ಚೆನ್ನಾಗಿ ನಿದ್ದೆ ಬರೋದ್ರಿಂದ ಕೆಟ್ಟ ಕನಸು ದೂರವಾಗುವವರೆಗೆ: ಬೆಳ್ಳುಳ್ಳಿ ಎಸಳನ್ನು ದಿಂಬಿನ ಕೆಳಗೆ ಇಟ್ಟು ಮಲಗಿದ್ರೆ ಇಷ್ಟೆಲ್ಲಾ ಪ್ರಯೋಜನ
ಕನ್ನಡ ಸುದ್ದಿ  /  ಜೀವನಶೈಲಿ  /  ಚೆನ್ನಾಗಿ ನಿದ್ದೆ ಬರೋದ್ರಿಂದ ಕೆಟ್ಟ ಕನಸು ದೂರವಾಗುವವರೆಗೆ: ಬೆಳ್ಳುಳ್ಳಿ ಎಸಳನ್ನು ದಿಂಬಿನ ಕೆಳಗೆ ಇಟ್ಟು ಮಲಗಿದ್ರೆ ಇಷ್ಟೆಲ್ಲಾ ಪ್ರಯೋಜನ

ಚೆನ್ನಾಗಿ ನಿದ್ದೆ ಬರೋದ್ರಿಂದ ಕೆಟ್ಟ ಕನಸು ದೂರವಾಗುವವರೆಗೆ: ಬೆಳ್ಳುಳ್ಳಿ ಎಸಳನ್ನು ದಿಂಬಿನ ಕೆಳಗೆ ಇಟ್ಟು ಮಲಗಿದ್ರೆ ಇಷ್ಟೆಲ್ಲಾ ಪ್ರಯೋಜನ

ಬೆಳ್ಳುಳ್ಳಿಯು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಆಹಾರಕ್ಕೆ ಬಳಸುವುದು ಮಾತ್ರವಲ್ಲ, ಇದನ್ನುದಿಂಬಿನ ಕೆಳಗೆ ಇಟ್ಟುಕೊಂಡು ಮಲಗುವುದರಿಂದ ಪ್ರಯೋಜನವಿದೆ. ಒಂದು ಅಥವಾ ಎರಡು ಸಿಪ್ಪೆ ಸುಲಿದ ಬೆಳ್ಳುಳ್ಳಿಯನ್ನು ಮಲಗುವಾಗ ದಿಂಬಿನ ಕೆಳಗೆ ಇರಿಸುವುದರಿಂದ ಏನು ಪ್ರಯೋಜನವಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಬೆಳ್ಳುಳ್ಳಿ ಎಸಳನ್ನು ದಿಂಬಿನ ಕೆಳಗೆ ಇಟ್ಟು ಮಲಗಿದ್ರೆ ಇಷ್ಟೆಲ್ಲಾ ಪ್ರಯೋಜನ
ಬೆಳ್ಳುಳ್ಳಿ ಎಸಳನ್ನು ದಿಂಬಿನ ಕೆಳಗೆ ಇಟ್ಟು ಮಲಗಿದ್ರೆ ಇಷ್ಟೆಲ್ಲಾ ಪ್ರಯೋಜನ (PC: Canva)

ಅಡುಗೆಯಲ್ಲಿ ಬೆಳ್ಳುಳ್ಳಿಯನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಇದರ ಸುವಾಸನೆ ಮತ್ತು ರುಚಿಯು ಆಹಾರಕ್ಕೆ ಅಂತಹ ಸುವಾಸನೆಯನ್ನು ನೀಡುತ್ತದೆ. ತರಕಾರಿಯಿಂದ ಮಾಂಸಾಹಾರ ಖಾದ್ಯಗಳವರೆಗೆ ಇದನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಇದು ಖಾದ್ಯಕ್ಕೆ ಅಷ್ಟೇ ರುಚಿಯನ್ನೂ ನೀಡುತ್ತದೆ. ಅಷ್ಟೇ ಅಲ್ಲ, ಇದರಲ್ಲಿರುವ ಔಷಧೀಯ ಗುಣಗಳಿಂದಾಗಿ ಆಯುರ್ವೇದದಲ್ಲೂ ಬೆಳ್ಳುಳ್ಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ವಾಸ್ತವವಾಗಿ, ಇದನ್ನು ಹಲವು ವಿಧಗಳಲ್ಲಿ ಬಳಸಬಹುದು. ಕೇವಲ ಆಹಾರಕ್ಕೆ ಮಾತ್ರವಲ್ಲ ಹಲವು ರೀತಿಯಲ್ಲಿ ಬೆಳ್ಳುಳ್ಳಿ ಸಹಕಾರಿಯಾಗಿದೆ. ಉತ್ತಮ ನಿದ್ದೆಗೂ ಬೆಳ್ಳುಳ್ಳಿ ಸಹಾಯಕವಾಗಿದೆ. ಒಂದು ಅಥವಾ ಎರಡು ಸಿಪ್ಪೆ ಸುಲಿದ ಬೆಳ್ಳುಳ್ಳಿಯನ್ನು ಮಲಗುವಾಗ ದಿಂಬಿನ ಕೆಳಗೆ ಇರಿಸಬೇಕು. ಇದರಿಂದ ಹಲವು ಪ್ರಯೋಜನಗಳಿವೆ. ಅವು ಏನೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಬೆಳ್ಳುಳ್ಳಿಯನ್ನು ಮಲಗುವಾಗ ದಿಂಬಿನ ಕೆಳಗೆ ಇಡುವುದರ ಪ್ರಯೋಜನಗಳು

ಉತ್ತಮ ನಿದ್ದೆಗೆ ಸಹಕಾರಿ: ಇತ್ತೀಚಿನ ದಿನಗಳಲ್ಲಿ ಸಮಯಕ್ಕೆ ಸರಿಯಾಗಿ ನಿದ್ದೆ ಮಾಡದೇ ಇರುವುದು ಬಹಳಷ್ಟು ಮಂದಿಯ ಸಾಮಾನ್ಯ ಸಮಸ್ಯೆಯಾಗಿದೆ. ಮಾನಸಿಕ ಒತ್ತಡ ಎಷ್ಟರಮಟ್ಟಿಗಿದೆಯೆಂದರೆ ಹಾಸಿಗೆಯ ಮೇಲೆ ಮಲಗಿದ ಕೂಡಲೇ ನಿದ್ದೆ ಬಾರದೆ ಒದ್ದಾಡುತ್ತಾರೆ. ನೀವೂ ಇದೇ ರೀತಿಯ ಸಮಸ್ಯೆಯಿಂದ ಬಳಲುತ್ತಿದ್ದರೆ, ನಿಮ್ಮ ದಿಂಬಿನ ಕೆಳಗೆ ಬೆಳ್ಳುಳ್ಳಿ ಎಸಳನ್ನು ಇಟ್ಟುಕೊಂಡು ಮಲಗಬೇಕು. ವಾಸ್ತವವಾಗಿ, ಬೆಳ್ಳುಳ್ಳಿಯ ಕಟುವಾದ ಮತ್ತು ಬಲವಾದ ವಾಸನೆಯು ಮನಸ್ಸನ್ನು ಒತ್ತಡ ಮುಕ್ತ ಮತ್ತು ಶಾಂತವಾಗಿಸುತ್ತದೆ. ಬೆಳ್ಳುಳ್ಳಿಯಲ್ಲಿ ಸಲ್ಫರ್ ಅಂಶವಿದ್ದು, ಇದರ ವಾಸನೆಯು ನಿದ್ರೆಯನ್ನು ಪಡೆಯಲು ಬಹಳಷ್ಟು ಸಹಾಯ ಮಾಡುತ್ತದೆ.

ಸೋಂಕಿನಿಂದ ರಕ್ಷಿಸಲು ಸಹಕಾರಿ: ಬೆಳ್ಳುಳ್ಳಿ ನೈಸರ್ಗಿಕವಾಗಿ ಆಂಟಿವೈರಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ದೇಹವು ಅದರ ಪರಿಮಳವನ್ನು ತೆಗೆದುಕೊಳ್ಳುವುದರಿಂದ ಬಹಳಷ್ಟು ಪ್ರಯೋಜನಗಳಿವೆ. ಅದನ್ನು ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿದಾಗ, ನಿಮ್ಮ ಸುತ್ತಲೂ ಒಂದು ರೀತಿಯ ಕವಚವನ್ನು ಸೃಷ್ಟಿಸುತ್ತದೆ. ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಕೆಮ್ಮು ಮತ್ತು ಶೀತದಂತಹ ಕಾಯಿಲೆಗಳ ವಿರುದ್ಧ ಹೋರಾಡಲು ಇದು ತುಂಬಾ ಪ್ರಯೋಜನಕಾರಿಯಾಗಿದೆ.

ಸೊಳ್ಳೆಗಳು ಮತ್ತು ಕೀಟಗಳು ದೂರವಿರುತ್ತವೆ: ರಾತ್ರಿ ಮಲಗುವಾಗ ಸೊಳ್ಳೆಗಳು, ನೊಣಗಳು ಅಥವಾ ಇತರ ಕೀಟಗಳನ್ನು ದೂರವಿರಿಸಲು, ದಿಂಬಿನ ಕೆಳಗೆ ಬೆಳ್ಳುಳ್ಳಿಯನ್ನು ಇಡಬೇಕು. ಪ್ರಾಚೀನ ಕಾಲದಲ್ಲಿ, ಜನರು ಹೆಚ್ಚಾಗಿ ಈ ಪರಿಹಾರವನ್ನು ಬಳಸುತ್ತಿದ್ದರು. ವಾಸ್ತವವಾಗಿ, ಬೆಳ್ಳುಳ್ಳಿಯ ಬಲವಾದ ಮತ್ತು ಕಟುವಾದ ವಾಸನೆಯು ಸೊಳ್ಳೆಗಳು ಮತ್ತು ಕೀಟಗಳನ್ನು ದೂರವಿರಿಸುತ್ತದೆ. ಇದರಿಂದ ಸೊಳ್ಳೆ, ಕೀಟದ ಕಡಿತದ ಅಪಾಯವೂ ಕಡಿಮೆಯಾಗುತ್ತದೆ. ಹೀಗಾಗಿ ಶಾಂತಿಯುತ ನಿದ್ದೆಯನ್ನು ಪಡೆಯಬಹುದು.

ಕೆಟ್ಟ ಕನಸುಗಳಿಂದ ಮುಕ್ತಿ ಪಡೆಯಿರಿ: ರಾತ್ರಿ ಮಲಗುವಾಗ ದುಃಸ್ವಪ್ನಗಳು ಬಂದರೆ, ನೀವು ಈ ಬೆಳ್ಳುಳ್ಳಿ ಟ್ರಿಕ್ ಅನ್ನು ಪ್ರಯತ್ನಿಸಬಹುದು. ಬೆಳ್ಳುಳ್ಳಿಯು ನಕಾರಾತ್ಮಕತೆಯನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಎಂದು ನಂಬಲಾಗಿದೆ. ಇದನ್ನು ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿದಾಗ, ನಿಮ್ಮ ಸುತ್ತಲೂ ಧನಾತ್ಮಕ ಶಕ್ತಿಯನ್ನು ಹರಡುತ್ತದೆ. ಇದು ರಾತ್ರಿಯಲ್ಲಿ ಕೆಟ್ಟ ಆಲೋಚನೆಗಳು, ಭಯಾನಕ ಕನಸುಗಳು ಬೀಳದಂತೆ ತಡೆಯುತ್ತದೆ. ಉತ್ತಮ ಮತ್ತು ಶಾಂತಿಯುತ ನಿದ್ದೆಗಾಗಿ ಈ ಪರಿಹಾರವನ್ನು ಪ್ರಯತ್ನಿಸಬಹುದು.

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.

kannada.hindustantimes.com/astrology/yearly-horoscope:

Whats_app_banner