Chia Seeds: ಚಿಯಾ ಬೀಜಗಳನ್ನು ಈ ರೀತಿ ಬಳಸಿದ್ರೆ ನಿಮಗಿಂತ ಆರೋಗ್ಯವಂತರು ಬೇರೆ ಯಾರೂ ಇಲ್ಲ
ಕನ್ನಡ ಸುದ್ದಿ  /  ಜೀವನಶೈಲಿ  /  Chia Seeds: ಚಿಯಾ ಬೀಜಗಳನ್ನು ಈ ರೀತಿ ಬಳಸಿದ್ರೆ ನಿಮಗಿಂತ ಆರೋಗ್ಯವಂತರು ಬೇರೆ ಯಾರೂ ಇಲ್ಲ

Chia Seeds: ಚಿಯಾ ಬೀಜಗಳನ್ನು ಈ ರೀತಿ ಬಳಸಿದ್ರೆ ನಿಮಗಿಂತ ಆರೋಗ್ಯವಂತರು ಬೇರೆ ಯಾರೂ ಇಲ್ಲ

Benefits of Chia Seeds: ಪ್ರತಿದಿನದ ನಿಮ್ಮ ಆಹಾರದೊಂದಿಗೆ ಚಿಯಾ ಸೀಡ್ಸ್‌ ಬಳಸಿದರೆ ಬೇಗ ತೂಕ ಕಳೆದುಕೊಳ್ಳಬಹುದು. ಇದರಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳು, ಫೈಬರ್‌ ಅಂಶ ಹೆಚ್ಚಾಗಿದ್ದು ಆರೋಗ್ಯಕ್ಕೆ ಬೇಕಾದ ಪೋಷಕಾಂಶಗಳನ್ನು ನೀಡುತ್ತದೆ.

ಚಿಯಾ ಸೀಡ್ಸ್‌ ಉಪಯೋಗಗಳು
ಚಿಯಾ ಸೀಡ್ಸ್‌ ಉಪಯೋಗಗಳು (PC: Unsplash)

Benefits of Chia Seeds: ಪ್ರಕೃತಿ ನಮ್ಮ ಆರೋಗ್ಯಕ್ಕೆ ಹಲವಾರು ಪ್ರಯೋಜನ ನೀಡುವ ಎಷ್ಟೋ ಆಹಾರ ವಸ್ತುಗಳನ್ನು ನೀಡಿದೆ. ನೀವು ತೂಕ ಇಳಿಸಿಕೊಳ್ಳಲು ಅಥವಾ ಫಿಟ್ನೆಸ್‌ ಕಾಪಾಡಿಕೊಳ್ಳಲು ಬಯಸುತ್ತಿದ್ದರೆ ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಚಿಯಾ ಸೀಡ್ಸ್‌ ಬಳಸಬಹುದು. ಚಿಯಾ ಸೀಡ್ಸ್‌, ಒಮೆಗಾ-3 ಕೊಬ್ಬಿನಾಮ್ಲಗಳಿಂದ ತುಂಬಿರುವ ಆರೋಗ್ಯಕರ ಸೂಪರ್‌ಫುಡ್‌ಗಳಲ್ಲಿ ಒಂದಾಗಿದೆ, ಇದು ಹೃದಯದ ಆರೋಗ್ಯಕ್ಕೆ ಕೂಡಾ ಬಹಳ ಒಳ್ಳೆಯದು.́

ತೂಕ ನಿರ್ವಹಣೆಗೆ ಅತ್ಯುತ್ತಮ ಸೂಪರ್‌ ಫುಡ್‌

ಚಿಯಾ ಸೀಡ್ಸ್‌ ಫೈಬರ್‌ನ ಅತ್ಯುತ್ತಮ ಮೂಲವಾಗಿದೆ, ಜೀರ್ಣಕಾರಿ ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ತೂಕ ನಿರ್ವಹಣೆಯಲ್ಲಿಸಹಾಯ ಮಾಡುತ್ತದೆ. ಅಲ್ಲದೆ ಚಿಯಾ ಸೀಡ್ಸ್‌ನಲ್ಲಿ ಅಗತ್ಯವಾದ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿರುತ್ತದೆ. ಒಟ್ಟಾರೆ ಪೌಷ್ಟಿಕಾಂಶದ ಸಮತೋಲನಕ್ಕೆ ಇದು ಕೊಡುಗೆ ನೀಡುತ್ತವೆ. ಚಿಯಾ ಬೀಜವು ಎಫ್‌ಪಿಒ ಹೊಂದಿದೆ. ಎಫ್ ಎಂದರೆ ಫೈಬರ್, ಪಿ ಎಂದರೆ ಪ್ರೋಟೀನ್, ಮತ್ತು ಓ ಎಂದರೆ ಒಮೆಗಾ 3 ಕೊಬ್ಬಿನಾಮ್ಲಗಳು. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಈ ಚಿಕ್ಕ ಬೀಜಗಳು ಪೋಷಕಾಂಶಗಳಿಂದ ತುಂಬಿರುತ್ತವೆ.

ಹೆಚ್ಚಿನ ಫೈಬರ್‌ ಕಂಟೆಂಟ್

ಇವುಗಳನ್ನು ತಿನ್ನುವುದರಿಂದ ತೂಕ ಇಳಿಕೆಯಾಗುತ್ತದೆ. ಇದರಲ್ಲಿರುವ ಫೈಬರ್, ಪ್ರೊಟೀನ್, ಒಮೆಗಾ 3 ಕೊಬ್ಬು ತೂಕ ಇಳಿಸಲು ಸಹಾಯ ಮಾಡುತ್ತದೆ. ಇವುಗಳನ್ನು ತಿನ್ನುವುದರಿಂದ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುತ್ತದೆ. ಮಲಬದ್ಧತೆ ಸಮಸ್ಯೆ ಕೂಡಾ ನಿವಾರಣೆಯಾಗುತ್ತದೆ. ಚಿಯಾ ಸೀಡ್ಸ್‌ನಲ್ಲಿ ಹೆಚ್ಚಿನ ಫೈಬರ್ ಕಂಟೆಂಟ್‌ ಇದೆ. ಇದು ಕಡಿಮೆ ಸಮಯದಲ್ಲಿ ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಪ್ರತಿ ದಿನ 2 ಟೇಬಲ್‌ ಸ್ಪೂನ್‌ ಚಿಯಾ ಸೇವಿಸಿದರೆ ದೇಹಕ್ಕೆ 10 ಗ್ರಾಂ ಫೈಬರ್ ಒದಗಿಸುತ್ತದೆ. ತೂಕನಷ್ಟದೊಂದಿಗೆ ಹೊಟ್ಟೆಯ ಮತ್ತು ತೊಡೆಯ ಕೊಬ್ಬು ಕೂಡಾ ಕಡಿಮೆಯಾಗುತ್ತದೆ. ಚಿಯಾ ಬೀಜಗಳು ಒಟ್ಟಾರೆ ತೂಕವನ್ನು ಕಡಿಮೆ ಮಾಡುತ್ತದೆ.‌

ನೀರಿನೊಂದಿಗೆ ಸೇವಿಸಬಹುದು

ನಿಮ್ಮ ಪ್ರತಿದಿನದ ಆಹಾರ ಕ್ರಮದಲ್ಲಿ ಚಿಯಾಬೀಜಗಳನ್ನು ಬಳಸುವ ವಿಧಾನ ಹೇಗೆ ಅನ್ನೋದು ಬಹಳ ಮುಖ್ಯ. ಬೆಳಗ್ಗೆ ಎದ್ದ ಕೂಡಲೇ ಒಂದು ಚಮಚ ಚಿಯಾ ಬೀಜವನ್ನು ನೀರಿನಲ್ಲಿ ನೆನೆಸಿ 20 ನಿಮಿಷದ ನಂತರ ಒಂದು ಚಮಚ ನಿಂಬೆರಸ ಹಾಗೂ ಜೇನುತುಪ್ಪ ಸೇವಿಸಿ. ಹೀಗೆ ಮಾಡಿದರೆ ಬಹಳ ಬೇಗ ತೂಕ ಇಳಿಯುತ್ತದೆ.

20 ಗ್ರಾಂಗಿಂತ ಹೆಚ್ಚು ಸೇವನೆ ನಿಷಿದ್ದ

ನೀರಿನೊಂದಿಗೆ ಮಾತ್ರವಲ್ಲದೆ ಮೊಸರು, ಮಜ್ಜಿಗೆ, ಎಳನೀರು, ಮಿಲ್ಕ್ ಶೇಕ್, ಪ್ರೊಟೀನ್ ಶೇಕ್, ಎನರ್ಜಿ ಬಾರ್‌, ಚಿಯಾ ಸೀಡ್ಸ್ ಫುಡ್ಡಿಂಗ್, ಐಸ್‌ಕ್ರೀಮ್, ಫಲೂಡಾಗಳಲ್ಲಿ ನೀವು ಚಿಯಾ ಚೀಡ್ಸ್‌ ಬಳಸಬಾರದು. ಆದರೆ ಒಮ್ಮೆಲೆ 20 ಗ್ರಾಂಗಿಂತ ಹೆಚ್ಚು ಚಿಯಾ ಬೀಜಗಳನ್ನು ಬಳಸಬಾರದು ಎಂದು ವೈದರು ಹೇಳುತ್ತಾರೆ.

Whats_app_banner