ಅಡುಗೆ ರುಚಿ ಹೆಚ್ಚಿಸುವುದಷ್ಟೇ ಅಲ್ಲ, ಮಧುಮೇಹ ನಿಯಂತ್ರಣಕ್ಕೂ ರಾಮಬಾಣ ಜಾಯಿಕಾಯಿ; ಬಳಸುವುದು ಹೇಗೆ?-health tips in kannada health benefits of nutmeg how to control diabetes by regular uses of nutmeg rsm ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಅಡುಗೆ ರುಚಿ ಹೆಚ್ಚಿಸುವುದಷ್ಟೇ ಅಲ್ಲ, ಮಧುಮೇಹ ನಿಯಂತ್ರಣಕ್ಕೂ ರಾಮಬಾಣ ಜಾಯಿಕಾಯಿ; ಬಳಸುವುದು ಹೇಗೆ?

ಅಡುಗೆ ರುಚಿ ಹೆಚ್ಚಿಸುವುದಷ್ಟೇ ಅಲ್ಲ, ಮಧುಮೇಹ ನಿಯಂತ್ರಣಕ್ಕೂ ರಾಮಬಾಣ ಜಾಯಿಕಾಯಿ; ಬಳಸುವುದು ಹೇಗೆ?

ಇಂದಿನ ದಿನಗಳಲ್ಲಿ ಬ್ಯುಸಿ ಲೈಫ್‌ಸ್ಟೈಲ್‌ನಿಂದಲೇ ಅನೇಕ ಜನರು ಮಧುಮೇಹ ಕಾಯಿಲೆಗೆ ಬಲಿಯಾಗಿದ್ದಾರೆ. ಆಯುರ್ವೇದದ ಪ್ರಕಾರ, ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಜಾಯಿಕಾಯಿ ತುಂಬಾ ಪ್ರಯೋಜನಕಾರಿಯಾಗಿದೆ. ಜಾಯಿಕಾಯಿ ಪ್ರಯೋಜನಗಳು ಮತ್ತು ಅದನ್ನು ಬಳಸುವ ಸರಿಯಾದ ವಿಧಾನ ಇಲ್ಲಿದೆ.

ಅಡುಗೆ ರುಚಿ ಹೆಚ್ಚಿಸುವುದಷ್ಟೇ ಅಲ್ಲ, ಮಧುಮೇಹ ನಿಯಂತ್ರಣಕ್ಕೂ ರಾಮಬಾಣ ಜಾಯಿಕಾಯಿ; ಬಳಸುವುದು ಹೇಗೆ?
ಅಡುಗೆ ರುಚಿ ಹೆಚ್ಚಿಸುವುದಷ್ಟೇ ಅಲ್ಲ, ಮಧುಮೇಹ ನಿಯಂತ್ರಣಕ್ಕೂ ರಾಮಬಾಣ ಜಾಯಿಕಾಯಿ; ಬಳಸುವುದು ಹೇಗೆ?

ಜಾಯಿಕಾಯಿಯನ್ನು ಪ್ರತಿಯೊಬ್ಬರ ಅಡು ಗೆಮನೆಯಲ್ಲಿ ಮಸಾಲೆ ಪದಾರ್ಥವಾಗಿ ಅನೇಕ ವರ್ಷಗಳಿಂದ ಬಳಸಲಾಗುತ್ತಿದೆ. ಆದರೆ ಈ ಜಾಯಿಕಾಯಿ ಆಹಾರದ ರುಚಿ ಮತ್ತು ಪರಿಮಳವನ್ನು ಹೆಚ್ಚಿಸಲು ಮಾತ್ರವಲ್ಲದೆ ಇದನ್ನು ಔಷಧವಾಗಿಯೂ ಬಳಸಲಾಗುತ್ತದೆ. ಹೌದು ಆಯುರ್ವೇದದಲ್ಲಿ ಜಾಯಿಕಾಯಿ ಅನೇಕ ರೋಗಗಳನ್ನು ಗುಣಪಡಿಸುವಲ್ಲಿ ಬಹಳ ಪ್ರಯೋಜನಕಾರಿಯಾಗಿದೆ.

ಮಧುಮೇಹ ನಿಯಂತ್ರಣಕ್ಕೆ ದಿವ್ಯೌಷಧ

ಜಾಯಿಕಾಯಿ ಮಧುಮೇಹದಂತಹ ಗಂಭೀರ ಕಾಯಿಲೆಗಳಿಗೂ ಸಹ ಬಹಳ ಪರಿಣಾಮಕಾರಿ ಎಂದು ಸಾಬೀತಾಗಿದೆ. ಇತ್ತೀಚಿನ ದಿನಗಳಲ್ಲಿ, ಹದಗೆಡುತ್ತಿರುವ ಜೀವನಶೈಲಿಯಿಂದಾಗಿ ಬಹಳಷ್ಟು ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಒಮ್ಮೆ ಮಧುಮೇಹ ಬಂದರೆ ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ತುಂಬಾ ಕಷ್ಟವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನೀವು ಜಾಯಿಕಾಯಿಯನ್ನು ನಿಮ್ಮ ಆಹಾರದ ಭಾಗವಾಗಿ ಮಾಡಿಬಹುದು. ಜಾಯಿಕಾಯಿಯ ಉಪಯೋಗಗಳೇನು? ಅದನ್ನು ಬಳಸುವ ವಿಧಾನ ಹೇಗೆ? ಇಲ್ಲಿದೆ ಮಾಹಿತಿ.

ಜಾಯಿಕಾಯಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಿಸುತ್ತದೆ ಎಂದು ಅನೇಕ ಅಧ್ಯಯನಗಳಲ್ಲಿ ಸಾಬೀತಾಗಿದೆ. ಜಾಯಿಕಾಯಿಯನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ವಾಸ್ತವವಾಗಿ, ಮೇದೋಜ್ಜೀರಕ ಗ್ರಂಥಿಯಲ್ಲಿ ಇನ್ಸುಲಿನ್ ಉತ್ಪಾದನೆ ಕಡಿಮೆಯಾದಾಗ, ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಹೆಚ್ಚಾಗಲು ಪ್ರಾರಂಭಿಸುತ್ತದೆ. ಜಾಯಿಕಾಯಿ ಮೇದೋಜ್ಜೀರಕ ಗ್ರಂಥಿಯ ಕೋಶಗಳನ್ನು ಸಕ್ರಿಯಗೊಳಿಸುತ್ತದೆ, ಇದು ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದಲ್ಲದೆ, ಜಾಯಿಕಾಯಿ ಸೇವನೆಯು ಜೀರ್ಣಶಕ್ತಿಯನ್ನು ಸುಧಾರಿಸುತ್ತದೆ. ಇದರೊಂದಿಗೆ ಜಾಯಿಕಾಯಿಯಲ್ಲಿ ಆ್ಯಂಟಿಬ್ಯಾಕ್ಟೀರಿಯಲ್ ಮತ್ತು ಉರಿಯೂತ ನಿವಾರಕ ಗುಣವಿದ್ದು ಇದು ಅನೇಕ ರೋಗಗಳನ್ನು ನಿವಾರಿಸುತ್ತದೆ.

ಹಾಲಿನೊಂದಿಗೆ ಬೆರೆಸಿ ಕುಡಿದರೆ ಒಳ್ಳೆಯದು

ಆಯುರ್ವೇದದ ಪ್ರಕಾರ ಜಾಯಿಕಾಯನ್ನು ಹಾಲಿನೊಂದಿಗೆ ಬೆರೆಸಿ ಕುಡಿದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಇದನ್ನು ತಯಾರಿಸಲು ಮೊದಲು ಜಾಯಿಕಾಯನ್ನು ಚೆನ್ನಾಗಿ ಪುಡಿ ಮಾಡಿಕೊಳ್ಳಿ. ಈಗ ಅದನ್ನು ಹಾಲಿನಲ್ಲಿ ಬೆರೆಸಿ ಮತ್ತು ಅದು ಕುದಿಯುವವರೆಗೆ ಬಿಸಿ ಮಾಡಿ. ಹಾಲನ್ನು ಸರಿಯಾಗಿ ಬೇಯಿಸಿದರೆ ಜಾಯಿಕಾಯಿಯ ಸಾರವು ಹಾಲಿನಲ್ಲಿ ಬೆರೆಯುತ್ತದೆ. ಈಗ ಹಾಲನ್ನು ಫಿಲ್ಟರ್ ಮಾಡಿ ಬೆಚ್ಚಗಿರುವಾಗಲೇ ಕುಡಿಯಿರಿ. ಸುಮಾರು ಒಂದು ವಾರ ರಾತ್ರಿ ಜಾಯಿಕಾಯಿ ಹಾಲನ್ನು ನಿರಂತರವಾಗಿ ಸೇವಿಸಿದ ನಂತರ, ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸವನ್ನು ಪರಿಣಾಮವನ್ನು ನೀವು ಕಾಣಬಹುದು. ಆಯುರ್ವೇದದ ಪ್ರಕಾರ ಸಕ್ಕರೆಯನ್ನು ನಿಯಂತ್ರಣದಲ್ಲಿಡಲು ಜಾಯಿಕಾಯಿ ರಾಮಬಾಣದಂತೆ ಕೆಲಸ ಮಾಡುತ್ತದೆ.

ಮಧುಮೇಹದ ಜೊತೆಗೆ, ಜಾಯಿಕಾಯಿ ಇತರ ಅನೇಕ ರೋಗಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ನಿಯಮಿತವಾಗಿ ಅದನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯು ಆರೋಗ್ಯಕರವಾಗಿರುತ್ತದೆ. ಮಲಬದ್ಧತೆ ಮತ್ತು ಪೈಲ್ಸ್‌ನಂತಹ ಕಾಯಿಲೆಗಳು ಸಹ ದೂರವಾಗುತ್ತವೆ. ಇದು ಗ್ಯಾಸ್ ಮತ್ತು ಅಜೀರ್ಣದಿಂದಲೂ ಪರಿಹಾರವನ್ನು ನೀಡುತ್ತದೆ. ಇದಲ್ಲದೇ ಬೊಜ್ಜಿನ ಸಮಸ್ಯೆಯನ್ನು ತಡೆಯುತ್ತದೆ. ನಿಮಗೆ ಕೀಲು ನೋವಿನ ಸಮಸ್ಯೆ ಇದ್ದರೆ ಸಾಸಿವೆ ಎಣ್ಣೆಯಲ್ಲಿ ಜಾಯಿಕಾಯಿ ಪುಡಿಯನ್ನು ಮಿಕ್ಸ್‌ ಮಾಡಿ ಕೀಲುಗಳಿಗೆ ಮಸಾಜ್ ಮಾಡಿದರೆ ನೋವು ಕಡಿಮೆ ಆಗುತ್ತದೆ.

mysore-dasara_Entry_Point