ಮಿಕ್ಕಿದ ಅನ್ನವನ್ನ ಎತ್ತಿಟ್ಟು ತಿನ್ನುವ ಅಭ್ಯಾಸ ನಿಮಗೂ ಇದ್ಯಾ, ಇದು ಆರೋಗ್ಯಕ್ಕೆ ಒಳ್ಳೆಯದೋ ಹಾನಿಕರವೋ? ಇಲ್ಲಿದೆ ಉತ್ತರ
ನಮ್ಮೆಲ್ಲರ ಮನೆಗಳಲ್ಲೂ ವಾರದಲ್ಲಿ ಮೂರು ದಿನ ಮಾಡಿದ ಅನ್ನ ಮಿಕ್ಕುತ್ತದೆ. ಇದನ್ನ ನಾವು ಎತ್ತಿಟ್ಟು ತಿನ್ನುತ್ತೇವೆ ಅಥವಾ ಈ ಅನ್ನದಿಂದ ಚಿತ್ರಾನ್ನ, ಪುಳಿಯೋಗರೆ ಎಂದು ತಿಂಡಿ ತಯಾರಿಸಿ ತಿನ್ನುತ್ತೇವೆ. ಹಾಗಾದರೆ ಉಳಿದ ಅನ್ನ ತಿನ್ನೋದು ಆರೋಗ್ಯಕ್ಕೆ ನಿಜಕ್ಕೂ ಒಳ್ಳೆಯದೇ ಅಥವಾ ಇದು ಹಾನಿಕರವೇ? ಇದಕ್ಕೆ ಉತ್ತರ ಇಲ್ಲಿದೆ.
ದಕ್ಷಿಣ ಭಾರತದಲ್ಲಿ ಅನ್ನ ತಿನ್ನುವವರು ಸಂಖ್ಯೆ ಹೆಚ್ಚು. ಬಹುತೇಕರು ದಿನದಲ್ಲಿ ಎರಡು ಅಥವಾ ಮೂರು ಬಾರಿ ರೈಸ್ ಐಟಂ ಮಾಡುತ್ತಾರೆ. ಆದ್ರೆ ಮಾಡಿದ ಅನ್ನ ಮಿಕ್ಕದೆ ಇರಲು ಸಾಧ್ಯವಿಲ್ಲ. ಕೆಲವರು ಪದೇ ಪದೇ ಅನ್ನ ಮಾಡಬೇಕಾಗುತ್ತದೆ ಎಂದುಕೊಂಡು ಒಮ್ಮೆಲೆ ಮಾಡಿ ಫ್ರಿಜ್‌ನಲ್ಲಿ ಇಡುತ್ತಾರೆ. ಮಿಕ್ಕಿದ ಅನ್ನದಿಂದ ಚಿತ್ರಾನ್ನ, ಪುಳಿಯೋಗರೆ ಮಾಡಿಕೊಂಡು ತಿನ್ನುವವರು ಇದ್ದಾರೆ.
ಅದೇನೆ ಇರಲಿ ಮಿಕ್ಕಿದ ಅನ್ನವನ್ನ ಅಥವಾ ಮೊದಲೇ ಮಾಡಿಟ್ಟ ಅನ್ನವನ್ನ ನಂತರ ತಿನ್ನುವುದು ಆರೋಗ್ಯಕ್ಕೆ ಉತ್ತಮವೇ, ಇದರಿಂದ ಫುಡ್ ಪಾಯಿಸನ್ ಆಗುತ್ತಾ, ವಾಂತಿ, ಅತಿಸಾರ, ಕಿಬ್ಬೊಟ್ಟೆ ನೋವಿಗೆ ಕಾರಣವಾಗುತ್ತಾ ಎಂಬೆಲ್ಲಾ ಪ್ರಶ್ನೆ ನಿಮ್ಮಲ್ಲೂ ಇರಬಹುದು.
ಮಿಕ್ಕಿದ ಅನ್ನವನ್ನು ತಿನ್ನುವುದು ಸುರಕ್ಷಿತವೇ?
ಉಳಿದ ಅನ್ನವನ್ನು ತಿನ್ನುವುದು ಯಾವಾಗಲೂ ಸುರಕ್ಷಿತವಲ್ಲ. ಏಕೆಂದರೆ ಇದರಿಂದ ನಮ್ಮ ಆರೋಗ್ಯ ಕೆಡಬಹುದು. ಅಕ್ಕಿಯಲ್ಲಿ ಕಂಡು ಬರುವ ಬ್ಯಾಸಿಲಸ್ ಸೆರಿಯಸ್ ಬ್ಯಾಕ್ಟಿರಿಯಾವು ಮಿಕ್ಕಿದ ಅನ್ನ ತಿನ್ನುವುದರಿಂದ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಬ್ಯಾಸಿಲಸ್ ಸೀರಿಯಸ್ ಅಡುಗೆ ಮಾಡುವ ಹಂತದಲ್ಲಿ ಸಾಯುವುದಿಲ್ಲ. ಇದನ್ನು ಕೋಣೆಯ ಉಷ್ಣಾಂಶದಲ್ಲಿ ಇರಿಸಿದಾಗ ಅವು ಆಹಾರದಲ್ಲಿ ವಿಷವನ್ನು ಉತ್ಪಾದಿಸಬಹುದು. ಇದು ಫುಡ್ ಪಾಯಿಸನ್‌ಗೆ ಕಾರಣವಾಗಬಹುದು ಎಂದು ಪೌಷ್ಟಿಕ ತಜ್ಞರು ಹೇಳುತ್ತಾರೆ. 2023 ರಲ್ಲಿ ಮೈಕ್ರೋಬಿಯಲ್ ಪ್ಯಾಥೋಜೆನೆಸಿಸ್‌ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ ಬ್ಯಾಸಿಲಸ್ ಸೆರಿಯಸ್ ಅನ್ನು ಫ್ರೈಡ್ ರೈಸ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ.
ಫ್ರೈಡ್ ರೈಸ್ ಸಿಂಡ್ರೋಮ್ ಉಂಟಾಗಲು ಕಾರಣ
* ಅಡುಗೆ ಮಾಡಿದ ನಂತರ, ಅನ್ನವನ್ನು ಕೋಣೆಯ ಉಷ್ಣಾಂಶದಲ್ಲಿ ಎರಡು ಗಂಟೆಗಳಿಗಿಂತ ಹೆಚ್ಚು ಕಾಲ ಬಿಟ್ಟರೆ, ಬ್ಯಾಕ್ಟೀರಿಯಾಗಳು ವೇಗವಾಗಿ ಬೆಳೆಯಲು ಪ್ರಾರಂಭಿಸುತ್ತವೆ.
* ಬ್ಯಾಕ್ಟೀರಿಯಾವು ಶಾಖ-ನಿರೋಧಕ ವಿಷವನ್ನು ಉತ್ಪಾದಿಸಬಹುದು. ಅಂದರೆ ಇದರಿಂದ ಅನ್ನವನ್ನು ಮತ್ತೆ ಬಿಸಿ ಮಾಡುವುದರಿಂದ ಅನಾರೋಗ್ಯದ ಅಪಾಯ ನಿವಾರಣೆಯಾಗುವುದಿಲ್ಲ.
* ಬ್ಯಾಸಿಲಸ್ ಸೆರಿಯಸ್‌ನಿಂದ ಕಲುಷಿತಗೊಂಡ ಮಿಕ್ಕಿದ ಅನ್ನವನ್ನು ತಿನ್ನುವುದರಿಂದ ವಾಕರಿಕೆ, ವಾಂತಿ, ಅತಿಸಾರ ಮತ್ತು ಕಿಬ್ಬೊಟ್ಟೆಯ ಸೆಳೆತದಂತಹ ಸಮಸ್ಯೆಗಳು ಕಾಣಿಸುತ್ತವೆ. ಮಾತ್ರವಲ್ಲ ಆಹಾರ ವಿಷದ ಲಕ್ಷಣಗಳು ಒಂದರಿಂದ 5 ಗಂಟೆಗಳು ಸಂಭವಿಸಬಹುದು.
ಮಿಕ್ಕಿದ ಅನ್ನದಿಂದ ಉಂಟಾಗುವ ವಿಷವು ದೇಹದ ಮೇಲೆ ಅಲ್ಪಾವಧಿಯಲ್ಲಿ ಪರಿಣಾಮ ಬೀರುತ್ತದೆ. ಆದರೆ ಪ್ರತಿರಕ್ಷಣಾ ವ್ಯವಸ್ಥೆ ಬಲವಾಗಿಲ್ಲ ಎಂದರೆ ರೋಗಲಕ್ಷಣಗಳು ಉಲ್ಬಣಗೊಳ್ಳಬಹುದು.
ಮಿಕ್ಕಿದ ಅನ್ನ ಹಾಳಾಗಿದೆಯೇ ಎಂದು ಪರಿಶೀಲಿಸುವುದು ಹೇಗೆ?
- ಕೆಟ್ಟು ಹೋಗಿರುವ ಅನ್ನವು ಹುಳಿ ವಾಸನೆಯನ್ನು ಹೊಂದಿರುತ್ತದೆ. ಹೊಸದಾಗಿ ಬೇಯಿಸಿದ ಅಥವಾ ಸರಿಯಾಗಿ ಸಂಗ್ರಹಿಸಿದ ಅನ್ನವು ತಟಸ್ಥ ಪರಿಮಳವನ್ನು ಹೊಂದಿರುತ್ತದೆ, ಆದ್ದರಿಂದ ನೀವು ಭಿನ್ನ ವಾಸನೆಯನ್ನು ಗಮನಿಸಿದರೆ ಅಂತಹ ಅನ್ನವನ್ನು ತಿನ್ನದೇ ಇರುವುದು ಉತ್ತಮ.
- ಅಕ್ಕಿ ತುಂಬಾ ಗಟ್ಟಿಯಾಗಿದ್ದರೆ, ಕುರುಕುಲಾದ ಅಥವಾ ಲೋಳೆಯಂತಿದ್ದರೆ ಅದು ಹಾಳಾಗಿರುವ ಸಾಧ್ಯತೆಯಿದೆ.
- ಹಾಳಾದ ಅನ್ನ ಬಣ್ಣ ಬದಲಾಗಿರುತ್ತದೆ
- ಅನ್ನ ನೋಡಲು ಚೆನ್ನಾಗಿದ್ದು ಹುಳಿ, ಕಹಿ, ರುಚಿ ಹೊಂದಿದ್ದರೆ ಅದು ಹಾಳಾಗಿದೆ ಎಂದು ಅರ್ಥ.
- ಉಳಿದ ಅನ್ನವನ್ನು ತಿನ್ನುವುದರಿಂದ ಬ್ಯಾಕ್ಟೀರಿಯಾದ ಉಪಸ್ಥಿತಿಯಿಂದ ನೀವು ಅನಾರೋಗ್ಯಕ್ಕೆ ಒಳಗಾಗಬಹುದು. ಅನಾರೋಗ್ಯಕ್ಕೆ ಒಳಗಾಗುವುದನ್ನು ತಪ್ಪಿಸಲು ಉಳಿದ ಅಕ್ಕಿಯನ್ನು ಶೇಖರಿಸಿಡಲು ಮತ್ತು ಮತ್ತೆ ಕಾಯಿಸಲು ಖಚಿತಪಡಿಸಿಕೊಳ್ಳಿ.
(ಗಮನಿಸಿ: ಇದು ಸಾಮಾನ್ಯ ಮಾಹಿತಿಯನ್ನು ಆಧರಿಸಿದ ಬರಹ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ)
ಇದನ್ನೂ ಓದಿ: Tawa Pulao: ಅನ್ನ ಮಿಕ್ಕಿದೆ ಅಂತ ಎಸಿಬೇಡಿ, ಮುಂಬೈ ಶೈಲಿಯ ತವಾ ಪಲಾವ್ ಮಾಡಿ, ಮನೆಮಂದಿಗೆಲ್ಲಾ ಖಂಡಿತ ಇಷ್ಟ ಆಗುತ್ತೆ
ವಿಭಾಗ