ಕೊರೆಯುವ ಚಳಿಗೆ ಥರ್ಮಲ್ ವೇರ್ ಉತ್ತರ: ಬೆಚ್ಚಗಿನ ಒಳ ಉಡುಪು ಖರೀದಿಸುವ ಮೊದಲು ನಿಮಗೆ ಏನೆಲ್ಲ ಗೊತ್ತಿರಬೇಕು?
ಶೀತದ ವಾತಾವರಣದಲ್ಲಿ ಥರ್ಮಲ್ ಒಳ ಉಡುಪುಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಅಸ್ವಸ್ಥೆತೆ ಮತ್ತು ಆರೋಗ್ಯದ ಅಪಾಯಗಳಿಂದ ಪಾರಾಗಲು ಇಂತಹ ಬಟ್ಟೆಗಳನ್ನು ಬಳಸಬಹುದು. ಥರ್ಮಲ್ ಒಳ ಉಡುಪು ಚರ್ಮಕ್ಕೆ ಹತ್ತಿರವಿರುವ ಉಷ್ಣತೆಯ ಮೈಕ್ರೋಕ್ಲೈಮೇಟ್ ಅನ್ನು ರಚಿಸುವ ಮೂಲಕ ನಿಮ್ಮ ಚಳಿಯ ಸಮಸ್ಯೆಯನ್ನು ಪರಿಹರಿಸುತ್ತದೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ.

ಬೇಸಿಗೆಯ ಬಿಸಿಯಿಂದ ಪಾರಾಗುವಷ್ಟರಲ್ಲಿ ಮಳೆಗಾಲ ಆರಂಭವಾಗುತ್ತಿದೆ. ಮಳೆಗಾಲ ಮತ್ತು ಚಳಿಗಾಲದಲ್ಲಿ ದೇಹವನ್ನು ಬೆಚ್ಚೆಗೆ ಇಡಲು ಜನರು ನಾನಾ ಕಸರತ್ತುಗಳನ್ನು ಮಾಡುತ್ತಾರೆ. ಅದರಲ್ಲೂ ಮೊದಲಿಗೆ ದೇಹವನ್ನು ಬಿಸಿಯಾಗಿ ಇಡುವಂತ ಬಟ್ಟೆಗಳಿಗೆ ಆದ್ಯತೆಯನ್ನು ನೀಡಲಾಗುತ್ತದೆ. ಇಂತಹ ವಾತಾವರಣದಲ್ಲಿ ಉಲ್ಲನ್‌ನಿಂದ ತಯಾರಿಸಿರುವ ಸ್ವೆಟರ್, ಟೊಪಿ, ಟವೆಲ್‌ಗಳಿಗೆ ಬೇಡಿಕೆ ಹೆಚ್ಚಾಗಿರುತ್ತದೆ. ಬೆಚ್ಚಿಗಿನ ಉಡುಪುಗಳಿಗೂ ಬೇಡಿಕೆ ಇರುತ್ತದೆ. ಆದರೆ ಈ ವೇಳೆ ಥರ್ಮಮಲ್ ವೇರ್‌ಗಳಿಗೂ ಆದ್ಯತೆ ನೀಡಲಾಗುತ್ತದೆ. ಹಾಗಿದ್ದರೆ ಚಳಿಯ ಸಂದರ್ಭದಲ್ಲಿ ದೇಹವನ್ನು ಬೆಚ್ಚಗೆ ಇರಿಸಲು ಥರ್ಮಲ್ ಒಳ ಉಡುಪುಗಳನ್ನು ಧರಿಸುವ ಮುನ್ನ ಒಂದಷ್ಟು ಮಾಹಿತಿಯನ್ನು ತಿಳಿಯುವುದು ಒಳ್ಳೆಯದು.
ಹೊರಗಡೆ ಹೋದಾಗ ಚಳಿಯಿಂದ ಪಾರಾಗಲು ಥರ್ಮಲ್ ಉಡುಪುಗಳನ್ನು ಧರಿಸಿದರೆ ಯಾವುದೇ ರೀತಿಯ ಕಿರಿಕಿರಿ ಇರೋದಿಲ್ಲ, ಉತ್ಸಾಹದಿಂದ ದಿನವನ್ನು ಕಳೆಯಬಹುದು. ಇಂತಹ ಬಟ್ಟೆಗಳನ್ನು ಖರೀದಿಸುವ ಮುನ್ನ ಫ್ಯಾಬ್ರಿಕ್, ಫಿಟಿಂಗ್ ಸೇರಿದಂತೆ ಏನೆಲ್ಲಾ ತಿಳಿದುಕೊಳ್ಳಬೇಕು ಅನ್ನೋದರ ವಿವರ ಇಲ್ಲಿದೆ.
ಫ್ಯಾಬ್ರಿಕ್: ಇತರೆ ಯಾವುದೇ ಬಟ್ಟೆಯಂತೆ ಪರೀಕ್ಷಿಸಲು ಮೊದಲು ಗಮನಿಸಬೇಕೆಂಬ ವಿಷಯವೆಂದರೆ ಆ ಬಟ್ಟೆಯ ಗುಣಮಟ್ಟ. ಒಂದು ಬಟ್ಟೆ ಗುಣಮಟ್ಟದಲ್ಲ, ದದ್ದುಗಳಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪಾಲಿಯೆಸ್ಟರ್‌ನೊಂದಿಗೆ ಸೂಪರ್ ಫೈನ್ ಮತ್ತು ಹೆಚ್ಚುವರಿಯಾಗಿ ಮೃದುವಾದ ಅಕ್ರಿಲಿಕ್ ಮೈಕ್ರೋಫೈಬರ್ ಮಿಶ್ರಣದಂತಹ ನಿಮ್ಮ ತ್ವಚೆಯನ್ನು ಕೆರಳಿಸದ ಫ್ಯಾಬ್ರಿಕ್ ಒಳ ಉಡುಪಗಳಿಗೆ ಆದ್ಯತೆ ನೀಡಬೇಕು.
ಫಿಟಿಂಗ್: ನಿಮ್ಮ ದೇಹಕ್ಕೆ ಬಿಗಿಾಗಿ ಹೊಂದಿಕೊಳ್ಳುವ ಥರ್ಮಲ್ ಬಟ್ಟೆಗಳನ್ನೇ ಖರೀದಿಸಿ. ಇದು ನೋಡಲು ನಿಮ್ಮ ಚರ್ಮದಂತೆಯೇ ಭಾಸವಾಗಬೇಕು. ಅಂದರೆ ಅಷ್ಟು ಬಿಗಿಯಾಗಿ ಇರಬೇಕು ಎಂದು ಅರ್ಥವಲ್ಲ. ಬಿಗಿಯಾದ ಥರ್ಮಲ್ ಬಟ್ಟೆ ದೇಹದ ಶಾಕವನ್ನು ಕಾಪಾಡುತ್ತೆ. ಇವುಗಳಲ್ಲಿ ಪ್ರಮುಖವಾಗಿ ಆರಾಮ ಮತ್ತು ಅನಿಯಂತ್ರಿತ ಚಲನೆಗಾಗಿ ನಿರ್ಮಿಸಲಾದ ಸೈಡ್ ವೆಂಟ್‌ಗಳನ್ನು ಸಹ ನೀವು ಪರಿಶೀಲಿಸಬಹುದು. ಜಾಕೆಟ್‌ಗಳು, ಟೀಸ್, ಪ್ಯಾಂಟ್‌ಗಳಂತಹ ನಮ್ಮ ಹೊರ ಉಡುಪುಗಳ ಒಳಗೆ ಥರ್ಮಲ್ ಒಳ ಉಡುಪುಗಳನ್ನು ಹೆಚ್ಚಾಗಿ ಧರಿಸಲಾಗುತ್ತದೆ. ಇದು ದೊಡ್ಡದಾಗಿ ಕಾಣುವುದನ್ನು ತಪ್ಪಿಸುತ್ತದೆ.
ವಿನ್ಯಾಸ: ಬಹಳಷ್ಟು ಮಂದಿ ಉಡುಪು ಧರಿಸುವುದರಲ್ಲಿ ಕೆಲವು ನಿಯಮಗಳನ್ನು ಅನುಸರಿಸುತ್ತಾರೆ. ಥರ್ಮಲ್ ಫಿಟಿಂಗ್ ಮತ್ತು ಫ್ಯಾಬ್ರಿಕ್ ಅನ್ನು ಖರೀದಿಸುವ ಮೊದಲು ಪರಿಶೀಲಿಸುತ್ತಾರೆ. ಆದರೆ ಒಳಭಾಗಕ್ಕೆ ಅನುಗುಣವಾಗಿ ಇದೆಯೇ ಎಂಬುದನ್ನು ಪರಿಶೀಲಿಸುವುದಿಲ್ಲ. ಒಂದು ಒರಟಾಗಿದ್ದರೆ ಅದು ತುಂಬಾ ಕಿರಿಕಿರಿ ಸೇರಿದಂತೆ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಥರ್ಮಲ್ ಒಳ ಉಡುಪಿನ ಲಾಭಗಳು: ಶೀತದ ವಾತಾವರಣದಲ್ಲಿ ಥರ್ಮಲ್ ಒಳ ಉಡುಪುಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಅಸ್ವಸ್ಥೆತೆ ಮತ್ತು ಆರೋಗ್ಯದ ಅಪಾಯಗಳಿಂದ ಪಾರಾಗಲು ಇಂತಹ ಬಟ್ಟೆಗಳನ್ನು ಬಳಸಬಹುದು. ಥರ್ಮಲ್ ಒಳ ಉಡುಪು ಚರ್ಮಕ್ಕೆ ಹತ್ತಿರವಿರುವ ಉಷ್ಣತೆಯ ಮೈಕ್ರೋಕ್ಲೈಮೇಟ್ ಅನ್ನು ರಚಿಸುವ ಮೂಲಕ ನಿಮ್ಮ ಚಳಿಯ ಸಮಸ್ಯೆಯನ್ನು ಪರಿಹರಿಸುತ್ತದೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)