ್ತದೆ. ಅಲ್ಲದೇ ಬಾದಾಮಿ ಹೆಚ್ಚಿನ ಕ್ಯಾಲೋರಿಯನ್ನು ಹೊಂದಿದೆ. ಹೀಗಾಗಿ ಅತಿಯಾಗಿ ಬಾದಾಮಿ ಸೇವನೆ ಮಾಡುವುದರಿಂದ ತೂಕ ಹೆಚ್ಚಳ ಉಂಟಾಗಬಹುದು.
ವಿಭಾಗ