Oral Hygiene: ಪ್ರತಿದಿನ ಹಲ್ಲು ಉಜ್ಜಿದರೆ ಮುಗೀತಾ; ಬಾಯಿಯ ಆರೋಗ್ಯ ಚೆನ್ನಾಗಿರಲು ಯಾವ ರೀತಿ ಮುನ್ನೆಚರಿಕೆ ವಹಿಸಬೇಕು? ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ಜೀವನಶೈಲಿ  /  Oral Hygiene: ಪ್ರತಿದಿನ ಹಲ್ಲು ಉಜ್ಜಿದರೆ ಮುಗೀತಾ; ಬಾಯಿಯ ಆರೋಗ್ಯ ಚೆನ್ನಾಗಿರಲು ಯಾವ ರೀತಿ ಮುನ್ನೆಚರಿಕೆ ವಹಿಸಬೇಕು? ಇಲ್ಲಿದೆ ಮಾಹಿತಿ

Oral Hygiene: ಪ್ರತಿದಿನ ಹಲ್ಲು ಉಜ್ಜಿದರೆ ಮುಗೀತಾ; ಬಾಯಿಯ ಆರೋಗ್ಯ ಚೆನ್ನಾಗಿರಲು ಯಾವ ರೀತಿ ಮುನ್ನೆಚರಿಕೆ ವಹಿಸಬೇಕು? ಇಲ್ಲಿದೆ ಮಾಹಿತಿ

ಹಣ ಖರ್ಚಾಗುತ್ತದೆ ಎಂಬ ಕಾರಣಕ್ಕೋ, ಅರಿವು ಇಲ್ಲದೆಯೋ ಒಂದೇ ಟೂತ್‌ ಬ್ರಷನ್ನು ಹೆಚ್ಚು ತಿಂಗಳು ಬಳಸುತ್ತಾರೆ, ಆದರೆ ಕನಿಷ್ಠ ಎಂದರೆ 2 ತಿಂಗಳಿಗಿಂತ ಹೆಚ್ಚಾಗಿ ಒಂದೇ ಬ್ರಷ್‌ ಬಳಸಬಹುದು, ನಂತರ ನಿಮ್ಮ ಟೂತ್‌ ಬ್ರಷ್‌ ಬಳಸುವುದು ಒಳ್ಳೆಯದು.

ಬಾಯಿಯ ಆರೋಗ್ಯ ಉತ್ತಮವಾಗಿರಲು ಪ್ರತಿದಿನ ಎರಡು ಬಾರಿ ಹಲ್ಲು ಉಜ್ಜುವುದು ಮಾತ್ರವಲ್ಲ, ಇನ್ನೂ ಕೆಲವೊಂದು ಅಂಶಗಳ ಕಡೆ ಗಮನ ಹರಿಸಬೇಕು
ಬಾಯಿಯ ಆರೋಗ್ಯ ಉತ್ತಮವಾಗಿರಲು ಪ್ರತಿದಿನ ಎರಡು ಬಾರಿ ಹಲ್ಲು ಉಜ್ಜುವುದು ಮಾತ್ರವಲ್ಲ, ಇನ್ನೂ ಕೆಲವೊಂದು ಅಂಶಗಳ ಕಡೆ ಗಮನ ಹರಿಸಬೇಕು (PC: Freepik)

ಶುಚಿತ್ವ ಇದ್ದರೆ ಆರೋಗ್ಯ ತನ್ನಿಂದ ತಾನೇ ಬರುತ್ತದೆ. ನಮ್ಮ ಸುತ್ತಲಿನ ಪರಿಸರವನ್ನು ಶುಚಿ ಆಗಿರುವಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ಹಾಗೇ ಪ್ರತಿದಿನ ಸ್ನಾನ ಮಾಡುವುದು, ಚರ್ಮದ ಕಾಳಜಿ, ಕೂದಲಿನ ಕಾಳಜಿ ಎಲ್ಲವೂ ಬಹಳ ಮುಖ್ಯ, ಇಲ್ಲದಿದ್ದರೆ ರೋಗ ರುಜಿನಗಳು ಕಾಡುತ್ತವೆ. ಹಾಗೇ ಪ್ರತಿ ದಿನ ತಪ್ಪದೆ ಹಲ್ಲು ಉಜ್ಜುವುದನ್ನು ಬಿಡಬಾರದು.

ಕೆಲವರು ದಿನಕ್ಕೆ ಎರಡು ಬಾರಿ ಹಲ್ಲು ಉಜ್ಜುತ್ತಾರೆ. ಇದು ಬಾಯಿಯ ಆರೋಗ್ಯಕ್ಕೆ ನಿಜವಾಗಿಯೂ ಒಳ್ಳೆಯದು. ಇದರಿಂದ ಎಷ್ಟೋ ಸಮಸ್ಯೆಗಳಿಂದ ನಾವು ಪಾರಾಗಬಹುದು. ಹಲ್ಲು ಉಜ್ಜುವುದು ಮಾತ್ರವಲ್ಲ, ಬಾಯಿಯ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳುವುದು ಎಂಬುದರ ಬಗ್ಗೆ ಇಲ್ಲಿ ಕೆಲವೊಂದು ಸಲಹೆ ಸೂಚನೆಗಳಿವೆ, ಒಮ್ಮೆ ಓದಿ.

ರಾತ್ರಿ ಹಲ್ಲು ಉಜ್ಜುವುದು

ಪ್ರತಿದಿನ ರಾತ್ರಿ ಮಲಗುವ ಮುನ್ನ ಹಲ್ಲು ಉಜ್ಜಿದರೆ ದಂತಕ್ಷಯ, ವಸಡಿಗೆ ಕಾಡುವ ಆರೋಗ್ಯ ಸಮಸ್ಯೆಯಿಂದ ಪಾರಾಗಬಹುದು. ನಿಮಗೆ ಕುಳಿಗಳು, ವಸಡು ಸಮಸ್ಯೆ ಕಾಡುತ್ತಿದ್ದರೆ, ರಾತ್ರಿ ಊಟ ಆದ ನಂತರ ಹಲ್ಲು ಉಜ್ಜುವುದು ಬಹಳ ಉಪಯುಕ್ತ ಎಂದು ದಂತ ವೈದ್ಯರ ಶಿಫಾರಸು ಮಾಡುತ್ತಾರೆ.

ಬಲವಾಗಿ ಹಲ್ಲು ಉಜ್ಜುವುದು

ಹಲ್ಲುಗಳು ಕ್ಲೀನ್‌ ಆಗಬೇಕು, ಬೆಳ್ಳಗೆ ಹೊಳೆಯಬೇಕು ಎಂಬ ಆಸೆಯಿಂದ ಕೆಲವರು ಬಹಳ ರಭಸವಾಗಿ ಹಲ್ಲು ಉಜ್ಜುತ್ತಾರೆ, ಆದರೆ ಹೀಗೆ ಮಾಡುವುದರಿಂದ ಹಲ್ಲಿನ ಮೇಲಿನ ಎನಾಮಲ್‌ಗೆ ಸಮಸ್ಯೆ ಆಗುತ್ತದೆ, ಆದ್ದರಿಂದ ಅತಿ ಬಲವಾಗಿ ಹಲ್ಲು ಉಜ್ಜದಿರುವುದು ಸೂಕ್ತ.

ಆಗ್ಗಾಗ್ಗೆ ದಂತ ವೈದ್ಯರನ್ನು ಭೇಟಿ ಆದರೆ ಒಳ್ಳೆಯದು

ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ಕೆಲವರು ಸುಮ್ಮನಿರುತ್ತಾರೆ, ಆದರೆ ವರ್ಷಕ್ಕೆ ಒಮ್ಮೆಯಾದರೂ ನೀವು ದಂತ ವೈದ್ಯರನ್ನು ಭೇಟಿ ಆಗಿ ತಪಾಸಣೆ ಮಾಡಿಸಿಕೊಂಡರೆ ಮುಂದೆ ಉಂಟಾಗುವ ಸಮಸ್ಯೆಗಳು ತಪ್ಪುತ್ತದೆ.

ಮೌತ್‌ ವಾಶ್‌ ಬಳಸುವುದು

ಪ್ರತಿದಿನ ಎರಡು ಬಾರಿ ಹಲ್ಲು ಉಜ್ಜುವುದು ಮಾತ್ರವಲ್ಲ, ಮೌತ್‌ ವಾಶ್‌ ಬಳಸುವುದು ಕೂಡಾ ನಿಮ್ಮ ಬಾಯಿಯ ಆರೋಗ್ಯಕ್ಕೆ ಬಹಳ ಒಳ್ಳೆಯದು, ಮೌತ್‌ ವಾಶ್‌ ಬಳಸಿದರೆ ನಿಮ್ಮ ಬಾಯಿಗೆ ಇನ್ನಷ್ಟು ತಾಜಾ ಅನುಭವ ನೀಡುತ್ತದೆ, ಜೊತೆಗೆ ಬಾಯಿಯಲ್ಲಿ ಉಳಿದಿರುವ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ, ಆದರೆ ಉತ್ತಮ ಕಂಪನಿಯ ಮೌತ್‌ ವಾಶ್‌ ಬಳಸುವುದು ಒಳ್ಳೆಯದು.

ಒಂದೇ ಬ್ರಷ್‌ ಧೀರ್ಘ ಸಮಯ ಬಳಸುವುದು

ಕೆಲವರು ಹಣ ಖರ್ಚಾಗುತ್ತದೆ ಎಂಬ ಕಾರಣಕ್ಕೋ, ಅರಿವು ಇಲ್ಲದೆಯೋ ಒಂದೇ ಟೂತ್‌ ಬ್ರಷನ್ನು ಹೆಚ್ಚು ತಿಂಗಳು ಬಳಸುತ್ತಾರೆ, ಆದರೆ ಕನಿಷ್ಠ ಎಂದರೆ 2 ತಿಂಗಳಿಗಿಂತ ಹೆಚ್ಚಾಗಿ ಒಂದೇ ಬ್ರಷ್‌ ಬಳಸಬಹುದು, ನಂತರ ನಿಮ್ಮ ಟೂತ್‌ ಬ್ರಷ್‌ ಬಳಸುವುದು ಒಳ್ಳೆಯದು.

ಏನೇ ತಿಂದರೂ ತಪ್ಪದೆ ಬಾಯಿ ತೊಳೆಯಿರಿ

ಊಟದ ನಂತರ ಮಾತ್ರವಲ್ಲ ನೀವು ಏನೇ ತಿನ್ನಲಿ ಅಥವಾ ಕುಡಿಯಲಿ, ನಂತರ 2-3 ಬಾರಿ ಬಾಯಿಗೆ ನೀರು ಹಾಕಿ ಮುಕ್ಕಳಿಸಿ ಕ್ಲೀನ್‌ ಮಾಡಿದರೆ ಬಾಯಿ, ಹಲ್ಲಿನ ಮಧ್ಯೆ ಉಳಿಯುವ ಆಹಾರ ಕಣಗಳು ಹೊರ ಬರುತ್ತವೆ.

ನಿಮ್ಮ ಆರೋಗ್ಯ ನಿಮ್ಮ ಕೈಯ್ಯಲ್ಲಿ, ನಿಮ್ಮ ಬಾಯಿಯ ಆರೋಗ್ಯ ಚೆನ್ನಾಗಿರಬೇಕೆಂದರೆ ಈ ಮೇಲಿನ ಅಂಶಗಳನ್ನು ತಪ್ಪದೆ ಫಾಲೋ ಮಾಡಿ.

Whats_app_banner