ಕೊಬ್ಬಿನಾಂಶ ಕಡಿತದಿಂದ ಮಧುಮೇಹ ನಿಯಂತ್ರಣದವರೆಗೆ; ಈ 6 ರೀತಿಯ ಬೆಳ್ಳುಳ್ಳಿ ಸೇವನೆಯಿಂದಾಗುವ ಆರೋಗ್ಯ ಪ್ರಯೋಜನಗಳಿವು
ಬೆಳ್ಳುಳ್ಳಿಯನ್ನು ಹಲವು ವಿಧಾನಗಳಲ್ಲಿ ಸೇವಿಸುವುದರಿಂದ ಹತ್ತಾರು ಆರೋಗ್ಯ ಪ್ರಯೋಜನಗಳಿವೆ. ಅದರಲ್ಲಿ ಪ್ರಮುಖವಾಗಿ 6 ವಿಧಾನಗಳನ್ನು ಇಲ್ಲಿ ನೀಡಲಾಗಿದೆ.
ನಮ್ಮ ಭಾರತೀಯ ಅಡುಗೆಯ ಒಂದು ಭಾಗ ಬೆಳ್ಳುಳ್ಳಿ. ಮಟನ್, ಚಿಕನ್ ಸಾಂಬರ್, ಫ್ರೈಗಳು, ತರಕಾರಿ ಸಾಂಬರ್, ಉಪ್ಪಿನಕಾಯಿಗೆ ಬೆಳ್ಳುಳ್ಳಿ ಹಾಕಿದರೆ ತುಂಬಾ ರಚಿಯಾಗಿರುತ್ತದೆ. ಇದು ಭಕ್ಷ್ಯಗಳ ಒಂದು ಭಾಗವೇ ಆಗಿದೆ. ಆದರೆ ಕೆಲವರು ಹಸಿ ಬೆಳ್ಳುಳ್ಳಿ ಕೂಡ ತಿನ್ನುತ್ತಾರೆ. ಶತಮಾನಗಳಿಂದ ಬಳಕೆಯಲ್ಲಿರುವ ಬೆಳ್ಳುಳ್ಳಿಯಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ.
ಕೊಲೆಸ್ಟ್ರಾಲ್ ಮಟ್ಟದಿಂದ ಹಿಡಿದು ಮಧುಮೇಹವನ್ನು ನಿಯಂತ್ರಿಸುವವರಿಗೆ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಈ ಕೆಳಗೆ ನೀಡಿರುವ 6 ಬಗೆಯ ಬೆಳ್ಳುಳ್ಳಿ ತಿಂದರೆ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿಯೋಣ.
1. ಖಾಲಿ ಹೊಟ್ಟೆಯಲ್ಲಿ ಹಸಿ ಬೆಳ್ಳುಳ್ಳಿ ಸೇವನೆ
ಹಸಿ ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ದೇಹದಲ್ಲಿನ ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಹಸಿ ಬೆಳ್ಳುಳ್ಳಿಯಲ್ಲಿನ ಅಲಿಸಿನ್ ಎಂಬ ಸಂಯುಕ್ತ ಅಂಶವು ಕೊಬ್ಬಿನಾಂಶವನ್ನು ಕಡಿಮೆ ಮಾಡಿ, ರಕ್ತವನ್ನು ತೆಳುಗೊಳಿಸುವ ಗುಣಲಕ್ಷಣಗಳನ್ನು ಹೊಂದಿದೆ. ಇದು ಹೃದಯ ಆರೋಗ್ಯಕ್ಕೂ ಸಹಾಯ ಮಾಡುತ್ತದೆ. ಬೆಳ್ಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನೀರಿನೊಂದಿಗೆ ಹಸಿ ಬೆಳ್ಳುಳ್ಳಿ ತಿನ್ನುವುದರಿಂದ ಮಧುಮೇಹವನ್ನು ನಿರ್ವಹಿಸಲು ಉತ್ತಮ ಮಾರ್ಗವಾಗಿದೆ. ನಿಂಬೆ, ಆಪಲ್ ಸೈಡರ್ ವಿನೆಗರ್ ಅಥವಾ ಬಿಸಿನೀರಿನೊಂದಿಗೂ ಬೆಳ್ಳುಳ್ಳಿಯನ್ನು ಸೇವಿಸಬಹುದು.
2. ಬೆಳ್ಳುಳ್ಳಿ ಟೀ
ಬೆಳ್ಳುಳ್ಳಿಯ ಪ್ರಯೋಜನಗಳನ್ನು ಪಡೆಯಲು ಬಯಸುವವರು ಹಲವು ರೀತಿಯಲ್ಲಿ ಬೆಳ್ಳುಳ್ಳಿಯನ್ನು ಸೇವಿಸಬಹುದು. ಅದರಲ್ಲಿ ಬೆಳ್ಳುಳ್ಳಿ ಟೀ ಕೂಡ ಒಂದು. ಉತ್ತಮ ಪರಿಮಳನ್ನು ನೀಡುವ ಬೆಳ್ಳುಳ್ಳಿ ಟೀ ಕೂಡ ಅತ್ಯುತ್ತಮ ಆಯ್ಕೆಯಾಗಿದೆ. ಸುಲಿದ ಬೆಳ್ಳುಳ್ಳಿಯನ್ನು ಪುಡಿಮಾಡಿದ ನಂತರ ಒಂದು ಕಪ್ ನೀರಿಗೆ ಸೇರಿಸಬೇಕು. ಕೆಲ ನಿಮಿಷಗಳ ಕಾಲ ಕುದಿಸಿದ ನಂತರ ಅದಕ್ಕೆ 1-3 ದಾಲ್ಚಿನ್ನಿಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಒಂದು ಟೀಸ್ಪೂನ್ ಜೇನು ತುಪ್ಪ, ಅರ್ಧ ಟೀಸ್ಪೂನ್ ನಿಂಬೆ ರಸವನ್ನು ಸೇರಿಸಿ. ಸುವಾಸನೆಯ 1 ಕಪ್ ಬೆಳ್ಳುಳ್ಳಿ ಟೀ ಸೇವಿಸಿದರೆ ರೋಗ ನಿರೋಧ ಶಕ್ತಿಯನ್ನು ಹೆಚ್ಚಿಸಿಕೊಂಡು ಆರೋಗ್ಯವಾಗಿರಬಹುದು.
3. ಬೆಳ್ಳುಳ್ಳಿ ಮತ್ತು ಜೇನುತುಪ್ಪ
ಜೇನುತುಪ್ಪದೊಂದಿಗೆ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಉತ್ಸಾಹದಿಂದ ದಿನವನ್ನು ಕಳೆಯುತ್ತೀರಿ. ಸುಳಿದ ಬೆಳ್ಳಿಯನ್ನು ಮೂರರಿಂದ ನಾಲ್ಕು ತುಂಡುಗಳಾಗಿ ಕತ್ತರಿಸಿ ಚಮದ ಮೇಲೆ ಇಟ್ಟುಕೊಳ್ಳಿ. ಅದಕ್ಕೆ ಸ್ವಲ್ಪ ಜೇನು ತುಪ್ಪವನ್ನು ಸೇರಿಸಿ ಒಂದೆರೆಡು ನಿಮಿಷಗಳ ಕಾಲ ಬಿಡಿ. ನಂತರ ಬೆಳ್ಳುಳ್ಳಿಯನ್ನು ಅಗೆದು ನುಂಗಿ. ಖಾರವಾಗಿದ್ದರೆ ಬೆಚ್ಚಿಗಿನ ನೀರಿನೊಂದಿಗೆ ಸೇವಿಸಬಹುದು. ರಿಗರ್ಗಿಟೇಶನ್ ರೋಗಲಕ್ಷಣಗಳನ್ನು ನಿವಾರಿಸಲು ಈ ವಿಧಾನ ಸಹಕಾರಿ ಎಂದ ವೈದ್ಯರು ಹೇಳುತ್ತಾರೆ.
4. ಹುರಿದ ಬೆಳ್ಳುಳ್ಳಿ
ಹುರಿದ ಬೆಳ್ಳಿಯಿಂದಲೂ ಹಲವು ಆರೋಗ್ಯ ಪ್ರಯೋಜನಗಳಿವೆ. ಹುರಿದ ಬೆಳ್ಳುಳ್ಳಿ ಸೇವಿಸಲು ಸ್ವಲ್ಪ ಸಿಹಿ ಪರಿಮಳವನ್ನು ನೀಡುತ್ತದೆ. ಸಿಪ್ಪೆ ಸುಲಿಯದೆ ಬೆಳ್ಳುಳ್ಳಿಯನ್ನು ಹುರಿಯಿರಿ. ಸ್ವಲ್ಪ ಆಲಿವ್ ಎಣ್ಣೆಯನ್ನು ಅದರ ಮೇಲೆ ಚುಮುಕಿಸಿ ಚಿನ್ನದ ಬಣ್ಣಕ್ಕೆ ಬರುವವರೆಗೆ ಒಲೆಯ ಮೇಲೆ ಹುರಿಯಿರಿ. ತಣ್ಣಗಾದ ನಂತರ ಹುರಿದ ಬೆಳ್ಳುಳ್ಳಿಯ ಮೇಲಿನ ಸಿಪ್ಪೆಯನ್ನು ತೆಗೆದು ಬ್ರೇಡ್‌ನೊಂದಿಗೆ ಸೇವಿಸಬಹುದು. ಸಾಸ್‌ನಲ್ಲಿ ಮಿಕ್ಸ್ ಮಾಡಿ ತಿನ್ನಬಹುದು.
5. ಅಡುಗೆಯಲ್ಲಿ ಬೆಳ್ಳುಳ್ಳಿ ಬಳಸಿ
ನಿಮ್ಮ ದೈನಂದಿನ ಆಹಾರದಲ್ಲಿ ಬೆಳ್ಳುಳ್ಳಿಯನ್ನು ಸೇರಿಸುವ ಸುಲಭ ಮಾರ್ಗವೆಂದರೆ ಅದು ನಿಮ್ಮ ಸಾಮಾನ್ಯ ಊಟ. ತರಕಾರಿ ಸಾಂಬರ್, ದಾಲ್, ಸೂಪ್ ಸೇರಿದಂತೆ ಯಾವುದೇ ಆಹಾರ ಪದಾರ್ಥಗಳಲ್ಲಿ ಬೆಳ್ಳುಳ್ಳಿಯನ್ನು ಬಳಸಿ. ಆದರೆ ಬೆಳ್ಳುಳ್ಳಿಯನ್ನು ಬೇಯಿಸುವುದರಿಂದ ಅದರಲ್ಲಿನ ಆಲಿಸಿನ್ ಸಾಮರ್ಥ್ಯ ಕಡಿಮೆಯಾಗುತ್ತದೆ ಎಂಬುದನ್ನ ಮರೆಯಬೇಡಿ. ಸಾಂಬರ್‌ಗೆ ಒಗ್ಗರಣೆ ಹಾಕುವಾಗ ಬೆಳ್ಳುಳ್ಳಿಯನ್ನು ಬಳಸಬಹುದು.
6. ಬೆಳ್ಳುಳ್ಳಿ ಎಣ್ಣೆ
ಬೆಳ್ಳುಳ್ಳಿಯಿಂದ ಹಲವು ಆರೋಗ್ಯ ಪ್ರಯೋಜನಗಳನ್ನುು ಪಡೆಯಲು ಮತ್ತೊಂದು ಮಾರ್ಗ ಎಂದರೆ ಅದು ಬೆಳ್ಳುಳ್ಳಿ ಎಣ್ಣೆ. ಈ ಎಣ್ಣೆಯನ್ನು ಅಡುಗೆ, ಸಲಾಡ್‌ಗಳು, ತರಕಾರಿ ಅಥವಾ ಬ್ರೇಡ್ ಮೇಲೆ ಚಿಮುಕಿಸಿ ಬಳಸಬಹುದು.