Health Tips: ಡೈರಿ ಉತ್ಪನ್ನಗಳನ್ನ 1 ತಿಂಗಳು ತ್ಯಜಿಸಿದರೆ ಸಾಕು; ದೇಹದಲ್ಲಿ ಆಗುವ ಈ ಧನಾತ್ಮಕ ಬದಲಾವಣೆ ಗಮನಿಸಿ-health tips if you stop consuming dairy products see the positive changes in the body rsa ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Health Tips: ಡೈರಿ ಉತ್ಪನ್ನಗಳನ್ನ 1 ತಿಂಗಳು ತ್ಯಜಿಸಿದರೆ ಸಾಕು; ದೇಹದಲ್ಲಿ ಆಗುವ ಈ ಧನಾತ್ಮಕ ಬದಲಾವಣೆ ಗಮನಿಸಿ

Health Tips: ಡೈರಿ ಉತ್ಪನ್ನಗಳನ್ನ 1 ತಿಂಗಳು ತ್ಯಜಿಸಿದರೆ ಸಾಕು; ದೇಹದಲ್ಲಿ ಆಗುವ ಈ ಧನಾತ್ಮಕ ಬದಲಾವಣೆ ಗಮನಿಸಿ

Dairy Products: ಡೈರಿ ಉತ್ಪನ್ನಗಳು ಬಹುತೇಕರಿಗೆ ಇಷ್ಟವಾಗುತ್ತದೆ. ಆದರೆ ಡೈರಿ ಉತ್ಪನ್ನಗಳ ಸೇವನೆಯನ್ನು ತ್ಯಜಿಸಿದರೆ ದೇಹದಲ್ಲಿ ಏನೆಲ್ಲ ಬದಲಾವಣೆಗಳು ಆಗುತ್ತವೆ ಎಂಬುದರ ಬಗ್ಗೆ ತಿಳಿಯಿರಿ.

ಡೈರಿ ಉತ್ಪನ್ನಗಳ ಸೇವನೆಯನ್ನು ತ್ಯಜಿಸಿದರೆ ದೇಹಕ್ಕೆ ಆಗುವ ಪ್ರಯೋಜನಗಳನ್ನು ತಿಳಿಯಿರಿ
ಡೈರಿ ಉತ್ಪನ್ನಗಳ ಸೇವನೆಯನ್ನು ತ್ಯಜಿಸಿದರೆ ದೇಹಕ್ಕೆ ಆಗುವ ಪ್ರಯೋಜನಗಳನ್ನು ತಿಳಿಯಿರಿ

ಇತ್ತೀಚಿನ ದಿನಗಳಲ್ಲಿ ತೂಕ ಏರಿಕೆ ಎನ್ನುವುದು ಬಹುತೇಕರಲ್ಲಿ ಕಾಣಿಸಿಕೊಳ್ಳುತ್ತಿದೆ. ನಮ್ಮ ದಿನನಿತ್ಯದ ಜೀವನಶೈಲಿ, ಕುಳಿತುಕೊಂಡೇ ಮಾಡುವಂತಹ ಕೆಲಸಗಳು ಹಾಗೂ ಆಹಾರ ಕ್ರಮಗಳಿಂದಾಗಿ ಸ್ಥೂಲಕಾಯ ಅನೇಕರನ್ನು ಕಾಡುತ್ತಿದೆ. ಅನೇಕರು ತಮ್ಮ ಒಟ್ಟಾರೆ ದೇಹದ ಯೋಗಕ್ಷೇಮವನ್ನು ಗಮನಿಸುವ ಸಂದರ್ಭದಲ್ಲಿ ಡೈರಿ ಪದಾರ್ಥಗಳ ಸೇವನೆ ತ್ಯಜಿಸುವುದನ್ನು ನೋಡಿರುತ್ತೇವೆ. ಹಾಗಾದರೆ ಒಂದು ತಿಂಗಳು ಕಾಲ ಡೈರಿ ಪದಾರ್ಥವನ್ನು ತ್ಯಜಿಸಿದರೆ ನಮ್ಮ ದೇಹದಲ್ಲಿ ಯಾವೆಲ್ಲ ರೀತಿಯಲ್ಲಿ ಬದಲಾವಣೆಗಳು ಉಂಟಾಗುತ್ತದೆ ಎಂಬುದನ್ನು ನೋಡೋಣ.

ಈ ರೀತಿ ಡೈರಿ ಪದಾರ್ಥಗಳನ್ನು ತ್ಯಜಿಸುವುದು ಅನೇಕ ರೀತಿಯ ಫಲಿತಾಂಶಗಳನ್ನು ನೀಡುತ್ತದೆ. ದೈಹಿಕ ಆರೋಗ್ಯ ಮಾತ್ರವಲ್ಲದೇ ಮಾನಸಿಕ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತದೆ. ನಮ್ಮ ದಿನನಿತ್ಯದ ಆಹಾರದಿಂದ ಡೈರಿ ಉತ್ಪನ್ನಗಳನ್ನು ದೂರ ಮಾಡಿದರೆ ಆಹಾರದಿಂದ ಹೆಚ್ಚುವರಿ ಸ್ಯಾಚುರೇಟೆಡ್​ ಕೊಬ್ಬಿನಾಂಶ , ಸಕ್ಕರೆ ಅಂಶ ಹಾಗೂ ಉಪ್ಪಿನಾಂಶವನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಕೇವಲ ಮೂರು ವಾರಗಳಲ್ಲಿ ನಾವು ನಮ್ಮ ದೇಹದಲ್ಲಿ ವಿವಿಧ ಬದಲಾವಣೆಗಳನ್ನು ಗಮನಿಸುತ್ತಾ ಹೋಗುತ್ತೇವೆ. ಹೃದ್ರೋಗ, ಮಧುಮೇಹದಂತಹ ಕಾಯಿಲೆಯುಳ್ಳವರಿಗೆ ಡೈರಿ ಉತ್ಪನ್ನಗಳ ಸೇವನೆಯು ಇನ್ನಷ್ಟು ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಡೈರಿ ಉತ್ಪನ್ನಗಳಲ್ಲಿ ಹೆಚ್ಚಿನ ಕ್ಯಾಲೋರಿ ಮತ್ತು ಕೊಬ್ಬಿನಾಂಶ ಇರುವ ಕಾರಣ ನಾವು ಇದನ್ನು ತ್ಯಜಿಸಿದಾಗ ತೂಕವನ್ನು ಕಳೆದುಕೊಳ್ಳುತ್ತೇವೆ. ಆದರೆ ಡೈರಿ ಉತ್ಪನ್ನಗಳಲ್ಲಿ ಮನುಷ್ಯನ ಆರೋಗ್ಯಕ್ಕೆ ಬೇಕಾದ ಉತ್ತಮ ಪೋಷಕಾಂಶಗಳು ಇರುವುದರಿಂದ ಡೈರಿ ಉತ್ಪನ್ನಗಳನ್ನು ತ್ಯಜಿಸಿದ ಬಳಿಕ ಸಮತೋಲಿತ ಆಹಾರವನ್ನು ಸೇವನೆ ಮಾಡುವುದು ಕೂಡ ಅಷ್ಟೇ ಮುಖ್ಯವಾಗಿದೆ.

ಡೈರಿ ಉತ್ಪನ್ನ ತ್ಯಜಿಸಿದರೆ ಅಜೀರ್ಣ ಸಮಸ್ಯೆಗೆ ನಿವಾರಣೆ

ಡೈರಿ ಉತ್ಪನ್ನಗಳನ್ನು ತ್ಯಜಿಸಿದ ಬಳಿಕ ಅನೇಕರಿಗೆ ಜೀರ್ಣಕ್ರಿಯೆ ಸುಧಾರಿಸಿದ ಅನುಭವವಾಗಲಿದೆ. ಲ್ಯಾಕ್ಟೋಸ್​, ಹಾಲಿನಲ್ಲಿ ಕಂಡು ಬರುವ ಸಕ್ಕರೆಯಂಶಗಳು ಜೀರ್ಣಕ್ರಿಯೆಗೆ ಸಮಸ್ಯೆಯುಂಟು ಮಾಡುತ್ತವೆ. ಇವುಗಳನ್ನು ತ್ಯಜಿಸಿದ ಬಳಿಕ ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತಾ ಹೋಗುತ್ತದೆ. ಅತಿಸಾರ, ಅಜೀರ್ಣದಂತಹ ಸಮಸ್ಯೆಗಳು ಕಾಣಿಸುವುದಿಲ್ಲ.

ಡೈರಿ ಉತ್ಪನ್ನಗಳನ್ನು ತ್ಯಜಿಸಿದ ಕೇವಲ ನಾಲ್ಕೇ ವಾರಗಳಲ್ಲಿ ಚರ್ಮದ ಆರೋಗ್ಯ ಹಾಗೂ ಚರ್ಮಕ್ಕೆ ವಯಸ್ಸಾಗುವ ಪ್ರಕ್ರಿಯೆ ಕಡಿಮೆಯಾಗುತ್ತಾ ಹೋಗುತ್ತದೆ. ಅನೇಕರಿಗೆ ಡೈರಿ ಉತ್ಪನ್ನಗಳು ಮೊಡವೆಗೆ ಕಾರಣವಾಗುತ್ತದೆ. ಎಲ್ಲರಿಗೂ ಈ ಅನುಭವವಾಗುವುದಿಲ್ಲ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ತ್ವಚೆ ಇರುತ್ತದೆ. ಆದರೆ ಸಾಮಾನ್ಯವಾಗಿ ಕೆಲವರಿಗೆ ಡೈರಿ ಉತ್ಪನ್ನಗಳ ಸೇವನೆ ಮೊಡವೆಗೆ ಕಾರಣವಾಗುತ್ತದೆ. ಹೀಗಾಗಿ ಇದನ್ನು ತ್ಯಜಿಸುವುದರಿಂದ ತ್ವಚೆಯ ಕಾಂತಿ ಸುಧಾರಿಸುತ್ತದೆ. (This copy first appeared in Hindustan Times Kannada website. To read more like this please logon to kannada.hindustantime.com).

mysore-dasara_Entry_Point