ಹೆಚ್ಚಾಗ್ತಿದೆ ಹೃದಯಾಘಾತ: ಎಮರ್ಜೆನ್ಸಿಯಲ್ಲಿ ಜೀವ ಉಳಿಸಲು ಒಳ್ಳೇ ಮನಸ್ಸಿದ್ದರೆ ಸಾಲದು, ಸಿಪಿಆರ್ ಗೊತ್ತಿರಬೇಕು -ಡಾಕ್ಟರ್ ಹೇಳಿದ ಕಿವಿಮಾತು-health tips if you donot know cpr learn it for saving the life of the heart attack victim in emergency uks ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಹೆಚ್ಚಾಗ್ತಿದೆ ಹೃದಯಾಘಾತ: ಎಮರ್ಜೆನ್ಸಿಯಲ್ಲಿ ಜೀವ ಉಳಿಸಲು ಒಳ್ಳೇ ಮನಸ್ಸಿದ್ದರೆ ಸಾಲದು, ಸಿಪಿಆರ್ ಗೊತ್ತಿರಬೇಕು -ಡಾಕ್ಟರ್ ಹೇಳಿದ ಕಿವಿಮಾತು

ಹೆಚ್ಚಾಗ್ತಿದೆ ಹೃದಯಾಘಾತ: ಎಮರ್ಜೆನ್ಸಿಯಲ್ಲಿ ಜೀವ ಉಳಿಸಲು ಒಳ್ಳೇ ಮನಸ್ಸಿದ್ದರೆ ಸಾಲದು, ಸಿಪಿಆರ್ ಗೊತ್ತಿರಬೇಕು -ಡಾಕ್ಟರ್ ಹೇಳಿದ ಕಿವಿಮಾತು

ಹೃದಯಾಘಾತಕ್ಕೆ ಈಗ ವಯಸ್ಸಿನ ಮಿತಿ ಇಲ್ಲ. ಯಾರಿಗೆ ಬೇಕಾದರೂ, ಯಾವಾಗ ಬೇಕಾದರೂ ಬರಬಹುದು. ಹೀಗಾಗಿ ಎಲ್ಲರೂ ಸಿಪಿಆರ್ ಕಲಿತಿರಬೇಕು. ಸಿಪಿಆರ್‌ ಬರದಿದ್ದರೆ ಅವಶ್ಯ ಕಲಿಯಿರಿ. ತುರ್ತಿನಲ್ಲಿ ಹೃದಯಾಘಾತವಾದವರ ಜೀವ ಉಳಿಸಿ ಎಂದು ಅದರ ಪ್ರಾಮುಖ್ಯ ವಿವರಿಸಿದ್ದಾರೆ ಬನ್ನೇರುಘಟ್ಟ ರಸ್ತೆ ಫೋರ್ಟಿಸ್ ಆಸ್ಪತ್ರೆಯ ಪೀಡಿಯಾಟ್ರಿಕ್ಸ್ ಸಲಹೆಗಾರ ಡಾ. ಯೋಗೇಶ್ ಕುಮಾರ್ ಗುಪ್ತಾ.

ಸಿಪಿಆರ್‌ ಬರುವುದಿಲ್ಲವೇ, ಕಲಿತುಕೊಳ್ಳಿ, ತುರ್ತುಸಂದರ್ಭದಲ್ಲಿ ಹೃದಯಾಘಾತವಾದರ ಜೀವ ಉಳಿಸಲು ನೆರವಾದೀತು. (ಸಾಂಕೇತಿಕ ಚಿತ್ರ)
ಸಿಪಿಆರ್‌ ಬರುವುದಿಲ್ಲವೇ, ಕಲಿತುಕೊಳ್ಳಿ, ತುರ್ತುಸಂದರ್ಭದಲ್ಲಿ ಹೃದಯಾಘಾತವಾದರ ಜೀವ ಉಳಿಸಲು ನೆರವಾದೀತು. (ಸಾಂಕೇತಿಕ ಚಿತ್ರ) (Canva)

ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಎನ್ನುವುದು ವಯಸ್ಸಿನ ಮಿತಿ ಇಲ್ಲದೇ ಯಾರಿಗಾದರೂ, ಯಾವ ಕ್ಷಣದಲ್ಲಾದರೂ ಬಂದೊದಗಬಹುದಾದ ಸ್ಥಿತಿಯಾಗಿದೆ. ಹೀಗಾಗಿ ಪ್ರತಿಯೊಬ್ಬರು ಸಹ ಕಾರ್ಡಿಯೋಪಲ್ಮನರಿ ರಿಸಸಿಟೇಷನ್‌ - ಸಿಪಿಆರ್‌ (cardiopulmonary resuscitation - CPR) ಕಲಿತುಕೊಳ್ಳುವ ಜರೂರತ್ತಿದೆ. ಅದರಲ್ಲೂ ಪ್ರಮುಖವಾಗಿ ಮಕ್ಕಳಿರುವಾಗಲೇ ಈ ಜ್ಞಾನವನ್ನು ಕಲಿತುಕೊಳ್ಳುವುದರಿಂದ ಆ ಕ್ಷಣದಲ್ಲಿ ಹೃದಯಾಘಾತಕ್ಕೆ ಒಳಗಾದವರನ್ನು ಬದುಕಿಸಬಹುದು. ಹಾಗಿದ್ದರೆ, ಈ ಸಿಪಿಆರ್‌ ಎಂದರೇನು? ಯಾವ ರೀತಿಯಲ್ಲಿ ಇದು ಹೃದಯಾಘಾತವಾದವರನ್ನು ಬದುಕಿಸಲಿ ಎಂಬಿತ್ಯಾದಿ ವಿಚಾರಗಳ ಬಗ್ಗೆ ವೈದ್ಯರು ವಿವರಿಸಿದ್ದಾರೆ.

ಸಿಪಿಆರ್‌ ಎಂದರೇನು? ಇದು ಹೇಗೆ ಕೆಲಸ ಮಾಡುತ್ತದೆ?

ಸಿಪಿಆರ್ ಎನ್ನುವುದು ಯಾರಿಗಾದರು ಹೃದಯಸ್ತಂಭನ ಅಥವಾ ಹೃದಯಾಘಾತದಿಂದ ಉಸಿರಾಟ ನಿಲ್ಲಿಸಿದಾಗ ಬಳಸಲಾಗುವ ಜೀವ ಉಳಿಸುವ ತಂತ್ರವಾಗಿದೆ. ಇದು ಎರಡು ಮುಖ್ಯ ವಿಧಾನಗಳ ಮೂಲಕ ಜೀವ ಉಳಿಸಬಹುದಾಗಿದೆ.

1) ಹೃದಯಾಘಾತದಿಂದ ಪ್ರಜ್ಞೆ ಕಳೆದುಕೊಂಡ ವ್ಯಕ್ತಿಯ ಎದೆಯ ಮಧ್ಯದಲ್ಲಿ ಗಟ್ಟಿಯಾಗಿ ಮತ್ತು ವೇಗವಾಗಿ ಒತ್ತುವುದರಿಂದ ಪ್ರಮುಖ ಅಂಗಗಳಿಗೆ ಕೂಡಲೇ ರಕ್ತಪರಿಚಲನೆಯಾಗುವಂತೆ ಮಾಡುತ್ತದೆ.

2) ಮತ್ತೊಂದು ವಿಧಾನದಲ್ಲಿ ಹೃದಯಾಘಾತದಿಂದ ಉಸಿರಾಟ ನಿಲ್ಲಿಸಿದ್ದ ವ್ಯಕ್ತಿಯ ಬಾಯಿಗೆ, ಬಾಯಿಟ್ಟು ಊದುವ ಮೂಲಕ ಉಸಿರಾಟವನ್ನು ಒದಗಿಸುವುದು, ಈ ಮೂಲಕ ಅವರ ಶ್ವಾಸಕೋಶಗಳಿಗೆ ಆಮ್ಲಜನಕವನ್ನು ವೇಗವಾಗಿ ಒದಗಿಸುವುದರಿಂದ ಅವರ ಉಸಿರಾಟ ಕ್ರಿಯೆ ಪುನರಾರಂಭವಾಗಲಿದೆ.

ಆ ವ್ಯಕ್ತಿಯನ್ನು ವೈದ್ಯರ ಬಳಿ ಕರೆದೊಯ್ಯುವವರೆಗೂ ಈ ಸಿಪಿಆರ್‌ ಸಹಾಯದ ಮೂಲಕ ಮೆದುಳು ಮತ್ತು ಇತರ ಅಂಗಗಳಿಗೆ ರಕ್ತದ ಹರಿವು ಮತ್ತು ಆಮ್ಲಜನಕದ ಪೂರೈಕೆಯನ್ನು ನಿರ್ವಹಿಸಲು ಈ ಎರಡು ಹಂತಗಳು ಪ್ರಮುಖವಾಗಿ ಕೆಲಸ ಮಾಡುತ್ತವೆ.

ಯಾವ ವಯಸ್ಸಿನವರಿಗೆ ಸಿಪಿಆರ್‌ ಜ್ಞಾನ ಅವಶ್ಯಕ ಮತ್ತು ಪ್ರಯೋಜನ

ಸಿಪಿಆರ್ ಜ್ಞಾನ ಎಲ್ಲಾ ವಯಸ್ಸಿನವರಿಗೂ ಅತ್ಯಗತ್ಯ. ಹಿಂದೆಲ್ಲಾ ಹೃದಯಾಘಾತವೆನ್ನುವುದು 50 ವರ್ಷದ ಬಳಿಕ ಬರುವ ಸಾಧ್ಯತೆ ಇತ್ತು. ಆದರಿಂದು, ವಯಸ್ಸಿನ ಹಂಗಿಲ್ಲದೆ ಮಕ್ಕಳಿಂದ ಹಿಡಿದು ಇಳಿವಯಸ್ಸಿನವರಿಗೂ ಯಾವ ಸಂದರ್ಭದಲ್ಲಾದರೂ ಹೃದಯಾಘಾತ ಸಂಭವಿಸಬಹುದು. ಹೀಗಾಗಿ ಎಲ್ಲಾ ವಯಸ್ಸಿನವರಿಗೂ ಈ ಜ್ಞಾನ ಅತಿ ಅವಶ್ಯಕ.

ಮಕ್ಕಳಿಗೆ ಸಿಪಿಆರ್‌ ತರಬೇತಿ ನೀಡುವುದರಿಂದ ಹೃದಯಾಘಾತ ಎಂದರೇನು? ಇದು ಹೇಗೆ ಸಂಭವಿಸಲಿದೆ, ಸಂಭವಿಸಿದ ಕೂಡಲೇ ಭಯ ಪಡುವ ಬದಲು ಏನು ಮಾಡಬೇಕು ಎಂಬ ಅರಿವನ್ನು ಮೂಡಿಸುತ್ತದೆ. ಇದು ಮಕ್ಕಳ ಜ್ಞಾನ ಬೆಳವಣಿಗೆ ಹಾಗೂ ಮೌಲ್ಯಾಧರಿತ ಶಿಕ್ಷಣವನ್ನು ಪಡೆದಂತಾಗಲು ಸಹ ಸಹಕಾರಿ. ಇನ್ನು, ಹದಿಹರೆಯದವರು ಸಿಪಿಆರ್‌ ಬಗ್ಗೆ ವೇಗವಾಗಿ ಕಲಿತುಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾರೆ. ನಮ್ಮ ದೇಶದಲ್ಲಿ ಹೆಚ್ಚಾಗಿ ಯುವಕರೇ ಇರುವುದರಿಂದ ಈ ವರ್ಗಕ್ಕೆ ಸಿಪಿಆರ್‌ ಕಲಿಸಲು ಹೆಚ್ಚು ಒತ್ತು ನೀಡಿದರೆ, ಬಹುಶಃ ಸುತ್ತಮುತ್ತಲು ಯಾರಿಗೇ ಹೃದಯಾಘಾತ ಸಂಭವಿಸಿದರೂ ಕೂಡಲೇ ಅವರಿಗೆ ಸಿಪಿಆರ್‌ ಕೊಡುವ ಸಾಮರ್ಥ್ಯ ಇವರಿಗೆ ಇರಲಿದೆ. ಇಳಿವಯಸ್ಸಿನವರಿಗೆ ಸಿಪಿಆರ್‌ ಬಗ್ಗೆ ತಿಳಿದಿದ್ದರೆ, ತಮ್ಮ ಸಮಾನ ವಯಸ್ಕರ ಜೊತೆಗೆ ಹೊರಗಡೆ ತೆರಳಿದಾಗ ಹೃದಯಾಘಾತ ಸಂಭವಿಸಿದರೆ, ಅವರ ಜೀವ ಉಳಿಸಲು ಸಹಾಯಕಾರಿ.

ಸಿಪಿಆರ್‌ ಕಲಿಯುವುದರಿಂದ ಕೇವಲ ಮತ್ತೊಬ್ಬರ ಜೀವ ಉಳಿಸುವುದಷ್ಟೇ ಅಲ್ಲದೆ, ಸಾಕಷ್ಟು ಪ್ರಯೋಜನವಿದೆ. ಹೃದಯಾಘಾತವಾದ ಬಳಿಕ ಸಿಪಿಆರ್‌ ಮಾಡದೇ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ದರೆ, ಆ ಸಂದರ್ಭದಲ್ಲಿ ಆ ವ್ಯಕ್ತಿಯ ಜೀವಕೋಶಗಳು ಸಾಯಬಹುದು, ಇತರೆ ಆರೋಗ್ಯ ಸಮಸ್ಯೆಗೂ ದಾರಿ ಮಾಡಿಕೊಡಬಹುದು, ಇನ್ನೂ ಕೆಲವು ಪ್ರಯಣದಲ್ಲಿ ಮೆದುಳಿಗೂ ಹಾನಿಯಾಗಬಹುದು. ಹೀಗಾಗಿ ಹೃದಯಾಘಾತವಾದ ಕೂಡಲೇ ಸಿಪಿಆರ್‌ ಮಾಡುವುದರಿಂದ ಆ ವ್ಯಕ್ತಿಗೆ ಕೂಡಲೇ ಪ್ರಜ್ಞೆ ಮರುಕಳುಹಿಸುವುದು ಸಿಪಿಆರ್‌ ಸಮಯದಲ್ಲಿ ನಿರಂತರ ರಕ್ತದ ಹರಿವು ಮೆದುಳು ಸಾಕಷ್ಟು ಆಮ್ಲಜನಕವನ್ನು ಪಡೆಯುತ್ತದೆ. ಅಷ್ಟೇ ಅಲ್ಲದೆ, ಆ ವ್ಯಕ್ತಿಗೆ ಆತ್ಮಸ್ತೈರ್ಯ ಮೂಡಲಿದೆ. ಹೀಗಾಗಿ ಪ್ರತಿಯೊಬ್ಬರು ಸಿಪಿಆರ್‌ ಕಲಿಯುವುದನ್ನು ಕಡ್ಡಾಯ ಮಾಡುವುದು ಅತ್ಯವಶ್ಯ.

mysore-dasara_Entry_Point