ಕನ್ನಡ ಸುದ್ದಿ  /  ಜೀವನಶೈಲಿ  /  ಮೊಬೈಲ್‌ನಿಂದ ಹೊರ ಹೊಮ್ಮುವ ಅಪಾಯಕಾರಿ ಕಿರಣಗಳಿಂದ ಕಣ್ಣುಗಳನ್ನು ರಕ್ಷಿಸಿಕೊಳ್ಳುವುದು ಹೇಗೆ; ಇಲ್ಲಿದೆ ಸರಳ ವಿಧಾನ

ಮೊಬೈಲ್‌ನಿಂದ ಹೊರ ಹೊಮ್ಮುವ ಅಪಾಯಕಾರಿ ಕಿರಣಗಳಿಂದ ಕಣ್ಣುಗಳನ್ನು ರಕ್ಷಿಸಿಕೊಳ್ಳುವುದು ಹೇಗೆ; ಇಲ್ಲಿದೆ ಸರಳ ವಿಧಾನ

ಮೊಬೈಲ್ ಬಳಕೆಯಿಂದ ಎಷ್ಟು ಅನುಕೂಲ ಇದೆಯೋ ಅಷ್ಟೇ ಅನಾನುಕೂಲವೂ ಇದೆ. ಮೊಬೈಲ್‌ನಿಂದ ಹೊರ ಹೊಮ್ಮುವ ಅಪಾಯಕಾರಿ ಕಿರಣಗಳಿಂದ ಕಣ್ಣುಗಳನ್ನು ರಕ್ಷಿಸಿಕೊಳ್ಳುವ ವಿಧಾನವನ್ನು ತಿಳಿಯಿರಿ.

ಮೊಬೈಲ್‌ನಿಂದ ಹೊರ ಹೊಮ್ಮುವ ಅಪಾಯಕಾರಿ ಕಿರಣಗಳಿಂದ ಕಣ್ಣುಗಳನ್ನು ರಕ್ಷಿಸಿಕೊಳ್ಳುವ ವಿಧಾನವನ್ನು ತಿಳಿಯಿರಿ.
ಮೊಬೈಲ್‌ನಿಂದ ಹೊರ ಹೊಮ್ಮುವ ಅಪಾಯಕಾರಿ ಕಿರಣಗಳಿಂದ ಕಣ್ಣುಗಳನ್ನು ರಕ್ಷಿಸಿಕೊಳ್ಳುವ ವಿಧಾನವನ್ನು ತಿಳಿಯಿರಿ.

ನೀವು ಯಾರನ್ನು ಬೇಕಾದರೂ ನೋಡಿ, ಒಂದೈದು ನಿಮಿಷ ಸಮಯ ಸಿಕ್ಕಿದ್ರೆ ಸಾಕು, ಮೊಬೈಲ್‌ ಮೇಲೆ ಕಣ್ಣಾಡಿಸದೇ ಇರಲು ಸಾಧ್ಯವೇ ಇಲ್ಲ. ಘಳಿಗೆಗೊಮ್ಮೆ ವ್ಯಾಟ್ಸಾಪ್, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಯೂಟ್ಯೂಬ್‌ ಚೆಕ್‌ ಮಾಡುತ್ತಲೇ ಇರುವವರಿದ್ದಾರೆ. ಡಿಜಿಟಲ್‌ ಜಗತ್ತಿನ ಗಮ್ಮತ್ತೇ ಹಾಗಿದೆ ಬಿಡಿ. ಇಂದಿನ ಡಿಜಿಟಲ್‌ ಯುಗದಲ್ಲಿ ಬ್ಲೂ ಲೈಟ್‌ (ಮೊಬೈಲ್‌, ಕಂಪ್ಯೂಟರ್‌ನಿಂದ ಹೊರ ಹೊಮ್ಮುವ ಅಪಾಯಕಾರಿ ಕಿರಣ) ನಮ್ಮ ಕಣ್ಣನ್ನು ನಿರಂತರವಾಗಿ ಸೋಕುತ್ತಲೇ ಇರುತ್ತದೆ ಎಂದರೂ ತಪ್ಪಾಗಲಾರದು. ಜಗತ್ತು ಮೊಬೈಲ್‌, ಕಂಪ್ಯೂಟರ್‌ಗಳಿಂದ ತುಂಬಿ ಹೋಗಿದೆ. ಡಿಜಿಟಲ್‌ ಜಗತ್ತು ನಮ್ಮನ್ನು ಸಂಪೂರ್ಣವಾಗಿ ಆವರಿಸಿಕೊಂಡಿದೆ. ಈ ತಂತ್ರಜ್ಞಾನ ನಮ್ಮ ಕೆಲಸಗಳನ್ನು ಸರಳಗೊಳಿಸಿದ್ದಂತು ನಿಜ. ಆದರೆ ಅದು ಕಣ್ಣಿನ ಮೇಲೆ ಉಂಟು ಮಾಡುವ ಅಪಾಯವೂ ಅಷ್ಟೇ ಇದೆ. ಮೊಬೈಲ್‌ನಿಂದ ಹೊರಹೊಮ್ಮುವ ಅಪಾಯಕಾರಿ ಕಿರಣಗಳು ನಮ್ಮ ಕಣ್ಣಿಗೆ ಹಾನಿಯನ್ನುಂಟು ಮಾಡುತ್ತವೆ.

ಟ್ರೆಂಡಿಂಗ್​ ಸುದ್ದಿ

ಗಂಟೆಗಟ್ಟಲೆ ಕಂಪ್ಯೂಟರ್‌ ಮುಂದೆ ಕುಳಿತು ಕೆಲಸ ಮಾಡುವವರಿಗೆ ಇನ್ನಷ್ಟು ಪರಿಣಾಮ ಬೀರುತ್ತದೆ. ನಿರಂತರವಾಗಿ ಕಣ್ಣನ್ನು ಸೋಕುವ ಅಪಾಯಕಾರಿ ಕಿರಣಗಳು ಡಿಜಿಟಲ್‌ ಐಸ್ಟ್ರೇನ್‌ ಮತ್ತು ರೆಟಿನಾದ ಕೋಶಗಳ ಹಾನಿಯಂತಹ ಗಂಭೀರ ಸಮಸ್ಯೆಗಳಿಗೆ ಕಾರಣವಾಗಿದೆ. ಸರಿಯಾದ ಮುನ್ನೆಚ್ಚರಿಕೆ ತೆಗೆದುಕೊಂಡಾಗ ಮಾತ್ರ ಕಣ್ಣಿನ ಸಮಸ್ಯೆಗಳಿಂದ ದೂರವಿರಬಹುದು.

ಮೊಬೈಲ್‌ನಿಂದ ಹೊಮ್ಮುವ ಅಪಾಯಕಾರಿ ಕಿರಣಗಳಿಂದ ಕಣ್ಣನ್ನು ರಕ್ಷಿಸಿಕೊಳ್ಳಲು ತಜ್ಞ ವೈದ್ಯರು ಕೆಲವು ಸಲಹೆಗಳನ್ನು ನೀಡಿದ್ದಾರೆ. ಅವುಗಳನ್ನು ಸರಿಯಾಗಿ ಪಾಲಿಸುವುದರ ಮೂಲಕ ನಿಮ್ಮ ಕಣ್ಣನ್ನು ಕಾಪಾಡಿಕೊಳ್ಳಬಹುದು.

  • ಸ್ಕ್ರೀನ್‌ ನೋಡುವ ಸಮಯ ಹೊಂದಿಸಿಕೊಳ್ಳಿ

ಡಿಜಿಟಲ್‌ ಸ್ಕ್ರೀನ್‌ಗಳನ್ನು ನೋಡಲು ನಿರ್ದಿಷ್ಟ ಸಮಯ ಗೊತ್ತುಪಡಿಸಿಕೊಳ್ಳಿ. ಮಲಗುವ ಮೊದಲು ಮೊಬೈಲ್‌ ನೋಡಲೇ ಬೇಡಿ. ಅತಿಯಾದ ಮೊಬೈಲ್‌ ಬಳಕೆಯು ಸಿರ್ಕಾಡಿಯನ್‌ ರಿದಮ್‌ ಅಂದರೆ ದಿನದ 24 ಗಂಟೆಗಳಲ್ಲಿ ಮಾಡುವ ಕೆಲಸಗಳಾದ ಊಟ, ನಿದ್ದೆ ಇತ್ಯಾದಿಗಳನ್ನು ಅಡ್ಡಿಪಡಿಸುತ್ತದೆ. ಅದರಿಂದ ನಿದ್ದೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ.

  • 20–20–20 ಸೂತ್ರ ಪಾಲಿಸಿ

ನಿಮ್ಮ ಕಣ್ಣಿಗೆ ಆಗಾಗ ವಿಶ್ರಾಂತಿ ಬೇಕು ಎಂಬುದನ್ನು ನೆನಪಿಟ್ಟುಕೊಳ್ಳಿ. ಪ್ರತಿ 20 ನಿಮಿಷಗಳಿಗೊಮ್ಮೆ 20 ಸೆಕೆಂಡ್‌ಗಳ ಕಾಲ ಸುಮಾರು 20 ಫೀಟ್‌ ದೂರ ನೋಡಿ. ಇದು ನಿಮ್ಮ ಕಣ್ಣಿನ ಸ್ನಾಯುಗಳು ರಿಲ್ಯಾಕ್ಸ್‌ ಆಗಲು ಸಹಾಯ ಮಾಡುತ್ತದೆ. ಇದರಿಂದ ನಿರಂತರವಾಗಿ ನಿಮ್ಮ ಕಣ್ಣುಗಳ ಮೇಲೆ ಬೀಳುವ ಹಾನಿಕಾರಕ ಕಿರಣಗಳನ್ನು ಕಡಿಮೆ ಮಾಡಿದಂತಾಗುತ್ತದೆ.

  • ಕಂಪ್ಯೂಟರ್‌ ಬಳಸುವಾಗ ಕನ್ನಡ ಧರಿಸಿ

ನಿರಂತರವಾಗಿ ಕಂಪ್ಯೂಟರ್‌ ಬಳಸುವಾಗ ಹಾನಿಕಾರಕ ಕಿರಣಗಳಿಂದ ರಕ್ಷಣೆ ಒದಗಿಸಲು ಬರುವ ಕನ್ನಡಕಗಳನ್ನು ತಪ್ಪದೇ ಬಳಸಿ. ಅದು ಕಣ್ಣಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಹಾನಿಕಾರಕ ನೀಲಿ ಬೆಳಕು ಕಣ್ಣಿನ ಮೇಲೆ ನೇರವಾಗಿ ಬೀಳುವುದನ್ನು ತಡೆಯುತ್ತದೆ. ಆಂಟಿ–ರಿಫ್ಲೆಕ್ಟಿವ್‌ ಕನ್ನಡಕಗಳು ಸಹ ಉತ್ತಮವಾಗಿದೆ. ಒಂದು ವೇಳೆ ನಿಮ್ಮ ರೆಟಿನಾ ಹಾನಿಯಾಗಿದ್ದರೆ ಆಗ ಇಂಟ್ರಾಕ್ಯೂಲರ್‌ ಲೆನ್ಸ್‌ಗಳನ್ನು ಬಳಕೆ ಮಾಡಬೇಕಾಗುತ್ತದೆ.

  • ಸ್ಕ್ರೀನ್‌ ಫಿಲ್ಟರ್‌ ಬಳಸಿ

ಸ್ಕ್ರೀನ್‌ ಫಿಲ್ಟರ್‌ ಅಥವಾ ನೀಲಿ ಬೆಳಕನ್ನು ಹೊರಸೂಸುವುದನ್ನು ತಡೆಯಬಲ್ಲ ಸಾಫ್ಟ್‌ವೇರ್‌ಗಳನ್ನು ಹಾಕಿಕೊಳ್ಳಿ. ಅದು ನೀವು ಬಹಳ ಸಮಯದವರೆಗೆ ಮೊಬೈಲ್‌ ಅಥವಾ ಕಂಪ್ಯೂಟರ್‌ ಬಳಕೆ ಮಾಡುವಾಗ ನಿಮ್ಮ ಕಣ್ಣುಗಳಿಗೆ ಸಹಾಯ ಮಾಡುತ್ತದೆ.

  • ಕಣ್ಣಿನ ಸ್ನಾಯುಗಳನ್ನು ಬಲಪಡಿಸಿಕೊಳ್ಳಿ

ಕಣ್ಣಿನ ಸ್ನಾಯುಗಳನ್ನು ಬಲಪಡಿಸಲು ಬೇಕಾಗುವಂತಹ ಆಹಾರಗಳನ್ನೇ ಸೇವಿಸಿ. ಒಮೆಗಾ–3, ಫ್ಯಾಟಿ ಆಸಿಡ್‌ಗಳು, ವಿಟಮಿನ್‌ ಸಿ ಮತ್ತು ಇ ಮತ್ತು ಝಿಂಕ್‌ ಇರುವ ಆಹಾರಗಳನ್ನು ನಿಮ್ಮ ಡಯಟ್‌ನಲ್ಲಿ ಸೇರಿಸಿಕೊಳ್ಳಿ. ಈ ಪೋಷಕಾಂಶಗಳು ಕಣ್ಣಿನ ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತವೆ. ಜೊತೆಗೆ ವಯಸ್ಸಾದಂತೆ ಉಂಟಾಗುವ ಕಣ್ಣಿನ ತೊಂದರೆಗಳನ್ನು ಕಡಿಮೆ ಮಾಡುತ್ತದೆ.

  • ಸನ್‌ಗ್ಲಾಸ್‌ಗಳ ಬಳಕೆ ಮಾಡಿ

ನೈಸರ್ಗಿಕವಾಗಿ ಸೂರ್ಯನಿಂದ ಹೊಮ್ಮುವ ನೇರಳಾತೀತ ಕಿರಣಗಳಿಂದ ರಕ್ಷಣೆ ಒದಗಿಸಿಕೊಳ್ಳಲು ಯುವಿ ಪ್ರೊಟೆಕ್ಷನ್‌ ಇರುವ ಸನ್‌ಗ್ಲಾಸ್‌ಗಳನ್ನು ಬಳಸಿ. ಬಿಸಿಲಿನ ದಿನಗಳಲ್ಲಂತು ತಪ್ಪದೇ ಸನ್‌ ಗ್ಲಾಸ್‌ ಹಾಕಿಕೊಂಡೇ ಮನೆಯಿಂದ ಹೊರಗಡೆ ಹೋಗಿ. ಸೂರ್ಯನಿಂದ ಬರುವ ಯುವಿ ಕಿರಣಗಳು ನೇರವಾಗಿ ಕಣ್ಣಿಗೆ ಹಾನಿಯನ್ನುಂಟು ಮಾಡುತ್ತವೆ.

  • ಕಣ್ಣು ಕಾಪಾಡಿಕೊಳ್ಳಲು ಆಯುರ್ವೇದವನ್ನೂ ಬಳಸಿಕೊಳ್ಳಿ

ಆಯುರ್ವೇದದಲ್ಲಿ ಹೇಳಿರುವ ಕಣ್ಣಿನ ವ್ಯಾಯಾಮಗಳು, ನೇತ್ರ ತರ್ಪಣ ಮತ್ತು ತ್ರಿಫಲಾದಿಂದ ಕಣ್ಣನ್ನು ತೊಳೆಯುವುದು ಮುಂತಾದವುಗಳನ್ನು ಮಾಡುವುದರಿಂದಲೂ ಕಣ್ಣನ್ನು ಕಾಪಾಡಿಕೊಳ್ಳಬಹುದು.

  • ಕಣ್ಣಿನ ಆರೋಗ್ಯದ ಬಗ್ಗೆ ಕಾಳಜಿ ಇರಲಿ

ಕಾಲ ಕಾಲಕ್ಕೆ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಿ. ಯಾವುದೇ ರೀತಿಯ ಕಣ್ಣಿನ ಸಮಸ್ಯೆಗಳು ಎದುರಾದರೆ ತಜ್ಷ ವೈದ್ಯರನ್ನು ತಕ್ಷಣ ಭೇಟಿ ಮಾಡಿ. ಯಾರೋ ಹೇಳಿದ್ದನ್ನು ನಂಬಿ ಏನೇನೋ ತಂದು ಕಣ್ಣಿಗೆ ಹಾಕಬೇಡಿ. ಕಣ್ಣು ಅತಿ ಅಮೂಲ್ಯವಾದದ್ದು.

ವಿಭಾಗ