Home Remedies: ನಿಮ್ಮ ಮಗುವಿಗೆ ಶೀತ ಆಗಿ ತುಂಬಾ ಕಿರಿಕಿರಿ ಆಗ್ತಾ ಇದ್ಯಾ? ಹಾಗಾದ್ರೆ ಒಮ್ಮೆ ಈ ಮನೆಮದ್ದು ಟ್ರೈ ಮಾಡಿ ನೋಡಿ-health tips is your child very irritable with cold so then try this home remedy once smk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Home Remedies: ನಿಮ್ಮ ಮಗುವಿಗೆ ಶೀತ ಆಗಿ ತುಂಬಾ ಕಿರಿಕಿರಿ ಆಗ್ತಾ ಇದ್ಯಾ? ಹಾಗಾದ್ರೆ ಒಮ್ಮೆ ಈ ಮನೆಮದ್ದು ಟ್ರೈ ಮಾಡಿ ನೋಡಿ

Home Remedies: ನಿಮ್ಮ ಮಗುವಿಗೆ ಶೀತ ಆಗಿ ತುಂಬಾ ಕಿರಿಕಿರಿ ಆಗ್ತಾ ಇದ್ಯಾ? ಹಾಗಾದ್ರೆ ಒಮ್ಮೆ ಈ ಮನೆಮದ್ದು ಟ್ರೈ ಮಾಡಿ ನೋಡಿ

ನಿಮ್ಮ ಮಕ್ಕಳು ಶೀತದಿಂದ ತುಂಬಾ ಕಿರಿಕಿರಿ ಅನುಭವಿಸಯತ್ತಿದ್ದರೆ ಅವರಿ ಮನೆಯಲ್ಲೇ ಈ ರೀತಿ ಮದ್ದು ಮಾಡಿಕೊಡಿ. ಇದರಿಂದಲೂ ಗುಣವಾಗಿಲ್ಲ ಎಂದಾದರೆ ವೈದ್ಯರಿದ್ದಲ್ಲಿಗೆ ಕರೆದುಕೊಂಡು ಹೋಗಿ

ಶೀತ
ಶೀತ

ವಾತಾವರಣ ತುಂಬಾ ಚಳಿಯಾಗಿರುವುದರಿಂದ ಕೆಮ್ಮು, ಸೀನು, ನೆಗಡಿ, ಜ್ವರ, ಗಂಟಲು ಬೇನೆ ಮುಂತಾದ ಹಲವು ಸಮಸ್ಯೆಗಳಿಂದ ಮಕ್ಕಳು ಬಳಲುತ್ತಾರೆ. ದೊಡ್ಡವರಾದರೆ ಹೇಗೋ ತಮ್ಮನ್ನು ತಾವು ನಿಭಾಯಿಸಿಕೊಳ್ಳುತ್ತಾರೆ. ಆದರೆ ಚಿಕ್ಕ ಮಕ್ಕಳಿಗೆ ಇದು ತುಂಬಾ ಕಿರಿಕಿರಿಯನ್ನು ಉಂಟು ಮಾಡುತ್ತದೆ. ಇದರಿಂದ ಮಕ್ಕಳು ಶಾಲೆಗೆ ಹೋಗಲು ಕಷ್ಟವಾಗುತ್ತದೆ. ತರಗತಿಯಲ್ಲಿ ಕೂರಲೂ ಕಷ್ಟವಾಗುತ್ತದೆ. ಇಂತಹ ಸಂದರ್ಭದಲ್ಲಿ ನೀವು ನಿಮ್ಮ ಮಕ್ಕಳನ್ನು ಶೀತದಿಂದ ಪಾರು ಮಾಡಲು ಕೆಲವು ಮನೆ ಮದ್ದುಗಳನ್ನು ಬಳಕೆ ಮಾಡಿ ನೋಡಿ. ನಾವು ನಿಮಗಿಲ್ಲಿ ಕೆಲವು ಮನೆ ಮದ್ದುಗಳನ್ನು ನೀಡಿದ್ದೇವೆ ಗಮನಿಸಿ.

ಗಡಿ, ಕೆಮ್ಮು, ಜ್ವರ ಮುಂತಾದವುಗಳಿಗೆ ತಕ್ಷಣ ವೈದ್ಯರ ಬಳಿ ಹೋಗಿ ಮಾತ್ರೆಗಳನ್ನು ತೆಗೆದುಕೊಳ್ಳುವ ಬದಲು ಮೊದಲು ಮನೆಮದ್ದುಗಳನ್ನು ಪ್ರಯತ್ನಿಸುವುದು ಉತ್ತಮ.ಇಂತಹ ಆರೋಗ್ಯ ಸಮಸ್ಯೆಗಳಿಗೆ ನಮ್ಮ ಪೂರ್ವಜರು ಅಡುಗೆ ಮನೆಯ ಕೆಲವು ಪದಾರ್ಥಗಳಿಂದಲೇ ಪರಿಹಾರ ಕಂಡುಕೊಳ್ಳುತ್ತಿದ್ದರು.

ಈ ಮನೆಮದ್ದು ಟ್ರೈ ಮಾಡಿ

ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಇರುವಂತಹ ಔಷಧೀಯ ಗುಣಗಳಲ್ಲಿ ಜೇನುತುಪ್ಪವೂ ಒಂದು. ಈ ಜೇನುತುಪ್ಪವು ನೈಸರ್ಗಿಕ ಔಷಧದಲ್ಲಿ ಬಳಸಲಾಗುವ ಪ್ರಮುಖ ಅಂಶವಾಗಿದೆ. ಜೇನುತುಪ್ಪವು ಅದರ ಸಿಹಿ ರುಚಿಯೊಂದಿಗೆ ವಿವಿಧ ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ಮುಖ್ಯವಾಗಿ ಗಂಟಲು ನೋವಿನಿಂದ ಬಳಲುತ್ತಿರುವವರು ಜೇನುತುಪ್ಪವನ್ನು ಸೇವಿಸುವುದರಿಂದ ತ್ವರಿತ ಪರಿಹಾರವನ್ನು ಪಡೆಯಬಹುದು.

ಸೂಪ್ ಕುಡಿಯಿರಿ

ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿರುವಾಗ ಉತ್ತಮ ಬಿಸಿಯಾದ ಸೂಪ್‌ಗಳನ್ನು ತಯಾರಿಸಿ ಕುಡಿಯುವುದು ಉತ್ತಮ ಪರಿಹಾರವನ್ನು ನೀಡುತ್ತದೆ. ಅಲ್ಲದೆ ಸೂಪ್ ಮಾಡುವಾಗ ಬೆಳ್ಳುಳ್ಳಿ, ಶುಂಠಿ, ತರಕಾರಿಗಳು, ಮಟನ್ ಸೇರಿಸಿದಾಗ ಅವುಗಳಲ್ಲಿರುವ ಪೋಷಕಾಂಶಗಳು ದೇಹದ ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ. ಈ ಸಮಸ್ಯೆಯನ್ನು ಬೇಗ ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.

ಹಣ್ಣುಗಳನ್ನು ತಿನ್ನಿಸಿ

ಹಣ್ಣುಗಳು ಮತ್ತು ತರಕಾರಿಗಳಲ್ಲಿನ ವಿಟಮಿನ್ ಸಿ ಶೀತ ಮತ್ತು ಕೆಮ್ಮನ್ನು ಉಂಟುಮಾಡುವ ವೈರಸ್‌ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ನಿಮಗೆ ನೆಗಡಿ ಇದ್ದಾಗ ವಿಟಮಿನ್ ಸಿ ಇರುವ ಕಿತ್ತಳೆ, ಪೇರಲ, ನಿಂಬೆಹಣ್ಣು ಇತ್ಯಾದಿಗಳನ್ನು ನಿಮ್ಮ ಆಹಾರದಲ್ಲಿ ಹೆಚ್ಚು ಸೇರಿಸಿ. ನಿಮ್ಮ ಮಕ್ಕಳಿಗೂ ಈ ಹಣ್ಣುಗಳನ್ನು ತಿನ್ನಲು ಕೊಡಿ. ಈ ರೀತಿ ಮಾಡಿದರೆ ಖಂಡಿತ ನಿಮ್ಮ ಮಕ್ಕಳು ಶೀತದಿಂದ ಪಾರಾಗಬಹುದು.

ಇಷ್ಟು ಮಾಡಿದ ನಂತರವೂ ಶೀತ ಕಡಿಮೆ ಆಗಿಲ್ಲ ಎಂದಾದರೆ ನೀವು ವೈದ್ಯರಬಳಿ ಹೋಗಿ ಬನ್ನಿ. ಇನ್ನು ಪೆಪರ್ ಕಷಾಯ ಹಾಗೂ ಜೀರಿಗೆ ಕಷಾಗಳನ್ನೂ ಟ್ರೈ ಮಾಡಿ ನೋಡಬಹುದು.